Valentine's Day: ವ್ಯಾಲೆಂಟೈನ್ಸ್ ಡೇ ದಿನ ಔಟಿಂಗ್ ಹೋಗೋ ಪ್ಲ್ಯಾನ್ ಇದೆಯಾ? ಹಾಗಾದ್ರೆ ಈ ರೊಮ್ಯಾಂಟಿಕ್ ಪ್ಲೇಸ್​​ಗಳಿಗೆ ಭೇಟಿ ನೀಡಿ

ವ್ಯಾಲೆಂಟೈನ್ಸ್ ಡೇಗೆ ಕೌಂಟ್‌ಡೌನ್‌ ಶುರುವಾಗಿದ್ದು ನಿಮ್ಮ ಸಂಗಾತಿ ಜೊತೆಗೆ ಔಟಿಂಗ್ ಹೋಗಲು ಪ್ಲ್ಯಾನ್ ಮಾಡಿದ್ದರೆ, ಈ ಕೆಳಗಿನ ರೋಮ್ಯಾಂಟಿಕ್ ಪ್ಲೇಸ್‌ಗಳಿಗೆ ಭೇಟಿ ನೀಡಬಹುದು. ಕೆಲವು ಪ್ರಮುಖ ಸ್ಥಳದಲ್ಲಿ ವ್ಯಾಲೆಂಟೈನ್ಸ್ ಡೇಯನ್ನು ಅದ್ಭುತವಾಗಿ ಆಚರಿಸಲು ಬೇಕಾದ ಡೆಕೊರೇಶನ್‌ ಜೊತೆಗೆ ಉತ್ತಮ ಪ್ಯಾಕೇಜ್ ಸೌಲಭ್ಯ ಕೂಡ ಇರಲಿದೆ. ಕ್ಯಾಂಡಲ್ ಲೈಟ್ ಡಿನ್ನರ್, ಪೂಲ್ ಲೈಟ್ ಡಿನ್ನರ್, ನೇಚರ್ ವೀವಿಂಗ್ , ಲೈವ್ ಮ್ಯುಸಿಕ್ ಸೇರಿದಂತೆ ಅನೇಕ ಹೊಸ ಹೊಸ ಆಯ್ಕೆಗಳು ಈ ಸ್ಥಳದಲ್ಲಿ ಲಭ್ಯವಿದ್ದು ಪ್ರೇಮಿಗಳ ದಿನವನ್ನು ಮೆಮೊರೆಬಲ್ ಆಗಿ ಆಚರಣೆ ಮಾಡಬಹುದು.

Valentine’s Day
Profile Pushpa Kumari Feb 6, 2025 4:24 PM

ಬೆಂಗಳೂರು: ಫೆಬ್ರವರಿ ಎಂದರೆ ಪ್ರೇಮಿಗಳ ಹಬ್ಬದ ಮಾಸ ಎನ್ನಬಹುದು. ತಮ್ಮ ಪ್ರೀತಿ ನಿವೇದನೆ ‌ಮಾಡಲು ಮತ್ತು ಸಂಗಾತಿಗೆ ತರತರದ ಸರ್ಪ್ರೈಸ್ ಗಿಫ್ಟ್, ರೋಮ್ಯಾಂಟಿಕ್ ಔಟ್ ಡೇಟ್ ಹೋಗಲು ವ್ಯಾಲೆಂಟೈನ್ಸ್ ಡೇ (Valentine’s Day) ಬಹಳ ಪ್ರಾಮುಖ್ಯತೆ ಪಡೆದಿದೆ. ಫ್ರೆಬ್ರವರಿ 14 ಬರಲು ಇನ್ನೇನು ಕೆಲವೇ ದಿನ ಬಾಕಿ ಇದ್ದು ಸಿಂಗಲ್ ಆಗಿರುವ ಅದೆಷ್ಟೊ ಜನರಿಗೆ ಸಂಗಾತಿ ಪಡೆಯಲು ಇದುವೆ ಸುಸಂದರ್ಭವಾಗಿದೆ. ಹೀಗಾಗಿ ಪ್ರಪೋಸ್ ಮಾಡಲು ,ನಿಮ್ಮ ಪ್ರೇಮಿಯ ಜೊತೆ ವ್ಯಾಲೆಂಟೆನ್ಸ್ ಡೇ ಹೇಗೆ? ಎಲ್ಲಿ ಸೆಲೆಬ್ರೇಶನ್ ಮಾಡಬೇಕು? ಎಂಬ ಬಗ್ಗೆ ಒಳ್ಳೆ ಪ್ಲ್ಯಾನ್ ಮಾಡಿದ್ದರೆ ಈ ದಿನ ಅವಿಸ್ಮರಣೀಯವಾಗಿ ಉಳಿಯಲಿದೆ.

ವ್ಯಾಲೆಂಟೈನ್ಸ್ ಡೇಗೆ ಕೌಂಟ್ಡೌನ್ ಶುರುವಾಗಿದ್ದು ನಿಮ್ಮ ಸಂಗಾತಿ ಜೊತೆಗೆ ಔಟಿಂಗ್ ಹೋಗಲು ಪ್ಲ್ಯಾನ್ ಮಾಡಿದ್ದರೆ, ಈ ಕೆಳಗಿನ ರೋಮ್ಯಾಂಟಿಕ್ ಪ್ಲೇಸ್ ಗಳಿಗೆ ಭೇಟಿ ನೀಡಬಹುದು. ಕೆಲವು ಪ್ರಮುಖ ಸ್ಥಳದಲ್ಲಿ ವ್ಯಾಲೆಂಟೈನ್ಸ್ ಡೇಯನ್ನು ಅದ್ಭುತವಾಗಿ ಆಚರಿಸಲು ಬೇಕಾದ ಡೆಕೊರೇಶನ್‌ ಜೊತೆಗೆ ಉತ್ತಮ ಪ್ಯಾಕೇಜ್ ಸೌಲಭ್ಯ ಕೂಡ ಇರಲಿದೆ. ಕ್ಯಾಂಡಲ್ ಲೈಟ್ ಡಿನ್ನರ್, ಪೂಲ್ ಲೈಟ್ ಡಿನ್ನರ್, ನೇಚರ್ ವೀವಿಂಗ್ , ಲೈವ್ ಮ್ಯೂಸಿಕ್‌ ಸೇರಿದಂತೆ ಅನೇಕ ಹೊಸ ಹೊಸ ಆಯ್ಕೆಗಳು ಈ ಸ್ಥಳದಲ್ಲಿ ಲಭ್ಯವಿದ್ದು ಪ್ರೇಮಿಗಳ ದಿನವನ್ನು ಮೆಮೊರೇಬಲ್‌ ಆಗಿ ಆಚರಣೆ ಮಾಡಬಹುದು.

ಬೆಂಗಳೂರಿನ Conrad ರೆಸ್ಟೋರೆಂಟ್:

Conrad Bengaluru

ಬೆಂಗಳೂರಿನ Conrad Restaurantನಲ್ಲಿ ಪ್ರೇಮಿಗಳ ದಿನಕ್ಕೆ ಸ್ಪೆಷಲ್ ಪ್ಯಾಕೇಜ್‌ ಸಿದ್ಧವಾಗಿದ್ದು ಇಲ್ಲಿನ ಟಿಯಾಮೋ ಪೂಲ್ ಬಳಿ ನಿಮ್ಮ ಸಂಗಾತಿಯ ಜೊತೆಗೆ ವಿಶೇಷವಾಗಿ ಸೆಲೆಬ್ರೆಟ್ ಮಾಡಬಹುದು‌. ರಾತ್ರಿಗೆ ವಿಶೇಷ ಕ್ಯಾಂಡಲ್ ಲೈಟ್ ಡಿನ್ನರ್ ಆಯ್ಕೆ ಇದೆ. ಹಾಗೆಯೇ ಕ್ಯಾರವೇ ಕಿಚನ್ ಆಯ್ಕೆ ಇರಲಿದ್ದು ಅಂತಾರಾಷ್ಟ್ರೀಯ ಮಟ್ಟದವರೆಗೂ ವಿವಿಧ ತಿಂಡಿ ತಿನಿಸುಗಳ ಅನ್ ಲಿಮಿಟೆಡ್ ಪ್ಯಾಕೇಜ್ ಇರಲಿದೆ. ಈ ರೆಸ್ಟೋರೆಂಟ್ ನ ಕೆಲವು ಸ್ಥಳಗಳನ್ನು ಹಾರ್ಟ್ ಶೇಪ್‌ನಲ್ಲಿ ರೆಡಿ ಮಾಡಲಾಗಿದ್ದು ತಿಂಡಿ ತಿನಿಸು, ಟೇಬಲ್ ಸೆಟ್ಟಿಂಗ್ ಎಲ್ಲವೂ ಪ್ರೇಮಿಗಳ ದಿನದ ವಿಶೇಷ ಥೀಂನಲ್ಲಿಯೇ ಅಲಂಕರಿಸಲಾಗಿದೆ.

ಬೆಂಗಳೂರಿನ ಮೊಕ್ಸಿ ಲೇ ಓವರ್ ಪೂಲ್:

Layover Pool Bar

ಬೆಂಗಳೂರಿನ ಮೊಕ್ಸಿ ಲೇ ಓವರ್ ಪೂಲ್ (Moxy Layover Pool Bar Bengaluru)ನಲ್ಲಿ ಲೈವ್ ಮ್ಯೂಸಿಕ್, ಡಿಜೆ, ಪೂಲ್ ಸೈಡ್ ಕ್ಯಾಂಡಲ್ ಲೈಟ್ ಡಿನ್ನರ್ ಮಾಡಲು ಪ್ರತೀ ಜೋಡಿಗೆ 5000 ರೂ. ನಿಂದ ಈ ಪ್ಯಾಕೇಜ್ ಇರಲಿದೆ‌. ಸ್ಯಾಕ್ಸೋಫೋನ್ ಸ್ಲೋ ಮ್ಯೂಸಿಕ್ ಜೊತೆ ಪ್ರೇಮಿಗಳು ಏಕಾಂತದಲ್ಲಿ ಕಾಲ ಕಳೆಯಲು ಇದು ಬೆಸ್ಟ್ ಆಯ್ಕೆಯ ಸ್ಥಳವಾಗಿದೆ.

ನಂದಿಹಿಲ್ಸ್:

jpg

ನಗರದ ಗದ್ದಲಗಳಿಂದ ದೂರ ಉಳಿದು ವ್ಯಾಲೆಂಟೈನ್ಸ್ ಡೇ ಸೆಲೆಬ್ರೇಶನ್ ಮಾಡುವವರು ನಂದಿಹಿಲ್ಸ್,(Bengaluru Nandi Hills) ಬಿಸ್ಲೆಘಾಟ್ ಇತರ ಪ್ರದೇಶಕ್ಕೆ ಭೇಟಿ ನೀಡಬಹುದು. ಇದಕ್ಕೂ ಕೂಡ ಕೆಲವು ಪ್ರೈವೇಟ್ ಟ್ರಕ್ಕಿಂಗ್ ಕ್ಯಾಂಪ್ ಇರಲಿದ್ದು ಬುಕ್ ಮಾಡಿಕೊಳ್ಳಲು ಅವಕಾಶ ಇರಲಿದೆ.

ಹೈದ್ರಾಬಾದ್‌ನ ವೆಸ್ಟ್ ಇನ್ ಮೈಂಡ್ ಸ್ಪೇಸ್:

Westin Hyderabad

ಪ್ರೇಮಿಗಳು ಭೋಜನ ಪ್ರಿಯರಾಗಿದ್ದರೆ ಹೈದ್ರಾಬಾದ್ ನ ವೆಸ್ಟ್ ಇನ್ ಮೈಂಡ್ ಸ್ಪೇಸ್ (The Westin Hyderabad Mindspace) ಎಂಬ ಸ್ಥಳ ಅವರಿಗೆ ದಿ ಬೆಸ್ಟ್ ಆಗಲಿದೆ. ಪ್ರೇಮಿಗಳು ಮತ್ತು ದಂಪತಿಗಳಿಗೆ ವಿಸಿಟ್ ಮಾಡಲು ಬೆಸ್ಟ್ ಆಗಿದ್ದು, ಇಲ್ಲಿ ಐಷಾರಾಮಿ ವಸತಿಗಳು ದೊರೆಯುವುದರ ಜೊತೆಗೆ ಶಾಂತಿ ಯುತವಾದ ವಾತಾವರಣವೂ ಇರಲಿದೆ. ಇಲ್ಲಿ ಅತ್ಯಂತ ಲಕ್ಶೂರಿ ರಾಜ ಮನೆತನದ ಓಪನ್ ಹಾಲ್ ವೈವಿಧ್ಯಮಯ ಪ್ರಣಯ ಭೋಜನದ ಅನುಭವ ಪಡೆಯಬಹುದು.

voco ಜಿಮ್ ಕಾರ್ಬೆಟ್:

voco Jim Corbett

ಪ್ರಕೃತಿ ಪ್ರಿಯ ಸಂಗಾತಿಗೆ ಜಿಮ್ ಕಾರ್ಬೆಟ್ (Jim Corbett) ಸ್ಥಳವು ಒಂದೊಳ್ಳೆ ಅನುಭವ ನೀಡಲಿದೆ. ನದಿಯ ತೀರದಲ್ಲಿ ಕ್ಯಾಂಡಲ್ ಲೈಟ್ ಡಿನ್ನರ್ ಸವಿಯುತ್ತಿದ್ದರೆ ವ್ಹಾವ್ ಎಂದೆನಿಸಲಿದೆ. ಇಲ್ಲಿ ಸ್ಥಳೀಯ ಬೆಸ್ಟ್ ನ್ಯಾಚುರಲ್ ಪ್ಲೇಸ್ ನಲ್ಲಿ ಕರೋಕೆ, ಜಂಗಲ್ ಸಫಾರಿ, ಪಕ್ಷಿ ವೀಕ್ಷಣೆ ಇನ್ನಿತರ ಅಡ್ವೇನ್ಚರ್ ಸೌಲಭ್ಯ ಪಡೆಯಬಹುದು.

Six Senses Crans-Montana:

Six Senses Kanuhura

ದ್ವೀಪ ಪ್ರಯಾಣದ ಅನುಭವ ಬಯಸುವ ಪ್ರೇಮಿಗಳು ಮಾಲ್ಡೀವ್ಸ್ ನ ಸಿಕ್ಸ್ ಸೆನ್ಸಸ್ (Six Senses Crans-Montana) ಇಲ್ಲಿ ಭೇಟಿ ನೀಡಿದರೆ ಉತ್ತಮ. ಇಲ್ಲಿ ಸ್ಕೂಬಾ ಡೈವಿಂಗ್, ಬೋಟಿಂಗ್ ಇನ್ನಿತರ ಸಾಹಸಮಯ ಕ್ರೀಡೆಯಲ್ಲಿ ಥ್ರಿಲ್ ಪಡೆಯಬಹುದು.

ಇದನ್ನು ಓದಿ:Viral News: ಜೀವನಪರ್ಯಂತ ಪಾನಿಪುರಿ ತಿನ್ಬೇಕಾ...? ಇಲ್ಲಿದೆ ನೋಡಿ ಬಂಪರ್‌ ಆಫರ್‌

ವೆಸ್ಟಿನ್ ಗೋವಾ:

The Westin Goa

ಪಾರ್ಟಿ ಮೋಜು ಮಸ್ತಿ ಮಾಡುವ ಜೋಡಿಗಳು ವೆಸ್ಟಿನ್ ಗೋವಾಕ್ಕೆ (The Westin Goa) ಭೇಟಿ ನೀಡಿದರೆ ಉತ್ತಮ ಎನ್ನಬಹುದು. ಮ್ಯೂಸಿಕಲ್ ನೈಟ್, ಲೈವ್ ಬ್ಯಾಂಡ್ , ಫಯರ್ ಶೋ, ಅದ್ಧೂರಿ ಭೋಜನ, ವೈನ್ ನೈಟ್ ಸೇರಿದಂತೆ ಅನೇಕ ವ್ಯವಸ್ಥೆ ಒಳಗೊಂಡ ಈ ಪ್ಯಾಕೇಜ್ ಪ್ರತಿ ವ್ಯಕ್ತಿಗೆ 2500 ರೂ. ನಂತೆ ಸೌಲಭ್ಯಗಳ ಆಧಾರದ ಮೇಲೆ ವಿವಿಧ ದರದಲ್ಲಿ ಪ್ಯಾಕೇಜ್ ವ್ಯವಸ್ಥೆ ಲಭ್ಯವಿದೆ.

Kichcha Sudeep and Rajath Kishan
7:31 AM January 29, 2025

Rajath BBK 11: ಫಿನಾಲೆಯಲ್ಲಿ ಯುವನ್​ಗೆ ಸುದೀಪ್ ಗಿಫ್ಟ್ ಕೊಟ್ಟ ಚೈನ್ ಬೆಲೆ ಎಷ್ಟು?, ರಜತ್ ಏನಂದ್ರು?

Bus accident
6:06 PM January 25, 2025

Bus Accident: ಬಸ್‌ನಿಂದ ತಲೆ ಹೊರ ಹಾಕಿದ ಮಹಿಳೆ; ಲಾರಿ ಡಿಕ್ಕಿಯಾಗಿ ತುಂಡಾಗಿ ಬಿದ್ದ ರುಂಡ!

Robbery
3:26 PM January 28, 2025

Robbery: ತಿಪಟೂರು ಎಪಿಎಂಸಿ ಮಾರುಕಟ್ಟೆಯಿಂದ 3,635 ಕೆಜಿ ಕೊಬ್ಬರಿ ಹೊತ್ತೊಯ್ದ ಕಳ್ಳರು

Lokayukta Raid in T.Begur
10:22 PM January 24, 2025

Lokayukta Raid: 5 ಬಾರಿ ಸಸ್ಪೆಂಡ್‌ ಆದ್ರೂ ತೀರದ ಲಂಚದ ದಾಹ; 20 ಸಾವಿರ ಲಂಚ ಪಡೆಯುವಾಗ ಸಿಕ್ಕಿಬಿದ್ದ ಟಿ.ಬೇಗೂರು ಪಿಡಿಒ

Student dies 1
8:51 PM January 18, 2025

Heart Attack: ಕಾಲೇಜು ಮುಗಿಸಿ ಹೋಗುವಾಗ ಹೃದಯಾಘಾತವಾಗಿ ವಿದ್ಯಾರ್ಥಿನಿ ಸಾವು

Three labourers brutally assaulted by brick kiln owner
1:53 PM January 20, 2025

Assault case: ಮೂವರು ಕಾರ್ಮಿಕರ ಮೇಲೆ ಇಟ್ಟಿಗೆ ಭಟ್ಟಿ ಮಾಲೀಕ ಮಾರಣಾಂತಿಕ ಹಲ್ಲೆ; ಕೆಲಸಕ್ಕೆ ಬರುವುದು ವಿಳಂಬವಾಗಿದ್ದಕ್ಕೆ ರಾಕ್ಷಸಿ ಕೃತ್ಯ!

Saif Ali Khan, Ibrahim
2:50 PM January 16, 2025

Saif Ali Khan: 1,200 ಕೋಟಿ ರೂ. ಆಸ್ತಿಗಳ ಒಡೆಯ ಸೈಫ್‌ ಆಲಿ ಖಾನ್‌ನನ್ನು‌ ಆಟೋದಲ್ಲಿ ಆಸ್ಪತ್ರೆಗೆ ಕರೆದೊಯ್ದ ಪುತ್ರ ಇಬ್ರಾಹಿಂ; ಕಾರಣವೇನು?

BBK 11 Final Elimination (1)
7:49 PM January 25, 2025

BBK 11 Final: ಬಿಗ್ ಬಾಸ್ ಫಿನಾಲೆಯಲ್ಲಿ ನಡೆಯಿತು ಎರಡು ಶಾಕಿಂಗ್ ಎಲಿಮಿನೇಷನ್: ಔಟ್ ಆಗಿದ್ದು ಇವರೇ

Hanumantha BBK 11 Winner
8:44 PM January 26, 2025

BBK 11 Winner: ಅಧಿಕೃತ ಘೋಷಣೆಗು ಮುನ್ನವೇ ರಿವೀಲ್ ಆಯ್ತು ಬಿಗ್ ಬಾಸ್ ಸೀಸನ್ 11ರ ವಿನ್ನರ್ ಯಾರೆಂದು: ಇವರೇ ನೋಡಿ

Saif ali Khan (1)
9:38 AM January 18, 2025

Saif Ali Khan: ರಕ್ತಸಿಕ್ತವಾದ ಬಟ್ಟೆ, ಸಂಪೂರ್ಣ ಅಸ್ವಸ್ಥರಾಗಿದ್ದ ಸೈಫ್‌! ಆ ರಾತ್ರಿ ನಡೆದಿದ್ದಾದರೂ ಏನು? ಆಟೋ ಡ್ರೈವರ್‌ ಹೇಳಿದ್ದೇನು?