Amruthadhaare Serial: ಮಲ್ಲಿ ಕೈಯಲ್ಲಿ ಸಿಕ್ಕಿಬಿದ್ಲಾ ಭೂಮಿಯಂತೆ ನಾಟಕ ಆಡ್ತಿರೋ ದೀಪಿಕಾ?
Amruthadhaare Serial:ಭೂಮಿಕಾ ಪ್ರತಿರೂಪ ದೀಪಿಕಾ (Deepika) ಈಗ ಎಂಟ್ರಿ ಆಗಿದೆ. ಅಮೃತಧಾರೆ ಸೀರಿಯಲ್‌ನಲ್ಲಿ ಸತ್ತಿದ್ದಾಳೆ ಎಂದು ಭಾವಿಸಲಾಗಿದ್ದ ಭೂಮಿಕಾ ಆಸ್ಪತ್ರೆಯಲ್ಲಿ ಬದುಕಿದ್ದಾಳೆ ಮತ್ತು ಆಕೆಯ ನೆನಪಿನ ಶಕ್ತಿ ಹಾಗೆಯೇ ಇದೆ. ಇನ್ನೊಂದೆಡೆ ದೀಪಿಕಾ ಮಿಂಚುವನ್ನು ನಿಭಾಯಿಸಲು ಪರದಾಡುತ್ತಿದ್ದು, ಮುಂದೇನಾಗಲಿದೆ ಎಂಬ ಕುತೂಹಲ ಮೂಡಿದೆ.
ಅಮೃತಧಾರೆ ಧಾರಾವಾಹಿ -
ಅಮೃತಧಾರೆ (Amruthdhaare Serial) ಹೊಸ ರೂಪ ಪಡೆದುಕೊಂಡು ಸಾಗುತ್ತಿದೆ. ಅಮೃತಧಾರೆ ಧಾರಾವಾಹಿಯಲ್ಲಿ ಜೈದೇವ್ (Jaidev) ಸತ್ತಿಲ್ಲ. ಆ ಸತ್ಯ ಅನಾವರಣ ಆಗಿದೆ. ಕಥೆಯು ಹೊಸ ತಿರುವು ಪಡೆಯುವ ಸೂಚನೆ ಈ ಹಿಂದೆಯೇ ಸೀರಿಯಲ್ ನೀಡಿತ್ತು. ಹೊಸ ರೂಪ - ಹೊಸ ತಿರುವು. ಭೂಮಿಕಾ ಪ್ರತಿರೂಪ ದೀಪಿಕಾ (Deepika) ಈಗ ಎಂಟ್ರಿ ಆಗಿದೆ. ಅಮೃತಧಾರೆ ಸೀರಿಯಲ್‌ನಲ್ಲಿ ಸತ್ತಿದ್ದಾಳೆ ಎಂದು ಭಾವಿಸಲಾಗಿದ್ದ ಭೂಮಿಕಾ ಆಸ್ಪತ್ರೆಯಲ್ಲಿ ಬದುಕಿದ್ದಾಳೆ ಮತ್ತು ಆಕೆಯ ನೆನಪಿನ ಶಕ್ತಿ ಹಾಗೆಯೇ ಇದೆ. ಇನ್ನೊಂದೆಡೆ ದೀಪಿಕಾ ಮಿಂಚುವನ್ನು ನಿಭಾಯಿಸಲು ಪರದಾಡುತ್ತಿದ್ದು, ಮುಂದೇನಾಗಲಿದೆ ಎಂಬ ಕುತೂಹಲ ಮೂಡಿದೆ.
ದೀಪಿಕಾ ಸಾಥ್
ನಾನು ಇಲ್ಲಿಗೆ ಹೇಗೆ ಬಂದೆ ಎಂದು ಪ್ರಶ್ನಿಸುತ್ತಲೇ, ಅಜ್ಜಿಗೆ ಹುಷಾರು ಇಲ್ಲ, ನೋಡಲು ಹೋಗಬೇಕು ಎಂದು ಎದ್ದಿದ್ದಾಳೆ. ವೈದ್ಯೆ ಬಂದು ರೆಸ್ಟ್ ಮಾಡುವಂತೆ ಹೇಳಿದ್ದಾಳೆ. ಇನ್ನೊಂದೆಡೆ, ದೀಪಿಕಾಗೆ ಪೇಚಾಟ ಶುರುವಾಗಿದೆ. ಅವಳೇ ಅಮ್ಮ ಎಂದುಕೊಂಡಿರೋ ಮಿಂಚುಗೆ ಅಮ್ಮನ ವಿಚಿತ್ರ ನಡವಳಿಕೆ ನೋಡಿ ವಿಚಿತ್ರ ಎನ್ನಿಸುತ್ತಿದೆ. ಇನ್ನೊಂದೆಡೆ, ದೀಪಿಕಾ ಒಳ್ಳೆಯವಳಂತೆ ತೋರಿಸಲಾಗಿದೆ. ಆದರೆ ಭೂಮಿಕಾ ರೂಪದಲ್ಲಿ ಬಂದಾಗ, ಆಕೆಯನ್ನು ಕೊಲ್ಲಲು ಪ್ರಯತ್ನ ಪಟ್ಟಿರುವ ಬಗ್ಗೆ ಹೇಳಿದ್ದಾಳೆ. ಅದು ಅವಳಿಗೆ ಹೇಗೆ ಗೊತ್ತಾಯ್ತು ಎನ್ನುವುದು ಯಕ್ಷಪ್ರಶ್ನೆ. ಒಂದು ವೇಳೆ ಭೂಮಿಕಾಳನ್ನು ಕೊಲ್ಲುವ ಪ್ರಯತ್ನ ಮಾಡಿರುವುದು ತಿಳಿದರೆ, ಅಂಥವರಿಗೆ ದೀಪಿಕಾ ಸಾಥ್ ಕೊಡ್ತಾಳಾ ಎನ್ನುವ ಪ್ರಶ್ನೆಯೂ ಇದೆ.
ಇದನ್ನೂ ಓದಿ: Bigg Boss kannada 13: ಬಿಗ್ ಬಾಸ್‌ಗೆ ಘಾಟಿ ಗಾನವಿ? ಆ ಮೂವರು arrivals ಯಾರು?
ಮಲ್ಲಿ ಕೈಯಲ್ಲಿ ಸಿಕ್ಕಿಬಿದ್ಲಾ ಭೂಮಿಯಂತೆ ನಾಟಕ ಆಡ್ತಿರೋ ಪಟಾಕಿ ದೀಪಿಕಾ?
ಅತ್ತ ಮಲ್ಲಿ ಫೋನ್ ವರ್ಕ್ ಆಗ್ತಿಲ್ಲ ಅಂತ ಹೇಳ್ತಾ ಇದ್ದಾಳೆ. ಇದನ್ನು ಗಮನಿಸಿದ ಶಕುಂತಲಾ ಭೂಮಿಕಾ ಬಳಿ ಹೋದ್ರು ನಿನಗೆ ಸಿಗೋದು ಸಿಗಲ್ಲ ಎಂದಿದ್ದಾಳೆ. ದೀಪಿಕಾ ಮುಂದೆ ಮಲ್ಲಿ ವಿಡಿಯೋ ವಿಚಾರವಾಗಿ ಕೇಳಿದ್ದಾಳೆ. ಆದರೆ ದೀಪಿಕಾಗೆ ಅದ್ಯಾವುದು ಗೊತ್ತಾಗುತ್ತಿಲ್ಲ. ಮಲ್ಲಿ ಕೈಯಲ್ಲಿ ಸಿಕ್ಕಿಬಿದ್ಲಾ ಅನ್ನೋದೇ ವೀಕ್ಷಕರಲ್ಲಿ ಇರೋ ಕುತೂಹಲ.
ಈ ಹೊಸ ಅಧ್ಯಾಯದಲ್ಲಿ ದೀಪಿಕಾ ಎಂಟ್ರಿ ಆಗಿದೆ. ಅವಳಿ ಜವಳಿ ಹೆತ್ತವಳು ನಾನು. ಆದರೆ ನನ್ನದೇ ಪ್ರತಿರೂಪ ಕಣ್ಣಿಗೆ ಬೀಳದೇ ಇರೋ ಹಾಗೆ ಆಯ್ತು ಅಂತ ಭೂಮಿಕಾ ಹೇಳಿದ್ದಾಳೆ. ಅದುವೇ ದೀಪಿಕಾ. ಬಡ್ಡಿ ಬಂಗಾರಮ್ಮ ಆಗಿ ದೀಪಿಕಾ ಬಂದಿದ್ದಾಳೆ. ಊಹಿಸಕ್ಕೆ ಆಗದೇ ಇರೋ, ಕಲ್ಪನೆಗೂ ಮೀರದ ಅಮೃತಧಾರೆ ವೀಕ್ಷಕರ ಮುಂದೆ ಬರುತ್ತಿದೆ.
ಇದನ್ನೂ ಓದಿ: Amruthadhaare Serial: ಹೊಸ ರೂಪ - ಹೊಸ ತಿರುವು! ಭೂಮಿಕಾ ಪ್ರತಿರೂಪ, ಯಾರಿದು ದೀಪಿಕಾ ?
ಅಮೃತಧಾರೆʼ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿದೆ. ಛಾಯಾ ಸಿಂಗ್ ಭೂಮಿಕಾ ಎನ್ನುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರ ೭ ಗಂಟೆಗೆ ಪ್ರಸಾರ ಕಾಣುತ್ತಿದೆ.