Amruthadhaare Serial: ಎಲ್ಲ ಸರಿ ಹೋಗೋ ಹೊತ್ತಲ್ಲೇ ಗೌತಮ್ ದಿವಾನ್‌ಗೆ ಹೊಸ ಸಂಕಷ್ಟ; ಶಾಕ್ ಆದ್ಲು ಭೂಮಿಕಾ!
Amruthadhaare: ಗೌತಮ್ ದಿವಾನ್ ಆಸ್ತಿ ಹರಾಜಿಗೆ ಬಂದಿತ್ತು. ಅಖಿಲಾಂಡೇಶ್ವರಿ ಸಹಾಯದಿಂದ ಗೌತಮ್ ಮತ್ತೆ ಆಸ್ತಿಯನ್ನು ಮರಳಿ ಪಡೆದಿದ್ದಾನೆ. ಗೌತಮ್ ದಿವಾನ್ ಈ ರೀತಿ ಆಸ್ತಿ ಖರೀದಿ ಮಾಡಿದ್ದು ಜಯದೇವ್‌ಗೆ ಆಶ್ಚರ್ಯ ಆಗಿದೆ. ಇಷ್ಟೆಲ್ಲ ಹಣವನ್ನು ಅವನು ಹೇಗೆ ತಂದನು ಎಂದು ಯೋಚನೆ ಮಾಡುತ್ತಿರುವಾಗಲೇ, ಗೌತಮ್ ದಿವಾನ್ ಅವನನ್ನು ಮನೆಯಿಂದ ಹೊರಗಡೆ ಹಾಕಿದ್ದಾನೆ.ಆದರೀಗ ಮತ್ತೊಂದು ಸಂಕಷ್ಟಕ್ಕೆ ಒಳಗಾಗಿದ್ದಾನೆ ಗೌತಮ್.
ಅಮೃತಧಾರೆ ಧಾರಾವಾಹಿ -
ಜೀ ಕನ್ನಡ ವಾಹಿನಿಯಲ್ಲಿ (Zee Kannada) ಪ್ರಸಾರ ಕಾಣುತ್ತಿರುವ ಅಮೃತಧಾರೆಯಲ್ಲಿ (amruthadhaare serial) ಗೌತಮ್ ದಿವಾನ್ ತನ್ನಲ್ಲೇ ಆಸ್ತಿಯನ್ನು ಮರಳಿ ಪಡೆದಿದ್ದಾನೆ. ಅಖಿಲಾಂಡೇಶ್ವರಿ ಸಹಾಯ ಹಸ್ತದಿಂದ ಅಂತೂ ತನ್ನ ಸಾಮ್ರಾಜ್ಯವನ್ನು ಮರಳಿ ಪಡೆದಿದ್ದಾನೆ. ಜೈದೇವ್‌ಗೆ (Jaidev) ಕಪಾಳಕ್ಕೆ ಒಂದು ಬಾರಿಸಿ ಮನೆಯಿಂದ ಆಚೆಯೂ ಹಾಕಿದ್ದಾನೆ. ಆದರೀಗ ಮತ್ತೊಂದು ಸಂಕಷ್ಟಕ್ಕೆ ಒಳಗಾಗಿದ್ದಾನೆ ಗೌತಮ್.
ಗೌತಮ್ ದಿವಾನ್ ಆಸ್ತಿ ಹರಾಜಿಗೆ ಬಂದಿತ್ತು. ಅಖಿಲಾಂಡೇಶ್ವರಿ ಸಹಾಯದಿಂದ ಗೌತಮ್ ಮತ್ತೆ ಆಸ್ತಿಯನ್ನು ಮರಳಿ ಪಡೆದಿದ್ದಾನೆ. ಗೌತಮ್ ದಿವಾನ್ ಈ ರೀತಿ ಆಸ್ತಿ ಖರೀದಿ ಮಾಡಿದ್ದು ಜಯದೇವ್‌ಗೆ ಆಶ್ಚರ್ಯ ಆಗಿದೆ. ಇಷ್ಟೆಲ್ಲ ಹಣವನ್ನು ಅವನು ಹೇಗೆ ತಂದನು ಎಂದು ಯೋಚನೆ ಮಾಡುತ್ತಿರುವಾಗಲೇ, ಗೌತಮ್ ದಿವಾನ್ ಅವನನ್ನು ಮನೆಯಿಂದ ಹೊರಗಡೆ ಹಾಕಿದ್ದಾನೆ.
ಇದನ್ನೂ ಓದಿ: Samantha: ರಾಜ್ ಜೊತೆ ಸಮಂತಾ, ಶೋಭಿತಾ ಜೊತೆ ನಾಗ ಚೈತನ್ಯ; ಒಂದೇ ಇವೆಂಟ್‌ನಲ್ಲಿ ಭಾಗಿ!
ಆರತಿ ಎತ್ತಿ ಬರಮಾಡಿಕೊಂಡ್ರು ಮನೆಯವರು!
ಇನ್ನು ಗೌತಮ್ ದಿವಾನ್ ಬಂದ ಕೂಡಲೇ ಅಮ್ಮ ಹಾಗೂ ಮನೆಯವರೆಲ್ಲರೂ ಆರತಿ ಮಾಡಿ ಬರಮಾಡಿಕೊಂಡಿದ್ದಾರೆ. ಅಷ್ಟೇ ಅಲ್ಲ ಭಾಗ್ಯಮ್ಮ ಶಾಸ್ತಿ ಅವರನ್ನು ಕರೆಸಿ, ಮುಂಚೆ ಇದ್ದ ಮನೆಗೆ ಹೋಗಲು ಒಳ್ಳೆಯ ಮುಹೂರ್ತ ನೋಡಲು ಹೇಳಿದ್ದಾರೆ.
ಶಾಸ್ತಿಗಳು ಬಂದಿದ್ದಾರೆ. ಆದರೆ ಒಂದು ಆಘಾತ ಕೊಡುವ ವಿಚಾರವನ್ನು ಭೂಮಿ ಮತ್ತು ಗೌತಮ್ ಮುಂದೆ ಹೇಳಿದ್ದಾರೆ.
ಹೆಣ್ಣು ಮಗುವಿನಿಂದ ಕಂಟಕ
ನಿಮಗೆ ಜನಿಸಿದ ಹೆಣ್ಣು ಮಗುವಿನಿಂದ ನಿಮಗೆ ಕಂಟಕ ಇದೆ ಎಂದು ಜಾತಕದಲ್ಲಿ ಇದೆ. ನಿಮಗೆ ತುಂಬಾ ಹತ್ತಿರದಲ್ಲಿ ಇರೋರೆ ನಿಮಗೆ ಸಮಸ್ಯೆ ಕಾಡುವ ಸಂಭವ ಇದೆ. ಕೆಲವೊಂದಿಷ್ಟು ಹಾಗೇಯೇ ನಾವು ಮುಗಿದು ಹೋಯ್ತು ಅಂತ ಅಂದುಕೊಂಡಿರ್ತಿವಿ. ಆದರೆ ಮುಗಿದು ಹೋಗಲ್ಲ ಎಂದಿದ್ದಾರೆ. ಶಾಸ್ತ್ರಿಗಳ ಈ ಮಾತು ಕೇಳಿ ಗಾಬರಿ ಆಗಿದ್ದಾರೆ ಭೂಮಿಕಾ ಹಾಗೂ ಗೌತಮ್.
ಗೌತಮ್ ದಿವಾನ್ ಈಗ ಜಯದೇವ್‌ನನ್ನು ಮನೆಯಿಂದ ಹೊರಗಡೆ ಹಾಕಿದಮೇಲೂ ಕೂಡ ಅವನಿಗೆ ಬುದ್ಧಿಯೇ ಬಂದಿಲ್ಲ. ಇನ್ನೊಂದು ಕಡೆ ದಿಯಾ ಕೂಡ ಅವನಿಗೆ ಚಳ್ಳೆಹಣ್ಣು ತಿನ್ನಿಸಿ ಓಡಿ ಹೋಗಿದ್ದಾಳೆ. ಮುಂದೆ ಜಯದೇವ್, ಗೌತಮ್ ಕುಟುಂಬಕ್ಕೆ ತೊಂದರೆ ಕೊಡ್ತಾನಾ? ಅಥವಾ ಶಕುಂತಲಾ, ಜಯದೇವ್ ಆಡಿದ ಮತ್ತೆ ನಾಟಕ ಮಾಡಿದ್ರಾ ಅನ್ನೋ ಎಂಬ ಪ್ರಶ್ನೆ ವೀಕ್ಷರಲ್ಲಿ ಇದೆ.
ಇದೀಗ ಕಥೆಯ ತಿರುವು ನೋಡಿದರೆ ಕಾಣೆಯಾದ ಮಗಳ ಬಗ್ಗೆ ಮತ್ತೆ ಗೌತಮ್ ಯೋಚಿಸ್ತಾನ ಅನ್ನೋ ಕುತೂಹಲವೂ ವೀಕ್ಷರಲ್ಲಿದೆ.
ಇದನ್ನೂ ಓದಿ: Amruthadhaare Serial: ಅಹಂಕಾರದಲ್ಲಿದ್ದ ಜೆಡಿಗೆ ತಕ್ಕ ಶಾಸ್ತಿ; ಗೌತಮ್ ತೆಕ್ಕೆಗೆ ಬಂತು ಕುಟುಂಬದ ಆಸ್ತಿ!
ಅಮೃತಧಾರೆ’ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿದೆ. ಛಾಯಾ ಸಿಂಗ್ ಭೂಮಿಕಾ ಎನ್ನುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರ ಸಂಜೆ 7 ಗಂಟೆಗೆ ಪ್ರಸಾರ ಕಾಣುತ್ತಿದೆ.