Bigg Boss Kannada 12: ಮನಿ ಮತ್ತು ಅಭಿಮಾನಿಗೂ ಇರೋ ವ್ಯತ್ಯಾಸ ಏನ್ ಗೊತ್ತಾ? ಗಿಲ್ಲಿ ನಟನ ಮಾತಿಗೆ ವೀಕ್ಷಕರು ಫಿದಾ!
Bigg Boss 12 Gilli Nata: ಬಿಗ್ ಬಾಸ್ ಫಿನಾಲೆ ವಾರದಲ್ಲಿ ಅಭಿಮಾನಿಗಳನ್ನು ಗಿಲ್ಲಿ ನಟ ಭೇಟಿಯಾಗಿದ್ದಾರೆ. ಅವರಿಗೆ 'ಜೋಕರ್' ಎಂದು ಬಿಗ್ ಬಾಸ್ ಬಿಲ್ಡಪ್ ಕೊಟ್ಟಿದ್ದು, ಅಭಿಮಾನಿಯೊಬ್ಬರು ಟ್ಯಾಟೂ ಹಾಕಿಸಿಕೊಂಡು ಬಂದಿರುವುದನ್ನು ಕಂಡು ಗಿಲ್ಲಿ ಭಾವುಕರಾಗಿದ್ದಾರೆ. ಇಂದಿನ ಸಂಚಿಕೆಯಲ್ಲಿ ಈ ರೋಚಕ ಕ್ಷಣಗಳು ಪ್ರಸಾರವಾಗಲಿವೆ.
-
ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ಸದ್ಯ ಫಿನಾಲೆ ವಾರ ನಡೆಯುತ್ತಿದೆ. ಇದೀಗ ಸ್ಪರ್ಧಿಗಳ ಅಭಿಮಾನಿಗಳನ್ನು ಬಿಗ್ ಬಾಸ್ ಮನೆಯೊಳಗೆ ಕಳಿಸಲಾಗಿದೆ. ಮಂಗಳವಾರದ ಸಂಚಿಕೆಯಲ್ಲಿ ರಕ್ಷಿತಾ, ಧ್ರುವಂತ್ ಇನ್ನಿತರರನ್ನು ಫ್ಯಾನ್ಸ್ ಮೀಟ್ ಮಾಡಿದ್ದರು. ಬುಧವಾರ ಸಂಚಿಕೆಯಲ್ಲಿ ಗಿಲ್ಲಿ ನಟ ಅವರನ್ನು ಅಭಿಮಾನಿಗಳು ಭೇಟಿ ಮಾಡಲಿದ್ದಾರೆ. ಎಲ್ಲರೂ ಕಾತರದಿಂದ ಕಾಯುತ್ತಿದ್ದ ಆ ಕ್ಷಣ ಬಂದೇ ಬಿಟ್ಟಿದೆ.
ಬುಧವಾರದ ಸಂಚಿಕೆಯ ಪ್ರೋಮೋ ಔಟ್
ಹೌದು, ಬುಧವಾರದ ಸಂಚಿಕೆಯ ಪ್ರೋಮೋದಲ್ಲಿ ಗಿಲ್ಲಿ ನಟ ಅವರನ್ನು ಅಭಿಮಾನಿಗಳು ಮೀಟ್ ಆಗಿದ್ದಾರೆ. ವೀಕ್ಷಕರು ಈ ಸಂಚಿಕೆಗಾಗಿ ಬಹಳ ಕಾತರದಿಂದ ಕಾದಿದ್ದರು. ಅಭಿಮಾನಿಗಳ ಮುಂದೆ ಗಿಲ್ಲಿ ಏನೆಲ್ಲಾ ಡೈಲಾಗ್ ಹೇಳಬಹುದು ಎಂದು ನಿರೀಕ್ಷೆ ಇಟ್ಟಿದ್ದರು. ಇದೀಗ ಅದೆಲ್ಲದಕ್ಕೂ ತೆರೆಬಿದ್ದಿದೆ. ಗಿಲ್ಲಿ ನಟ ಅವರನ್ನು ಫ್ಯಾನ್ಸ್ ಆದರದಿಂದ ಬರಮಾಡಿಕೊಂಡಿದ್ದಾರೆ. ಗಿಲ್ಲಿ ಕೂಡ ಮಸ್ತ್ ಡೈಲಾಗ್ ಹೇಳಿ, ರಂಜಿಸಿದ್ದಾರೆ.
Bigg Boss Kannada 12: ನಲ್ಲಿ ಮೂಳೆ ತಿಂದು ತೇಗಿದ ಗಿಲ್ಲಿ ನಟ! ಖೈದಿ ಮೂವಿ ಕಾರ್ತಿ ಸೀನ್‌ಗೆ ಹೋಲಿಸಿದ ಫ್ಯಾನ್ಸ್
ಬಿಲ್ಡಪ್ ಕೊಟ್ಟ ಬಿಗ್ ಬಾಸ್
ಈ ಮಧ್ಯೆ ಬಿಗ್ ಬಾಸ್ ಕೂಡ ಗಿಲಿ ಎಂಟ್ರಿ ಸಖತ್ ಬಿಲ್ಡಪ್ ಕೊಟ್ಟಿದ್ದಾರೆ. "ಯಾವುದೇ ಸಂದರ್ಭದಲ್ಲಿ ಆಟದ ದಿಕ್ಕನ್ನು ಬದಲಾಯಿಸುವ ತಾಕತ್ತು ಇರುವುದು ಕೇವಲ ಜೋಕರ್‌ಗೆ ಮಾತ್ರ" ಎಂದು ಹೇಳುವ ಮೂಲಕ ಗಿಲ್ಲಿ ನಟನಿಗೆ ಸಖತ್ ಆಗಿಯೇ ಬಿಲ್ಡಪ್ ಕೊಟ್ಟಿದ್ದಾರೆ ಬಿಗ್ ಬಾಸ್. ಅತ್ತ ಗಿಲ್ಲಿ ನಟ, "ಮೀಟರ್ ಇದ್ರೆ ಲಡಾಯಿಸು, ಮುಂದೆ ಬಂದ್ರೆ ಉಡಾಯಿಸು, ಜೊತೆಯಲ್ಲಿದ್ದು ಕಟಾಯಿಸಬೇಡ" ಎಂದು ಪಂಚ್ ಡೈಲಾಗ್ ಅನ್ನು ಅಭಿಮಾನಿಗಳ ಮುಂದೆ ಹೇಳಿದ್ದಾರೆ.
ಅಭಿಮಾನಿಗಳ ಪ್ರೀತಿಗೆ ಸೋತ ಗಿಲ್ಲಿ
"ನಾನು ಎಮೋಷನಲ್ ಆಗಿಬಿಟ್ಟೆ. ಮನಿಗೂ ಅಭಿಮಾನಿಗೂ ಇರುವ ವ್ಯತ್ಯಾಸ ಏನ್ ಗೊತ್ತಾ, ಮನಿ ಇವತ್ತು ಬರ್ತದೆ ನಾಳೆ ಹೋಯ್ತದೆ. ಆದರೆ ಅಭಿಮಾನಿ ಒಂದು ಸಲ ಬಂದ್ರೆ ಯಾವತ್ತೂ ಹೋಗಲ್ಲ" ಎಂದು ಹೇಳಿದ್ದಾರೆ. ಇದೇ ವೇಳೆ ಅಭಿಮಾನಿಯೊಬ್ಬರು ಭುಜದ ಮೇಲೆ ಗಿಲ್ಲಿ ನಟನ ಟ್ಯಾಟೂ ಹಾಕಿಸಿಕೊಂಡು ಬಂದಿದ್ದರು. ಅದನ್ನು ಕಂಡು ಗಿಲ್ಲಿ ಭಾವುಕರಾಗಿದ್ದಾರೆ. ಮನೆಯೊಳಗೆ ಹೋಗಿ ಇತರೆ ಸ್ಪರ್ಧಿಗಳ ಬಳಿಯೂ ಅದನ್ನು ಹೇಳಿಕೊಂಡಿದ್ದಾರೆ. "ಟ್ಯಾಟೂ ನೋಡಿ ನಾನು ಒಂದು ಕ್ಷಣ ಸೈಕ್ ಆಗಿಬಿಟ್ಟೆ" ಎಂದು ಗಿಲ್ಲಿ ನಟ ಅವರು ಹೇಳಿಕೊಂಡಿದ್ದಾರೆ. ಪೂರ್ಣ ಸಂಚಿಕೆ ಇಂದು (ಜ.14) ಪ್ರಸಾರವಾಗಲಿದೆ.