Hanumantha BBK 11: ಹನುಮಂತನ ಜೀವನದಲ್ಲಿ ಮರೆಯಲಾಗದ 3 ಫೋಟೋ ಯಾವುದು ಗೊತ್ತಾ?
ಬಿಗ್ ಬಾಸ್ ವಿನ್ ಆದ ಬಳಿಕ ಹನುಮಂತನ ಜನಪ್ರಿಯತೆ ಮತ್ತಷ್ಟು ಹೆಚ್ಚಾಗಿದೆ. ಇನ್ಸ್ಟಾಗ್ರಾಮ್ನಲ್ಲಿ ಇವರ ಫಾಲೋವರ್ಸ್ ಕೂಡ 5 ಲಕ್ಷ ದಾಟಿದೆ. ಇದೀಗ ಹನುಮಂತ ಅವರು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಫೋಟೋ ಒಂದನ್ನು ಹಂಚಿಕೊಂಡಿದ್ದು, ಇದು ಸಖತ್ ವೈರಲ್ ಆಗುತ್ತಿದೆ. ಈ ಫೋಟೋಕ್ಕೆ ಜೀವನದ ಮರೆಯಲಾಗದ ಸುಂದರ ಕ್ಷಣ ಎಂದು ಕ್ಯಾಪ್ಷನ್ ನೀಡಿದ್ದಾರೆ.
![Hanumantha (6)](https://cdn-vishwavani-prod.hindverse.com/media/images/Hanumantha_6.max-1280x720.jpg)
![Profile](https://vishwavani.news/static/img/user.png)
ಬಿಗ್ ಬಾಸ್ ಕನ್ನಡ ಸೀಸನ್ 11 (Bigg Boss Kannada 11) ಮುಗಿದು ಒಂದು ವಾರ ಕಳೆದರೂ ಸ್ಪರ್ಧಿಗಳು ಹಾಗೂ ಅಭಿಮಾನಿಗಳು ಇನ್ನೂ ಇದರ ಗುಂಗುನಿಂದ ಹೊರಬಂದಿಲ್ಲ. ಹಳ್ಳಿ ಹೈದ ಹನುಮಂತ ಲಮಾಣಿ ಟ್ರೋಫಿ ಗೆದ್ದ ಬಳಿಕ ಇವರಿಗೆ ಬೇಡಿಕೆ ಕೂಡ ಹೆಚ್ಚಾಗಿದೆ. ಈಗಾಗಲೇ ಕಲರ್ಸ್ ಕನ್ನಡದ ಮತ್ತೊಂದು ರಿಯಾಲಿಟಿ ಶೋ ಬಾಯ್ಸ್ vs ಗರ್ಲ್ನಲ್ಲಿ ಇವರು ಭಾಗವಹಿಸುತ್ತಿದ್ದಾರೆ. ಸಿನಿಮಾ ಆಫರ್ಗಳು ಕೂಡ ಬರುತ್ತಿವೆಯಂತೆ. ಮೊನ್ನೆಯಷ್ಟೆ ಟ್ರೋಫಿ ಹಿಡಿದುಕೊಂಡು ಹುಟ್ಟೂರಿಗೆ ಹೋದಾಗ ಇವರನ್ನು ನೋಡಲು ಜನಸಾಗರವೇ ಬಂದಿತ್ತು. ಹೀಗೆ ಹನುಮಂತನ ಹವಾ ಕರುನಾಡಲ್ಲಿ ಭರ್ಜರಿ ಆಗೇ ಇದೆ.
ಬಿಗ್ ಬಾಸ್ ಕನ್ನಡ ಇಷ್ಟು ಸೀಸನ್‌ದು ಒಂದು ಲೆಕ್ಕ, ಈ ಸೀಸನ್‌ದೆ ಇನ್ನೊಂದು ಲೆಕ್ಕ ಎಂದೇ ಹೇಳಬಹುದು. ಇಷ್ಟು ದಿನ ವೈಲ್ಡ್ ಕಾರ್ಡ್ ಎಂಟ್ರಿ ಪಡೆದ ಯಾರೊಬ್ಬರೂ ಟ್ರೋಫಿ ಎತ್ತಿರಲಿಲ್ಲ. ಆ ದಾಖಲೆಯನ್ನು ಹನುಮಂತ ಮಾಡಿದರು. ಕುರಿ ಕಾಯುತ್ತಿದ್ದ ಹಳ್ಳಿ ಹೈದ ಹನುಮಂತ ಯಾರೂ ಊಹಿಸದ ರೀತಿಯಲ್ಲಿ ಬಂದು ಸೈಲೆಂಟ್ ಆಗಿ ಟ್ರೋಫಿ ಎತ್ತಿ ಹಿಡಿದರು. ಬಿಗ್ ಬಾಸ್ ವಿನ್ ಆದ ಬಳಿಕ ಹನುಮಂತನ ಜನಪ್ರಿಯತೆ ಮತ್ತಷ್ಟು ಹೆಚ್ಚಾಗಿದೆ. ಇನ್ಸ್ಟಾಗ್ರಾಮ್ನಲ್ಲಿ ಇವರ ಫಾಲೋವರ್ಸ್ ಕೂಡ 5 ಲಕ್ಷ ದಾಟಿದೆ.
ಹನುಮಂತ ಅವರು ಬಿಗ್ ಬಾಸ್ ಮನೆಗೆ ಬರುವಾಗ ಕೇವಲ ಒಂದೂವರೆ ಇಂದ ಎರಡು ಲಕ್ಷ ಹಿಂಬಾಲಕರನ್ನು ಹೊಂದಿದ್ದರು. ಈಗ ಆ ಸಂಖ್ಯೆ ಐದೂವರೆ ಲಕ್ಷಕ್ಕೆ ಏರಿಕೆ ಆಗಿದೆ. ಅವರನ್ನು ಇನ್ಸ್ಟಾಗ್ರಾಮ್ನಲ್ಲಿ 5.63 ಲಕ್ಷ ಹಿಂಬಾಲಕರನ್ನು ಪಡೆದಿದ್ದಾರೆ. ಇದು ಅವರಿಗೆ ಸಾಕಷ್ಟು ಜನಪ್ರಿಯತೆಗೆ ಸಿಕ್ಕ ಉದಾಹರಣೆ ಎನ್ನಬಹುದು.
ಇದೀಗ ಹನುಮಂತ ಅವರು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಫೋಟೋ ಒಂದನ್ನು ಹಂಚಿಕೊಂಡಿದ್ದು, ಇದು ಸಖತ್ ವೈರಲ್ ಆಗುತ್ತಿದೆ. ಈ ಫೋಟೋಕ್ಕೆ ಜೀವನದ ಮರೆಯಲಾಗದ ಸುಂದರ ಕ್ಷಣ ಎಂದು ಕ್ಯಾಪ್ಷನ್ ನೀಡಿದ್ದಾರೆ. ಹನುಮಂತ ಹಂಚಿಕೊಂಡಿರುವ ಈ ಫೋಟೋದಲ್ಲಿ ಅವರ ಬಿಗ್ ಬಾಸ್ ಗೆದ್ದ ಕ್ಷಣವಿದೆ. ಸುದೀಪ್ ಅವರು ವಿನ್ನರ್ ಎಂದು ಹನುಮಂತ ಅವರ ಕೈ ಎತ್ತುತ್ತಾ ಇರುವ ದೃಶ್ಯ ಇದೆ. ಮತ್ತೊಂದು ಫೋಟೋದಲ್ಲಿ ಹನುಮಂತ ಅವರು ಸುದೀಪ್ ಅವರ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆಯುತ್ತಿರುವ ಫೋಟೋ ಇದೆ. ಮೂರನೇ ಫೋಟೋದಲ್ಲಿ ಸುದೀಪ್ ಅವರು ಹನುಮಂತ ಅವರನ್ನು ಹಗ್ ಮಾಡುತ್ತಿದ್ದಾರೆ. ಈ ಫೋಟೋನ ಫ್ಯಾನ್ಸ್ ಬಹುವಾಗಿ ಮೆಚ್ಚಿಕೊಂಡಿದ್ದು, ಸಾಕಷ್ಟು ಕಮೆಂಟ್ಸ್, ಲೈಕ್ಸ್ ಬಂದಿವೆ.
ಹನುಮಂತ ಲಮಾಣಿ ಮೂಲತಃ ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ಚಿಲ್ಲೂರುಬಡ್ನಿ ತಾಂಡಾದ ನಿವಾಸಿ. ಕುರಿಗಾಹಿಯಾಗಿದ್ದ ಹನುಮಂತ, ತನ್ನ ಗಾಯನದಿಂದ ಮೋಡಿ ಮಾಡಿದ್ದರು. ಯಾವುದೇ ಸಂಗೀತ ತರಬೇತಿ ಇಲ್ಲದೇ ತನ್ನ ಗಾಯನದಿಂದ ಹನುಮಂತ ಗಮನ ಸೆಳೆದಿದ್ದರು. ಇದೀಗ ಬಿಗ್ ಬಾಸ್ ವಿನ್ನರ್ ಆಗಿ ಮತ್ತಷ್ಟು ಅಭಿಮಾನಿಗಳನ್ನು ಸಂಪಾದಿಸಿದ್ದಾರೆ.
BBK 11 TRP: ಬಿಗ್ ಬಾಸ್ ಫಿನಾಲೆಗೆ ಸಿಕ್ಕ TRP ಎಷ್ಟು ಗೊತ್ತೇ?: ದಾಖಲೆ ಬರೆದ ಹನುಮಂತ ವಿನ್ ಆದ ಎಪಿಸೋಡ್