ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ʻನನ್ನ ಅನ್ಶು, ನೀನು ಯಾವಾಗಲೂ ನನ್ನವಳೇ ಆಗಿರುತ್ತೀಯಾʼ; ತಂಗಿಯನ್ನು ಧಾರೆ ಎರೆದು ಭಾವುಕರಾದ ಅಣ್ಣ ಅರ್ಜುನ್ ಕಪೂರ್

ಬಾಲಿವುಡ್ ನಟ ಅರ್ಜುನ್ ಕಪೂರ್ ಅವರ ಸಹೋದರಿ ಅನ್ಶುಲಾ ಕಪೂರ್ ತಮ್ಮ ಬಹುಕಾಲದ ಗೆಳೆಯ ರೋಹನ್ ಠಕ್ಕರ್ ಅವರನ್ನು ಪಂಜಾಬಿ ಮತ್ತು ಗುಜರಾತಿ ಸಂಪ್ರದಾಯದಂತೆ ಅದ್ಧೂರಿಯಾಗಿ ವಿವಾಹವಾಗಿದ್ದಾರೆ. ಸಹೋದರಿಯ ಮದುವೆ ಸಂದರ್ಭದಲ್ಲಿ ಇನ್‌ಸ್ಟಾಗ್ರಾಮ್‌ನಲ್ಲಿ ಅತ್ಯಂತ ಭಾವುಕ ಪೋಸ್ಟ್ ಹಂಚಿಕೊಂಡಿರುವ ಅರ್ಜುನ್ ಕಪೂರ್, ತಂಗಿಯ ಮುಖದ ನಗು ಎಂದಿಗೂ ಮಾಯವಾಗದಂತೆ ನೋಡಿಕೊಳ್ಳುತ್ತೇನೆ ಎಂದು ಹೇಳಿಕೊಂಡಿದ್ದಾರೆ.

ಗಂಡನ ಮನೆಗೆ ಹೊರಟ ಅನ್ಶುಲಾಗೆ ಭಾವುಕ ಪತ್ರ ಬರೆದ ಅಣ್ಣ ಅರ್ಜುನ್‌ ಕಪೂರ್

-

Avinash GR
Avinash GR Jul 7, 2026 3:45 PM

ಅರ್ಜುನ್ ಕಪೂರ್ ಅವರ ಸಹೋದರಿ ಅನ್ಶುಲಾ ಕಪೂರ್ ತಮ್ಮ ಬಹುಕಾಲದ ಗೆಳೆಯ ರೋಹನ್ ಠಕ್ಕರ್ ಅವರನ್ನು ಸೋಮವಾರ (ಜುಲೈ 6) ವಿವಾಹವಾದರು. ಅನ್ಶುಲಾ ಮದುವೆಯಲ್ಲಿ ಅರ್ಜುನ್ ಕಪೂರ್‌, ಸಹೋದರಿಯರಾದ ಜಾನ್ವಿ ಕಪೂರ್ ಮತ್ತು ಖುಷಿ ಕಪೂರ್ ‌ಮುಂದೆ ನಿಂತು ಖುಷಿಯಾಗಿ ಮಿಂದೆದ್ದರು. ಇದೀಗ ಮದುವೆಯಾಗಿ ತವರು ಮನೆಯಿಂದ ಗಂಡನ ಮನೆಗೆ ಹೋಗುತ್ತಿರುವ ಸಹೋದರಿ ಅನ್ಶುಲಾ ಬಗ್ಗೆ ಅರ್ಜುನ್‌ ಕಪೂರ್‌ ಒಂದು ಪೋಸ್ಟ್‌ ಹಂಚಿಕೊಂಡರು.

ಇನ್‌ಸ್ಟಾಗ್ರಾಮ್‌ನಲ್ಲಿ ಅರ್ಜುನ್ ಕಪೂರ್ ಹೇಳಿದ್ದೇನು?

"ನನ್ನ ಅನ್ಶು, ನೀನು ಯಾವಾಗಲೂ ನನ್ನವಳೇ ಆಗಿರುತ್ತೀಯಾ. ಆದರೆ ಈಗ ನಾನು ನಿನ್ನನ್ನು ಬಿಟ್ಟುಕೊಡಬೇಕಾಗಿದೆ... ಇಂದು ನೀನು ರೋಹನ್ ಜೊತೆಗೆ ನಿನ್ನ ಹೊಸ ಪ್ರಯಾಣವನ್ನು ಪ್ರಾರಂಭಿಸುತ್ತಿರುವೆ. ನಿನ್ನ ಮುಖದಲ್ಲಿನ ನಗು ನೋಡಿ ನನ್ನ ಹೃದಯ, ಮನಸ್ಸು ಅತ್ಯಂತ ಸಂತೋಷಗೊಂಡಿವೆ" ಎಂದು ಅರ್ಜುನ್‌ ಕಪೂರ್‌ ಬರೆದುಕೊಂಡಿದ್ದಾರೆ.

Sridevi Birth Anniversary: ಪತ್ನಿ ಶ್ರೀದೇವಿಯ ಹುಟ್ಟುಹಬ್ಬಕ್ಕೆ ವಿಶೇಷ ಫೋಟೊ ಶೇರ್ ಮಾಡಿದ್ದ ನಿರ್ಮಾಪಕ ಬೋನಿ ಕಪೂರ್!

ನಾನು ಯಾವಾಗಲೂ ಇಲ್ಲೇ ಇರುತ್ತೇನೆ

"ನೀನು ಬೆಳೆದು ದೊಡ್ಡವಳಾಗಿ, ಪ್ರತಿಯೊಂದು ಹೆಜ್ಜೆಯಲ್ಲೂ ನಮ್ಮ ತಾಯಿಯನ್ನು ನೆನಪಿಸುವಂತಹ ಅದ್ಭುತ ಮಹಿಳೆಯಾಗುವುದನ್ನು ನಾನು ನೋಡಿದ್ದೇನೆ. ನೀನೆಂದೂ ಚಿಂತಿಸಬೇಡ, ಏಕೆಂದರೆ ಅವಳು ನಿನ್ನನ್ನು ಸದಾ ಗಮನಿಸುತ್ತಿರುತ್ತಾಳೆ ಮತ್ತು ಆಶೀರ್ವದಿಸುತ್ತಿರುತ್ತಾಳೆ. ನಾನು ಯಾವಾಗಲೂ ಇಲ್ಲೇ ಇರುತ್ತೇನೆ, ಯಾವಾಗಲೂ ನಿನಗೆ ಬೆಂಬಲವಾಗಿರುತ್ತೇನೆ ಮತ್ತು ಆ ನಗು ನಿನ್ನ ಮುಖದಿಂದ ಎಂದಿಗೂ ಮಾಯವಾಗದಂತೆ ನೋಡಿಕೊಳ್ಳುತ್ತೇನೆ. ಲವ್ ಯು, ನಿನ್ನ ಅರ್ಜುನ್ ಭಯ್ಯಾ.." ಎಂದು ಅರ್ಜುನ್‌ ಕಪೂರ್‌ ಭಾವುಕರಾಗಿ ಬರೆದುಕೊಂಡಿದ್ದಾರೆ.

ನಟ ಅರ್ಜುನ್ ಕಪೂರ್ ಸಹೋದರಿ ಅನ್ಶುಲಾಗೆ ಕಲ್ಯಾಣ; ಪ್ರಿಯಕರ ರೋಹನ್ ಠಕ್ಕರ್ ಜೊತೆ ಅದ್ದೂರಿಯಾಗಿ ನಡೆದ ಮದುವೆ

ರೋಹನ್ ಜೊತೆ ಮದುವೆಯಾದ ಅನ್ಶುಲಾ

ಅನ್ಶುಲಾ ಕಪೂರ್ ಮತ್ತು ರೋಹನ್ ಠಕ್ಕರ್ ಅವರ ವಿವಾಹದ ಶಾಸ್ತ್ರಗಳು ಜೂನ್‌ 21ರ 'ಮಾತಾ ಕಿ ಚೌಕಿ'ಯೊಂದಿಗೆ ಪ್ರಾರಂಭವಾಗಿ, ನಂತರ ಪಂಜಾಬಿ ಮತ್ತು ಗುಜರಾತಿ ಸಂಪ್ರದಾಯಗಳ ನಡೆವು. ಜುಲೈ 5ರ ಭಾನುವಾರ ಚೂಡಾ ಮತ್ತು ಮೆಹಂದಿ ಶಾಸ್ತ್ರಗಳು ನಡೆದರೆ, ಸೋಮವಾರ ಸಂಜೆ ಈ ಜೋಡಿ ಸಪ್ತಪದಿ ತುಳಿದರು. ಅನ್ಶುಲಾ ಮತ್ತು ರೋಹನ್ ಅವರ ರಿಸೆಪ್ಷನ್ ಮಂಗಳವಾರ ಮುಂಬೈನ ತಾಜ್ ಲ್ಯಾಂಡ್ಸ್ ಎಂಡ್‌ನಲ್ಲಿ ನಡೆಯಲಿದೆ.

ಅರ್ಜುನ್‌ ಕಪೂರ್‌ ಅವರ ಪೋಸ್ಟ್

2022ರಲ್ಲಿ ಡೇಟಿಂಗ್ ಆಪ್‌ವೊಂದರ ಮೂಲಕ ಸ್ನೇಹಿತರಾದ ಅನ್ಶುಲಾ ಮತ್ತು ರೋಹನ್, ನಂತರ ಪ್ರೀತಿ ಮಾಡಲು ಆರಂಭಿಸಿದ್ದರು. ಕಳೆದ ವರ್ಷ ಈ ಜೋಡಿ, ಇದೇ ಸಮಯದಲ್ಲಿ ಎಂಗೇಜ್‌ ಆಗಿತ್ತು. ಇದೀಗ ದಾಂಪತ್ಯ ಬದುಕಿಗೆ ಕಾಲಿಟ್ಟಿದೆ.