ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ʻಟ್ಯಾಟೂ ಹಾಕಿಸಿಕೊಳ್ಳಬೇಡಿ, ನಂಗೆ ಬೇಜಾರ್‌ ಆಗತ್ತೆʼ; ದಿಢೀರ್‌ ಅಂತ ʻಬಿಗ್ ಬಾಸ್ʼ ಖ್ಯಾತಿಯ ಕಾವ್ಯ ಶೈವ ಹೀಗೆ ಹೇಳಿದ್ದೇಕೆ?

Bigg Boss Kannada 12 Kavya Shaiva: ಬಿಗ್‌ ಬಾಸ್‌ ಕನ್ನಡ 12ರಲ್ಲಿ 3ನೇ ರನ್ನರ್ ಅಪ್ ಆಗಿ ಹೊರಹೊಮ್ಮಿದ ಕಾವ್ಯ ಇದೀಗ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಅಭಿಮಾನಿಗಳಿಗೆ ವಿಶೇಷ ಮನವಿ ಮಾಡಿದ್ದಾರೆ. ಅಭಿಮಾನಿಗಳು ತಮ್ಮ ಮೇಲಿರುವ ಪ್ರೀತಿಯಿಂದಾಗಿ ಮೈಮೇಲೆ ಕಾವ್ಯ ಹೆಸರಿನ ಟ್ಯಾಟೂ ಹಾಕಿಸಿಕೊಳ್ಳುತ್ತಿರುವುದನ್ನು ಕಂಡು ಬೇಸರ ವ್ಯಕ್ತಪಡಿಸಿದ್ದಾರೆ.

ʻಟ್ಯಾಟೂ ಹಾಕಿಸಿಕೊಳ್ಳಬೇಡಿʼ; ʻಬಿಗ್ ಬಾಸ್ʼ ಕಾವ್ಯ ಶೈವ ಕಳಕಳಿಯ ಮನವಿ

-

Avinash GR
Avinash GR Feb 3, 2026 3:10 PM

ಬಿಗ್‌ ಬಾಸ್‌ ಕನ್ನಡ ಸೀಸನ್‌ 12ರಲ್ಲಿ 3ನೇ ರನ್ನರ್‌ ಅಪ್‌ ಆಗಿ ಹೊರಹೊಮ್ಮಿದ ಕಾವ್ಯ ಶೈವ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಒಂದು ವಿಡಿಯೋವನ್ನು ಹಂಚಿಕೊಂಡು, ಮನವಿಯೊಂದನ್ನು ಮಾಡಿಕೊಂಡಿದ್ದಾರೆ. ಮುಖ್ಯವಾಗಿ ತಮ್ಮ ಹೆಸರನ್ನು ಟ್ಯಾಟೂ ಹಾಕಿಸಿಕೊಳ್ಳುತ್ತಿರುವವರ ಬಗ್ಗೆ ಕಾವ್ಯ ಮಾತನಾಡಿದ್ದು, "ಟ್ಯಾಟೂ ಹಾಕಿಸಿಕೊಳ್ಳಬೇಡಿ, ನಂಗೆ ಬೇಜಾರ್‌ ಆಗತ್ತೆ" ಎಂದು ಕಾವ್ಯ ಹೇಳಿದ್ದಾರೆ.

ಕಾವ್ಯ ಹಂಚಿಕೊಂಡ ವಿಡಿಯೋದಲ್ಲಿ ಏನಿದೆ?

"ಈ ವಿಡಿಯೋವನ್ನು ನಾನು ತಡವಾಗಿ ಮಾಡುತ್ತಿದ್ದೇನೆ. ಕಾರಣ, ಬಿಗ್‌ಬಾಸ್‌ ಮನೆಯಿಂದ ಹೊರ ಬಂದಮೇಲೆ ನನಗೆ ಇಷ್ಟೊಂದು ಜನರ ಪ್ರೀತಿ ಸಿಕ್ಕಿದೆ ಅಂತ ಊಹಿಸಿರಲಿಲ್ಲ. ಹಾಗಾಗಿ, ಅದನ್ನ ಅರಗಿಸಿಕೊಳ್ಳಲು ನನಗೆ ಸ್ವಲ್ಪ ಸಮಯ ಬೇಕಾಯಿತು. ಮೊದಲನೆಯದಾಗಿ ನನಗೆ ಈ ಅವಕಾಶ ನೀಡಿದ ಕಲರ್ಸ್‌ ಕನ್ನಡಕ್ಕೆ ಧನ್ಯವಾದಗಳು" ಎಂದು ಕಾವ್ಯ ಹೇಳಿಕೊಂಡಿದ್ದಾರೆ.

Bigg Boss Kannada 12: ʻಅಶ್ವಿನಿ ಗೌಡ 2.O ವರ್ಷನ್ ನಾಟಕʼ! ಏಕವಚನಕ್ಕೆ ತಿರುಗಿದ ಕಾವ್ಯ-ಅಶ್ವಿನಿ ಗೌಡ ಜಗಳ

ನಿಮ್ಮ ಶ್ರಮಕ್ಕೆ ಹ್ಯಾಟ್ಸ್‌ ಆಫ್‌

"ಪ್ರಾಮಾಣಿಕವಾಗಿ ಹೇಳುತ್ತಿದ್ದೇನೆ, ಪಿಆರ್‌ಗಳು ಇಲ್ಲದೇ ಜನರಿಗೆ ರೀಚ್‌ ಆಗೋಕೆ ಆಗಲ್ಲ, ಶೋ ಒಳಗಡೆ ಇರೋಕೆ ಆಗಲ್ಲ ಅಂತ ಹೇಳಿದ್ದರು. ಆದರೆ ನಾನು ಧೈರ್ಯ ಮಾಡಿ, ನನಗೆ ಎಷ್ಟು ದಿನ ಆಗುತ್ತೋ ಅಷ್ಟು ದಿನ ಇದ್ದುಬರೋಣ ಅಂದುಕೊಂಡು ಹೋದೆ. ಹೊರಗಡೆ ಬಂದು ನೋಡಿದಾಗ ಆ ಪ್ರೀತಿಗೆ ಏನು ಹೇಳಲಿ? ನೀವು ಪ್ರತಿಯೊಂದು ಫೋಟೋ, ವಿಡಿಯೋಗೆ ಹಾಕಿರುವ ಶ್ರಮಕ್ಕೆ ಹ್ಯಾಟ್ಸ್‌ ಆಫ್‌. ಎಷ್ಟೊಂದು ಜನ ನೀನು ನನ್ನ ಮಗಳ ಥರ ಅಂತ ಸೀರೆ ಅರಿಶಿಣ ಕುಂಕುಮ ನೀಡಿದ್ರಲ್ಲ, ಅದು ನನಗೆ ತುಂಬಾ ಖುಷಿ ನೀಡಿದೆ" ಎಂದು ಕಾವ್ಯ ಹೇಳಿದ್ದಾರೆ.

ಕಾವ್ಯ ಹಂಚಿಕೊಂಡ ವಿಡಿಯೋ

ಟ್ಯಾಟೂ ಹಾಕಿಸಿಕೊಳ್ಳಬೇಡಿ

''ಟ್ಯಾಟೂ ಹಾಕಿಸಿಕೊಳ್ಳುತ್ತಿರುವವರ ಬಗ್ಗೆ ನಾನು ಮಾತಾಡಬೇಕು. ನಾನು ಇದನ್ನು ಪ್ರೋತ್ಸಾಹಿಸುವುದಿಲ್ಲ, ಬೆಂಬಲಿಸಲ್ಲ. ಜೀವನಪೂರ್ತಿ ನಿಮ್ಮ ಸ್ಕಿನ್‌ ಮೇಲೆ ಆ ಟ್ಯಾಟೂ ಇರುತ್ತೆ. ಒಬ್ಬರು ನಮ್ಮ ಟ್ಯಾಟೂ ಹಾಕಿಸಿಕೊಂಡಿದ್ದಾರೆ ಅಂದಾಗ ಖುಷಿ ಆಗುತ್ತೆ. ಜೊತೆಗೆ ಬೇಜಾರು ಕೂಡ ಆಗುತ್ತೆ. ಟ್ಯಾಟೂ ಹಾಕಿಸಿಕೊಳ್ಳುವುದು ಬೇಡ. ನೀವು ನಮ್ಮ ಹತ್ತರ ಬಂದು ಪ್ರೀತಿ, ಖುಷಿಯಿಂದ ಮಾತಾಡ್ತಿರಲ್ಲ. ಅದಕ್ಕಿಂತ ಬೇರೆ ಏನೂ ಬೇಡ. ದಯವಿಟ್ಟು ಆ ತರಹದೊಂದು ನಿರ್ಧಾರ ಮಾಡೋದು ಬೇಡ ಅಂತ ಕೇಳಿಕೊಳ್ತಿದ್ದೀನಿ" ಎಂದಿದ್ದಾರೆ ಕಾವ್ಯ ಶೈವ.