BBK 12: ʻನಗಾಡ್ತಿರಲ್ರೀ, ಜನಕ್ಕೆ ನೀವು ಹೇಗೆ ಕಾಣಿಸ್ತೀರಿ ಗೊತ್ತಾ?ʼ; ಅದೊಂದು ತಪ್ಪಿಗಾಗಿ ಅಶ್ವಿನಿ - ಜಾಹ್ನವಿಗೆ ಕಿಚ್ಚನ ಸಖತ್ ಕ್ಲಾಸ್!
Bigg Boss Kannada 12 Kichcha Sudeep: ಈ ವಾರದ 'ಕಿಚ್ಚನ ಪಂಚಾಯತಿ'ಯಲ್ಲಿ ಅಶ್ವಿನಿ ಗೌಡ ಮತ್ತು ಜಾಹ್ನವಿಗೆ ಸುದೀಪ್ ಸಖತ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಪದೇಪದೇ ಪಿಸುದನಿಯಲ್ಲಿ ಮಾತಾಡಿ ರೂಲ್ಸ್ ಬ್ರೇಕ್ ಮಾಡಿ, ಶಿಕ್ಷೆ ಅನುಭವಿಸಿದ ಮೇಲೆಯೂ ನಕ್ಕಿದ್ದಕ್ಕೆ ಜಾಹ್ನವಿಗೆ ಕಿಚ್ಚ ಗರಂ ಆದರು. "ರೂಲ್ಸ್ ಬ್ರೇಕ್ ಮಾಡಿ ನಗ್ತಿರಲ್ರೀ, ಜನಕ್ಕೆ ನೀವು ಹೇಗೆ ಕಾಣಿಸ್ತೀರಿ ಗೊತ್ತಾ?" ಎಂದು ಪ್ರಶ್ನಿಸಿದರು.
-
ಕಿಚ್ಚ ಸುದೀಪ್ ಅವರು ಕಿಚ್ಚನ ಪಂಚಾಯಿತಿಯಲ್ಲಿ ಅಶ್ವಿನಿ ಗೌಡ ಅವರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಅಶ್ವಿನಿ ಗೌಡ ಜೊತೆ ಜಾಹ್ನವಿಗೂ ಕ್ಲಾಸ್ ತೆಗೆದುಕೊಂಡಿದ್ದಾರೆ. ಮನೆಯ ರೂಲ್ಸ್‌ನ ಪದೇಪದೇ ಬ್ರೇಕ್ ಮಾಡಿದ್ದರಿಂದ ಈಗಾಗಲೇ ಬಿಗ್ ಬಾಸ್ ಶಿಕ್ಷೆಯನ್ನು ಕೂಡ ನೀಡಿದ್ದರು. "ಬಿಗ್ ಬಾಸ್ ಮನೆಯ ರೂಲ್ಸ್ ಬ್ರೇಕ್ ಮಾಡೋದು ನಿಮಗೆ ಅಷ್ಟೊಂದು ಸರಳ ಆಗೋಯ್ತಾ" ಎಂದು ಚಾಟಿ ಬೀಸಿದ್ದಾರೆ.
ರೂಲ್ಸ್ ಬ್ರೇಕ್ ಮಾಡಿ ನಗ್ತಿರಲ್ರೀ?
ಬಿಗ್ ಬಾಸ್ ಮನೆಯಲ್ಲಿ ಪಿಸುದನಿಯಲ್ಲಿ ಮಾತನಾಡಬೇಡಿ ಎಂದು ಜಾಹ್ನವಿ ಮತ್ತು ಅಶ್ವಿನಿ ಗೌಡ ಪದೇಪದೇ ಹೇಳಲಾಗಿದೆ. ಆದರೂ ಅವರಿಬ್ಬರು ಅದನ್ನು ಕಂಟಿನ್ಯೂ ಮಾಡಿದ್ದಾರೆ. ಈ ವಾರ ಅವರನ್ನು ಅದೇ ಕಾರಣಕ್ಕೆ ಡೈರೆಕ್ಟ್ ನಾಮಿನೇಟ್ ಮಾಡಲಾಗಿದೆ. ಆದರೂ ಅವರು ಬುದ್ದಿ ಕಲಿತಂತೆ ಕಾಣುತ್ತಿಲ್ಲ. ಶಿಕ್ಷೆ ಪಡೆದ ಮೇಲೂ ಅವರು ಪಿಸು ದನಿಯಲ್ಲಿ ಮಾತನಾಡಿದ್ದಾರೆ. ಆಗ ಬಿಗ್ ಬಾಸ್ ಮತ್ತೊಮ್ಮೆ ವಾರ್ನ್ ಮಾಡಿದ್ದರು. ಆಗ ಜಾಹ್ನವಿ ನಕ್ಕಿದ್ದರು. ಆ ಬಗ್ಗೆ ಮಾತಾಡಿದ ಸುದೀಪ್, "ರೂಲ್ಸ್ ಬ್ರೇಕ್ ಮಾಡಬೇಡಿ ಅಂದ್ರೆ ನಗಾಡ್ತಿರಲ್ರೀ ಜಾಹ್ನವಿ. ಹೊರಗಡೆ ಜನರಿಗೆ ನೀವು ಹೇಗೆ ಕಾಣಿಸ್ತೀರಿ ಗೊತ್ತಾ" ಎಂದು ಗರಂ ಆಗಿದ್ದಾರೆ ಕಿಚ್ಚ.
ಪಿಸುದನಿಯಲ್ಲಿ ಮಾತಾಡಬಾರದು ಅಂತ ಗೊತ್ತಿಲ್ವಾ?
"ಪಿಸುದನಿಯಲ್ಲಿ ಮಾತನಾಡುವಂತಿಲ್ಲ ಎಂಬುದು ಗೊತ್ತಿಲ್ವಾ ಜಾಹ್ನವಿ? ರೂಲ್ಸ್ ಬ್ರೇಕ್ ಮಾಡಿದ್ದನ್ನ ಪ್ರಶ್ನೆ ಮಾಡಿದ್ರೆ ಕ್ಯಾಮೆರಾ ಮುಂದೆ ಬಂದು ಏನಾದರೂ ಸಬೂಬು ಕೊಡ್ತೀರಿ. ಆದರೆ ಅದು ನಿಜವಲ್ಲ. ನಾವು ಜಾಸ್ತಿ ಡಿಟೇಲ್‌ಗೆ ಹೋಗಲ್ಲ. ಪಿಸುದನಿಯಲ್ಲಿ ಮಾತನಾಡಬಾರದು ಎಂದು ಬಿಗ್ ಬಾಸ ವಾರ್ನಿಂಗ್ ಮಾಡಿರಲಿಲ್ಲವ? ಜೊತೆಗೆ ಜಗಳವಾದರೆ ಅದನ್ನು ಸಮಾಧಾನ ಮಾಡೋಕೆ ಟ್ರೈ ಮಾಡಿ. ಆದರೆ ನೀವು ಅಶ್ವಿನಿ ಬಳಿ ಅದನ್ನು ಮಾಡಲಿಲ್ಲ" ಎಂದು ಕಿಚ್ಚ ಗರಂ ಆಗಿದ್ದಾರೆ.
BBK 12: ಅಶ್ವಿನಿ ಗೌಡ-ಜಾನ್ವಿ ಮಧ್ಯೆ ಕಿತ್ತಾಟ: ಬೇರೆ-ಬೇರೆಯಾದ ಜೋಡೆತ್ತುಗಳು
ಜಗಳನ್ನು ನಿಲ್ಲಿಸಿ, ಜಾಸ್ತಿ ಮಾಡಬೇಡಿ
"ಎರಡು ದೇಶಗಳ ಮಧ್ಯೆ ಜಗಳ ಆಗುತ್ತಿದ್ದಾರೆ, ಮೂರನೇ ದೇಶ ಅದನ್ನು ನಿಲ್ಲಿಸೋಕೆ ಟ್ರೈ ಮಾಡಬೇಕು. ಅದನ್ನು ಇನ್ನು ಉರಿಸಬಾರದು. ಬೆಂಕಿಯನ್ನು ನೀರಿನಿಂದ ಆರಿಸಲು ಸಾಧ್ಯವಾಗದೇ ಇದ್ದರೆ ಸುಮ್ಮನೆ ಇರಿ. ಅದು ಇನ್ನಷ್ಟು ಜೋರಾಗಿ ಉರಿಯುವಂತೆ ಮಾಡಬೇಡಿ, ಸುಮ್ಮನೆ ಇದ್ದು ಬಿಡಿ. ಯಾಕೆಂದರೆ ಜಗಳ ಅದಷ್ಟಕ್ಕೆ ಅದೇ ಸುಮ್ಮನಾಗಿಬಿಡುತ್ತದೆ" ಎಂದು ಜಾಹ್ನವಿಗೆ ಕಿವಿಮಾತು ಹೇಳಿದ್ದಾರೆ ಕಿಚ್ಚ ಸುದೀಪ್.
ಅಶ್ವಿನಿಗೂ ಸಖತ್ ಕ್ಲಾಸ್
ಅಂದಹಾಗೆ, ಅಶ್ವಿನಿ ಗೌಡ ಮಾಡಿದ ಹಲವು ತಪ್ಪುಗಳನ್ನು ಕೂಡ ಸುದೀಪ್ ಪ್ರಶ್ನೆ ಮಾಡಿದರು. ವುಮೆನ್ ಕಾರ್ಡ್ ಪ್ಲೇ ಮಾಡಬೇಡಿ ಎಂದು ವಾರ್ನಿಂಗ್ ನೀಡಿದರು. ಬಿಗ್ ಬಾಸ್ ಮನೆಯಲ್ಲಿ ಮಹಿಳಾ ಸ್ಪರ್ಧಿಗಳು ಅಶ್ವಿನಿ ಬಳಿ ತಮ್ಮ ಗೌರವ, ಮಾನವನ್ನು ಕಾಪಾಡಿ ಎಂದು ಗುತ್ತಿಗೆ ಕೊಟ್ಟಿದ್ದೀರಾ ಎಂದು ಪ್ರಶ್ನೆ ಮಾಡಿದರು. ಆಗ ಎಲ್ಲರು ಇಲ್ಲ ಎಂದೇ ಹೇಳಿದರು. ಈ ಮೂಲಕ ಅಶ್ವಿನಿ ಗೌಡಗೆ ಇನ್ನಷ್ಟು ಟಾಂಗ್ ನೀಡಿದರು ಕಿಚ್ಚ.