ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

ICC T20I Rankings: ಬ್ಯಾಟಿಂಗ್‌ ಶ್ರೇಯಾಂಕದಲ್ಲಿ ಭಾರೀ ಜಿಗಿತ ಕಂಡ ಅಭಿಷೇಕ್‌ ಶರ್ಮ

ತಿಲಕ್‌ ವರ್ಮಾ ಒಂದು ಸ್ಥಾನದ ನಷ್ಟದೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ. ಆಲ್‌ರೌಂಡರ್‌ಗಳ ವಿಭಾಗದಲ್ಲಿ ಹಾರ್ದಿಕ್‌ ಪಾಂಡ್ಯ(251) ಅಗ್ರಸ್ಥಾನದಲ್ಲೇ ಮುಂದುವರಿದಿದ್ದಾರೆ. ಉಳಿದಂತೆ ಯಾವುದೇ ಬದಲಾವಣೆ ಸಂಭವಿಸಿಲ್ಲ.

ICC T20I Rankings: ಬ್ಯಾಟಿಂಗ್‌ ಶ್ರೇಯಾಂಕದಲ್ಲಿ ಭಾರೀ ಜಿಗಿತ ಕಂಡ ಅಭಿಷೇಕ್‌ ಶರ್ಮ

Abhishek Sharma

Profile Abhilash BC Feb 5, 2025 3:54 PM

ದುಬೈ: ಇಂಗ್ಲೆಂಡ್‌ ವಿರುದ್ಧದ ಅಂತಿಮ ಟಿ20 ಪಂದ್ಯದಲ್ಲಿ ಸಿಡಿಲಬ್ಬರದ ಬ್ಯಾಟಿಂಗ್‌ ಮೂಲಕ ಶತಕ ಬಾರಿಸಿದ್ದ ಟೀಮ್‌ ಇಂಡಿಯಾದ ಎಡಗೈ ಬ್ಯಾಟರ್‌ ಅಭಿಷೇಕ್‌ ಶರ್ಮ(Abhishek Sharma) ಅವರು ನೂತನ ಐಸಿಸಿ ಟಿ20 ಬ್ಯಾಟಿಂಗ್‌ ಶ್ರೇಯಾಂಕದಲ್ಲಿ(ICC T20I Rankings) ಜೀವನಶ್ರೇಷ್ಠ ಸ್ಥಾನ ಪಡೆದಿದ್ದಾರೆ. ಬರೋಬ್ಬರಿ 38 ಸ್ಥಾನಗಳ ಜಿಗಿತದೊಂದಿಗೆ 2ನೇ ಸ್ಥಾನಕ್ಕೇರಿದ್ದಾರೆ.

ಬೌಲಿಂಗ್‌ ಶ್ರೇಯಾಂಕದಲ್ಲಿ ಯುವ ಸ್ಪಿನ್ನರ್‌ ವರುಣ್‌ ಚಕ್ರವರ್ತಿ(705 ರೇಟಿಂಗ್‌) ಉತ್ತಮ ಪ್ರಗತಿಯೊಂದಿಗೆ ಅಗ್ರ ಸ್ಥಾನದ ಸನಿಹಕ್ಕೆ ಬಂದಿದ್ದಾರೆ. ಕಳೆದ ವಾರ 5ನೇ ಸ್ಥಾನದಲ್ಲಿದ್ದ ಅವರು ಈ ವಾರ 2 ಸ್ಥಾನದ ಜಿಗಿತದೊಂದಿಗೆ 2ನೇ ಶ್ರೇಯಾಂಕ ಪಡೆದಿದ್ದಾರೆ. ಇಂಗ್ಲೆಂಡ್‌ ವಿರುದ್ಧದ ಟಿ20 ಸರಣಿಯಲ್ಲಿ ತೋರಿದ ಉತ್ತಮ ಪ್ರದರ್ಶನ ಅವರ ಶ್ರೇಯಾಂಕ ಹೆಚ್ಚಳಕ್ಕೆ ಕಾರಣ. 5 ಪಂದ್ಯಗಳಿಂದ ಒಟ್ಟು 14 ವಿಕೆಟ್‌ ಕಿತ್ತಿದ್ದರು. ವೆಸ್ಟ್‌ ಇಂಡೀಸ್‌ನ ಸ್ಪಿನ್ನರ್‌ ಅಕೀಲ್‌ ಹೊಸೈನ್‌(707) ಅಗ್ರಸ್ಥಾನ ಪಡೆದಿದ್ದಾರೆ. ವರುಣ್‌ ಚಕ್ರವರ್ತಿ ಜತೆ ಇಂಗ್ಲೆಂಡ್‌ನ ಆದೀಲ್‌ ರಶೀದ್‌ ಕೂಡ ಜಂಟಿ 2ನೇ ಸ್ಥಾನ ಹಂಚಿಕೊಂಡಿದ್ದಾರೆ.

ತಿಲಕ್‌ ವರ್ಮಾ ಒಂದು ಸ್ಥಾನದ ನಷ್ಟದೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ. ಆಲ್‌ರೌಂಡರ್‌ಗಳ ವಿಭಾಗದಲ್ಲಿ ಹಾರ್ದಿಕ್‌ ಪಾಂಡ್ಯ(251) ಅಗ್ರಸ್ಥಾನದಲ್ಲೇ ಮುಂದುವರಿದಿದ್ದಾರೆ. ಉಳಿದಂತೆ ಯಾವುದೇ ಬದಲಾವಣೆ ಸಂಭವಿಸಿಲ್ಲ.

ಇದನ್ನೂ ಓದಿ IND vs ENG: ʻಭಾರತ ಚಾಂಪಿಯನ್ಸ್‌ ಟ್ರೋಫಿ ಗೆಲ್ಲಲು ಈ ಇಬ್ಬರ ಫಾರ್ಮ್‌ ಮುಖ್ಯʼ-ಸುರೇಶ್‌ ರೈನಾ!

ಟಾಪ್‌-10 ಬ್ಯಾಟರ್‌ಗಳು

ಟ್ರಾವಿಸ್‌ ಹೆಡ್‌-855

ಅಭಿಷೇಕ್‌ ಶರ್ಮ-829

ತಿಲಕ್‌ ವರ್ಮಾ-803

ಫಿಲ್‌ ಸಾಲ್ಟ್‌- 798

ಸೂರ್ಯಕುಮಾರ್‌ ಯಾದವ್‌-738

ಜಾಸ್‌ ಬಟ್ಲರ್‌-729

ಬಾಬರ್‌ ಅಜಂ-712

ಪಾಥುಮ್‌ ನಿಸ್ಸಂಕ-707

ಮೊಹಮ್ಮದ್‌ ರಿಜ್ವಾನ್‌- 704

ಕುಸಲ್‌ ಪೆರೆರ-675

ಟಾಪ್‌-5 ಬೌಲರ್‌ಗಳು

ಅಕೀಲ್‌ ಹೊಸೈನ್‌-707

ಆದೀಲ್‌ ರಶೀದ್‌- 705

ವರುಣ್‌ ಚಕ್ರವರ್ತಿ-705

ವನಿಂದು ಹಸರಂಗ- 698

ಆ್ಯಡಂ ಝಾಂಪ-694

ರವಿ ಬಿಷ್ಣೋಯ್‌-671

ಮಹೀಶ್‌ ತೀಕ್ಷಣ- 665

ರಶೀದ್‌ ಖಾನ್‌-664

ಅರ್ಶ್‌ದೀಪ್‌ ಸಿಂಗ್-652‌

ಜೋಫ್ರ ಆರ್ಚರ್‌-649