Varthur Santhosh: ಮತ್ತೆ ವೈವಾಹಿಕ ಜೀವನಕ್ಕೆ ಕಾಲಿಡಲು ಸಜ್ಜಾದ ಹಳ್ಳಿಕಾರ್ ಒಡೆಯ; ವರ್ತೂರು ಕೈ ಹಿಡಿಯಲಿರುವ ಹುಡುಗಿ ಯಾರು?
Varthur Santhosh: ವರ್ತೂರು ಸಂತೋಷ್ ಅವರೇ ಹೊಸ ಸುದ್ದಿ ನೀಡಿದ್ದಾರೆ. ನನ್ನ ಮೊದಲ ಮದುವೆ ಮುಗಿದ ಅಧ್ಯಾಯ. ಹೊಸ ಜೀವನ ಶುರು ಮಾಡಬೇಕು. ವೈವಾಹಿಕ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದೇನೆ ಎಂದಿದ್ದಾರೆ.


ಬೆಂಗಳೂರು: ಬಿಗ್‌ಬಾಸ್(Bigg Boss) ಕನ್ನಡ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ ಅದೆಷ್ಟೋ ಸ್ಪರ್ಧಿಗಳು ಇನ್ನೂ ಮನೆಯೊಳಗಿನ ಬಾಂಧವ್ಯವನ್ನು ಹಾಗೇ ಉಳಿಸಿಕೊಂಡಿದ್ದಾರೆ. ಅದರಲ್ಲೂ ಕಳೆದ ಸೀಸನ್ ಬಿಗ್ ಬಾಸ್ ಕನ್ನಡ ಇತಿಹಾಸದಲ್ಲೇ ಬೆಸ್ಟ್. ಅದರಲ್ಲಿ ಬಂದ ಸ್ಪರ್ಧಿಗಳು ಇಂದಿಗೂ ಜನ ಮಾನಸದಲ್ಲಿ ಉಳಿದುಕೊಂಡಿದ್ದಾರೆ. ಅದರಲ್ಲೂ ವರ್ತೂರ್ ಸಂತೋಷ್(Varthur Santhosh) ಹಾಗೂ ತನಿಷಾ ಕುಪ್ಪಂಡ ಕೂಡ ಇದ್ದಾರೆ.
ಈ ರಿಯಾಲಿಟಿ ಶೋ ಮೂಲಕ ತನಿಷಾ ಕುಪ್ಪಂಡ (Tanisha Kuppanda)'ಬೆಂಕಿ' ಅಂತ ಪಟ್ಟ ಪಡೆದುಕೊಂಡು ಹೊರ ಬಂದಿದ್ದಾರೆ. ಹಾಗೇ ಹಳ್ಳಿಕಾರ್ ಒಡೆಯ ಅಂತಲೇ ಜನಪ್ರಿಯರಾಗಿರುವ ವರ್ತೂರು ಸಂತೋಷ್ ಅವರನ್ನೂ ಜನರು ಇಷ್ಟ ಪಟ್ಟಿದ್ದರು. ಅದರಲ್ಲೂ ವರ್ತೂರು ಸಂತೋಷ್ ಹಾಗೂ ತನಿಷಾ ಜೋಡಿಗೆ ವೀಕ್ಷಕರು ಮೆಚ್ಚುಗೆ ಸೂಚಿಸಿದ್ದರು. ಬಿಗ್ ಬಾಸ್ ಮನೆಯೊಳಗೆ ಇರುವಾಗಲೇ ಈ ಜೋಡಿಯ ನಡುವೆ ಏನೋ ಇದೆ ಅನ್ನೋ ಸುದ್ದಿ ಹಬ್ಬಿತ್ತು.
ಕಿರುತೆರೆ ವೀಕ್ಷಕರು ಕೂಡ ಈ ಜೋಡಿಯನ್ನೂ ಒಟ್ಟಿಗೆ ನೋಡುವುದಕ್ಕೆ ಇಷ್ಟಪಟ್ಟಿತ್ತು. ಅದರಲ್ಲೂ ಬಿಗ್ ಬಾಸ್ ಮನೆಯಿಂದ ಹೊರಬಂದ್ಮೇಲೆ ಮಿಸ್ ಮಾಡಿಕೊಂಡಿದ್ದೇ ಹೆಚ್ಚು. ಇನ್ನೂ ಸೋಶಿಯಲ್ ಮೀಡಿಯಾದಲ್ಲಿ ಈ ಜೋಡಿ ಪ್ರೀತಿ ಮಾಡುತ್ತಿದೆ ಎಂಬ ಚರ್ಚೆಯೂ ನಡೆದಿದೆ.
ಆದರೀಗ ಈ ಗಾಸಿಪ್ ಗೆ ಹಳ್ಳಿಕಾರ್ ಒಡೆಯ ವರ್ತೂರು ಸಂತೋಷ್ ತೆರೆ ಎಳೆದಿದ್ದು, ನಾನು ಪ್ರೀತಿಸುತ್ತಿರುವ ಹುಡುಗಿ ತನಿಷಾ ಅಲ್ಲ ಎಂದು ಹೇಳಿದ್ದಾರೆ. ಹಾಗೇ ಇದೇ ವೇಳೆ ತಾವು ಪ್ರೀತಿಯಲ್ಲಿ ಬಿದ್ದಿರುವುದಾಗಿ ತಿಳಿಸಿದ್ದು, ಮದುವೆ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.
View this post on Instagram A post shared by NewsBeatKannada (@newsbeatkannada)
ಕನ್ನಡ ಸುದ್ದಿ ನ್ಯೂಸ್ ಬಿಟ್ಸ್ ಕನ್ನಡ ಚಾನೆಲ್ ಜೊತೆ ಮಾತನಾಡಿದ ಅವರು, ನನಗೆ ಪ್ರೀತಿ ಆಗಿದೆ. ಪರಸ್ಪರ ನಾನು ಮತ್ತು ಆ ಹುಡುಗಿ ಪ್ರೀತಿಸುತ್ತಾ ಇದ್ದೇವೆ. ನನ್ನ ಎರಡನೇ ಹೃದಯ ಅವಳು. ನಾನು ಡಿಪ್ರೇಷನ್ನಲ್ಲಿ ಇದ್ದಾಗ ಅದರಿಂದ ಹೊರ ಬರೋಕೆ ಅವಳೇ ಕಾರಣ. ನನ್ನ ಜೀವನದ ಏರುಪೇರುಗಳನ್ನ ಅವಳು ನೋಡಿದ್ದಾಳೆ. ಜೊತೆಗಿದ್ದಾಳೆ. ನನ್ನ ಅಮ್ಮನ ನಂತರ ನಾನು ತುಂಬಾ ಪ್ರೀತಿಸೋ ಜೀವ ಅವಳು. ಇಬ್ಬರಿಗೂ ಮದುವೆಗೆ ಒಪ್ಪಿಗೆ ಇದೆ. ಪ್ರೀತಿ ಇದೆ ಎಂದು ಮುಚ್ಚಿಟ್ಟಿದ್ದ ಪ್ರೀತಿ ವಿಚಾರವನ್ನ ಬಹಿರಂಗ ಪಡೆಸಿದ್ದಾರೆ. ಹಾಗೇ ನನ್ನ ಮೊದಲ ಮದುವೆ ಮುಗಿದ ಅಧ್ಯಾಯ. ಹೊಸ ಜೀವನ ಪ್ರಾರಂಭಿಸಬೇಕು. ಮತ್ತೇ ವೈವಾಹಿಕ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದೇನೆ ಎಂದಿದ್ದಾರೆ.
ಇನ್ನು ಬಿಗ್ ಬಾಸ್ ಸೀಜನ್ 10ರ ಫೈನಲಿಸ್ಟ್ ಆಗಿದ್ದ ವರ್ತೂರು ಸಂತೋಷ್ ಮನೆಯೊಳಗೆ ಹೋಗುತ್ತಿದ್ದಂತೆ ತಮ್ಮ ಖಾಸಗಿ ಜೀವನದ ವಿಚಾರವಾಗಿ ಅನೇಕ ಸಂಕಷ್ಟಗಳನ್ನು ಎದುರಿಸಿದ್ದರು. ಮೊದಲು ಹುಲಿ ಉಗುರು ಧರಿಸಿದ ವಿಚಾರವಾಗಿ ಬಿಗ್ ಬಾಸ್ ಮನೆಯಿಂದಲೇ ಬಂಧನವಾಗಿದ್ದ ವರ್ತೂರು ಸಂತೋಷ್, ಬಳಿಕ ಮೊದಲ ಮದುವೆ ವಿಚಾರ ಕೂಡ ಈ ವೇಳೆ ಬಹಿರಂಗವಾಗಿತ್ತು. ಈ ಎಲ್ಲಾ ಸವಾಲುಗಳನ್ನು ಬಿಗ್ ಬಾಸ್‌ನಲ್ಲಿರುವಾಗಲೇ ಎದುರಿಸಿದ್ದ ವರ್ತೂರು ಸಂತೋಷ್ ಕೊನೆಗೆ ಫೈನಲಿಸ್ಟ್ ಆಗಿ ಹೊರಹೊಮ್ಮಿದ್ದರು.
ಈ ಸುದ್ದಿಯನ್ನೂ ಓದಿ: ವರ್ತೂರು ಸಂತೋಷ್ಗೆ ಷರತ್ತುಬದ್ಧ ಜಾಮೀನು