ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಸಂಕ್ರಾಂತಿ ಹಬ್ಬಕ್ಕೆ ತೆರೆಕಂಡ ತೆಲುಗಿನ 5 ಸಿನಿಮಾಗಳ ಒಟಿಟಿ ಪ್ರವೇಶ ಯಾವಾಗ? ಇಲ್ಲಿದೆ ಸಂಪೂರ್ಣ ಮಾಹಿತಿ

Sankranthi Telugu movies OTT: ಸಂಕ್ರಾಂತಿ ಹಬ್ಬದಂದು ತೆರೆಕಂಡಿದ್ದ ತೆಲುಗು ಸಿನಿಮಾಗಳ ಒಟಿಟಿ ಬಿಡುಗಡೆಯ ದಿನಾಂಕಗಳು ಅಂತಿಮಗೊಂಡಿವೆ. ಮೆಗಾ ಸ್ಟಾರ್ ಚಿರಂಜೀವಿಯವರ 'ಮನ ಶಂಕರ ವರಪ್ರಸಾದ್ ಗಾರು' ಫೆಬ್ರವರಿ 11 ರಂದು ಜೀ5 ನಲ್ಲಿ ಬರಲಿದ್ದರೆ, ಪ್ರಭಾಸ್ ಅವರ 'ದಿ ರಾಜಾ ಸಾಬ್' ಫೆಬ್ರವರಿ 6 ರಿಂದ ಜಿಯೋ ಹಾಟ್‌ಸ್ಟಾರ್‌ನಲ್ಲಿ ಸ್ಟ್ರೀಮಿಂಗ್ ಆಗಲಿದೆ.

ಚಿರು, ರವಿ ತೇಜ, ಪ್ರಭಾಸ್ ಸಿನಿಮಾಗಳ OTT ರಿಲೀಸ್ ಡೇಟ್ ಫಿಕ್ಸ್!

-

Avinash GR
Avinash GR Jan 31, 2026 4:08 PM

ಈ ಬಾರಿಯ ಸಂಕ್ರಾಂತಿ ಹಬ್ಬಕ್ಕೆ ತೆಲುಗಿನ ಐದು ಸಿನಿಮಾಗಳು ತೆರೆಕಂಡಿದ್ದವು. ಅದರಲ್ಲಿ ಮೆಗಾ ಸ್ಟಾರ್‌ ಚಿರಂಜೀವಿ ನಟನೆಯ ʻಮನ ಶಂಕರ ವರಪ್ರಸಾದ್ ಗಾರು' ಸಿನಿಮಾವು ಬ್ಲಾಕ್‌ ಬಸ್ಟರ್‌ ಗೆಲುವು ಕಂಡಿತು. ನವೀನ್‌ ಪೊಲಿಶೆಟ್ಟಿಯ ʻಅನಗನಗ ಒಕ ರಾಜುʼ ಸಿನಿಮಾವು 100 ಕೋಟಿ ರೂ. ಕ್ಲಬ್‌ಗೆ ಸೇರಿ, ಹೊಸ ದಾಖಲೆ ಬರೆಯಿತು. ಸದ್ಯ ಈ ಐದು ಸಿನಿಮಾಗಳು ಯಾವಾಗ ಒಟಿಟಿಗೆ ಬರಲಿವೆ ಎಂಬ ಬಗ್ಗೆ ಚರ್ಚೆ ಶುರುವಾಗಿದೆ. ಅದಕ್ಕುತ್ತರ ಇಲ್ಲಿದೆ ನೋಡಿ.

ಮನ ಶಂಕರ ವರಪ್ರಸಾದ್ ಗಾರು

ಚಿರಂಜೀವಿ, ವಿಕ್ಟರಿ ವೆಂಕಟೇಶ್‌, ನಯನತಾರಾ ನಟನೆಯ ʻಮನ ಶಂಕರ ವರಪ್ರಸಾದ್ ಗಾರುʼ ಸಿನಿಮಾವು ಬಾಕ್ಸ್‌ ಆಫೀಸ್‌ನಲ್ಲಿ ಸುಮಾರು 400+ ಕೋಟಿ ರೂ. ಕಮಾಯಿ ಮಾಡಿದೆ. ಇದರ ಬಜೆಟ್‌ 125 ಕೋಟಿ ರೂ. ಎನ್ನಲಾಗಿತ್ತು. ಸಂಕ್ರಾಂತಿ ಹಬ್ಬದ ಪ್ರಯುಕ್ತ ಜನವರಿ 12 ರಂದು ಬಿಡುಗಡೆಯಾಗಿದ್ದ ಈ ಸಿನಿಮಾವುಫೆಬ್ರವರಿ 11ರಿಂದ ಜೀ5ರಲ್ಲಿ ಸ್ಟ್ರೀಮಿಂಗ್ ಆರಂಭಿಸಲಿದೆ. ಮೂಲ ತೆಲುಗು ಆವೃತ್ತಿಯ ಜೊತೆಗೆ ಕನ್ನಡ ಡಬ್ಬಿಂಗ್ ಕೂಡ ವೀಕ್ಷಣೆಗೆ ಲಭ್ಯವಾಗುವ ಸಾಧ್ಯತೆ ಇದೆ.

15 ದಿನಗಳಲ್ಲಿ ದಾಖಲೆ ಮೊತ್ತವನ್ನು ಕಲೆಹಾಕಿದ ʻಮನ ಶಂಕರ ವರಪ್ರಸಾದ್‌ ಗಾರುʼ; ಚಿರಂಜೀವಿ ವೃತ್ತಿ ಬದುಕಿನಲ್ಲಿ ಹೊಸ ರೆಕಾರ್ಡ್‌

ದಿ ರಾಜಾ ಸಾಬ್

ಪ್ರಭಾಸ್‌ ನಟನೆಯ ‘ದಿ ರಾಜಾ ಸಾಬ್‌’ (The Raja Saab) ಸಿನಿಮಾವು ಭಾರಿ ನಿರೀಕ್ಷೆಯೊಂದಿಗೆ ತೆರೆಕಂಡಿತ್ತು. ಆದರೆ ನಿರೀಕ್ಷೆಯನ್ನು ತಲುಪಲು ಸಾಧ್ಯವಾಗಲಿಲ್ಲ. ಸದ್ಯ ಈ ಸಿನಿಮಾವು ಒಟಿಟಿಗೆ ಎಂಟ್ರಿ ಕೊಡಲು ಸಜ್ಜಾಗಿದೆ. ಜಿಯೋ ಹಾಟ್‌ಸ್ಟಾರ್‌ನಲ್ಲಿ ಫೆಬ್ರವರಿ 6ರಿಂದ ‘ದಿ ರಾಜಾ ಸಾಬ್‌’ ಸ್ಟ್ರೀಮಿಂಗ್ ಆರಂಭಿಸಲಿದೆ. ತೆಲುಗು ಜೊತೆಗೆ ಕನ್ನಡ, ತಮಿಳು, ಮತ್ತು ಮಲಯಾಳಂ ಭಾಷೆಗಳಲ್ಲಿ ‘ದಿ ರಾಜಾ ಸಾಬ್‌’ ಸ್ಟ್ರೀಮ್‌ ಆಗಲಿದೆ.

ಸಾಲು ಸಾಲು ಸೋಲುಗಳಿಂದ ಕಂಗೆಟ್ಟ ನಟ ರವಿ ತೇಜ; ಈ ಬಾರಿ ಸಂಭಾವನೆಯನ್ನೇ ಮುಟ್ಟದ 'ಮಾಸ್‌ ಮಹಾರಾಜ', ಕಾರಣವೇನು ಗೊತ್ತಾ?

ಅನಗನಗ ಒಕ ರಾಜು

ನವೀನ್ ಪೋಲಿಶೆಟ್ಟಿ (Naveen Polishetty) ಮತ್ತು ಮೀನಾಕ್ಷಿ ಚೌಧರಿ ಅಭಿನಯದ 'ಅನಗನಗ ಒಕ ರಾಜು' (Anaganaga Oka Raju) ಸಿನಿಮಾವು ಸಂಕ್ರಾಂತಿ ಹಬ್ಬದ ಪ್ರಯುಕ್ತ ಜನವರಿ 14ರಂದು ಬಿಡುಗಡೆಯಾಗಿ ಸೂಪರ್ ಹಿಟ್ ಆಗಿತ್ತು. ಸದ್ಯ ಈ ಚಿತ್ರದ ಡಿಜಿಟಲ್ ಹಕ್ಕುಗಳನ್ನು ನೆಟ್‌ಫ್ಲಿಕ್ಸ್ ಸಂಸ್ಥೆ ಖರೀದಿಸಿದೆ. ಮೂಲಗಳ ಪ್ರಕಾರ, ಈ ಸಿನಿಮಾವು ಫೆಬ್ರವರಿ 26ರಂದು ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್ ಆರಂಭಿಸುವ ಸಾಧ್ಯತೆ ಇದೆ. ತೆಲುಗು ಭಾಷೆಯ ಜೊತೆಗೆ, ಕನ್ನಡ, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲೂ ಇದು ಲಭ್ಯವಿರುವ ನಿರೀಕ್ಷೆಯಿದೆ.

ಭರ್ತ ಮಹಾಶಯುಲಕು ವಿಜ್ಞಪ್ತಿ

ರವಿ ತೇಜ, ಆಶಿಕಾ ರಂಗನಾಥ್‌ ಮುಂತಾದವರು ನಟಿಸಿದ್ದ ‘ಭರ್ತ ಮಹಾಶಯುಲಕು ವಿಜ್ಞಪ್ತಿ’ (Bhartha Mahashayulaku Vignapthi) ಸಿನಿಮಾದ ಡಿಜಿಟಲ್ ಸ್ಟ್ರೀಮಿಂಗ್ ಹಕ್ಕುಗಳನ್ನು ZEE5 (ಜೀ5) ಸಂಸ್ಥೆ ಪಡೆದುಕೊಂಡಿದ್ದು, ವರದಿಗಳ ಪ್ರಕಾರ ಈ ಸಿನಿಮಾ ಫೆಬ್ರವರಿ 13ರ ಸುಮಾರಿಗೆ ಒಟಿಟಿಗೆ ಬರುವ ಸಾಧ್ಯತೆಯಿದೆ. ಆರಂಭದಲ್ಲಿ ಇದು ಕೇವಲ ತೆಲುಗು ಭಾಷೆಯಲ್ಲಿ ಮಾತ್ರ ವೀಕ್ಷಣೆಗೆ ಲಭ್ಯವಿರುವ ಸಾಧ್ಯತೆ ಹೆಚ್ಚಿದೆ. ಈ ಸಿನಿಮಾವು ಜನವರಿ 13 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು, ಆದರೆ ಉತ್ತಮ ಗಳಿಕೆ ಮಾಡಲು ಸಾಧ್ಯವಾಗಲಿಲ್ಲ.

ನಾರಿ ನಾರಿ ನಡುಮ ಮುರಾರಿ

ಶರ್ವಾನಂದ್ ನಟನೆಯ 'ನಾರಿ ನಾರಿ ನಡುಮ ಮುರಾರಿ' (Naari Naari Naduma Murari) ಸಿನಿಮಾ ಒಟಿಟಿ ಬಿಡುಗಡೆಗೆ ಸಜ್ಜಾಗಿದೆ. ಈ ಸಿನಿಮಾದ ಡಿಜಿಟಲ್ ಸ್ಟ್ರೀಮಿಂಗ್ ಹಕ್ಕುಗಳನ್ನು ಅಮೆಜಾನ್ ಪ್ರೈಮ್ ವಿಡಿಯೋ ಪಡೆದುಕೊಂಡಿದ್ದು, ಫೆಬ್ರವರಿ 4ರಿಂದ ಸ್ಟ್ರೀಮಿಂಗ್ ಆರಂಭವಾಗಲಿದೆ. ತೆಲುಗು ಜೊತೆಗೆ ಕನ್ನಡ, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲೂ ಸ್ಟ್ರೀಮಿಂಗ್ ಆಗಲಿದೆ. ‌