ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಬೆಂಗಳೂರಿನಲ್ಲಿ ಸ್ವಂತ ಮನೆಗೆ ಕಾಲಿಟ್ಟ ʻರಾಧಾ ಕಲ್ಯಾಣʼ ನಟಿ ಕೃತ್ತಿಕಾ ರವೀಂದ್ರ; ಇಲ್ಲಿದೆ ನೋಡಿ ಗೃಹಪ್ರವೇಶದ ವಿಡಿಯೋ

ಕಿರುತೆರೆ ಮತ್ತು ಹಿರಿತೆರೆಯ ಜನಪ್ರಿಯ ನಟಿ ಕೃತ್ತಿಕಾ ರವೀಂದ್ರ ಅವರು ಬೆಂಗಳೂರಿನಲ್ಲಿ ತಮ್ಮ ಕನಸಿನ ಮನೆಯ ಗೃಹಪ್ರವೇಶ ಮಾಡಿದ್ದಾರೆ. ಮೂಲತಃ ಸಾಗರದವರಾದ ಇವರು ತಮ್ಮ ಮನೆಗೆ 'ಶಿವ ಶಕ್ತಿ' ಎಂದು ನಾಮಕರಣ ಮಾಡಿದ್ದಾರೆ. ಕೃತ್ತಿಕಾ ಅವರು ತಮ್ಮ ಸುಂದರ ಮನೆಯ ಗೃಹಪ್ರವೇಶದ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಬೆಂಗಳೂರಿನಲ್ಲಿ ಸ್ವಂತ ಮನೆ ಕಾಲಿಟ್ಟ ಕೃತ್ತಿಕಾ; ಇದು ಸಾಗರದ ಹುಡುಗಿಯ ಸಾಧನೆ

-

Avinash GR
Avinash GR Apr 22, 2026 1:05 PM

ರಾಧಾ ಕಲ್ಯಾಣ, ಭೂಮಿಗೆ ಬಂದ ಭಗವಂತ ಧಾರಾವಾಹಿ ಸೇರಿದಂತೆ ಅನೇಕ ಸಿನಿಮಾಗಳಲ್ಲಿಯೂ ನಟಿಸಿದವರು ಕೃತ್ತಿಕಾ ರವೀಂದ್ರ. ಕಳೆದ ಹಲವಾರು ವರ್ಷಗಳಿಂದ ಕನ್ನಡ ಚಿತ್ರರಂಗ ಮತ್ತು ಕಿರುತೆರೆಯಲ್ಲಿ ಸಕ್ರಿಯವಾಗಿರುವ ಕೃತ್ತಿಕಾ ರವೀಂದ್ರ ಇದೀಗ ಒಂದು ಗುಡ್‌ ನ್ಯೂಸ್‌ ಕೊಟ್ಟಿದ್ದಾರೆ. ಅದೇನಪ್ಪ ಅಂದ್ರೆ, ಬೆಂಗಳೂರಿನಲ್ಲಿ ಅವರೀಗ ಸ್ವಂತ ಮನೆಗೆ ಕಾಲಿಟ್ಟಿದ್ದಾರೆ.

ಸಾಗರದಿಂದ ಬಂದ ನಟಿ

ನಟಿ ಕೃತ್ತಿಕಾ ರವೀಂದ್ರ ಅವರು ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದವರು. 2008ರಲ್ಲೇ ಚಿತ್ರರಂಗದ ಜೊತೆ ನಂಟು ಬೆಳೆಸಿಕೊಂಡ ಕೃತ್ತಿಕಾ ಹೆಚ್ಚು ಜನಪ್ರಿಯರಾಗಿದ್ದ ರಾಧಾ ಕಲ್ಯಾಣ ಧಾರಾವಾಹಿ ಮೂಲಕ. ಆನಂತರ ಬಿಗ್‌ ಬಾಸ್‌ ಕನ್ನಡ ಸೀಸನ್‌ 3ರಲ್ಲಿ ಸ್ಪರ್ಧಿ ಕೂಡ ಆಗಿದ್ದ ಅವರು, ಇನ್ನಷ್ಟು ಫೇಮಸ್‌ ಆದರು. ಸದ್ಯ ಜೀ ಕನ್ನಡ ವಾಹಿನಿಯ ಭೂಮಿಗೆ ಬಂದ ಭಗವಂತ ಸೀರಿಯಲ್‌ನಿಂದ ಮತ್ತೆ ಕಿರುತೆರೆಯಲ್ಲಿ ಮೋಡಿ ಮಾಡುತ್ತಿರುವ ಕೃತ್ತಿಕಾ ರವೀಂದ್ರ,. ಇದೀಗ ಬೆಂಗಳೂರಿನಲ್ಲಿ ಹೊಸ ಮನೆಯ ಗೃಹ ಪ್ರವೇಶ ಮಾಡಿದ್ದಾರೆ.

ಕೃತ್ತಿಕಾ ರವೀಂದ್ರ ನಟನೆಯ ʻರಾಜನಿವಾಸʼ ಚಿತ್ರವನ್ನು ʻಕಾಂತಾರʼದ ಜೊತೆ ಹೋಲಿಕೆ; ಟ್ರೇಲರ್‌ ನೋಡಿ ಕಾಮೆಂಟ್‌ ಮಾಡಿದವರಿಗೆ ನಿರ್ದೇಶಕರ ಉತ್ತರ!

ಯಾರಿಗೆ ಆಗಲಿ ಬೆಂಗಳೂರಿನಲ್ಲಿ ಸ್ವಂತ ಮನೆಯನ್ನು ಹೊಂದಬೇಕು ಎಂಬ ಆಸೆ ಇದ್ದೇ ಇರುತ್ತದೆ. ಇಷ್ಟೊಂದು ವರ್ಷಗಳ ಕಾಲ ಬಣ್ಣದ ಲೋಕದಲ್ಲಿ ಸಕ್ರಿಯವಾಗಿದ್ದ ಕೃತ್ತಿಕಾಗೂ ತಮ್ಮದೇ ಆದ ಒಂದು ಮನೆಯನ್ನು ಮಾಡಿಕೊಳ್ಳಬೇಕು ಎಂಬ ಆಸೆ ಇತ್ತು. ಅದೀಗ ನೆರವೇರಿದೆ. ಈಚೆಗೆ ತಮ್ಮ ಮನೆಯ ಗೃಹಪ್ರವೇಶ ಮಾಡಿದ್ದಾರೆ. ಅದರ ವಿಡಿಯೋವನ್ನು ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ದೈವಭಕ್ತೆಯಾಗಿರುವ ಕೃತ್ತಿಕಾ ರವೀಂದ್ರ

ಕೃತ್ತಿಕಾ ರವೀಂದ್ರ ಅವರು ದೈವಭಕ್ತೆ. ಹೆಚ್ಚು ದೇವರನ್ನು ನಂಬುವ ಅವರು, ಆಗಾಗ ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡುತ್ತಾರೆ. ಈಚೆಗೆ ಒಂದೇ ವರ್ಷದಲ್ಲಿ 12 ಜ್ಯೋತಿರ್ಲಿಂಗ ದರ್ಶನ ಮಾಡಿದ್ಧಾರೆ. ಅಂದಹಾಗೆ, ತಮ್ಮ ಹೊಸ ಮನೆಗೆ ಅವರು ʻಶಿವ ಶಕ್ತಿʼ ಎಂದು ಹೆಸರಿಟ್ಟಿದ್ದಾರೆ. ಈ ಹೆಸರನ್ನು ಇಡುವುದಕ್ಕೂ ಒಂದು ಕಾರಣವಿದೆ. ಅವರು ಶಿವ ಮತ್ತು ಶಕ್ತಿಗೆ ತುಂಬಾ ಕನೆಕ್ಟ್‌ ಆಗುತ್ತಾರೆ. ಆ ಕಾರಣಕ್ಕೇ ಮನೆಗೆ ಅದೇ ಹೆಸರನ್ನು ಇಟ್ಡಿದ್ದಾರೆ.

ನಟಿ ಕೃತ್ತಿಕಾ ರವೀಂದ್ರ ಅವರ ಹೊಸ ಮನೆ

ಅಂದಹಾಗೆ, ಕೃತ್ತಿಕಾ ಅವರಿಗೆ ತಂದೆ ಇಲ್ಲ. 16 ವರ್ಷಗಳ ಹಿಂದೆಯೇ ಅವರು ನಿಧನರಾಗಿದ್ದಾರೆ. ಸರ್ಕಾರಿ ಶಾಲೆಯ ಶಿಕ್ಷಕಿಯಾಗಿ ಸೇವೆ ಸಲ್ಲಿಸಿ, ಈಗ ನಿವೃತ್ತಿಯಾಗಿರುವ ತಮ್ಮ ತಾಯಿಯನ್ನು ತನ್ನ ಕುಟುಂಬದ ಶಕ್ತಿ ಎಂದು ಕರೆಯುತ್ತಾರೆ ಕೃತ್ತಿಕಾ. ಒಳ್ಳೆಯ ಪಾರ್ಟನರ್‌ ಸಿಕ್ಕರೆ ಆದಷ್ಟು ಮದುವೆ ಆಗುವ ಯೋಚನೆಯೂ ಕೃತ್ತಿಕಾ ಅವರಿಗೆ ಇದೆ. ಸದ್ಯ ʻರಾಜನಿವಾಸ’ ಸಿನಿಮಾದಲ್ಲಿ ಪೊಲೀಸ್‌ ಅಧಿಕಾರಿಯಾಗಿ ನಟಿಸಿದ್ದು, ಆ ಸಿನಿಮಾ ತೆರೆಗೆ ಬರಬೇಕಿದೆ. ಜೊತೆಗೆ ಹೊಸ ಧಾರಾವಾಹಿಯೊಂದರಲ್ಲಿಯೂ ಅವರು ನಟಿಸುತ್ತಿದ್ದಾರೆ.