ದಿನ ಭವಿಷ್ಯ ಫೆಬ್ರವರಿ 18, 2026: ರಾಹುವಿನ ಪ್ರಭಾವದಿಂದ ಇಂದು ರಾಜಯೋಗ
Horoscope Today February 18: ವಿಶ್ವವಸು ನಾಮ ಸಂವತ್ಸರದ ಉತ್ತರಾಯನ, ಶರದೃತು, ಫಾಲ್ಗುಣಿ ಮಾಸೆ, ಶುಕ್ಷ ಪಕ್ಷ, ಪ್ರತಿಪಾ ತಿಥಿ, ಶತಭಿಷಾ ನಕ್ಷತ್ರದ ಫೆಬ್ರವರಿ 18ನೇ ತಾರೀಖಿನ ಭವಿಷ್ಯದ ಬಗ್ಗೆ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ತಿಳಿಸಿದ್ದಾರೆ.
ಇಂಟರ್‌ನೆಟ್ ಚಿತ್ರ -
ಬೆಂಗಳೂರು, ಫೆ. 18: ವಿಶ್ವವಸು ನಾಮ ಸಂವತ್ಸರದ, ಉತ್ತರಾಯನ ಶರದೃತು, ಫಾಲ್ಗುಣಿ ಮಾಸೆ, ಶತಭಿಷಾ ನಕ್ಷತ್ರದ ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿಗಳ ಭವಿಷ್ಯ ಹೇಗಿದೆ ಎನ್ನುವ ಬಗ್ಗೆ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ತಿಳಿಸಿದ್ದಾರೆ.
ಮೇಷ ರಾಶಿ: ಇಂದು ಶತಭಿಷಾ ನಕ್ಷತ್ರ ಇದ್ದು, ಅಧಿಪತಿ ರಾಹು. ಹಾಗಾಗಿ ಹೆಚ್ಚಿನವರ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಮೇಷ ರಾಶಿಯವರಿಗೆ ಉತ್ತಮ ದಿನವಾಗಲಿದೆ. ಇಷ್ಟಾರ್ಥ ಸಿದ್ಧಿಯಾಗಲಿದ್ದು, ಧನಾಗಮನ ವಾಗುತ್ತದೆ. ಇತರರಿಂದ ಪ್ರತಿಷ್ಠೆ ಕೂಡ ಪ್ರಾಪ್ತಿಯಾಗುತ್ತದೆ.
ವೃಷಭ ರಾಶಿ: ಇಂದು ವೃಷಭ ರಾಶಿಯವರಿಗೆ ಕಾರ್ಯಕ್ಷೇತ್ರದಲ್ಲಿ ಅತೀ ಹೆಚ್ಚಿನ ಯಶಸ್ಸು ಸಿಗುತ್ತದೆ. ಎಲ್ಲ ಕೆಲಸದಲ್ಲೂ ಜಯ ಪ್ರಾಪ್ತಿಯಾಗುತ್ತದೆ.
ಮಿಥುನ ರಾಶಿ: ಮಿಥುನ ರಾಶಿಯಲ್ಲಿರುವವರಿಗೆ ಅದೃಷ್ಟದ ದಿನವಾಗಲಿದೆ. ಇಂದು ಮುಖ್ಯವಾದ ಒಳಿತನ್ನು ನೀವು ಕಾಣಲಿದ್ದೀರಿ.
ಕಟಕ ರಾಶಿ: ಕಟಕ ರಾಶಿಯವರಿಗೆ ಕಷ್ಟದ ದಿನವಾಗಲಿದೆ. ಮುಖ್ಯವಾದ ವಿಚಾರಗಳಲ್ಲಿ ಮನಸ್ಸಿಗೆ ತುಂಬಾನೇ ಘಾಸಿಯಾಗಲಿದೆ. ದಾಂಪತ್ಯ ಜೀವನ, ಮುಖ್ಯ ಸ್ನೇಹದಲ್ಲಿ ತಿರುವು ಉಂಟಾಗುವ ಸಾಧ್ಯತೆ ಇರುತ್ತದೆ.
ಮನೆಯ ಆರ್ಥಿಕ ಸಮಸ್ಯೆಗೆ ಕರ್ಪೂರದಲ್ಲಿದೆ ಪರಿಹಾರ: ವಾಸ್ತು ಸಲಹೆ ಪ್ರಕಾರ ಹೀಗೆ ಬಳಸಿ
ಸಿಂಹ ರಾಶಿ: ಸಿಂಹ ರಾಶಿ ಅವರಿಗೆ ಕಷ್ಟದ ದಿನವಾಗಲಿದೆ. ಮುಖ್ಯವಾದ ಯಾವುದೇ ನಿರ್ಧಾರಗಳು ಬೇಡ. ಪಾರ್ಟನರ್ ಶಿಪ್ ವ್ಯವಹಾರದಲ್ಲಿ ಕಷ್ಟ ಆಗುವ ಸಾಧ್ಯತೆ ಇದೆ.
ಕನ್ಯಾ ರಾಶಿ: ಕನ್ಯಾ ರಾಶಿಯವರಿಗೆ ಉತ್ತಮ ದಿನವಾಗಲಿದ್ದು, ಇಷ್ಟಾರ್ಥ ಸಿದ್ಧಿಯಾಗಲಿದೆ. ಶತ್ರುಗಳು ಹಿಮ್ಮೆಟ್ಟಲಿದ್ದು, ಸಾಮಾಜಿಕ ಕೆಲಸದಲ್ಲಿ ಜಯ ಪ್ರಾಪ್ತಿಯಾಗುತ್ತದೆ.
ತುಲಾ ರಾಶಿ: ತುಲಾ ರಾಶಿಯವರಿಗೆ ಮುಖ್ಯವಾದ ಹಣಕಾಸಿನ ವಿಚಾರವಾಗಿ ತೊಂದರೆಯಾಗಬಹುದು. ಹಾಗಾಗಿ ಜಾಗೃತರಾಗಿ ಎಲ್ಲವನ್ನು ನಿಭಾಯಿಸಬೇಕಾಗುತ್ತದೆ.
ವೃಶ್ಚಿಕ ರಾಶಿ: ವೃಶ್ಚಿಕ ರಾಶಿಯವರಿಗೆ ಮನೆ, ಸಂಸಾರ ಆಸ್ತಿ ಪಾಸ್ತಿ ವಿಚಾರವಾಗಿ ಮನಸ್ಸಿಗೆ ನೋವು ಉಂಟಾಗುವ ಸಾಧ್ಯತೆ ಇದೆ.
ಧನಸ್ಸು ರಾಶಿ: ಧನಸ್ಸು ರಾಶಿಯವರಿಗೆ ಉತ್ತಮ ದಿನವಾಗಲಿದೆ. ಸಾಮಾಜಿಕ ಚಟುವಟಿಕೆಗಳಲ್ಲಿ ಯಶಸ್ಸು ಸಿಗುತ್ತದೆ. ಎಲ್ಲದರಲ್ಲೂ ಜಯವನ್ನು ನೀವು ನೋಡಬಹುದು.
ಮಕರ ರಾಶಿ: ಮಕರ ರಾಶಿಯವರಿಗೆ ಉತ್ತಮ ದಿನವಾಗಲಿದೆ. ಹಣಕಾಸಿನ ವಿಚಾರದಲ್ಲಿ ಸ್ವಲ್ಪ ಕಿರಿ ಕಿರಿಯಾಗಬಹುದು. ಆದರೂ ಸಂಸಾರದ ವಿಚಾರದಲ್ಲಿ ನೆಮ್ಮದಿ ಸಿಗಬಹುದು.
ಕುಂಭರಾಶಿ: ಈ ರಾಶಿಗೆ ಚಂದ್ರ ಬಂದಿರುವುದರಿಂದ ನಿಮ್ಮ ವ್ಯಕ್ತಿತ್ವದಲ್ಲಿ ಮುಖ್ಯವಾದ ಬದಲಾವಣೆ ನೋಡಬಹುದು.
ಮೀನ ರಾಶಿ: ಮೀನ ರಾಶಿಗೆ ಅತೀ ಹೆಚ್ಚಿನ ಪ್ರಗತಿ ಇಂದು ಸಿಗಲಿದೆ. ಆಧ್ಯಾತ್ಮಿಕ ವಿಚಾರದಲ್ಲಿ ಜಯವನ್ನು ನೀವು ಕಾಣುತ್ತೀರಿ.