ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

BBK 12: ಮಿಸ್ಟೇಕ್‌ ಮಾಡಿದ ಸ್ಪರ್ಧಿಗಳಿಗೆ ಹೊಸ ಅಧಿಕಾರ ಕೊಟ್ಟ ʻಕಿಚ್ಚʼ ಸುದೀಪ್;‌ ಇದು ಜಾರಿಯಾಗುತ್ತಾ?

BBK 12 Ashwini Gowda: ಬಿಗ್ ಬಾಸ್ ಮನೆಯಲ್ಲಿ ಏಕವಚನ ಬಳಕೆಯಿಂದ ದೊಡ್ಡ ಜಗಳಗಳು ನಡೆಯುತ್ತಿದ್ದ ಬಗ್ಗೆ ಕಿಚ್ಚ ಸುದೀಪ್ ಅವರು ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ನಿರ್ದಿಷ್ಟವಾಗಿ ಅಶ್ವಿನಿ ಗೌಡ ಅವರ ಸುದೀಪ್ ಪ್ರಶ್ನೆ ಮಾಡಿದ್ದಾರೆ. "ಗೌರವವು ಏಕಪಕ್ಷೀಯವಾಗಿರಲು ಸಾಧ್ಯವಿಲ್ಲ" ಎಂದು ಹೇಳಿದ ಕಿಚ್ಚ ಸುದೀಪ್‌ ಸ್ಪರ್ಧಿಗಳು ಹೊಸ ಅಧಿಕಾರವನ್ನು ಕೊಟ್ಟಿದ್ದಾರೆ.

Bigg Boss 12: ಸ್ಪರ್ಧಿಗಳಿಗೆ ʻಕಿಚ್ಚʼ ಸುದೀಪ್‌ ಕೊಟ್ಟ ಹೊಸ ಅಧಿಕಾರ ಏನು?

-

Avinash GR
Avinash GR Nov 23, 2025 4:44 PM

ಬಿಗ್‌ ಬಾಸ್‌ ಮನೆಯಲ್ಲಿ ಏಕವಚನ ಬಳಕೆಯಿಂದಲೇ ದೊಡ್ಡ ಜಗಳ ನಡೆಯುತ್ತಿವೆ. ಅದರಲ್ಲೂ ಏಕವಚನ ಬಳಕೆಯಿಂದಲೇ ದೊಡ್ಡ ದೊಡ್ಡ ಜಗಳಗಳು ನಡೆದಿವೆ. ಅಶ್ವಿನಿ ಗೌಡ ಅವರು ಈ ವಾರ ಹೆಚ್ಚು ಸುದ್ದಿಯಾಗಿದ್ದೆ ಏಕವಚನ ಬಳಕೆಯಿಂದಾದ ಜಗಳದಿಂದ. ಕಿಚ್ಚ ಸುದೀಪ್‌ ಅವರು ಈ ಹಿಂದೆಯೇ ಈ ಬಗ್ಗೆ ಎಚ್ಚರಿಸಿದ್ದರು. ಆದರೆ ಅದನ್ನು ಗಂಭೀರವಾಗಿ ತೆಗೆದುಕೊಳ್ಳದ ಸ್ಪರ್ಧಿಗಳು ಇದೀಗ ಅದರಿಂದಲೇ ದೊಡ್ಡ ಕಿತ್ತಾಟ ಮಾಡಿಕೊಂಡಿದ್ದಾರೆ.

ಸುದೀಪ್‌ ಏನು ಹೇಳಿದ್ದರು?

ಬಿಗ್‌ ಬಾಸ್ ಆರಂಭದಲ್ಲೇ ಕಿಚ್ಚ ಸುದೀಪ್‌ ಅವರು ಸ್ಪರ್ಧಿಗಳಿಗೆ ಕಿವಿಮಾತು ಹೇಳಿದ್ದರು. ಏಕವಚನ ಬಳಕೆ ಮಾಡಬೇಡಿ ಎಂದಿದ್ದರು. ಆದರೆ ಸ್ಪರ್ಧಿಗಳನ್ನು ಅದನ್ನು ಪಾಲಿಸಲಿಲ್ಲ. ಇದೀಗ ಆ ಬಗ್ಗೆ ಗರಂ ಆಗಿರುವ ಕಿಚ್ಚ, "ಏನು ದೊಡ್ಡಪ್ಪ - ಚಿಕ್ಕಪ್ಪನ ಮಕ್ಕಳಾ ನೀವೆಲ್ಲರು.." ಎಂದಿದ್ದಾರೆ.

ಅಲ್ಲದೆ, ನನ್ನ ಏಕವಚನದಲ್ಲಿ ಮಾತನಾಡಿಸಬಾರದು ಎಂದಿರುವ ಅಶ್ವಿನಿ ಗೌಡಗೆ, "ಕೆಲವರಿಗೆ ಮಾತ್ರ ಹೋಗಿ ಬನ್ನಿ, ಇನ್ನೂ ಕೆಲವರಿಗೆ ಹೋಗೆ ಬಾರೆ ಅಂತೀರಿ. ನೀವ್ ನೀವೇ ಡಿಸೈಡ್‌ ಮಾಡ್ತೀರಾ? ನಾನು ಇವರ ಹತ್ತಿರ ಮಾತ್ರ ಹೋಗಿ, ಬನ್ನಿ ಅಂತೆನಿಸಿಕೊಳ್ಳಬೇಕು ಅಂತಂದ್ರೆ ಹೆಂಗೆ? ಗೌರವವು ಏಕಪಕ್ಷೀಯವಾಗಿರಲು ಸಾಧ್ಯವಿಲ್ಲ. ನಿಮಗೆ ಹೋಗಿ, ಬನ್ನಿ ಅಂತ ಎಲ್ಲರಿಂದ ಕರೆಸಿಕೊಳ್ಳಬೇಕು ಎಂದರೆ, ಪ್ರತಿಯೊಂದು ಚಿಕ್ಕ ಮಗುವಿಗೂ ಗೌರವದಿಂದ ಕರೆಯೋದನ್ನು ಕಲಿಯಿರಿ” ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ.

ಅಧಿಕಾರ ಕೊಟ್ಟ ಕಿಚ್ಚ

"ಅಶ್ವಿನಿ ಗೌಡ ಅವರೇ ನಿಮಗೆ ಯಾರಾದರೂ ಗೌರವ ಕೊಡಬೇಕು ಅಂದ್ರೆ, ಮೊದಲು ನೀವು ಹೋಗಿ-ಬನ್ನಿ ಅಂತ ಗೌರವದಿಂದ ಕರೆಯಿರಿ. ಇಲ್ಲಂದ್ರೆ, ಈ ವಾರದಿಂದ ಈ ಮನೆಗೆ ನಾನೇ ಅಧಿಕಾರ ಕೊಡ್ತಿದ್ದೇನೆ, ಯಾರು ನಿಮಗೆ ಹೋಗೋ ಬಾರೋ ಅಂತಾರೋ, ಅವರನ್ನ ಹೋಗೇ ಬಾರೆ ಅಂತಲೇ ಕರೀರಿ. ಏನೂ ತಪ್ಪಿಲ್ಲ" ಎಂದು ಸುದೀಪ್‌ ಹೇಳಿದ್ದಾರೆ. ಅಲ್ಲದೆ, ಎಲ್ಲರಿಗೂ ಬೆರಳು ತೋರಿಸುವ ಮಾತನಾಡುವ ಬಗ್ಗೆಯೂ ಅಶ್ವಿನಿಗೆ ಠಕ್ಕರ್‌ ಕೊಟ್ಟಿದ್ದಾರೆ ಸುದೀಪ್.

BBK 12: ಬಿಗ್ ಬಾಸ್ ಕಾಲೇಜ್​ನಲ್ಲಿ ಅಶ್ವಿನಿ ಗೌಡ-ಜಾನ್ವಿಯಿಂದ ಪ್ರೀತಿಯ ವಿವರಣೆ

ಇನ್ಮೇಲಾದರೂ ಏಕವಚನ ಬಳಸಿ ಮಾತನಾಡುವ ಸ್ಪರ್ಧಿಗಳು ಬದಲಾಗುತ್ತಾರಾ ಎಂಬುದನ್ನು ಕಾದುನೋಡಬೇಕು. ಅಥವಾ ಸುದೀಪ್‌ ಅವರು ಏಕವಚನದಲ್ಲಿ ಮಾತನಾಡುವ ಅಧಿಕಾರ ನೀಡಿದ್ದಾರೆ ಎಂದು ಇನ್ನಷ್ಟು ಜಾಸ್ತಿ ಮಾಡುತ್ತಾರೆ? ಗೊತ್ತಿಲ್ಲ. ಆದರೆ ಸ್ಪರ್ಧಿಗಳು ಸುದೀಪ್‌ ಹೇಳಿದ ಮಾತಿನ ಮರ್ಮವನ್ನು ಅರ್ಥ ಮಾಡಿಕೊಂಡು ತಿದ್ದಿಕೊಳ್ಳುವುದು ಮುಖ್ಯವಾಗಿದೆ. ಈ ವಾರ ಅಶ್ವಿನಿ ಗೌಡ ದೊಡ್ಡ ರಂಪಾಟ ಮಾಡಿದ್ದರಿಂದ ಹಿಂದೆ ಏಕವಚನ ಬಳಕೆಯದ್ದೇ ದೊಡ್ಡ ಪಾತ್ರವಿತ್ತು. ಅವರು ಆ ರೀತಿ ನಡೆದುಕೊಂಡಿದ್ದರಿಂದಲೇ ಮನೆಯ ನೆಮ್ಮದಿ ಕೂಡ ಹಾಳಾಗಿತ್ತು.