ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Alia Bhatt: ಕಾನ್ಸ್‌ನಲ್ಲಿ ಸಮಯಪ್ರಜ್ಞೆ ಮೆರೆದ ಆಲಿಯಾ ಭಟ್‌: ನೆಕ್ಲೇಸ್ ಜಾರಿದ್ದನ್ನು ಐಕಾನಿಕ್ ಕ್ಷಣವಾಗಿ ಮಾರ್ಪಡಿಸಿದ ನಟಿ

Cannes Film Festival: ಪ್ಯಾರಿಸ್‌ನಲ್ಲಿ ನಡೆದ ಕಾನ್ಸ್‌ ಫಿಲ್ಮ್‌ ಫೆಸ್ಟಿವಲ್‌ನಲ್ಲಿ ಬಾಲಿವುಡ್‌ ನಟಿ ಆಲಿಯಾ ಭಟ್‌ ಕಾಣಿಸಿಕೊಂಡು ಗಮನ ಸೆಳೆದಿದ್ದಾರೆ. ಈ ವೇಳೆ ಅವರು ಜಾರುತ್ತಿದ್ದ ನೆಕ್ಲೇಸ್‌ ತಡೆದು ಪೋಸ್‌ ನೀಡಿದ್ದು, ವೈರಲ್‌ ಆಗಿದೆ. ಆಕಸ್ಮಿಕವಾಗಿ ನಡೆದ ಈ ಘಟನೆಯನ್ನು ಅವರು ಜಾಣತನದಿಂದ ಹ್ಯಾಂಡಲ್‌ ಮಾಡಿದ ರೀತಿಗೆ ಫ್ಯಾನ್ಸ್‌ ಫಿದಾ ಆಗಿದ್ದಾರೆ.

ಸಮಯಪ್ರಜ್ಞೆ ಮೆರೆದ ಆಲಿಯಾ ಭಟ್‌ ನಡೆಗೆ ಫ್ಯಾನ್ಸ್‌ ಫಿದಾ

Profile Sushmitha Jain Jun 7, 2025 9:19 PM

ಮುಂಬೈ: ಬಾಲಿವುಡ್ ನಟಿ (Bollywood Actress) ಆಲಿಯಾ ಭಟ್ (Alia Bhatt) 2025ರ ಕಾನ್ಸ್‌ ಫಿಲ್ಮ್ ಫೆಸ್ಟಿವಲ್‌ನ (Cannes film Festival) ರೆಡ್ ಕಾರ್ಪೆಟ್‌ನಲ್ಲಿ ತಮ್ಮ ಆಕರ್ಷಕ ಉಡುಪಿನಿಂದ ಎಲ್ಲರ ಗಮನ ಸೆಳೆದರು. ಸಮಾರಂಭದ ಕೊನೆಯ ದಿನದಂದು ಗುಚ್ಚಿಯ ಮೊದಲ ಕಸೂತಿ ಸೀರೆಯನ್ನು ಧರಿಸಿ ಮಿಂಚಿದ ಆಲಿಯಾ ನಗುಮೊಗದೊಂದಿಗೆ ಕಾಣಿಸಿಕೊಂಡರು. ಈ ವೇಳೆ ಅವರು ಒಂದು ಕ್ಷಣದ ಆಕಸ್ಮಿಕ ಘಟನೆಯನ್ನು ಐಕಾನಿಕ್ ಕ್ಷಣವಾಗಿ ಪರಿವರ್ತಿಸಿದ್ದಾರೆ. ನೆಕ್ಲೇಸ್ ಜಾರಿದ ತಕ್ಷಣ ಆಲಿಯಾ ಅದನ್ನು ಹಿಡಿದು ಒಂದು ವಿಶೇಷ ಪೋಸ್‌ನೊಂದಿಗೆ ಸಂಭಾಳಿಸಿದ ಘಟನೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಈ ಘಟನೆಯ ವಿಡಿಯೊದಲ್ಲಿ ರೆಡ್ ಕಾರ್ಪೆಟ್‌ನಲ್ಲಿ ಪೋಸ್ ಕೊಡುತ್ತಿದ್ದ ವೇಳೆ ಆಲಿಯಾ ಅವರ ನೆಕ್ಲೇಸ್ ಜಾರುವ ದೃಶ್ಯ ಕಂಡು ಬಂದಿದೆ. ಕ್ಷಣಮಾತ್ರದಲ್ಲಿ ಅವರು ಕೈಯಿಂದ ನೆಕ್ಲೇಸ್‌ ಅನ್ನು ಹಿಡಿದು, ಕುತ್ತಿಗೆಗೆ ಒತ್ತಿಕೊಂಡು ಪೋಸ್ ಕೊಟ್ಟಿದ್ದಾರೆ. ಆಕಸ್ಮಿಕವಾಗಿ ನಡೆದ ಘಟನೆಯನ್ನು ಅವರು ಜಾಣ್ಮೆಯಿಂದ ಬಳಿಸಿದ ರೀತಿಗೆ ಫ್ಯಾನ್ಸ್‌ ಫಿದಾ ಆಗಿದ್ದಾರೆ. ಈ ಕ್ಷಣವು ಆ ರಾತ್ರಿಯ ಅತ್ಯಂತ ಐಕಾನಿಕ್ ಫೋಟೊಗಳಲ್ಲಿ ಒಂದಾಯಿತು.

ವೈರಲ್‌ ವಿಡಿಯೊ ಇಲ್ಲಿದೆ:

ಈ ಸುದ್ದಿಯನ್ನೂ ಓದಿ: Alia Bhatt: ಅಬ್ಬಾ....ಆಲಿಯಾ ಭಟ್‌ನ ಈ ಲುಕ್‌ಗೆ ಮನಸೋಲದವರುಂಟೇ?ಫೋಟೋಗಳು ಇಲ್ಲಿವೆ ನೋಡಿ

ಅಭಿಮಾನಿಗಳ ಪ್ರತಿಕ್ರಿಯೆ

ಸೋಶಿಯಲ್ ಮೀಡಿಯಾ ಬಳಕೆದಾರರು ಆಲಿಯಾ ಅವರ ಸಮಯಪ್ರಜ್ಞೆ ಮತ್ತು ಶಾಂತ ಚಿತ್ತವನ್ನು ಶ್ಲಾಘಿಸಿದ್ದಾರೆ. “ಅದನ್ನು ಗ್ಲಾಮರಸ್ ಕ್ಷಣವಾಗಿ ಬದಲಾಯಿಸಿದರು” ಎಂದು ಒಬ್ಬರು ಕಾಮೆಂಟ್ ಮಾಡಿದ್ದರೆ, “ಗ್ರೇಟ್ ಕ್ಯಾಚ್ ಆಲಿಯಾ!” ಎಂದು ಮತ್ತೊಬ್ಬರು ಬರೆದಿದ್ದಾರೆ. “ಆಕೆಗೆ ಶ್ರೇಯಸ್ಸು ಸಲ್ಲಬೇಕು, ತುಂಬ ಆಕರ್ಷಕವಾಗಿ ಸಂಭಾಳಿಸಿದರು” ಎಂದು ಇನ್ನೊಬ್ಬ ಬಳಕೆದಾರ ಹೇಳಿದ್ದರೆ. “ಆಕೆ ಯಾವುದೇ ಗಾಬರಿಯಿಲ್ಲದೆ ನಿರ್ವಹಿಸಿದ್ದು ಅದ್ಭುತ. ಈ ಹೊಸ ಲುಕ್ ತುಂಬ ಇಷ್ಟವಾಯಿತು” ಎಂದು ಮಗದೊಬ್ಬರು ಶ್ಲಾಘಿಸಿದ್ದಾರೆ.

ಆಲಿಯಾ ಆಭರಣ

ಕಾನ್ಸ್‌ನ ಈ ಕಾರ್ಯಕ್ರಮಕ್ಕೆ ಆಲಿಯಾ ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್‌ನ ಆಭರಣ ಧರಿಸಿದ್ದರು. ಅವರ ನೆಕ್ಲೇಸ್‌ನಲ್ಲಿ ಅಪರೂಪದ ಓಲ್ಡ್ ಯೂರೋಪಿಯನ್-ಕಟ್ ಡೈಮಂಡ್‌ಗಳು, ಆಕ್ಸಿಡೈಸ್ಡ್ ಫಿನಿಶ್‌ನ ಗಾಢ ಚಿನ್ನದೊಂದಿಗೆ ವಿಂಟೇಜ್ ವಿಕ್ಟೋರಿಯನ್ ಆಕರ್ಷಣೆಯನ್ನು ಹೊಂದಿತ್ತು. 78ನೇ ಕಾನ್ಸ್‌ ಫಿಲ್ಮ್ ಫೆಸ್ಟಿವಲ್‌ನಲ್ಲಿ ಆಲಿಯಾ ಗುಚ್ಚಿಯ ಕಸ್ಟಮ್‌ ಸೀರೆಯಲ್ಲಿ ಕಾಣಿಸಿಕೊಂಡರು. ಬ್ರಾಲೆಟ್, ಸ್ಕರ್ಟ್, ಮತ್ತು ಒಂದು ಡ್ರೇಪ್‌ನಿಂದ ರಚಿತವಾದ ಈ ಸೀರೆ, ಗುಚ್ಚಿಯ GG ಮೊನೊಗ್ರಾಮ್‌ನೊಂದಿಗೆ ಕ್ರಿಸ್‌ಕ್ರಾಸ್ ವಿನ್ಯಾಸದಲ್ಲಿ ಆಧುನಿಕ ಶೈಲಿಯನ್ನು ಪ್ರತಿಬಿಂಬಿಸಿತು.