ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Bhagya Lakshmi Serial: ಭಾಗ್ಯಾ ಲೈಫ್​ಗೆ ಹೊಸ ವಿಲನ್ ಎಂಟ್ರಿ: ಜೊತೆಯಾದ ಶ್ರೇಷ್ಠಾ-ಕನ್ನಿಕಾ

ಭಾಗ್ಯಾ ವಿಚಾರ ಬಂದರೆ ಕನ್ನಿಕಾ ಕೂಡಾ ಆಸಕ್ತಿ ತೋರುತ್ತಾಳೆ ಎಂದು ತಿಳಿದ ಶ್ರೇಷ್ಠಾ, ಕನ್ನಿಕಾಗೆ ಕರೆ ಮಾಡಿ ಭೇಟಿ ಮಾಡಲು ಹೇಳುತ್ತಾಳೆ. ಅದರಂತೆ ಇಬ್ಬರು ಜೊತೆಯಾಗಿ ರೆಸ್ಟೋರೆಂಟ್ನಲ್ಲಿ ಕೂತು ಭಾಗ್ಯಾ ವಿರುದ್ಧ ಪಿತೂರಿ ನಡೆಸುತ್ತಾರೆ. ಭಾಗ್ಯಾ ಯುವರ್ ಗೇಮ್ ಈಸ್ ಓವರ್.. ಆ ಭಾಗ್ಯಾ ಕೆಲಸದಿಂದ ಹೊರಬಿದ್ಲು ಅಂತನೆ ಅನ್ಕೊ ಎಂದು ಕನ್ನಿಕಾ, ಶ್ರೇಷ್ಠಾ ಬಳಿ ಹೇಳಿದ್ದಾಳೆ.

Bhagya Lakshmi Serial: ಭಾಗ್ಯಾ ಲೈಫ್​ಗೆ ಹೊಸ ವಿಲನ್ ಎಂಟ್ರಿ: ಜೊತೆಯಾದ ಶ್ರೇಷ್ಠಾ-ಕನ್ನಿಕಾ

Bhagya Lakshmi serial

Profile Vinay Bhat Jan 29, 2025 12:12 PM

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಭಾಗ್ಯಲಕ್ಷ್ಮೀ’ ಧಾರಾವಾಹಿಯಲ್ಲಿ ( Bhagya Lakshmi Serial ) ಸದ್ಯದಲ್ಲೇ ಹೊಸ ಟ್ವಿಸ್ಟ್ ಬರಲಿದೆ. ಈಗಾಗಲೇ ಪ್ರೊಮೋ ಒಂದು ಬಿಡುಗಡೆ ಆಗಿದ್ದು, ಇದರಲ್ಲಿ ಭಾಗ್ಯಾಳ ಹೊಸ ಪಯಣ ಎಂದು ಬರೆಯಲಾಗಿದೆ. ಭಾಗ್ಯಾ ಕೆಲವೇ ದಿನಗಳಲ್ಲಿ ಎಲ್ಲವನ್ನೂ ಕಳೆದುಕೊಳ್ಳಲಿದ್ದಾಳೆ. ಕೆಲಸ ಕೂಡ ಹೋಗಲಿದೆ. ಹೀಗಿರುವಾಗ ನಾನು ಈ ನೋವನ್ನು ಯಾರಿಗೂ ತೋರಿಸದೆ ಮುಖವಾಡ ತೊಟ್ಟು ಬದುಕುತ್ತೇನೆ ಎಂದು ಜೋಕರ್ ಮುಖವಾಡ ತೊಡುತ್ತಾಳೆ. ಈ ಘಟನೆ ಶೀಘ್ರದಲ್ಲೇ ಸಂಭವಿಸಲಿದೆ. ಇದಕ್ಕೆ ತಕ್ಕಂತೆ ಧಾರಾವಾಹಿಯ ಪ್ರತಿದಿನದ ಎಪಿಸೋಡ್ ರೋಚಕತೆ ಸೃಷ್ಟಿಸುತ್ತಿದೆ.

ಭಾಗ್ಯಾ ಮಗಳು ತನ್ವಿ ಓದುತ್ತಿದ್ದ ಸ್ಕೂಲ್‌ ಓನರ್‌ ಕಾಮತ್‌ ಪುತ್ರಿ ಕನ್ನಿಕಾಗೂ, ಭಾಗ್ಯಾ ಕೆಲಸ ಮಾಡುತ್ತಿರುವ ಸಿಟಿ ಆಫ್‌ ಲೈಟ್ಸ್‌ ಹೋಟೆಲ್‌ಗೂ ಲಿಂಕ್‌ ಇರುವುದು ಶ್ರೇಷ್ಠಾಗೆ ಗೊತ್ತಾಗುತ್ತದೆ. ಭಾಗ್ಯಾ ವಿಚಾರ ಬಂದರೆ ಕನ್ನಿಕಾ ಕೂಡಾ ಆಸಕ್ತಿ ತೋರುತ್ತಾಳೆ ಎಂದು ತಿಳಿದ ಶ್ರೇಷ್ಠಾ, ಕನ್ನಿಕಾಗೆ ಕರೆ ಮಾಡಿ ಭೇಟಿ ಮಾಡಲು ಹೇಳುತ್ತಾಳೆ. ಕನ್ನಿಕಾ ಕೂಡಾ ಭಾಗ್ಯಾ ಎಂಬ ಹೆಸರು ಕೇಳುತ್ತಿದ್ದಂತೆ ಶ್ರೇಷ್ಠಾಳನ್ನು ಭೇಟಿ ಮಾಡಲು ಬರುತ್ತಾಳೆ.‌

ಅದರಂತೆ ಇಬ್ಬರು ಜೊತೆಯಾಗಿ ರೆಸ್ಟೋರೆಂಟ್​ನಲ್ಲಿ ಕೂತು ಭಾಗ್ಯಾ ವಿರುದ್ಧ ಪಿತೂರಿ ನಡೆಸುತ್ತಾರೆ. ಭಾಗ್ಯಾ ಯುವರ್ ಗೇಮ್ ಈಸ್ ಓವರ್.. ಆ ಭಾಗ್ಯಾ ಕೆಲಸದಿಂದ ಹೊರಬಿದ್ಲು ಅಂತನೆ ಅನ್ಕೊ ಎಂದು ಕನ್ನಿಕಾ, ಶ್ರೇಷ್ಠಾ ಬಳಿ ಹೇಳಿದ್ದಾಳೆ. ಈ ಸಲ ನಾನು ಬಿಟ್ಟುಕೊಡೊ ಮಾತೇ ಇಲ್ಲ.. ನಾನು ಕೊಡೊ ಒಂದೊಂದು ಡೋಸ್​ಗೂ ಅವ್ಳು ಕಣ್ಣೀರಲ್ಲ ಸ್ನಾನ ಮಾಡಬೇಕು ಎನ್ನುತ್ತಾಳೆ. ಕನ್ನಿಕಾ ಮಾತು ಕೇಳಿ ಖುಷಿಯಾದ ಶ್ರೇಷ್ಠಾ, ಭಾಗ್ಯಾ ನಿನ್ಗೆ ಇದೆ ಕಣೆ ಮಾರೀ ಹಬ್ಬ ಎನ್ನುತ್ತಾಳೆ.

ಆದರೆ, ಇದು ಯಾವುದನ್ನೂ ಅರಿಯದ ಭಾಗ್ಯಾ ಅತ್ತ ಅತ್ತೆ-ಮಾವನಿಗೆ ಸರ್​ಪ್ರೈಸ್ ನೀಡಿದ್ದಾಳೆ. ಭಾಗ್ಯಾ ಆಫೀಸ್​ನಿಂದ ತನ್ನ ಮುಂದಿನ ಎರಡು ತಿಂಗಳ ಸಂಬಳ ಪಡೆದುಕೊಂಡು ಡೌನ್​ಪೇಮೆಂಟ್ ಕಟ್ಟಿ ಮಾವನಿಗೆ ಹೊಸ ಕಾರು ಗಿಫ್ಟ್ ಮಾಡಿದ್ದಾಳೆ. ಹೊಸ ಕಾರು ನೋಡುತ್ತಿದ್ದಂತೆ ಎಲ್ಲರೂ ಖುಷಿಯಾಗುತ್ತಾರೆ. ಈ ಕಷ್ಟದ ಸಂದರ್ಭದಲ್ಲಿ ಇದೆಲ್ಲಾ ಬೇಕಾ ಮಗಳೇ ಎಂದು ಧರ್ಮರಾಜ್‌ ಹೇಳುತ್ತಾನೆ. ನಾನು ಆಗಲೇ ದುಡ್ಡು ಕಟ್ಟಿದ್ದೇನೆ, ನೀವು ಇನ್ಮುಂದೆ ಕಾರಿನಲ್ಲೇ ಓಡಾಡಬೇಕು ಎಂದು ಹೇಳುತ್ತಾಳೆ. ಭಾಗ್ಯಾ ತ್ಯಾಗ ಕಂಡು ಎಲ್ಲರೂ ಖುಷಿಯಾಗುತ್ತಾರೆ. ನೀವು ಆ ಸ್ಕೂಟರ್​ನ ತುಳಿದು ದೇಹ ದಂಡಿಸಿದ್ದು ಸಾಕು.. ಇನ್ನಾದ್ರು ಆರಾಮವಾಗಿ ಕಾರಲ್ಲಿ ಓಡಾಡಿ ಎಂದಿ ಕೀ ಕೊಡುತ್ತಾಳೆ. ಇದರಿಂದ ಮನೆಯವರಿಗೆಲ್ಲ ತುಂಬಾ ಖುಷಿ ಆಗುತ್ತದೆ.

ನಾನು ನಿಮ್ಮ ವಿಷ್ಯದಲ್ಲಿ ಆಗಲಿ ಅಥವಾ ಅತ್ತೆ ವಿಷಯದಲ್ಲಿ ಆಗ ಯಾವತ್ತೂ ಯಾವುದನ್ನು ಜವಾಬ್ದಾರಿ ಅನ್ಕೊಂಡು ಮಾಡಿಲ್ಲ.. ಅದು ನನ್ನ ಕರ್ತವ್ಯ.. ತುಂಬಾ ಪ್ರೀತಿಯಿಂದ ಮಾಡಿದ್ದೇನೆ. ಇಷ್ಟು ವರ್ಷ ಆದ್ರೂ ನೀವು ನನ್ನ ಹತ್ರ ಅದು ಬೇಕು.. ಇದು ಬೇಕು ಅಂತಾ ಕೇಳಿಲ್ಲ, ಈಗ್ಲೂ ಕೇಳ್ತಿಲ್ಲ. ಆದ್ರೆ ಸೊಸೆಯಾಗಿ ನಾನು ನನ್ನ ಕರ್ತವ್ಯನ್ನ ಮಾಡ್ಲೇ ಬೇಕು ಎಂದು ಮಾವನ ಬಳಿ ಭಾಗ್ಯಾ ಹೇಳಿದ್ದಾಳೆ.

BBK 11, Hanumantha: ಟ್ರೋಫಿ ಗೆದ್ದ ಬಳಿಕ ಮೊದಲ ಬಾರಿ ಇನ್​ಸ್ಟಾದಲ್ಲಿ ವಿಡಿಯೋ ಹಂಚಿಕೊಂಡ ಹನುಮಂತ: ಏನಂದ್ರು ನೋಡಿ