ಕರ್ನಾಟಕ ಬಜೆಟ್​ ಮಹಿಳಾ ದಿನಾಚರಣೆ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Health Tips: ಕಡಿಮೆ ನೀರು ಕುಡಿಯುವ ಅಭ್ಯಾಸ ಇದೆಯೇ? ಈ ಎಲ್ಲಾ ಆರೋಗ್ಯ ಸಮಸ್ಯೆ ನಿಮ್ಮನ್ನು ಕಾಡಬಹುದು

Health Tips: ಸರಿಯಾಗಿ ನೀರು ಕುಡಿಯದೇ ಇದ್ದರೆ ಅದರಿಂದ ಹಲವು ರೀತಿಯ ಆರೋಗ್ಯ ಸಮಸ್ಯೆಗಳು ಎದುರಾಗುವುದು ಖಚಿತ. ನಮ್ಮ ದೇಹಕ್ಕೆ ನಿರ್ಜಲೀಕರಣ ಆಗದಂತೆ  ಕಾಪಾಡಿಕೊಳ್ಳಲು ಸರಿಯಾದ ಪ್ರಮಾಣದಲ್ಲಿ  ಆಗಾಗ ನೀರು ಕುಡಿಯುತ್ತಿರಬೇಕು. ದೇಹದಿಂದ ವಿಷಾಂಶವನ್ನು ಹೊರಹಾಕಲು ನೀರಿನ ಸೇವನೆ ಪ್ರಮುಖ ಪಾತ್ರ ವಹಿಸಲಿದೆ

Profile Pushpa Kumari Dec 31, 2024 6:30 AM
ನವದೆಹಲಿ: ನಾವು ನಮ್ಮ ದೇಹಕ್ಕೆ ಪೌಷ್ಠಿಕಯುತ  ಆಹಾರ ನೀಡಲು ಹೆಚ್ಚು ಪ್ರಾಮುಖ್ಯತೆ ನೀಡುತ್ತೇವೆ. ಅದೇ ರೀತಿ ನೀರು ಕೂಡ ನಮ್ಮ ದೇಹಕ್ಕೆ ಬಹಳ ಮುಖ್ಯ. ಸರಿಯಾಗಿ ನೀರು ಕುಡಿಯದೇ ಇದ್ದರೆ ಅದರಿಂದ ಹಲವು ರೀತಿಯ ಆರೋಗ್ಯ ಸಮಸ್ಯೆಗಳು ಎದುರಾಗುವುದು ಖಚಿತ. ನಮ್ಮ ದೇಹಕ್ಕೆ ನಿರ್ಜಲೀಕರಣ ಆಗದಂತೆ  ಕಾಪಾಡಿಕೊಳ್ಳಲು ಸರಿಯಾದ ಪ್ರಮಾಣದಲ್ಲಿ  ಆಗಾಗ ನೀರು ಕುಡಿಯುತ್ತಿರಬೇಕು. ದೇಹದಿಂದ ವಿಷಾಂಶವನ್ನು ಹೊರಹಾಕಲು ನೀರಿನ ಸೇವನೆ ಪ್ರಮುಖ ಪಾತ್ರ ವಹಿಸಲಿದೆ. ಹಾಗಾಗಿ ನೀರು ಕುಡಿಯುವುದು ಬಹಳ ಅವಶ್ಯಕ. ಒಂದು ವೇಳೆ ಸರಿಯಾದ ಪ್ರಮಾಣದಲ್ಲಿ ನೀರು ಕುಡಿಯದಿದ್ದರೆ (Health Tips) ಈ ಎಲ್ಲಾ ಸಮಸ್ಯೆಗಳು ನಿಮ್ಮನ್ನು ‌ಕಾಡಲಿದೆ.
ಬಾಯಿ ಒಣಗುವಿಕೆ:
ಸರಿಯಾದ ಪ್ರಮಾಣದಲ್ಲಿ ಪ್ರತಿದಿನ ನೀರು ಕುಡಿಯುವ ಅಭ್ಯಾಸ ಇಟ್ಟುಕೊಂಡರೆ ಆರೋಗ್ಯದ ಲಾಭಗಳು ಹೆಚ್ಚು ಇರಲಿದೆ. ಒಂದು ವೇಳೆ ನೀರಿನ ಪ್ರಮಾಣ ಕಡಿಮೆಯಾದರೆ ಬಾಯಿ ಒಣಗಲು ಆರಂಭವಾಗುತ್ತದೆ. ದೇಹ ನಿರ್ಜಲೀಕರಣಗೊಂಡಾಗ, ನಿಮ್ಮ ಚಯಾಪಚಯವು ಸ್ವಾಭಾವಿಕವಾಗಿ ನಿಧಾನಗೊಂಡು ಆರೋಗ್ಯ ಸಮಸ್ಯೆ ಕಾಡಲಿದೆ.
ಚರ್ಮದ ತೊಂದರೆ:
ನಿಮ್ಮ ಚರ್ಮವು ಆರೋಗ್ಯಕರವಾಗಿರಲು ನೀರಿನ ಸೇವನೆ ಪ್ರಮುಖ ಪಾತ್ರ ವಹಿಸಲಿದೆ. ನಿಮ್ಮ ಚರ್ಮ ಹೈಡ್ರೀಕರಿಸಿದಂತೆ ಕಾಣಲು ನೀರಿನ ಅಗತ್ಯವಿದೆ. ನಿಮ್ಮ ಮುಖ ಹಾಗೂ ಚರ್ಮ ಪ್ರಕಾಶಮಾನವಾಗಿ ಕಾಣಲು ಹೆಚ್ಚು ನೀರು ಕುಡಿಯಿರಿ. ನೀರಿನ ಪ್ರಮಾಣ ಕಡಿಮೆಯಾದಲ್ಲಿ ಚರ್ಮ ಒಣಗಿದಂತೆ  ಕಂಡು ಬರುತ್ತದೆ.
ಮಲಬದ್ದತೆ  ಸಮಸ್ಯೆ:
ಕಡಿಮೆ ನೀರು ಕುಡಿಯುವುದರಿಂದ ಮಲಬದ್ಧತೆ ಸಮಸ್ಯೆ ಉಂಟಾಗಲಿದ್ದು ಜೀರ್ಣಕ್ರಿಯೆ ಸಮಸ್ಯೆಯು ಉಂಟಾಗಲಿದೆ. ನೀವು ಸಾಕಷ್ಟು ನೀರು ಕುಡಿಯದಿದ್ದರೆ, ನಿಮ್ಮ ದೇಹದ ಉಷ್ಣತೆಯನ್ನು ನಿಯಂತ್ರಿಸಲು ಸಾಧ್ಯ ಆಗುವುದಿಲ್ಲ.
ಜೀರ್ಣಕಾರಿ ಸಮಸ್ಯೆಗಳು:
ಸಾಕಷ್ಟು ನೀರು ಸೇವನೆ ಮಾಡದಿದ್ದರೆ ಜೀರ್ಣಾಂಗ ವ್ಯವಸ್ಥೆಯು ಸರಿಯಾಗಿ ನಿರ್ವಹಿಸುವುದಿಲ್ಲ. ನೀರು ಕುಡಿಯುವುದು ಕಡಿಮೆಯಾದರೆ ದೇಹದಲ್ಲಿರುವ ತ್ಯಾಜ್ಯಗಳು ಹೊರಗೆ ಹೋಗುವುದು ಕಷ್ಟವಾಗುತ್ತದೆ. ಇದರಿಂದ ಆರೋಗ್ಯ ಸಮಸ್ಯೆ ಕೂಡ ಹೆಚ್ಚಾಗಲಿದೆ.
ಮಾಂಸಖಂಡದ ಸಮಸ್ಯೆ:
ಸರಿಯಾದ ಪ್ರಮಾಣದಲ್ಲಿ ನೀರು ಕುಡಿಯದಿದ್ದರೆ ನಿರ್ಜಲೀಕರಣ ಸಮಸ್ಯೆ ಕಾಡಿ ಅದರಿಂದ ಮಾಂಸಖಂಡಗಳ ಸೆಳೆತ ಕೂಡ ಕಾಣಿಸುತ್ತದೆ. ಮಾಂಸಖಂಡಗಳಲ್ಲಿ ತಾಪಮಾನ ಜಾಸ್ತಿಯಾಗಿ ದೇಹದ ಉಷ್ಣಾಂಶ ಕೂಡ ಹೆಚ್ಚು ಆಗುತ್ತದೆ.
ಲೋ ಬಿಪಿ ಸಮಸ್ಯೆ:
ನೀರಿನ ಅಂಶದ ಕೊರತೆ ಉಂಟಾದಾಗ, ರಕ್ತ ಸಂಚಾರ ಕೂಡ ಕಡಿಮೆಯಾಗುತ್ತದೆ. ಇದು ರಕ್ತದ ಒತ್ತಡದ ಮೇಲೆ ಪ್ರಭಾವ ಬೀರಿ ಲೋ ಬಿಪಿ ಆಗಿ ದೇಹದಲ್ಲಿ ನಿಶ್ಯಕ್ತಿ ಉಂಟು ಮಾಡಲಿದೆ.
ಹೃದಯದ ಸಮಸ್ಯೆ:
ಸಾಕಷ್ಟು ನೀರು ಕುಡಿಯದಿದ್ದರೆ  ಹೃದಯದ ಆರೋಗ್ಯ ಕೆಡಲಿದೆ. ನೀರಿನ ಪ್ರಮಾಣ ಕಡಿಮೆಯಾದಾಗ ಪೊಟ್ಯಾಸಿಯಮ್ ಮತ್ತು ಸೋಡಿಯಂನ ಎಲೆಕ್ಟ್ರೋಲೈಟ್ ಸಮತೋಲನದ ಮೇಲೆ ಪರಿಣಾಮ ಬೀರಿ ಇದು ಹೃದಯದ ಕಾರ್ಯನಿರ್ವಹಣೆಗೆ ಸಮಸ್ಯೆ ಯಾಗಲಿದೆ. ಸಾಕಷ್ಟು ನೀರು ಕುಡಿಯದಿರುವುದು ರಕ್ತದ ಪ್ರಮಾಣದಲ್ಲಿ ಇಳಿಕೆಗೆ ಕಾರಣವಾಗಬಹುದು.
ಈ ಸುದ್ದಿಯನ್ನೂ ಓದಿ:Health Tips: ಬರುತ್ತಿದೆ ಚಳಿಗಾಲ; ಕೀಲುಗಳ ಅರೋಗ್ಯ ಜೋಪಾನ!