ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Ram Charan: ʻಟ್ರೈಲರ್ ರಿಲೀಸ್‌ ಮಾಡಿ...ಇಲ್ಲದಿದ್ದರೆ ಆತ್ಮಹತ್ಯೆ ಮಾಡ್ಕೊತೀನಿʼ- ನಟ ರಾಮ್ ಚರಣ್‌ ಅಭಿಮಾನಿಯ ಹುಚ್ಚಾಟ

Ram Charan : ರಾಮ್‌ ಚರಣ್‌ ಅವರ ಅಭಿಮಾನಿಯೊಬ್ಬ ಆತಂಕಕಾರಿ ಪತ್ರವನ್ನು ಬರೆದಿದ್ದು, ಇದೀಗ ಅದು ಎಲ್ಲೆಡೆ ವೈರಲ್‌ ಆಗಿದೆ. ಆತ ಚಿತ್ರದ ನಿರ್ಮಾಪಕರನ್ನು ಉದ್ದೇಶಿಸಿ ಚಿತ್ರದ ಟ್ರೈಲರ್‌ ಬಿಡುಗಡೆ ಮಾಡದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾನೆ.

Vishakha Bhat
Vishakha Bhat Dec 28, 2024 3:46 PM
ಹೈದರಾಬಾದ್‌: ಟಾಲಿವುಡ್‌ನ ನಾಯಕ ನಟ ರಾಮ್ ಚರಣ್ (Ram Charan) ಅಭಿನಯದ ಗೇಮ್ ಚೇಂಜರ್ (Game Changer) ಚಿತ್ರ ತೆರೆ ಮೇಲೆ ಅಬ್ಬರಿಸಲು ಸಜ್ಜಾಗಿದೆ. ಜನವರಿ 10 ಕ್ಕೆ ಬಿಡುಗಡೆಯಾಗಲಿರುವ ಈ ಚಿತ್ರ ವೀಕ್ಷಿಸಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ರಾಮ್‌ ಚರಣ್‌ ಅವರ ಅಭಿಮಾನಿಯೊಬ್ಬ ಆತಂಕಕಾರಿ ಪತ್ರವನ್ನು ಬರೆದಿದ್ದು, ಇದೀಗ ಅದು ಎಲ್ಲೆಡೆ ವೈರಲ್‌ (Viral News) ಆಗಿದೆ. ಆತ ಚಿತ್ರದ ನಿರ್ಮಾಪಕರನ್ನು ಉದ್ದೇಶಿಸಿ ಚಿತ್ರದ ಟ್ರೈಲರ್‌ ಬಿಡುಗಡೆ ಮಾಡದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾನೆ.
ಬೆದರಿಕೆ ಹಾಕಿದ ಅಭಿಮಾನಿಯನ್ನು ಈಶ್ವರ್‌ ಎಂದು ಗುರುತಿಸಲಾಗಿದೆ. ಆತ ಪತ್ರದಲ್ಲಿ "ನೀವು ಅಭಿಮಾನಿಗಳ ಭಾವನೆಗಳನ್ನು ಸಹ ಪರಿಗಣಿಸುತ್ತಿಲ್ಲ. ಈ ತಿಂಗಳ ಅಂತ್ಯದೊಳಗೆ ನೀವು ಟ್ರೈಲರ್‌ ಬಿಡುಗಡೆ ಮಾಡದಿದ್ದರೆ , ನಾನು ನನ್ನ ಜೀವನವನ್ನು ಕೊನೆಗೊಳಿಸುತ್ತೇನೆ ಎಂದು ಹೇಳಿದ್ದಾನೆ.
Ila unnaru enti raa babu 🥵🥵🥵🤯🤯🤯🤯🤯🤯🙏🙏🙏I will commit suicide if the Game Changer trailer is not released. 👏👏👏Ram Charan fan's suicide letter to Game Changer team🥵🥵🥵#GameChanger #RamCharan 🌍 pic.twitter.com/dATNCCWABQ— Telugu Cult 𝐘𝐓 (@Telugu_Cult) December 28, 2024
ರಾಮ್‌ ಚರಣ್‌ ಹಾಗೂ ನಟಿ ಕಿಯಾರಾ ಅಡ್ವಾಣಿ ಸೇರಿದಂತೆ ಹಾಲವು ನಟರು ನಟಿಸಿರುವ ಗೇಮ್ ಚೇಂಜರ್, ಜನವರಿ 13, 2025 ರಂದು ದೊಡ್ಡ ಪರದೆಯ ಮೇಲೆ ಬರಲು ಸಿದ್ಧವಾಗಿದೆ. ನವೆಂಬರ್‌ನಲ್ಲಿ ತಯಾರಕರು ಅದರ ಟೀಸರ್ ಅನ್ನು ಅನಾವರಣಗೊಳಿಸಿದ್ದಾರೆ. ಆದರೆ, ಟ್ರೇಲರ್ ಇನ್ನೂ ಬಿಡುಗಡೆಯಾಗಿಲ್ಲ.
ಡಿಸೆಂಬರ್-20 ರಂದು ಅಮೆರಿಕಾದ ಡಲ್ಲಾಸ್ ಅಲ್ಲಿ ಗೇಂಜ್ ಚೇಂಜರ್ ಚಿತ್ರದ ಪ್ರೀ-ರಿಲೀಸ್ ಇವೆಂಟ್ ಆಗಿದೆ. ಈ ಮೂಲಕ ಫಸ್ಟ್ ಟೈಮ್ ಈ ಚಿತ್ರ ಈ ಒಂದು ಸಾಧನೆ ಮಾಡಿದೆ. ಇಲ್ಲಿವರೆಗೂ ಯಾವುದೇ ಚಿತ್ರದ ಇವೆಂಟ್‌ಗಳು ಅಮೆರಿಕದಲ್ಲಿ ನಡೆದೇ ಇಲ್ಲ. ಗೇಮ್ ಚೇಂಜರ್ ಚಿತ್ರದಲ್ಲಿ ರಾಮ್ ಚರಣ್ ಡಬಲ್ ರೋಲ್ ಮಾಡಿದ್ದಾರೆ. ತಮಿಳಿನ ಗ್ರೇಟ್ ಡೈರೆಕ್ಟರ್ ಶಂಕರ್ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಕಾರ್ತಿಕ್ ಸುಬ್ಬರಾಜ್ ಕಥೆ ಬರೆದಿದ್ದಾರೆ. ದಿಲ್ ರಾಜು ಈ ಚಿತ್ರವನ್ನು ನಿರ್ಮಿಸಿದ್ದಾರೆ.
ಈ ಸುದ್ದಿಯನ್ನೂ ಓದಿ : Upcoming Movies: 2025ರಲ್ಲಿ ಸಿನಿಪ್ರಿಯರಿಗೆ ಭರ್ಜರಿ ಮನರಂಜನೆ; ತೆರೆಮೇಲೆ ಅಬ್ಬರಿಸೋಕೆ ರೆಡಿ ಆಗ್ತಿವೆ ಈ ಸಿನಿಮಾಗಳು!
https://youtu.be/O3VEQG9pZT8?si=PktaQE38_GEa4cD3