IND vs ENG: ಬ್ಯಾಟಿಂಗ್ ಫಾರ್ಮ್ ಕಂಡುಕೊಂಡ ರಹಸ್ಯ ಬಹಿರಂಗಪಡಿಸಿದ ರೋಹಿತ್ ಶರ್ಮಾ!
Rohit Sharam on his Century: ಸತತ ಬ್ಯಾಟಿಂಗ್ ವೈಫಲ್ಯ ಅನುಭವಿಸುತ್ತಿದ್ದ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಭರ್ಜರಿ ಬ್ಯಾಟಿಂಗ್ ಫಾರ್ಮ್‌ಗೆ ಮರಳಿದ್ದಾರೆ. ಕಟಕ್‌ನಲ್ಲಿ ಭಾನುವಾರ ನಡೆದಿದ್ದ ಎರಡನೇ ಏಕದಿನ ಪಂದ್ಯದಲ್ಲಿ ಆಡಿದ್ದ 90 ಎಸೆತಗಳಲ್ಲಿ 119 ರನ್‌ಗಳನ್ನು ಕಲೆ ಹಾಕಿದರು. ಆ ಮೂಲಕ ಭಾರತ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.
![ತಮ್ಮ ಬ್ಯಾಟಿಂಗ್ ಲಯ ಕಂಡುಕೊಂಡಿದ್ದೇಗೆಂದು ತಿಳಿಸಿದ ರೋಹಿತ್ ಶರ್ಮಾ!](https://cdn-vishwavani-prod.hindverse.com/media/original_images/Rohit_Sharma_8lHEif7.jpg)
Rohit Sharma Scored Century
![Profile](https://vishwavani.news/static/img/user.png)
ಕಟಕ್: ಸತತ ಬ್ಯಾಟಿಂಗ್ ವೈಫಲ್ಯ ಅನುಭವಿಸುವ ಮೂಲಕ ಸಾಕಷ್ಟು ಟೀಕೆಗಳಿಗೆ ಒಳಗಾಗಿದ್ದ ಭಾರತ ತಂಡದ ನಾಯಕ ರೋಹಿತ್ ಶರ್ಮಾ, ಇಂಗ್ಲೆಂಡ್ ವಿರುದ್ದದ ಎರಡನೇ ಏಕದಿನ ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸುವ ಮೂಲಕ ಫಾರ್ಮ್‌ಗೆ ಮರಳಿದ್ದಾರೆ. ಆ ಮೂಲಕ ಭಾರತ ತಂಡ 4 ವಿಕೆಟ್ ಗೆಲುವಿನಲ್ಲಿ ಮಹತ್ತರ ಪಾತ್ರವಹಿಸಿದರು ಹಾಗೂ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ನಾಗ್ಪರದಲ್ಲಿ ನಡೆದಿದ್ದ ಮೊದಲನೇ ಏಕದಿನ ಪಂದ್ಯದಲ್ಲಿ ರೋಹಿತ್ ಶರ್ಮಾ ಅವರ ಮೇಲೆ ಸಾಕಷ್ಟು ನಿರೀಕ್ಷೆ ಇಡಲಾಗಿತ್ತು. ಆದರೆ, ಅವರು ಕಳಪೆ ಹೊಡೆತಕ್ಕೆ ಹಾಕಿ ವಿಕೆಟ್ ಒಪ್ಪಿಸಿದ್ದರು. ಆ ಮೂಲಕ ಭಾರಿ ನಿರಾಶೆ ಮೂಡಿಸಿದ್ದರು. ಅಲ್ಲದೆ, ರೋಹಿತ್ ಶರ್ಮಾ ಅವರ ವೃತ್ತಿ ಜೀವನದ ಬಹುತೇಕ ಅಂತ್ಯ ಎಂತಲೂ ಮಾಜಿ ಆಟಗಾರರು ಮಾತನಾಡಿಕೊಂಡಿದ್ದರು. ಆದರೆ, ಈ ಎಲ್ಲಾ ಪ್ರಶ್ನೆಗಳು ಹಾಗೂ ಟೀಕೆಗಳಿಗೆ ಎರಡನೇ ಏಕದಿನ ಪಂದ್ಯದಲ್ಲಿ ಅವರು ತಮ್ಮ ಬ್ಯಾಟ್ ಮೂಲಕ ಉತ್ತರ ನೀಡಿದ್ದಾರೆ.
ಭಾನುವಾರ ಇಲ್ಲಿನ ಬಾರಬತಿ ಕ್ರೀಡಾಂಗಣದಲ್ಲಿ ನಡೆದಿದ್ದ ಎರಡನೇ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ ನೀಡಿದ್ದ 305 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಭಾರತ ತಂಡದ ಪರ ಇನಿಂಗ್ಸ್ ಆರಂಭಿಸಿದ ರೋಹಿತ್ ಶರ್ಮಾ, 90 ಎಸೆತಗಳಲ್ಲಿ 7 ಸಿಕ್ಸರ್‌ಗಳು ಹಾಗೂ 12 ಬೌಂಡರಿಗಳೊಂದಿಗೆ 119 ರನ್‌ಗಳನ್ನು ಕಲೆ ಹಾಕಿದರು. ಆ ಮೂಲಕ ದೀರ್ಘಾವಧಿ ಬಳಿಕ ಶತಕವನ್ನು ಸಿಡಿಸಿ ಭರ್ಜರಿ ಫಾರ್ಮ್‌ಗೆ ಮರಳಿದರು.
IND vs ENG 2nd ODI: ರೋಹಿತ್ ಶತಕ ವೈಭವ; ಭಾರತಕ್ಕೆ ಸರಣಿ ಗೆಲುವಿನ ಸಂಭ್ರಮ
ಸಂತಸ ವ್ಯಕ್ತಪಡಿಸಿದ ರೋಹಿತ್ ಶರ್ಮಾ
ಪಂದ್ಯದ ಬಳಿಕ ಪೋಸ್ಟ್ ಮ್ಯಾಚ್ ಪ್ರಸೆಂಟೇಷನ್‌ನಲ್ಲಿ ಮಾತನಾಡಿದ್ದ ರೋಹಿತ್ ಶರ್ಮಾ, "ತಂಡಕ್ಕಾಗಿ ರನ್‌ಗಳನ್ನು ಗಳಿಸಿದ್ದಕ್ಕೆ ಹಾಗೂ ಕ್ರೀಸ್‌ನಲ್ಲಿ ಸ್ವಲ್ಪ ಸಮಯ ಕಳೆದಿದ್ದರಿಂದ ತುಂಬಾ ಖುಷಿಯಾಗುತ್ತಿದೆ. ಈ ಸರಣಿಯಲ್ಲಿ ಇದು ಅತ್ಯಂತ ಪ್ರಮುಖ ಪಂದ್ಯವಾಗಿತ್ತು. ನಾನು ಹೇಗೆ ಬ್ಯಾಟ್ ಮಾಡಬೇಕೆಂಬಂತೆ ಇಂದು (ಭಾನುವಾರ) ಆಡಿದ್ದೇನೆ. ಟಿ20 ಕ್ರಿಕೆಟ್‌ಗಿಂತ ಸ್ವಲ್ಪ ದೀರ್ಘವಾದದ್ದು ಹಾಗೂ ಟೆಸ್ಟ್ ಕ್ರಿಕೆಟ್‌ಗಿಂತ ಸ್ವಲ್ಪ ಅಲ್ಪಾವಧಿಯಲ್ಲಿ ನಡೆಯುತ್ತದೆ. ಆದರೆ, ಸನ್ನಿವೇಶಕ್ಕೆ ತಕ್ಕಂತೆ ಬ್ಯಾಟ್ ಮಾಡಬೇಕಾಗುತ್ತದೆ. ಸಾಧ್ಯವಾದಷ್ಟು ಆಳವಾಗಿ ಬ್ಯಾಟ್ ಮಾಡಬೇಕೆಂದು ಬಯಸಿದ್ದೆ," ಎಂದು ಹೇಳಿದ್ದಾರೆ.
IND vs ENG: ಏಕದಿನ ಸರಣಿಯಿಂದ ಜಾಕೋಬ್ ಬೆಥೆಲ್ ಔಟ್, ಟಾಮ್ ಬ್ಯಾಂಟನ್ ಇನ್!
ಫಾರ್ಮ್ ಕಂಡುಕೊಂಡ ರಹಸ್ಯ ತಿಳಿಸಿದ ಹಿಟ್‌ಮ್ಯಾನ್
"ನೀವು ಪಿಚ್ ಅನ್ನು ನೋಡುವುದಾದರೆ, ಇದು ಕಪ್ಪು ಮಣ್ಣಿನಿಂದ ಕೂಡಿದೆ ಹಾಗೂ ಚೆಂಡು ಜಾರುತ್ತಿದ್ದರಿಂದ ನೀವು ಫುಲ್ ಫೇಸ್ ಬ್ಯಾಟ್‌ನಲ್ಲಿ ಚೆಂಡನ್ನು ಹೊಡೆವುದುದು ತುಂಬಾ ಮುಖ್ಯವಾಗಿದೆ. ಇಂಗ್ಲೆಂಡ್ ತಂಡ ಬೌಲರ್‌ಗಳ ಬಾಡಿ ಲೈನ್‌ನಲ್ಲಿ ಚೆಂಡನ್ನು ಎಸೆಯುತ್ತಿದ್ದರು ಹಾಗೂ ರೂಮ್ ನೀಡುತ್ತಿರಲಿಲ್ಲ. ಹಾಗಾಗಿ ಇದಕ್ಕೆ ನಾನು ನನ್ನ ಯೋಜನೆಯನ್ನು ರೂಪಿಸಿಕೊಂಡೆ. ಗ್ಯಾಪ್‌ಗಳನ್ನು ಪತ್ತೆ ಆಡಿ ಚೆಂಡನ್ನು ಹೊಡೆಯುತ್ತಿದ್ದೆ. ನನಗೆ ಶುಭಮನ್ ಗಿಲ್ ಹಾಗೂ ಶ್ರೇಯಸ್ ಅಯ್ಯರ್ ಅವರಿಂದ ಉತ್ತಮ ಬೆಂಬಲ ಸಿಕ್ಕಿತ್ತು," ಎಂದು ರೋಹಿತ್ ಶರ್ಮಾ ತಿಳಿಸಿದ್ದಾರೆ.
ODI CENTURY number 3⃣2⃣ in 📸📸
— BCCI (@BCCI) February 9, 2025
Describe Captain Rohit Sharma's Cuttack 💯 in one word ✍️
Follow The Match ▶️ https://t.co/NReW1eEQtF#TeamIndia | #INDvENG | @IDFCFIRSTBank | @ImRo45 pic.twitter.com/5mu59OBCTu
ಒಡಿಐ ಸರಣಿ ವಶಪಡಿಸಿಕೊಂಡ ಭಾರತ
ಸತತ ಎರಡು ಪಂದ್ಯಗಳನ್ನು ಗೆಲ್ಲುವ ಮೂಲಕ ಭಾರತ ತಂಡ, ಇನ್ನೂ ಒಂದು ಪಂದ್ಯ ಬಾಕಿ ಇರುವಾಗಲೇ ಏಕದಿನ ಸರಣಿಯನ್ನು 2-0 ಅಂತರದಲ್ಲಿ ಗೆಲುವು ಪಡೆದಿತ್ತು. ಇದೀಗ ಮೂರು ಹಾಗೂ ಏಕದಿನ ಸರಣಿಯ ಕೊನೆಯ ಪಂದ್ಯ ಫೆಬ್ರವರಿ 12 ರಂದು ಅಹಮಾಬಾದ್‌ನ ನರೇಂದ್ರ ಮೋದಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದೆ.