#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Saif Ali Khan: ಸೈಫ್‌ ಕೇಸ್‌- ಸಿಸಿಟಿವಿ ದೃಶ್ಯದಲ್ಲಿರುವುದು ನನ್ನ ಮಗನಲ್ಲ... ಆರೋಪಿಯ ತಂದೆಯಿಂದ ಶಾಕಿಂಗ್‌ ಹೇಳಿಕೆ

ಬಾಲಿವುಡ್‌ ನಟ ಸೈಫ್‌ ಅಲಿ ಖಾನ್‌ ಅವರ ಮೇಲೆ ಹಲ್ಲೆ ನಡೆಸಿದ ಬಾಂಗ್ಲಾದೇಶದ ಪ್ರಜೆಯನ್ನು ಪೊಲೀಸರು ಬಂಧಿಸಿದ್ದಾರೆ. ಸದ್ಯ ಆತನ ತಂದೆ ಮಗನ ಬಂಧನದ ಬಗ್ಗೆ ಮಾತನಾಡಿದ್ದು, ನನ್ನ ಮಗನನ್ನು ಪ್ರಕರಣದಲ್ಲಿ ಸಿಲುಕಿಸಿದ್ದಾರೆ ಎಂದು ಹೇಳಿದ್ದಾರೆ.

ನನ್ನ ಮಗನನ್ನು ಸುಖಾ ಸುಮ್ಮನೆ ಸಿಲುಕಿಸಿದ್ದಾರೆ... ಸೈಫ್ ಪ್ರಕರಣದ ಬಗ್ಗೆ ಆರೋಪಿಯ ತಂದೆ ಹೇಳಿದ್ದೇನು?

Saif Ali Khan stabbing

Profile Vishakha Bhat Jan 24, 2025 10:39 AM

ಮುಂಬೈ: ಬಾಲಿವುಡ್‌ ನಟ ಸೈಫ್‌ ಅಲಿ (Saif Ali Khan) ಖಾನ್‌ ಅವರ ಮನೆಗೆ ನುಗ್ಗಿ ನಟನ ಮೇಲೆ ಹಲ್ಲೆ ಮಾಡಿದ್ದ ಆರೋಪಿಯನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ಜನವರಿ 16 ರಂದು ಆರೋಪಿ ಸೈಫ್‌ ಲಿ ಖಾನ್‌ ಅವರ ಮನೆಗೆ ನುಗ್ಗಿ 1 ಕೋಟಿ ರೂ. ಕೇಳಿದ್ದ. ಹಣ ಕೊಡಲು ನಿರಾಕರಿಸಿದ್ದಕ್ಕೆ ಖಾನ್‌ ಅವರ ಮೇಲೆ 6 ಬಾರಿ ಚಾಕುವಿನಿಂದ ಇರಿದಿದ್ದ. ಸೈಫ್‌ ಅವರನ್ನು ಲೀಲಾವತಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆರೋಪಿ ಮನೆಯೊಳಗೆ ನುಗ್ಗಿದ್ದ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿತ್ತು. ಅದನ್ನು ಆಧಾರವಾಗಿಟ್ಟುಕೊಂಡು ಪೊಲೀಸರು ಆತನನ್ನು ಬಂಧಿಸಿದ್ದು, ಮೊಹಮ್ಮದ್ ಷರೀಫ್ ಉಲ್ ಇಸ್ಲಾಂ ಶೆಹಜಾದ್ ಎಂದು ಗುರುತಿಸಲಾಗಿದೆ.

ಆತನ ಬಂಧನದ ನಂತರ ಆರೋಪಿಯ ತಂದೆ ರುಹುಲ್ ಅಮೀನ್ ಫಕೀರ್ ಪ್ರತಿಕ್ರಿಯೆ ನೀಡಿದ್ದು, ಅವರು ತಮ್ಮ ಮಗನನ್ನು ಸಮರ್ಥಿಸಿಕೊಂಡಿದ್ದಾರೆ. ಸಿಸಿಟಿವಿಯಲ್ಲಿರುವುದು ತನ್ನ ಮಗನೇ ಅಲ್ಲ ಎಂದು ಹೇಳಿದ್ದಾರೆ. ಘಟನೆಯಲ್ಲಿ ತನ್ನ ಮಗನನ್ನು ತಪ್ಪಾಗಿ ಸಿಲುಕಿಸಲಾಗಿದೆ ಎಂದು ಹೇಳಿದ್ದಾರೆ. ಫಕೀರ್ ಅವರ ಪ್ರಕಾರ ಶಂಕಿತ ಉದ್ದ ಕೂದಲನ್ನು ಹೊಂದಿದ್ದಾನೆ ಸಿಸಿಟಿವಿ ದೃಶ್ಯಾವಳಿಗಳ ಚಿತ್ರಗಳು ತನ್ನ ಮಗನಿಗೆ ಹೋಲಿಕೆಯಾಗುವುದಿಲ್ಲ ಎಂದು ಹೇಳಿದ್ದಾರೆ.



ಮೊಹಮ್ಮದ್ ಷರೀಫ್ ಉಲ್ ಭಾರತಕ್ಕೆ ಬಂದಿರುವುದರ ಬಗ್ಗೆ ಮಾತನಾಡಿದ ಅವರು, ಬಾಂಗ್ಲಾದಲ್ಲಿನ ರಾಜಕೀಯ ಅಶಾಂತಿಯಿಂದಾಗಿ ಭಾರತಕ್ಕೆ ಆತ ಬಂದಿದ್ದ. ಮೊದಲು ಆತನಿಗೆ ಸರಿಯಾಗಿ ಕೂಲಿ ಸಿಗುತ್ತಿರಲಿಲ್ಲ.ಮುಂಬೈನ ಹೋಟೆಲ್‌ಗಳಲ್ಲಿನ ಸಂಬಳವು ಪಶ್ಚಿಮ ಬಂಗಾಳಕ್ಕಿಂತ ಹೆಚ್ಚಾಗಿರುತ್ತದೆ. ಇಲ್ಲಿನ ಹೊಟೆಲ್‌ಗಳು ಸಾಕಷ್ಟು ದೊಡ್ಡದಾಗಿದೆ ಮತ್ತು ಸಂಬಳವೂ ಹೆಚ್ಚಾಗಿದೆ. ಅದಕ್ಕಾಗಿಯೇ ಆತ ಮುಂಬೈನಲ್ಲಿ ಕೆಲಸ ಮಾಡುತ್ತಿದ್ದ ಎಂದು ಹೇಳಿದ್ದಾರೆ.

ಈ ಸುದ್ದಿಯನ್ನೂ ಓದಿ :Saif Ali Khan: ಸೈಫ್‌ ಅಲಿ ‍ಖಾನ್‌ ಮೇಲೆ ಚಾಕು ದಾಳಿ ನಡೆದೇ ಇಲ್ವಾ? ಇದು ಬರೀ ‍ಆಕ್ಟಿಂಗಾ?

ವರದಿಗಾರರು ಬಂಧನದ ಬಗ್ಗೆ ಪ್ರಶ್ನೆ ಮಾಡಿದಾಗ, ನಮಗೆ ಭಾರತದಲ್ಲಿ ಯಾರೂ ತಿಳಿದಿಲ್ಲ, ನಮಗೆ ಭಾರತದಲ್ಲಿ ಯಾವುದೇ ಬೆಂಬಲವಿಲ್ಲ, ಯಾರನ್ನು ಸಂಪರ್ಕಿಸಬೇಕು ಎಂದೂ ನಮಗೆ ತಿಳಿದಿಲ್ಲ ಎಂದು ಹೇಳಿದ್ದಾರೆ. ಶುಕ್ರವಾರ ಸಂಜೆ ನಾನು ನನ್ನ ಮಗನೊಂದಿಗೆ ಕೊನೆಯ ಬಾರಿಗೆ ಮಾತನಾಡಿದ್ದೆ ಎಂದು ಅವರು ಹೇಳಿದ್ದಾರೆ.