ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಕರ್ನಾಟಕ

ಎಲೆಯಲ್ಲಿ ಅನ್ನವನ್ನು ಬಿಟ್ಟರೆ ವ್ಯರ್ಥ, ಹೆಚ್ಚಾಗಿ ತಿಂದರೆ ಅನರ್ಥ: ರಾಘವೇಶ್ವರ ಭಾರತೀ ಶ್ರೀ

ಅನ್ನವನ್ನು ದೇವಸ್ವರೂಪವೆಂದು ಭಾವಿಸಿ ಗೌರವಿಸಬೇಕು: ರಾಘವೇಶ್ವರ ಶ್ರೀ

Sri Raghaveshwara Bharathi Swamiji: ಜೀವನದಲ್ಲಿ ಆರೋಗ್ಯ, ಶಾಂತಿ ಮತ್ತು ಆಧ್ಯಾತ್ಮಿಕ ಬೆಳವಣಿಗೆ ಬೇಕಾದರೆ ಆಹಾರದ ಬಗ್ಗೆ ಜವಾಬ್ದಾರಿ ಇರಬೇಕು, ಜಠರಾಗ್ನಿಯನ್ನು ಕಾಪಾಡಬೇಕು ಮತ್ತು ಅನ್ನವನ್ನು ದೇವಸ್ವರೂಪವೆಂದು ಭಾವಿಸಿ ಗೌರವಿಸಬೇಕು ಎಂದು ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ ಕರೆ ನೀಡಿದ್ದಾರೆ.

Bengaluru Power Cut: ಗಮನಿಸಿ; ಆಗಸ್ಟ್‌ 23ರಂದು ಬೆಂಗಳೂರಿನ ಈ ಪ್ರದೇಶಗಳಲ್ಲಿ ಕರೆಂಟ್‌ ಇರಲ್ಲ

ಆಗಸ್ಟ್‌ 23ರಂದು ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ

Bengaluru Power Cut: ಆರ್.ಎಂ.ವಿ. ಸಬ್‌ಸ್ಟೇಷನ್ ಕೆಪಿಟಿಸಿಎಲ್ ವತಿಯಿಂದ ತುರ್ತು ನಿರ್ವಹಣಾ ಕಾಮಗಾರಿ ಹಿನ್ನೆಲೆಯಲ್ಲಿ ಮಲ್ಲೇಶ್ವರಂ ವಿಭಾಗದ ಸಿ 6 ಉಪ ವಿಭಾಗದ ಹಲವೆಡೆ ಆ.23ರಂದು ಭಾನುವಾರ ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ.

A-Khata: ಅನಧಿಕೃತ ಬಡಾವಣೆಗಳ ನಿವೇಶನ, ಮನೆಗಳಿಗೆ 'ಎ-ಖಾತಾ' ಭಾಗ್ಯ; ಮಹತ್ವದ ವಿಧೇಯಕಕ್ಕೆ ವಿಧಾನಸಭೆಯಲ್ಲಿ ಅಂಗೀಕಾರ

ಅನಧಿಕೃತ ನಿವೇಶನ, ಮನೆಗಳಿಗೆ 'ಎ-ಖಾತಾ; ಮಸೂದೆಗೆ ವಿಧಾನಸಭೆ ಅಂಗೀಕಾರ

Karnataka Municipalities (Amendment) Bill-2026: ಬಿ-ಖಾತಾದಿಂದಾಗಿ ಸಂಕಷ್ಟದಲ್ಲಿದ್ದ ಲಕ್ಷಾಂತರ ಕುಟುಂಬಗಳ ಅನುಕೂಲಕಕ್ಕಾಗಿ ರಾಜ್ಯ ಸರ್ಕಾರದ ಹೊಸ ಕಾಯ್ದೆಗೆ ಅಂಗೀಕಾರ ಸಿಕ್ಕಿದೆ. ಅನಧಿಕೃತ ಬಡಾವಣೆಗಳಲ್ಲಿನ ಆಸ್ತಿಗಳಿಗೆ ಸಂಪೂರ್ಣ ಮಾಲೀಕತ್ವದ ಹಕ್ಕು ಕಲ್ಪಿಸಿ, ಪಕ್ಕಾ ‘ಎ-ಖಾತಾ’ ನೀಡುವ ಮಹತ್ವದ ವಿಧೇಯಕಕ್ಕೆ ವಿಧಾನಸಭೆಯಲ್ಲಿ ಅಂಗೀಕಾರ ದೊರೆತಿದೆ.

S N Subbareddy: ಶೀಘ್ರದಲ್ಲೇ ಎಲ್ಲಾ ನಿವೇಶನ ರಹಿತರಿಗೆ ಹಕ್ಕುಪತ್ರ ವಿತರಣೆ: ಶಾಸಕ ಸುಬ್ಬಾರೆಡ್ಡಿ

ಶೀಘ್ರದಲ್ಲೇ ಎಲ್ಲಾ ನಿವೇಶನ ರಹಿತರಿಗೆ ಹಕ್ಕುಪತ್ರ ವಿತರಣೆ

ಈಗಾಗಲೇ ನಿವೇಶನ ರಹಿತರ ಪಟ್ಟಿಯನ್ನೂ ಸಿದ್ಧಪಡಿಸಲಾಗಿದ್ದು, ಆದಷ್ಟು ಶೀಘ್ರವಾಗಿ ನಿವೇಶನ ಗಳ ಹಕ್ಕುಪತ್ರಗಳನ್ನು ವಿತರಿಸಲಾಗುವುದು. ಗುಡಿಬಂಡೆ ಮುಖ್ಯ ರಸ್ತೆಯಲ್ಲಿ ನಿವೇಶನ ಕಳೆದು ಕೊಂಡವರಿಗೆ ನಿವೇಶನ ನೀಡಲು ಜಮೀನು ಗುರುತಿಸಲಾಗಿದ್ದು, ನಿವೇಶನ ನೀಡಲು ಸಿದ್ಧತೆ ನಡೆಯುತ್ತಿದೆ. ಮುಂದಿನ ಮೂರು ತಿಂಗಳ ಒಳಗೆ ಎಲ್ಲರಿಗೂ ನಿವೇಶನ ನೀಡಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ

Varamahalakshmi Festival: ವರಮಹಾಲಕ್ಷ್ಮಿ ಹಬ್ಬ ಹಿನ್ನೆಲೆ ಗೊರವನಹಳ್ಳಿ ಮಹಾಲಕ್ಷ್ಮಿ ದರ್ಶನಕ್ಕೆ ಹರಿದುಬಂದ ಭಕ್ತಸಾಗರ

ಗೊರವನಹಳ್ಳಿ ಮಹಾಲಕ್ಷ್ಮಿಯ ದರ್ಶನಕ್ಕೆ ಆಗಮಿಸಿದ ಭಕ್ತಸಾಗರ

Goravanahalli Mahalakshmi Temple: ಕೊರಟಗೆರೆ ತಾಲೂಕಿನ ಗೊರವನಹಳ್ಳಿ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ನೂತನ ತೇರು ಈ ಬಾರಿಯ ಹಬ್ಬದ ಪ್ರಮುಖ ಆಕರ್ಷಣೆಯಾಗಿತ್ತು. ಸುಮಾರು 24 ಲಕ್ಷ ರೂ. ವೆಚ್ಚದಲ್ಲಿ ನೂತನ ತೇರು ನಿರ್ಮಿಸಲಾಗಿದೆ. ತೇರಿನಲ್ಲಿ ಸುಮಾರು 23 ಕೆ.ಜಿ. ತೂಕದ ಬೆಳ್ಳಿಯ ಮಹಾಲಕ್ಷ್ಮಿ ತಾಯಿಯ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಿ ವೈಭವದ ಮೆರವಣಿಗೆ ನಡೆಸಲಾಯಿತು.

Tumkur News: ತುಮಕೂರಿನಿಂದ ಮಂತ್ರಾಲಯಕ್ಕೆ ಸಾರಿಗೆ ಬಸ್ ಹೆಚ್ಚಿಸಲು ಆಗ್ರಹ

ತುಮಕೂರಿನಿಂದ ಮಂತ್ರಾಲಯಕ್ಕೆ ಸಾರಿಗೆ ಬಸ್ ಹೆಚ್ಚಿಸಲು ಆಗ್ರಹ

Tumkur News: ತುಮಕೂರು ಜಿಲ್ಲೆಯಿಂದ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಮಂತ್ರಾಲಯಕ್ಕೆ ಪ್ರತಿದಿನ ತೆರಳುವ ಭಕ್ತರ ಸಂಖ್ಯೆ ಅಪಾರವಾಗಿದೆ. ಆದರೆ, ಇದಕ್ಕೆ ತಕ್ಕಂತೆ ಸಾರಿಗೆ ಸೌಲಭ್ಯಗಳಿಲ್ಲದೆ ಭಕ್ತರು ಪರದಾಡುವಂತಾಗಿದ್ದು, ತುಮಕೂರು-ಮಂತ್ರಾಲಯ ಮಾರ್ಗದಲ್ಲಿ ಬಸ್‌ಗಳ ಸಂಖ್ಯೆಯನ್ನು ಹೆಚ್ಚಿಸಬೇಕೆಂಬ ಆಗ್ರಹ ತೀವ್ರಗೊಂಡಿದೆ.

ಮಧುಗಿರಿಯಲ್ಲಿ ʼಮುಗಿಯದ ಪ್ರೇಮ ಕಥೆʼ ಕಿರುಚಿತ್ರ ರಿಲೀಸ್‌

ಮಧುಗಿರಿಯಲ್ಲಿ ʼಮುಗಿಯದ ಪ್ರೇಮ ಕಥೆʼ ಕಿರುಚಿತ್ರ ರಿಲೀಸ್‌

Madhugiri News: ಮಧುಗಿರಿ ತಾಲೂಕಿನ ಸ್ಥಳೀಯ ಕಲಾವಿದರು ವರಮಹಾಲಕ್ಷ್ಮಿ ಹಬ್ಬದ ದಿನವಾದ ಶುಕ್ರವಾರ ಐತಿಹಾಸಿಕ ಶ್ರೀ ದಂಡಿನ ಮಾರಮ್ಮ ದೇವಾಲಯದ ಆವರಣದಲ್ಲಿ 13 ನಿಮಿಷಗಳ ಕಾಲದ ಯೂಟ್ಯೂಬ್‌ನ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾಗುವ ಕಿರುಚಿತ್ರ 'ಮುಗಿಯದ ಪ್ರೇಮ ಕಥೆ' ಬಿಡುಗಡೆಗೊಳಿಸಿದರು.

Chitradurga Bus Accident: ಚಿತ್ರದುರ್ಗದ ಬಳಿ ಭೀಕರ ಅಪಘಾತ; ಪ್ರವಾಸಿ ಬಸ್‌ ಪಲ್ಟಿಯಾಗಿ ಇಬ್ಬರ ಸಾವು, 26 ಮಂದಿಗೆ ಗಾಯ

ಚಿತ್ರದುರ್ಗದ ಬಳಿ ಪ್ರವಾಸಿ ಬಸ್‌ ಪಲ್ಟಿಯಾಗಿ ಇಬ್ಬರ ಸಾವು, 26 ಮಂದಿಗೆ ಗಾಯ

ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ಐಮಂಗಲ ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಭೀಕರ ಬಸ್‌ ಅಪಘಾತ ನಡೆದಿದೆ. ಬಸ್​​ನಲ್ಲಿ ಗೋವಾಕ್ಕೆ ತೆರಳುತ್ತಿದ್ದವರು ಬೆಂಗಳೂರಿನ ಯುನಿವರ್ಸಲ್ ನರ್ಸಿಂಗ್ ಕಾಲೇಜು ವಿದ್ಯಾರ್ಥಿಗಳು ಎಂಬುದು ಗೊತ್ತಾಗಿದೆ. ಅಪಘಾತದಲ್ಲಿ ಬಸ್‌ ಚಾಲಕ ಮತ್ತು ಕ್ಲೀನರ್‌ ಮೃತಪಟ್ಟಿದ್ದಾರೆ.

MLA Pradeep Eshwar: ಗ್ರಾಮಗಳ ಅಭಿವೃದ್ಧಿಗೆ ಹಂತ ಹಂತವಾಗಿ ಆದ್ಯತೆ: ಶಾಸಕ ಪ್ರದೀಪ್ ಈಶ್ವರ್

ಗ್ರಾಮಗಳ ಅಭಿವೃದ್ಧಿಗೆ ಹಂತ ಹಂತವಾಗಿ ಆದ್ಯತೆ

ಶಾಸಕರಾಗಿ ಅಧಿಕಾರ ವಹಿಸಿಕೊಂಡ ಬಳಿಕ ಕ್ಷೇತ್ರದ 300ಕ್ಕೂ ಹೆಚ್ಚು ಗ್ರಾಮಗಳಿಗೆ ‘ನಮ್ಮೂರಿಗೆ ನಮ್ಮ ಶಾಸಕ’ ಕಾರ್ಯಕ್ರಮದ ಮೂಲಕ ಭೇಟಿ ನೀಡಿ, ಗ್ರಾಮಸ್ಥರಿಂದ ನೇರವಾಗಿ ಅಹವಾಲುಗಳನ್ನು ಸ್ವೀಕರಿಸಲಾಗಿದೆ. ಗ್ರಾಮಸ್ಥರ ಸಮಸ್ಯೆಗಳನ್ನು ಸ್ಥಳದಲ್ಲಿಯೇ ಆಲಿಸಿ, ಹಲವು ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವ ಪ್ರಯತ್ನ ಮಾಡಲಾಗಿದೆ. ತಾಲೂಕು ಆಡಳಿತವನ್ನೇ ಗ್ರಾಮಗಳ ಅಶ್ವತ್ಥ ಕಟ್ಟೆಯ ಬಳಿಗೆ ಕೊಂಡೊಯ್ದು ಜನರ ಸಮಸ್ಯೆಗಳಿಗೆ ಸ್ಪಂದಿಸಲಾಗಿದೆ

ಶಿಗ್ಗಾವಿಯ ಆಂಜನೇಯ ದೇವಸ್ಥಾನದಲ್ಲಿ ಮೂತ್ರ ವಿಸರ್ಜನೆ ಮಾಡಿ ವಿಕೃತಿ; ಮುಸ್ಲಿಂ ಯುವಕ ಅರೆಸ್ಟ್‌

ಶಿಗ್ಗಾವಿ ದೇವಸ್ಥಾನದಲ್ಲಿ ಮೂತ್ರ ವಿಸರ್ಜನೆ ಮಾಡಿದ ಮುಸ್ಲಿಂ ಯುವಕ!

ಆರೋಪಿಯು ಮದ್ಯದ ಅಮಲಿನಲ್ಲಿ ಆಂಜನೇಯ ದೇವಸ್ಥಾನದೊಳಗೆ ತೆರಳಿ ಮಲಗಿದ್ದಲ್ಲದೆ, ದೇವರ ಮೂರ್ತಿಯ ಎದುರು ಮೂತ್ರ ವಿಸರ್ಜನೆ ಮಾಡಿ ದೇವಸ್ಥಾನವನ್ನು ಅಪವಿತ್ರಗೊಳಿಸಿದ್ದಾನೆ ಎಂಬ ಆರೋಪ ಕೇಳಿಬಂದಿದ್ದು, ಈ ಸಂಬಂಧ ದೂರು ದಾಖಲಾಗಿದೆ. ಆರೋಪಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಸತ್ಯಸಾಯಿ ವೈದ್ಯಕೀಯ ಸಂಸ್ಥೆಯಲ್ಲಿ ಪೋಷ್ ಕಾಯ್ದೆ ಕುರಿತು ಜಾಗೃತಿ

ಸತ್ಯಸಾಯಿ ವೈದ್ಯಕೀಯ ಸಂಸ್ಥೆಯಲ್ಲಿ ಪೋಷ್ ಕಾಯ್ದೆ ಕುರಿತು ಜಾಗೃತಿ

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ನ್ಯಾಯಾಧೀಶೆ ಶಿಲ್ಪಾ ಅವರು ವಿಶಾಖಾ ಮಾರ್ಗಸೂಚಿಗಳು ಹಾಗೂ ಕಾರ್ಯಸ್ಥಳದಲ್ಲಿ ಮಹಿಳೆಯರ ಸುರಕ್ಷತೆ ಮತ್ತು ಹಕ್ಕುಗಳ ಕುರಿತು ಮಾಹಿತಿ ನೀಡಿದರು. ಕೆಲಸದ ಸ್ಥಳದಲ್ಲಿ ಮಹಿಳೆಯರ ಘನತೆ ಮತ್ತು ಸುರಕ್ಷತೆಯನ್ನು ಕಾಪಾಡುವ ನಿಟ್ಟಿನಲ್ಲಿ ಕಾಯ್ದೆಯ ಮಹತ್ವವನ್ನು ವಿವರಿಸಿದರು.

FDA, SDA Exam: ರಾಜ್ಯ ಸರ್ಕಾರಿ ಉದ್ಯೋಗಾಕಾಂಕ್ಷಿಗಳಿಗೆ ಕಹಿ ಸುದ್ದಿ; ಇನ್ನುಮುಂದೆ ಎಫ್‌ಡಿಎ, ಎಸ್‌ಡಿಎ ಪರೀಕ್ಷೆಗೂ ನೆಗೆಟಿವ್ ಅಂಕ!

ಇನ್ನುಮುಂದೆ ಎಫ್‌ಡಿಎ, ಎಸ್‌ಡಿಎ ಪರೀಕ್ಷೆಗೂ ನೆಗೆಟಿವ್ ಅಂಕ!

Competitive Exam Rules: ಕರ್ನಾಟಕ ನಾಗರಿಕ ಸೇವೆಗಳ ತಿದ್ದುಪಡಿ ನಿಯಮಗಳು 2026 ಅನ್ನ ರೂಪಿಸಿ ರಾಜ್ಯಪತ್ರದಲ್ಲಿ ಕರಡು ಅಧಿಸೂಚನೆ ಪ್ರಕಟಿಸಲಾಗಿದ್ದು, ನೇಮಕಾತಿ ಪರೀಕ್ಷೆಯಲ್ಲಿ ಹಲವು ಹೊಸ ಮಾನದಂಡಗಳನ್ನು ಅಳವಡಿಸಲಾಗಿದೆ. ಎಸ್‌ಡಿಎ ಮತ್ತು ಎಫ್‌ಡಿಎ ಪರೀಕ್ಷೆಯಲ್ಲಿ ಋಣಾತ್ಮಕ ಅಂಕ ಮತ್ತು ಮೆರಿಟ್‌ ಪಟ್ಟಿಯಲ್ಲಿ ಅಂಕ ಪಡೆಯಲು ಕನಿಷ್ಠ ಅಂಕ ನಿಗದಿ ಮಾಡಲಾಗಿದೆ.

ಅಮಿತ್ ಶಾ ಬಳಿ ಮೇಕೆದಾಟು ಯೋಜನೆ ಪ್ರಸ್ತಾವಿಸಿದ  ಡಿ.ಕೆ. ಶಿವಕುಮಾರ್: ತಮಿಳುನಾಡು ಮುಖ್ಯಮಂತ್ರಿ ವಿಜಯ್ ಮೌನಕ್ಕೆ ಡಿಎಂಕೆ ತರಾಟೆ

ಮೇಕೆದಾಟು ಯೋಜನೆಗೆ ಸಿಎಂ ವಿಜಯ್ ವಿರೋಧಿಸಿಲ್ಲ: ಡಿಎಂಕೆ

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಭೇಟಿಯ ವೇಳೆ ಕಾವೇರಿ ವಿವಾದಕ್ಕೆ ಸಂಬಂಧಿಸಿ ಕರ್ನಾಟಕ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಬಹಿರಂಗವಾಗಿ ಮಾತನಾಡಿದರೆ ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರು ಮೌನವಾಗಿದ್ದರು. ಅವರು ಮೇಕೆದಾಟು ಯೋಜನೆಯ ಬಗ್ಗೆ ವಿರೋಧ ವ್ಯಕ್ತಪಡಿಸಿಲ್ಲ ಎಂದು ಡಿಎಂಕೆ ಆರೋಪಿಸಿದೆ.

ಚಿಂತಾಮಣಿಯಲ್ಲಿ ಆ.22ರಂದು ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ: ಜಿಲ್ಲಾ ಉಸ್ತುವಾರಿ ಸಚಿವರಿಗೆ ಆಹ್ವಾನ

ಚಿಂತಾಮಣಿಯಲ್ಲಿ ಆ.22ರಂದು ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ

ಚಿಂತಾಮಣಿ ತಾಲ್ಲೂಕು ಕೇಂದ್ರದಲ್ಲಿ ನಡೆಯಲಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನಾ ಕಾರ್ಯಕ್ರಮಗಳಿಗೆ ಸಾರಿಗೆ ಸಚಿವರು ಹಾಗೂ ಚಿಕ್ಕಬಳ್ಳಾ ಪುರ ಜಿಲ್ಲಾ ಉಸ್ತುವಾರಿ ಸಚಿವರನ್ನು ಆಹ್ವಾನಿಸಲಾಯಿತು. ಡಾ.ಬಿ.ಆರ್.ಅಂಬೇಡ್ಕರ್ ಭವನ ಹಾಗೂ ಅನುಭವ ಕೇಂದ್ರ, ಚಿಂತಾಮಣಿ ತಾಲ್ಲೂಕು ಪಂಚಾ ಯಿತಿ ಭವನದ ಸಾಮರ್ಥ್ಯ ಸೌಧ ಸಭಾಂಗಣ, ಸಭಾ ಭವನ, ಸ್ವಾಗತ ಕಮಾನು ಹಾಗೂ ನಗರದ ಅಜಾದ್ ಚೌಕ್ ಉದ್ಘಾಟನಾ ಕಾರ್ಯಕ್ರಮಗಳು ನಡೆಯಲಿವೆ

ಸಮೀಕ್ಷಾ ಕರ್ತವ್ಯ ನಿರ್ವಹಿಸಿದ ಶಿಕ್ಷಕರಿಗೆ ಗಳಿಕೆ ರಜೆ ನಮೂದಿಸಲು ವಿಳಂಬ: ಕ್ಷೇತ್ರ ಶಿಕ್ಷಣಾಧಿಕಾರಿಗಳ ವಿರುದ್ಧ ಶಿಕ್ಷಕರ ಅಸಮಾಧಾನ

ಕ್ಷೇತ್ರ ಶಿಕ್ಷಣಾಧಿಕಾರಿಗಳ ವಿರುದ್ಧ ಶಿಕ್ಷಕರ ಅಸಮಾಧಾನ

ಜಿಲ್ಲಾಡಳಿತ ಹಾಗೂ ಚುನಾವಣಾ ಆಯೋಗದ ನಿರ್ದೇಶನದಂತೆ ವೈಯಕ್ತಿಕ ಸಮಸ್ಯೆಗಳ ನಡುವೆಯೂ ಶಿಕ್ಷಕರು ಕರ್ತವ್ಯವನ್ನು ತಪ್ಪದೆ ನಿರ್ವಹಿಸಿದ್ದಾರೆ. ಆದರೆ, ಈ ಸೇವೆಗೆ ಪ್ರತಿಯಾಗಿ ದೊರೆಯಬೇಕಾದ ಗಳಿಕೆ ರಜೆಯನ್ನು ಸೇವಾ ಪುಸ್ತಕದಲ್ಲಿ ನಮೂದಿಸಲು ಅಧಿಕಾರಿಗಳು ವಿಳಂಬ ಮಾಡುತ್ತಿದ್ದಾರೆ ಎಂದು ಸಂಘದ ಪದಾಧಿಕಾರಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Chikkaballapur News: ಶಿಕ್ಷಕರ ಸಮಸ್ಯೆಗಳಿಗೆ ಸಂಘಟಿತವಾಗಿ ಧ್ವನಿಯಾಗುತ್ತೇವೆ: ಕೆ.ಜಿ.ಶ್ರೀನಿವಾಸ್

ಶಿಕ್ಷಕರ ಸಮಸ್ಯೆಗಳಿಗೆ ಸಂಘಟಿತವಾಗಿ ಧ್ವನಿಯಾಗುತ್ತೇವೆ: ಕೆ.ಜಿ.ಶ್ರೀನಿವಾಸ್

ಶಿಕ್ಷಕರಿಗೆ ಕರ್ತವ್ಯ ನಿರ್ವಹಣೆಯಲ್ಲಿ ಎದುರಾಗುವ ಸಮಸ್ಯೆಗಳು, ಸೇವಾ ವಿಚಾರಗಳು ಹಾಗೂ ಇತರ ನ್ಯಾಯಯುತ ಬೇಡಿಕೆಗಳಿಗೆ ಸಂಘ ಸದಾ ಬೆಂಬಲವಾಗಿ ನಿಲ್ಲಲಿದೆ. ಸಂಘಟನೆಯ ಮೂಲಕ ಶಿಕ್ಷಕರಲ್ಲಿ ಒಗ್ಗಟ್ಟು ಮೂಡಿಸಿ, ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೂ ಪೂರಕವಾಗಿ ಕೆಲಸ ಮಾಡಲಾಗುವುದು ಎಂದು ಹೇಳಿದರು

ಬಾಳೆಹಣ್ಣಿಗೂ ವಿಷ! ಉಡುಪಿಯಲ್ಲಿ ಅಕ್ರಮ ಬಾಳೆಹಣ್ಣು ಮಾಗಿಸುವ ಘಟಕಗಳ ಮೇಲೆ ಅಧಿಕಾರಿಗಳಿಂದ ದಾಳಿ

ಅಕ್ರಮ ಬಾಳೆಹಣ್ಣು ಮಾಗಿಸುವ ಘಟಕಗಳ ಮೇಲೆ ಅಧಿಕಾರಿಗಳಿಂದ ದಾಳಿ

illegal banana ripening units: ಕಾನೂನುಬಾಹಿರವಾಗಿ ರಾಸಾಯನಿಕ ಬಳಸಿ ಬಾಳೆಹಣ್ಣು ಹಣ್ಣು ಮಾಡುವ ಜಾಲ ಸಕ್ರಿಯವಾಗಿರುವ ಮಾಹಿತಿ ಮೇರೆಗೆ ಉಡುಪಿ ಜಿಲ್ಲೆಯ ಅಲೆವೂರು ಗ್ರಾಮದಲ್ಲಿ ಹಲವು ಸ್ಥಳಗಳ ಮೇಲೆ ದಾಳಿ ನಡೆಸಲಾಗಿದೆ. ದಾಳಿಯ ಸಮಯದಲ್ಲಿ, ಅಧಿಕಾರಿಗಳು ರೂ. 4 ಲಕ್ಷ ಮೌಲ್ಯದ 5,000 ಕೆಜಿ ಹಸಿ ಬಾಳೆ ಗೊಂಚಲುಗಳನ್ನು ವಶಪಡಿಸಿಕೊಂಡರು.

ಸಮಾಜ ಸುಧಾರಣೆಯೇ ಡಿ.ದೇವರಾಜ ಅರಸು : ತಹಶೀಲ್ದಾರ್ ಆರತಿ.ಬಿ

ಸಮಾಜ ಸುಧಾರಣೆಯೇ ಡಿ.ದೇವರಾಜ ಅರಸು

ರಾಜ್ಯದಲ್ಲಿ ಸಾಮಾಜಿಕ ಕ್ರಾಂತಿ ಹಾಗೂ ಶೋಷಿತ ಸಮುದಾಯಗಳಿಗೆ ರಾಜಕೀಯ ಮತ್ತು ಸಾಮಾಜಿಕ ಶಕ್ತಿ ತುಂಬಿದ ನಾಯಕರಾದ ದೇವರಾಜ ಅರಸು ಪರಿಣಾಮಕಾರಿಯಾಗಿ ಜಾರಿಗೊಳಿಸಿದ ಭೂ ಸುಧಾರಣಾ ಕಾಯಿದೆ ಬಡ ರೈತರಿಗೆ ಭೂಮಿ ಸಿಕ್ಕಿ ಬದುಕು ಕಟ್ಟಿಕೊಂಡರು. ಜೀತ ಪದ್ಧತಿ ನಿರ್ಮೂಲನೆ ಕಠಿಣವಾಗಿ ಜಾರಿಗೆ ತಂದರು.

Gudibande News: ದೇವರಾಜ ಅರಸು ಅವರ ಆದರ್ಶ ಪಾಲನೆಯೇ ಜಯಂತಿ ಆಚರಣೆಗೆ ಸಾರ್ಥಕತೆ: ಪರಿಮಳ

ಅರಸು ಅವರ ಆದರ್ಶ ಪಾಲನೆಯೇ ಜಯಂತಿ ಆಚರಣೆಗೆ ಸಾರ್ಥಕತೆ

ಮಹನೀಯರ ಜಯಂತಿ ಆಚರಿಸುವುದಷ್ಟೇ ಸಾಲದು. ಅವರು ತೋರಿದ ಆದರ್ಶ ಹಾಗೂ ಸಮಾಜ ಮುಖಿ ಚಿಂತನೆಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಜಯಂತಿ ಆಚರಣೆಗೆ ನಿಜವಾದ ಸಾರ್ಥಕತೆ ದೊರೆಯುತ್ತದೆ ಎಂದು ನ್ಯೂ ವಿಷನ್ ಇಂಗ್ಲೀಷ್ ಶಾಲೆಯ ಮುಖ್ಯಸ್ಥೆ ಪರಿಮಳ ಹೇಳಿದರು.

SIR: ಮತದಾರರ ಹಕ್ಕು–ಆಕ್ಷೇಪಣೆಗಳ ವಿಲೇವಾರಿಯಲ್ಲಿ ಪಾರದರ್ಶಕತೆ ಕಡ್ಡಾಯ: ಜಿಲ್ಲಾಧಿಕಾರಿ

ಮತದಾರರ ಹಕ್ಕು–ಆಕ್ಷೇಪಣೆಗಳ ವಿಲೇವಾರಿಯಲ್ಲಿ ಪಾರದರ್ಶಕತೆ ಕಡ್ಡಾಯ

ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಹಿನ್ನೆಲೆಯಲ್ಲಿ ಕರಡು ಮತದಾರರ ಪಟ್ಟಿಗೆ ಸಲ್ಲಿಕೆ ಯಾಗುವ ಹಕ್ಕು ಮತ್ತು ಆಕ್ಷೇಪಣೆಗಳನ್ನು ನಿಯಮಾನುಸಾರ, ನಿಷ್ಪಕ್ಷಪಾತವಾಗಿ ಹಾಗೂ ಸಮರ್ಪಕ ವಾಗಿ ವಿಲೇವಾರಿ ಮಾಡುವಂತೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಜಿ.ಪ್ರಭು ಅವರು ಮತಗಟ್ಟೆ ಮಟ್ಟದ ಅಧಿಕಾರಿಗಳಿಗೆ (ಬಿಎಲ್‌ಒ) ಸೂಚಿಸಿದರು.

ವಿದ್ಯಾರ್ಥಿನಿಲಯಕ್ಕೆ ದಿಢೀರ್ ಭೇಟಿ: ಊಟ, ಸ್ವಚ್ಛತೆ ಪರಿಶೀಲಿಸಿದ ತಹಸೀಲ್ದಾರ್

ವಿದ್ಯಾರ್ಥಿನಿಲಯಕ್ಕೆ ದಿಢೀರ್ ಭೇಟಿ: ಊಟ, ಸ್ವಚ್ಛತೆ ಪರಿಶೀಲನೆ

ವಿದ್ಯಾರ್ಥಿನಿಯರೊಂದಿಗೆ ಮಾತನಾಡಿದ ಅವರು, ವಿದ್ಯಾಭ್ಯಾಸಕ್ಕೆ ಹೆಚ್ಚಿನ ಆದ್ಯತೆ ನೀಡಿ ಪ್ರತಿನಿತ್ಯ ನಿಗದಿತ ಸಮಯವನ್ನು ಅಧ್ಯಯನಕ್ಕೆ ಮೀಸಲಿಡಬೇಕು. ಐಎಎಸ್, ಕೆಎಎಸ್ ಸೇರಿದಂತೆ ಸ್ಪರ್ಧಾ ತ್ಮಕ ಪರೀಕ್ಷೆಗಳಿಗೆ ಈಗಿನಿಂದಲೇ ಸಿದ್ಧತೆ ನಡೆಸಿ, ಸ್ಪಷ್ಟ ಗುರಿ ಹಾಗೂ ಶ್ರದ್ಧೆಯಿಂದ ಮುನ್ನಡೆಯಬೇಕು ಎಂದು ಕಿವಿಮಾತು ಹೇಳಿದರು

ಸಂಪತ್ತು, ಅಧಿಕಾರ ಸಮಾನ ಹಂಚಿಕೆಯಾದಾಗ ದೇಶದ ನೈಜ ಉದ್ಧಾರ: ಎಲ್.ಎನ್.ಮುಕುಂದರಾಜ್

ಸಂಪತ್ತು, ಅಧಿಕಾರ ಸಮಾನ ಹಂಚಿಕೆಯಾದಾಗ ದೇಶದ ನೈಜ ಉದ್ಧಾರ

ಸಂವಿಧಾನ ನೀಡಿರುವ ಸಮಾನತೆ ಹಾಗೂ ಸಾಮಾಜಿಕ ನ್ಯಾಯದ ಆಶಯಗಳನ್ನು ಅರಿತು ಪ್ರತಿಯೊ ಬ್ಬರೂ ನಡೆದುಕೊಳ್ಳಬೇಕು. ಮಹಾತ್ಮ ಗಾಂಧೀಜಿ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಅವರಂತಹ ಮಹನೀಯರು ರೂಪಿಸಿದ ಸಂವಿಧಾನದ ಶಕ್ತಿಯಿಂದಾಗಿ ಇಂದು ಪ್ರತಿಯೊಬ್ಬರಿಗೂ ಸಮಾನ ಅವಕಾಶಗಳು ದೊರೆತಿವೆ.

ಎಲೆಕ್ಟ್ರಿಕ್ ವಾಣಿಜ್ಯ ವಾಹನಗಳಿಗೆ ವಿನೂತನ ಲೀಸಿಂಗ್ ಮತ್ತು ಆರ್ಥಿಕ ಪರಿಹಾರ ಒದಗಿಸಲು ಟಾಟಾ ಮೋಟಾರ್ಸ್ ಜತೆ ಡ್ರಿವನ್ ಮಹತ್ವದ ಒಪ್ಪಂದ

ಎಲೆಕ್ಟ್ರಿಕ್ ವಾಣಿಜ್ಯ ವಾಹನಗಳಿಗೆ ವಿನೂತನ ಲೀಸಿಂಗ್ ಒದಗಿಸಲು ಒಪ್ಪಂದ

ಡ್ರಿವನ್ ಸಂಸ್ಥೆಯು ವಾಣಿಜ್ಯ ವಾಹನ ಸಮೂಹ ನಿರ್ವಾಹಕರ ಪ್ರತಿಯೊಂದು ಅಗತ್ಯಕ್ಕೂ ತಕ್ಕಂತೆ ವಿಶೇಷ ಆಪರೇಟಿಂಗ್ ಲೀಸ್ ಪರಿಹಾರಗಳನ್ನು ರೂಪಿಸಿ ಒದಗಿಸುತ್ತದೆ. ಹಣಕಾಸು ನೆರವು, ವಾಹನಗಳ ನಿಯೋಜನೆ ಮತ್ತು ಚಾರ್ಜಿಂಗ್ ಮೂಲಸೌಕರ್ಯಗಳಲ್ಲಿ ದೀರ್ಘಕಾಲದಿಂದಲೂ ಎದುರಾಗು ತ್ತಿದ್ದ ಪ್ರಮುಖ ಅಂತರಗಳನ್ನು ಯಶಸ್ವಿಯಾಗಿ ನೀಗಿಸುವ ಮೂಲಕ, ವಿದ್ಯುತ್ ವಾಹನಗಳ ಬಳಕೆಯನ್ನು ಅತ್ಯಂತ ಸರಳ ಹಾಗೂ ಹೆಚ್ಚು ಪ್ರಾಯೋಗಿಕವಾಗಿಸುತ್ತಿದೆ.

ಮೆಟ್ರೋ ನಗರಗಳನ್ನು ಹಿಂದಿಕ್ಕಿ ಬೆಳೆಯುತ್ತಿವೆ ಸಣ್ಣ ನಗರಗಳು: 'ಡನ್ & ಬ್ರಾಡ್‌ಸ್ಟ್ರೀಟ್' ವರದಿಯಲ್ಲಿ ಅಚ್ಚರಿಯ ಮಾಹಿತಿ!

ಮೆಟ್ರೋ ನಗರಗಳನ್ನು ಹಿಂದಿಕ್ಕಿ ಬೆಳೆಯುತ್ತಿವೆ ಸಣ್ಣ ನಗರಗಳು

ಭಾರತದ ಆರ್ಥಿಕ ಬೆಳವಣಿಗೆ ಎಂದರೆ ಕೇವಲ ಮುಂಬೈ, ದೆಹಲಿ, ಬೆಂಗಳೂರಿ ನಂತಹ ದೊಡ್ಡ ಮೆಟ್ರೋ ನಗರಗಳು ಮಾತ್ರ ಅಂತ ನೀವು ಅಂದುಕೊಂಡಿದ್ದರೆ, ಆ ಲೆಕ್ಕಾಚಾರ ಬದಲಿಸಿಕೊಳ್ಳುವ ಸಮಯ ಬಂದಿದೆ. ದೇಶದ ಸಣ್ಣ ಮತ್ತು ಉದಯೋನ್ಮುಖ ನಗರಗಳೂ ಇದೀಗ ಆರ್ಥಿಕತೆಯಲ್ಲಿ ದೊಡ್ಡ ಕೊಡುಗೆ ನೀಡುತ್ತಿವೆ ಅಂತ ವರದಿಯೊಂದು ಹೇಳಿದೆ.

Loading...