Viral Video: ಪೊರಕೆಯಿಂದ ಹೊಡೆದಾಡಿಕೊಂಡ ಆಂಟಿ- ಅಂಕಲ್ ! ವಿಡಿಯೊ ವೈರಲ್
ಮನೆಯ ಅಂಗಳದ ಕಸ ಗುಡಿಸುವ ವಿಚಾರದಲ್ಲಿ ಅಂಟಿ ಮತ್ತು ಅಂಕಲ್ ನಡುವೆ ಜಗಳ ನಡೆದಿದ್ದು ಈ ಜಗಳ ತಾರಕಕ್ಕೆ ಹೋಗಿ ಇಬ್ಬರೂ ಪೊರಕೆಯಿಂದ ಹೊಡೆದಾಡಿಕೊಂಡಿದ್ದಾರೆ. ಮಾತಿನ ಚಕಮಕಿಯಿಂದ ಉಂಟಾದ ಜಗಳದಲ್ಲಿ ಮಹಿಳೆ ತನ್ನ ಪೊರಕೆಯಿಂದ ಮೊದಲು ಹೊಡೆದಿದ್ದಾಳೆ. ಇದರಿಂದ ಸಿಟ್ಟಿಗೆದ್ದ ಪಕ್ಕದ ಮನೆಯ ವ್ಯಕ್ತಿಯು ಕೋಪದಿಂದ ಮಹಿಳೆಯನ್ನು ತಳ್ಳಿದ್ದಾನೆ.


ತಿರುವನಂತಪುರಂ: ಕೆಲವೊಮ್ಮೆ ಕ್ಷುಲ್ಲಕ ಕಾರಣಕ್ಕೆ ಶುರುವಾಗ ಜಗಳ ತಾರಕಕ್ಕೇರಿ ದೊಡ್ಡ ಅನಾಹುತವನ್ನೇ ಮಾಡುವುದಿದೆ. ಅದರಲ್ಲಿ ನೆರೆ-ಹೊರೆ ಅಂದ ಮೇಲಂತೂ ಕೇಳ್ಬೇಕಾ? ಸಣ್ಣ-ಪುಟ್ಟ ವಿಚಾರಗಳಿಗೆ ಜಗಳ, ಮುನಿಸು ನಡೆಯುತ್ತಲೇ ಇರುತ್ತದೆ. ಅದರೆ ಪರಿಸ್ಥಿತಿ ಕೈಮೀರಿ ಹೋದರೆ ಏನಾಗುತ್ತದೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ. ಇತ್ತೀಚೆಗೆ ಕೇರಳದಲ್ಲಿ ನೆರೆ-ಹೊರೆಯ ಅಂಕಲ್ ಮತ್ತು ಆಂಟಿ ಜಗಳ ಮಾಡಿ ಪೊರಕೆಯಿಂದ ಹೊಡೆದಾಡಿಕೊಂಡಿದ್ದಾರೆ. ಸದ್ಯ ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಬಹಳಷ್ಟು ವೈರಲ್(Viral Video) ಆಗುತ್ತಿದೆ.
ಮನೆಯ ಅಂಗಳದ ಕಸ ಗುಡಿಸುವ ವಿಚಾರದಲ್ಲಿ ಅಂಟಿ ಮತ್ತು ಅಂಕಲ್ ನಡುವೆ ಜಗಳ ನಡೆದಿದ್ದು ಈ ಜಗಳ ತಾರಕಕ್ಕೆ ಹೋಗಿ ಇಬ್ಬರೂ ಸರಿಯಾಗಿ ಪೊರಕೆಯಿಂದ ಹೊಡೆದಾಡಿಕೊಂಡಿದ್ದಾರೆ. ಮಾತಿನ ಚಕಮಕಿಯಿಂದ ಶುರುವಾದ ಜಗಳ ಮಹಿಳೆ ತನ್ನ ಪೊರಕೆಯಿಂದ ಮೊದಲು ಹೊಡೆದಿದ್ದಾಳೆ. ಇದರಿಂದ ಸಿಟ್ಟಿಗೆದ್ದ ಪಕ್ಕದ ಮನೆಯ ವ್ಯಕ್ತಿಯು ಕೋಪದಿಂದ ಮಹಿಳೆಯನ್ನು ತಳ್ಳಿರುವ ದೃಶ್ಯ ಸೆರೆಯಾಗಿದೆ.
Saaf-Safai Jhaadu Kalesh b/w a Lady and Guy pic.twitter.com/x1tbTzjtbc
— Ghar Ke Kalesh (@gharkekalesh) January 26, 2025
ವಿಡಿಯೊದಲ್ಲಿ ಮಹಿಳೆಯೊಬ್ಬರು ತನ್ನ ಮನೆಯ ಮೆಟ್ಟಿಲುಗಳನ್ನು ಗುಡಿಸುತ್ತಿದ್ದ ವೇಳೆ ಈ ಜಗಳ ಶುರುವಾಗುತ್ತದೆ. ಅದೇ ಸಮಯದಲ್ಲಿ ಪಕ್ಕದ ಮನೆಯ ವ್ಯಕ್ತಿ ಹೊರಬಂದು ತಮ್ಮ ಮನೆಯ ಮುಂದೆ ಇರುವ ಅಂಗಳ ಗುಡಿಸುತ್ತಾ ಇಬ್ಬರೂ ಹತ್ತಿರ ಬಂದಾಗ ಪರಸ್ಪರ ಜಗಳ ಮಾಡಿ ಪೊರಕೆಯಿಂದ ಹೊಡೆದಾಟ ಶುರು ಮಾಡಿಕೊಂಡಿದ್ದಾರೆ.
ಅಂಟಿ ಅಂಕಲ್ ಇಬ್ಬರು ಸರಿಯಾಗಿ ಪೊರಕೆಯಿಂದ ಹೊಡೆದಾಡಿಕೊಂಡಿದ್ದಾರೆ. ಪಕ್ಕದ ಮನೆಯ ವ್ಯಕ್ತಿ ಮಹಿಳೆಯನ್ನು ತಳ್ಳಿದ ಸಂದರ್ಭದಲ್ಲಿ ಮಹಿಳೆ ಬಿದ್ದು ಜೋರಾಗಿ ಕೂಗಿದ್ದಾಳೆ. ಈ ಸಂದರ್ಭದಲ್ಲಿ ಪಕ್ಕದಲ್ಲಿದ್ದ ಮಹಿಳೆಯೊಬ್ಬಳು ಜೋರಾಗಿ ಕೂಗಿ ಓಡಿ ಬಂದು ಜಗಳವನ್ನು ಶಾಂತಗೊಳಿಸಲು ಪ್ರಯತ್ನಿಸಿದ್ದಾರೆ.
ಇದನ್ನು ಓದಿ: Viral News: ಇವನ ಹೆಸರೇ ಛಬ್ಬೀಸ್ ಜನವರಿ....ಹೆಸರಿನಿಂದಲೇ ಈತ ಫುಲ್ ಫೇಮಸ್!
ಈ ಘಟನೆ ಕೇರಳದಲ್ಲಿ ನಡೆದಿದೆ ಎನ್ನಲಾಗಿದೆ. ವಿಡಿಯೊವನ್ನು ಘರ್ ಕೆ ಕಲೇಶ್ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು ಬಹಳಷ್ಟು ಕಡೆ ವೈರಲ್ ಆಗಿದ್ದು ಎರಡು ಲಕ್ಷಕ್ಕೂ ಹೆಚ್ಚು ಜನ ನೋಡಿ ಪ್ರತಿಕ್ರಿಯೆ ನೀಡಿದ್ದಾರೆ. ಬಳಕೆದಾರ ರೊಬ್ಬರು ಅಂಟಿ- ಅಂಕಲ್ ಸ್ವಚ್ಛ ಭಾರತ್ ಅಭಿಯಾನದ ಅರಿವು ಮೂಡಿಸುತ್ತಿದ್ದಾರೆ ಎಂದು ತಮಾಷೆಯಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಇನ್ನೊಬ್ಬ ನೆಟ್ಟಿಗ ಪೊರಕೆ ಯಾಕೆ ಕತ್ತಿ ಹಿಡಿಯಬೇಕಿತ್ತು ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರ ತಮ್ಮ ಸ್ವಂತ ಮನೆಯನ್ನು ಸ್ವಚ್ಛಗೊಳಿಸುತ್ತಿದ್ದಾರೆಯೇ ಅಥವಾ ನೆರೆಹೊರೆಯವರನ್ನು ಕೊಳಕು ಮಾಡುತ್ತಿದ್ದಾರೆಯೇ?” ಎಂದು ಪ್ರಶ್ನೆ ಮಾಡಿದ್ದಾರೆ.