ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IPL 2025: ʻನಾನು ಓಪನಿಂಗ್‌ ಮಾಡ್ಲಾ?ʼ- ಕೆಕೆಆರ್‌ಗೆ ರಮಣ್‌ದೀಪ್‌ ಸಿಂಗ್‌ ಮನವಿ!

Ramandeep Singh Reques to KKR: ಪ್ರಸ್ತುತ ನಡೆಯುತ್ತಿರುವ 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2025) ಟೂರ್ನಿಯ ಇನ್ನುಳಿದ ಪಂದ್ಯಗಳಲ್ಲಿ ತನಗೆ ಓಪನಿಂಗ್‌ ಸ್ಥಾನ ನೀಡಬೇಕೆಂದು ರಮಣ್‌ದೀಪ್‌ ಸಿಂಗ್‌ ಕೋಲ್ಕತಾ ನೈಟ್‌ ರೈಡರ್ಸ್‌ ಬಳಿ ಮನವಿ ಮಾಡಿದ್ದಾರೆ. ಮುಂಬೈ ಇಂಡಿಯನ್ಸ್‌ ವಿರುದ್ಧ ಸೋತ ಬಳಿಕ ರಮಣ್‌ಸಿಂಗ್‌ ಈ ರೀತಿ ಹೇಳಿದ್ದಾರೆ.

ಓಪನಿಂಗ್‌ ನೀಡುವಂತೆ ಕೆಕೆಆರ್‌ಗೆ ರಮಣ್‌ದೀಪ್‌ ಸಿಂಗ್‌ ಮನವಿ!

ಕೋಲ್ಕತಾ ಫ್ರಾಂಚೈಸಿಗೆ ರಮಣ್‌ದೀಪ್‌ ಸಿಂಗ್‌ ಮನವಿ.

Profile Ramesh Kote Apr 1, 2025 5:38 PM

ಮುಂಬೈ: ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದಿದ್ದ 2025 ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2025) ಟೂರ್ನಿಯ ಮುಂಬೈ ಇಂಡಿಯನ್ಸ್‌ ವಿರುದ್ಧ 8 ವಿಕೆಟ್‌ಗಳ ಸೋಲು ಅನುಭವಿಸಿದ ಬಳಿಕ ಮಾತನಾಡಿದ ಕೋಲ್ಕತಾ ನೈಟ್‌ ರೈಡರ್ಸ್‌ (KKR) ಆಟಗಾರ ರಮಣ್‌ದೀಪ್‌ ಸಿಂಗ್‌ (Ramandeep Singh), ತಮಗೆ ಓಪನಿಂಗ್‌ ಬ್ಯಾಟಿಂಗ್‌ ನೀಡಬೇಕೆಂದು ಕೆಕೆಆರ್‌ಗೆ ಮನವಿ ಮಾಡಿದ್ದಾರೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ್ದ ಕೆಕೆಆರ್‌, ಡೆಬ್ಯೂಟಂಟ್‌ ಅಶ್ವಿನ್‌ ಕುಮಾರ್‌ ಅವರ ಮಾರಕ ಬೌಲಿಂಗ್‌ ದಾಳಿಗೆ ನಲುಗಿ ಕೇವಲ 116 ರನ್‌ಗಳಿಗೆ ಆಲ್‌ಔಟ್‌ ಆಗಿತ್ತು. ಬಳಿಕ ಮುಂಬೈ ಇಂಡಿಯನ್ಸ್‌ ಕೇವಲ ಎರಡು ವಿಕೆಟ್‌ ಕಳೆದುಕೊಂಡು ಗೆದ್ದು ಬೀಗಿತ್ತು.

"ನಾನು ಓಪನಿಂಗ್‌ ಬ್ಯಾಟ್‌ ಮಾಡಬೇಕು. ಮೇಲಿನ ಕ್ರಮಾಂಕದಲ್ಲಿ ಬ್ಯಾಟ್‌ ಮಾಡಬೇಕೆಂದು ನಾನು ಸಾಕಷ್ಟು ಪ್ರಯತ್ನವನ್ನು ನಡೆಸುತ್ತೇನೆ," ಎಂದು ಮುಂಬೈ ಇಂಡಿಯನ್ಸ್‌ ವಿರುದ್ದ ಕೆಕೆಆರ್‌ ಸೋಲು ಅನುಭವಿಸಿದ ಬಳಿಕ ರಮಣ್‌ದೀಪ್‌ ಸಿಂಗ್‌ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಮುಂಬೈ ವಿರುದ್ದದ ಪಂದ್ಯದಲ್ಲಿ ರಮಣ್‌ದೀಪ್‌ ಸಿಂಗ್‌ ಅವರು 9ನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದಿದ್ದರು ಹಾಗೂ 12 ಎಸೆತಗಳಲ್ಲಿ 22 ರನ್‌ಗಳನ್ನು ಸಿಡಿಸಿದ್ದರು. ಅಂದ ಹಾಗೆ ಕೆಕೆಆರ್‌ ನೀಡುವ ಯಾವುದೇ ಕ್ರಮಾಂಕದಲ್ಲಿ ಬ್ಯಾಟ್‌ ಮಾಡಲು ಸಿದ್ದ ಎಂದು ರಮಣ್‌ದೀಪ್‌ ಸಿಂಗ್‌ ತಿಳಿಸಿದ್ದಾರೆ.

IPL 2025: ʻಐಪಿಎಲ್‌ ಸರಾಸರಿ ದಾಖಲೆʼ-ರೋಹಿತ್‌ ಶರ್ಮಾ ವಿರುದ್ಧ ಮೈಕಲ್‌ ವಾನ್‌ ಟೀಕೆ!

"ನಮ್ಮ ತಂಡದಲ್ಲಿ ಅತ್ಯುತ್ತಮ ಸಮತೋಲನವಿದೆ. ಹಾಗಾಗಿ ಫ್ರಾಂಚೈಸಿ ನನಗೆ ಯಾವುದೇ ಬ್ಯಾಟಿಂಗ್‌ ಕ್ರಮಾಂಕ ನೀಡಿದರೂ ಆಡಲು ನಾನು ಸಿದ್ದನಾಗಿದ್ದೇನೆ. ಆ ಮೂಲಕ ಪಂದ್ಯವನ್ನು ಗೆಲ್ಲಿಸುವ ಪ್ರದರ್ಶನ ತೋರಲು ನಾನು ಸಿದ್ದನಿದ್ದೇನೆ," ಎಂದು ಕೆಕೆಆರ್‌ ಆಟಗಾರ ತಿಳಿಸಿದ್ದಾರೆ.

ಫಿಲ್ ಸಾಲ್ಟ್‌ರಂತಹ ಸ್ಟಾರ್ ಆಟಗಾರರನ್ನು ಕಳೆದುಕೊಂಡ ಮೆಗಾ-ಹರಾಜಿನಿಂದ ಕೆಕೆಆರ್ ತಂಡದ ಸಂಯೋಜನೆಗೆ ಹೇಗೆ ತೊಂದರೆಯಾಯಿತು ಎಂಬುದರ ಕುರಿತು ಮಾತನಾಡಿದ ರಮಣದೀಪ್, ಪ್ರತಿ ಮೂರು ವರ್ಷಗಳಿಗೊಮ್ಮೆ ನಡೆಯುವ ಈ ಮೆ ಹರಾಜಿಗೆ ದೊಡ್ಡ ಅಭಿಮಾನಿ ನಾನು ಅಲ್ಲ ಎಂದು ಹೇಳಿಕೊಂಡಿದ್ದಾರೆ.

IPL 2025 Points Table: ಕೊನೆಯ ಸ್ಥಾನಕ್ಕೆ ಕುಸಿದ ಹಾಲಿ ಚಾಂಪಿಯನ್‌ ಕೆಕೆಆರ್‌

"ಮೆಗಾ ಹರಾಜುಗಳು ನಿರಾಶಾದಾಯಕವಾಗಿವೆ. ನೀವು ಒಂದು ಸಂಯೋಜನೆಯನ್ನು ಹೊಂದಿಸುತ್ತೀರಿ ಮತ್ತು ನಂತರ ಪ್ರತಿ ಮೂರು ವರ್ಷಗಳಿಗೊಮ್ಮೆ ನೀವು ತಂಡವನ್ನು ಬದಲಾಯಿಸಬೇಕಾಗುತ್ತದೆ. ಹಾಗಾಗಿ ತಂಡಗಳು ಸಾಧ್ಯವಾದಷ್ಟು ಬೇಗ ತಮ್ಮ ಗೆಲುವಿನ ಸಂಯೋಜನೆಗಳನ್ನು ಕಂಡುಹಿಡಿಯಲು ಪ್ರಯತ್ನಿಸುತ್ತವೆ ಮತ್ತು ನಾವು ನಮ್ಮ ಗೆಲುವಿನ ಸಂಯೋಜನೆಯನ್ನು ಸಹ ಕಂಡುಹಿಡಿಯಲು ಪ್ರಯತ್ನಿಸುತ್ತಿದ್ದೇವೆ," ಎಂದು ರಮಣದೀಪ್ ಸಿಂಗ್‌ ತಿಳಿಸಿದ್ದಾರೆ.

ಅಶ್ವಿನಿ ಕುಮಾರ್‌ ಮಾರಕ ಬೌಲಿಂಗ್‌ ದಾಳಿ ಹಾಗೂ ರಯಾನ್‌ ರಿಕಲ್ಟನ್‌ ಅರ್ಧಶತಕದ ಬಲದಿಂದ ಕೋಲ್ಕತಾ ನೈಟರ್ಸ್‌ ಎದುರು ಮುಂಬೈ ಇಂಡಿಯನ್ಸ್‌ ತಂಡ ಎಂಟು ವಿಕೆಟ್‌ಗಳಿಂದ ಗೆಲುವು ಪಡೆಯಿತು. ಪ್ರಸ್ತುತ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್‌ಗೆ ಮೊದಲನೇ ಗೆಲುವಾಗಿದೆ. ತಮ್ಮ ಐಪಿಎಲ್‌ ಚೊಚ್ಚಲ ಪಂದ್ಯದಲ್ಲಿಯೇ 4 ವಿಕೆಟ್‌ ಸಾಧನೆ ಮಾಡಿದ ಭಾರತದ ಮೊದಲ ಬೌಲರ್‌ ಎಂಬ ಸಾಧನೆಗೆ ಅಶ್ವಿನಿ ಕುಮಾರ್‌ ಭಾಜನರಾದರು.

IPL 2025: ದ್ರಾವಿಡ್‌ರನ್ನು ಪ್ರಶ್ನೆ ಮಾಡಿದ ರಾಯುಡು ವಿರುದ್ಧ ಭಾರೀ ಆಕ್ರೋಶ

ಮುಂಬೈ ಇಂಡಿಯನ್ಸ್‌ ರೋಹಿತ್‌ ಶರ್ಮಾ ಮತ್ತೊಮ್ಮೆ ಬ್ಯಾಟಿಂಗ್‌ ವೈಫಲ್ಯ ಅನುಭವಿಸಿದರು. ಅವರು ಕೇವಲ 13 ರನ್‌ ಗಳಿಸಿ ವಿಕೆಟ್‌ ಒಪ್ಪಿಸಿದರು. ಆದರೆ, ಮತ್ತೊರ್ವ ಆರಂಭಿಕ ರಿಯಾನ್‌ ರಿಕೆಲ್ಟನ್‌ ಅವರು ಆಡಿದ 41 ಎಸೆತಗಳಲ್ಲಿ ಅಜೇಯ 62 ರನ್‌ಗಳನ್ನು ಕಲೆ ಹಾಕಿದರು. 117 ರನ್‌ಗಳ ಗುರಿಯನ್ನು ಮುಂಬೈ ಇಂಡಿಯನ್ಸ್‌ ಕೇವಲ 7.1 ಓವರ್‌ಗಳಿಗೆ ಚೇಸ್‌ ಮಾಡಿತು. ಸೂರ್ಯಕುಮಾರ್‌ ಯಾದವ್‌ ಅವರು ಕೇವಲ 9 ಎಸೆತಗಳಲ್ಲಿ ಅಜೇಯ 27 ರನ್‌ಗಳನ್ನು ದಾಖಲಿಸಿದ್ದರು.