ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

BBK13: ವೋಟಿಂಗ್ ಇಲ್ಲದೆ ಮಂಜು-ಕಿರಣ್ ಔಟ್? ಏನಿದು ಟ್ವಿಸ್ಟ್?

BBK13:ಬಿಗ್‌ ಬಾಸ್ ಕನ್ನಡದ ಈ ವಾರದ ಎಲಿಮಿನೇಷನ್ ಪ್ರಕ್ರಿಯೆ ‌ʻಬಿಗ್ ಬಾಸ್ʼ ಪ್ರೇಕ್ಷಕರಿಗೆ ಮತ್ತು ಮನೆಯ ಸದಸ್ಯರಿಗೆ ತೀವ್ರ ಕುತೂಹಲ ಹಾಗೂ ಶಾಕ್ ನೀಡಿದೆ. ಅವಿನಾಶ್, ವೈಷ್ಣವಿ, ಕಿರಣ್ ಶಾಸ್ತ್ರಿ ಮತ್ತು ಮಾಡ್ರನ್‌ ಮಹಾಕವಿ ಮಂಜ - ಇವರೆಲ್ಲರನ್ನ ನಾಲ್ಕು ಕನ್ನಡಿಗಳ ಮುಂದೆ ನಿಲ್ಲಿಸಿ, ತಮ್ಮೊಂದಿಗೆ ತಾವೇ ಮಾತನಾಡಿಕೊಳ್ಳುವಂತೆ ʻಬಿಗ್‌ ಬಾಸ್ʼ ವಿಭಿನ್ನ ಸೂಚನೆ ನೀಡಿದ್ದರು. ಈ ವಾರ ಯಾವುದೇ ವೋಟಿಂಗ್ ಲೈನ್ ಇಲ್ಲದಿದ್ದರೂ ಮಂಜು ಹಾಗೂ ಕಿರಣ್ ಎಲಿಮಿನೇಟ್ ಆಗಿದ್ದಾರೆ. ಇವರು ನಿಜಕ್ಕೂ ಎಲಿಮಿನೇಟ್ ಆದರೇ ಎನ್ನುವುದು ಸದ್ಯದ ಪ್ರಶ್ನೆ.

ವೋಟಿಂಗ್ ಇಲ್ಲದೆ ಮಂಜು-ಕಿರಣ್ ಔಟ್? ಏನಿದು ಟ್ವಿಸ್ಟ್?

ಬಿಗ್‌ ಬಾಸ್‌ ಕನ್ನಡ -

Yashaswi Devadiga
Yashaswi Devadiga Sep 21, 2026 7:52 AM

ಬಿಗ್‌ ಬಾಸ್ ಕನ್ನಡದ ಈ ವಾರದ ಎಲಿಮಿನೇಷನ್ (Elimination) ಪ್ರಕ್ರಿಯೆ ‌ʻಬಿಗ್ ಬಾಸ್ʼ ಪ್ರೇಕ್ಷಕರಿಗೆ ಮತ್ತು ಮನೆಯ ಸದಸ್ಯರಿಗೆ ತೀವ್ರ ಕುತೂಹಲ ಹಾಗೂ ಶಾಕ್ ನೀಡಿದೆ. ಅವಿನಾಶ್, ವೈಷ್ಣವಿ, ಕಿರಣ್ ಶಾಸ್ತ್ರಿ ಮತ್ತು ಮಾಡ್ರನ್‌ ಮಹಾಕವಿ ಮಂಜ - ಇವರೆಲ್ಲರನ್ನ ನಾಲ್ಕು ಕನ್ನಡಿಗಳ ಮುಂದೆ ನಿಲ್ಲಿಸಿ, ತಮ್ಮೊಂದಿಗೆ ತಾವೇ ಮಾತನಾಡಿಕೊಳ್ಳುವಂತೆ ʻಬಿಗ್‌ ಬಾಸ್ʼ ವಿಭಿನ್ನ ಸೂಚನೆ ನೀಡಿದ್ದರು. ಈ ವಾರ ಯಾವುದೇ ವೋಟಿಂಗ್ ಲೈನ್ ಇಲ್ಲದಿದ್ದರೂ ಮಂಜು ಹಾಗೂ ಕಿರಣ್ ಎಲಿಮಿನೇಟ್ (Kiran Eliminate) ಆಗಿದ್ದಾರೆ. ಇವರು ನಿಜಕ್ಕೂ ಎಲಿಮಿನೇಟ್ ಆದರೇ ಎನ್ನುವುದು ಸದ್ಯದ ಪ್ರಶ್ನೆ.

ತೀವ್ರ ಭಾವುಕ

ಮಂಜು ಹಾಗೂ ಕಿರಣ್ ಅವರನ್ನು ಮನೆಯಿಂದ ಕಳುಹಿಸಲಾಗಿದೆ. ಇದು ಪ್ರ್ಯಾಂಕ್ ಎಲಿಮಿನೇಷನ್ ಇರಬಹುದು ಎನ್ನಲಾಗಿದೆ. ಸಾಮಾನ್ಯವಾಗಿ ಎಲಿಮಿನೇಟ್ ಆದ ಬಳಿಕ ಎಲಿಮಿನೇಟ್ ಆದವರನ್ನು ವೇದಿಕೆ ಮೇಲೆ ಕರೆದು ಮಾತನಾಡಿಸಲಾಗುತ್ತದೆ. ಅಷ್ಟೇ ಅಲ್ಲ, ಇನ್​​ಸ್ಟಾಗ್ರಾಮ್​​ನಲ್ಲಿ ಪೋಸ್ಟ್ ಹಾಕಲಾಗುತ್ತದೆ. ‌

ಇದನ್ನೂ ಓದಿ: Bigg Boss Kannada 12: ರಾಶಿಕಾ ಬಗ್ಗೆ ಮಾತನಾಡಿ ತಾಯಿ ಭಾವುಕ! ಅತ್ತ ಧನುಷ್‌ಗೆ ಬಿಗ್‌ ಟ್ವಿಸ್ಟ್‌ ಕೊಟ್ಟ ಬಿಗ್‌ ಬಾಸ್‌

ಆದರೆ, ಈ ಬಾರಿ ಆ ರೀತಿ ಮಾಡಿಲ್ಲ. ರಕ್ಷಿತಾ ಹಾಗೂ ಧ್ರುವಂತ್ ಅವರನ್ನು ಒಂದು ವಾರಗಳ ಕಾಲ ಸೀಕ್ರೆಟ್​ ರೂಂನಲ್ಲಿ ಇರಿಸಲಾಗಿತ್ತು. ಕನ್ನಡಿಯ ಮುಂದೆ ನಿಂತ ಅವಿನಾಶ್, ತಮ್ಮೊಟ್ಟಿಗೆ ತಾವು ಮಾತನಾಡುವಾಗ ತೀವ್ರ ಭಾವುಕರಾದ್ರು. ಅವರ ಬೆನ್ನಲ್ಲೇ, ವೈಷ್ಣವಿ ಕೂಡ ಕನ್ನಡಿಯ ಎದುರು ನಿಂತು ಮನದ ಮಾತುಗಳನ್ನ ಹಂಚಿಕೊಂಡರು ಮಹಾಕವಿ ಮಂಜ ಮತ್ತು ಕಿರಣ್ ಶಾಸ್ತ್ರಿ ಭಾವನೆಗಳನ್ನ ಹಂಚಿಕೊಳ್ಳುತ್ತಿದ್ದಂತೆಯೇ, ಇಬ್ಬರ ಕನ್ನಡಿಗಳೂ ಸಹ ಒಡೆದು ಚೂರು ಚೂರಾದವು. ಕನ್ನಡಿ ಒಡೆಯುತ್ತಿದ್ದಂತೆ, ಇಬ್ಬರೂ ಆಟದಿಂದ ಹೊರಬೀಳಬೇಕಾಯಿತು.



ಈ ವಾರ ಯಾವುದೇ ನಿಜವಾದ ಎಲಿಮಿನೇಷನ್ ನಡೆದಿಲ್ಲ. ಹೊರಬಂದ ಕಿರಣ್ ಶಾಸ್ತ್ರಿ ಮತ್ತು ಮಂಜ ಮುಖ್ಯ ವೇದಿಕೆಗೆ ಬರಲೇ ಇಲ್ಲ.

ಇದನ್ನೂ ಓದಿ: BBK 13: ಅಗ್ನಿಪರೀಕ್ಷೆಯಲ್ಲಿ ಗೆದ್ದು ದೊಡ್ಮನೆಯೊಳಗೆ ಎಂಟ್ರಿ ಕೊಡೋದು ಯಾರು? 'ಬಿಗ್‌ ಬಾಸ್‌ ಕನ್ನಡ‌' ಟೀಮ್‌ನಿಂದ ಬಿಗ್‌ ಅಪ್ಡೇಟ್‌!

ಹಾಗೂ ಅವರು ಆಟದಿಂದ ಅಧಿಕೃತವಾಗಿ ಎಲಿಮಿನೇಟ್ ಕೂಡ ಆಗಿಲ್ಲ. ಈ ಬಾರಿಯೂ ಸಹ ಶಾಸ್ತ್ರಿ ಮತ್ತು ಮಂಜ ಅವರನ್ನ ಸೀಕ್ರೆಟ್ ರೂಮ್‌ಗೆ ಕಳುಹಿಸಿರಬಹುದು ಎಂಬ ಅನುಮಾನ ಮೂಡಿದೆ.