BBK 12: 'ಗಿಲ್ಲಿ ಸೊಂಟ ನೋಡಿದ್ರೆ 3 ದಿನ ಊಟ ಸೇರಲ್ಲ'; ಧನುಷ್ ಹಿಂಗೆಲ್ಲಾ ಮಾತಾಡ್ಬೋದಾ? ಇದು ವೀಕ್ಷಕರ ಅಸಮಾಧಾನಕ್ಕೆ ಕಾರಣವಾಯ್ತಾ?
Bigg Boss Kannada 12 Gilli Nata: ಗಿಲ್ಲಿ ನಟ ಅವರು ಸೀರೆಯುಟ್ಟು, ಹೈಹೀಲ್ಸ್ ತೊಟ್ಟು ಮನೆಯೊಳಗೆ ಓಡಾಡಿದ್ದಾರೆ. ಅತಿಥಿಗಳನ್ನು ಎಂಟರ್‌ಟೇನ್ ಮಾಡಲು ಗಿಲ್ಲಿ ಹೀಗೆ ಮಾಡಿದ್ದಾರೆ. ಆದರೆ ಧನುಷ್ ಮಾತ್ರ ಗಿಲ್ಲಿಯ ಸೊಂಟದ ಬಗ್ಗೆ ಅಸಭ್ಯವಾಗಿ ಕಾಮೆಂಟ್ ಮಾಡಿದ್ದಾರೆ. ಇದು ವೀಕ್ಷಕರ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ.
-
ಬಿಗ್ ಬಾಸ್ ಮನೆಯಲ್ಲಿ ಒನ್ ಮ್ಯಾನ್ ಶೋನಂತೆ ಕಂಗೊಳಿಸುತ್ತಿರುವ ಗಿಲ್ಲಿ ನಟ ಈಗ ಎಲ್ಲರ ಟಾರ್ಗೆಟ್ ಆಗಿರುವುದು ಗೊತ್ತೇ ಇದೆ. ಹೊರಗಿನಿಂದ ಬಂದ ಅತಿಥಿಗಳು ಕೂಡ ಗಿಲ್ಲಿಯನ್ನೇ ಗುರುಯಾಗಿಸಿಕೊಂಡಿದ್ದರು. ಮನೆಯೊಳಗೆ ಇರುವ ಇತರೆ ಸದಸ್ಯರು ಕೂಡ ಗಿಲ್ಲಿ ಬಗ್ಗೆ ಒಂದಲ್ಲಾ ಒಂದು ರೀತಿಯಲ್ಲಿ ಕೊಂಕು ನುಡಿಯುತ್ತಲೇ ಇರುತ್ತಾರೆ. ಇದೀಗ ಗಿಲ್ಲಿ ನಟ ಸೊಂಟದ ಬಗ್ಗೆ ಧನುಷ್ ಕಾಮೆಂಟ್ ಮಾಡಿರುವುದು ವೀಕ್ಷಕರಲ್ಲಿ ಬೇಸರ ಮೂಡಿಸಿದೆ.
ಸ್ತ್ರೀ ವೇಷ ಧರಿಸಿದ ಗಿಲ್ಲಿ
ಬಿಬಿ ಪ್ಯಾಲೇಸ್‌ಗೆ ಬಂದಿರುವ ಅತಿಥಿಗಳಿಗೆ ಮನರಂಜನೆ ಮಾಡಬೇಕಿತ್ತು. ಹಾಗಾಗಿ, ಗಿಲ್ಲಿ ನಟಗೆ ಸ್ತ್ರೀ ವೇಷ ಹಾಕಿಸಲಾಗಿದೆ. ಹಾಗಾಗಿ, ಗಿಲ್ಲಿ ನಟ ಸೀರೆಯುಟ್ಟು ಸ್ತ್ರೀ ವೇಷದಲ್ಲಿ ಕಾಣಿಸಿಕೊಂಡಿದ್ದು, ಮೇಕಪ್ ಮಾಡಿಕೊಂಡು, ಹೈಹೀಲ್ಸ್ ಚಪ್ಪಲಿ ಹಾಕಿಕೊಂಡು ಮನೆ ತುಂಬಾ ಓಡಾಡಿದ್ದಾರೆ. ಮನೆಯವರಿಗಾಗಿ ಗಿಲ್ಲಿ ಇದನ್ನೆಲ್ಲಾ ಮಾಡಿದ್ದಾರೆ.
ಸೊಂಟದ ಬಗ್ಗೆ ಕೆಟ್ಟ ಕಾಮೆಂಟ್
ಗಿಲ್ಲಿ ನಟ ಹಾಕಿಕೊಂಡಿದ್ದ ಹುಡುಗಿಯ ಗೆಟಪ್ ಬಗ್ಗೆ ಅತಿಥಿಗಳ ಬಳಿ ವ್ಯಂಗ್ಯ ಮಾಡಿರುವ ಧನುಷ್ ನಡೆ ಬಗ್ಗೆ ವೀಕ್ಷಕರು ಅಸಮಾಧಾನ ಹೊರಹಾಕಿದ್ದಾರೆ. ಅಷ್ಟಕ್ಕೂ ಧನುಷ್ ಹೇಳಿದ್ದೇನು? "ಗಿಲ್ಲಿ ನೋಡಲು ಹುಡುಗಿ ಥರ ಇದ್ದಾನಾ? ಮಾಡೆಲ್ ಅಂತೆ ಇವನು. ಅವನ ಸೊಂಟ ನೋಡಿದ್ರೆ ಹೊಟ್ಟೆಗೆ 3 ದಿನ ಊಟ ಸೇರಲ್ಲ" ಎಂದು ಧನುಷ್ ವ್ಯಂಗ್ಯ ಮಾಡಿದ್ದಾರೆ. ಈ ರೀತಿ ಮಾತನಾಡಿದ್ದು ಸರಿ ಅಲ್ಲ ಎಂಬುದು ವೀಕ್ಷಕರ ಅಭಿಪ್ರಾಯ.
ವೀಕ್ಷಕರ ಕಮೆಂಟ್
Raghu comes and asks if Gilli is comfortable
— ಅಲ್ಪಸಂಖ್ಯಾತ (@alpasankhyata) November 28, 2025
Meanwhile, the bucket boy of Bigboss sits behind the guests and passes comments out of jealousy 😊
ವ್ಯಕ್ತಿತ್ವದ ಆಟ...
Raghu is the gentleman, they said. Perfectly said 😎 #BBK12 pic.twitter.com/a8NroxtVxX
ಜಾಹ್ನವಿ ಕೂಡ ಮಾತನಾಡಿದ್ರು!
ಹಿಂದೊಮ್ಮೆ ಸುದೀಪ್ ಅವರು, "ಈ ಮನೆಯಲ್ಲಿ ಗಂಡು ಮಕ್ಕಳಿಗಿಂತ ಹೆಣ್ಮಕ್ಕಳೇ ಸ್ಟ್ರಾಂಗು" ಎಂಬ ಸ್ಟೇಟ್‌ಮೆಂಟ್ ಕೇಳಿದ್ದರು. ಆಗ ಜಾಹ್ನವಿ, "ಹೌದು, ನಿಜ ಸರ್.. ಈ ಮನೆಯಲ್ಲಿ ಇರುವ ಹುಡುಗರು ಮ್ಯಾನ್ಲಿ ಎಂದು ಅನ್ನಿಸುವುದಿಲ್ಲ. ಖಡಕ್ ಇಲ್ಲ.. ಗಿಲ್ಲಿಗೆ ಸೊಂಟನೇ ಇಲ್ಲ ಸರ್.. ಯಾವಾಗ ನೋಡಿದ್ರು ರಘು ತೊಡೆ ಮೇಲೆ ಮಲಗಿರುತ್ತಾನೆ" ಎಂದು ಸುದೀಪ್ ಎದುರು ಹೇಳಿದ್ದರು.
BBK 12: ಸೈಲೆಂಟ್ ಆದ ಗಿಲ್ಲಿ ನಟ, ಮುಂದುವರಿದ ಅತಿಥಿಗಳ ರಂಪಾಟ; ಮಾತಿನ ಮಲ್ಲನ ಬಾಯಿಗೆ ಬೀಗ!
ಗಿಲ್ಲಿ ನಟ ಇದೆಲ್ಲಾ ಮಾಡಿದ್ದು ಯಾರಿಗಾಗಿ?
ಇದೀಗ ಬಿಗ್ ಬಾಸ್ ಮನೆಯೊಳಗೆ ಅತಿಥಿಗಳು ಎಷ್ಟೇ ದಬ್ಬಾಳಿಕೆ ಮಾಡಿದರೂ, ಅದನ್ನೀಗ ಗಿಲ್ಲಿ ಸಹಿಸಿಕೊಂಡಿದ್ದಾರೆ. ಅದೆಲ್ಲವೂ ಮನೆಯವರಿಗಾಗಿ. ಸ್ತ್ರೀ ವೇಷ ಹಾಕಿಕೊಂಡಿದ್ದು ಕೂಡ ಮನೆಯವರಿಗಾಗಿ. ತಮ್ಮ ಗಡ್ಡಕ್ಕೆ ಉಗ್ರಂ ಮಂಜು ಕೈ ಇಟ್ಟರೂ ಗಿಲ್ಲಿ ಅದಕ್ಕೆ ಅಡ್ಡಿ ಮಾಡಲಿಲ್ಲ. ಇಷ್ಟೆಲ್ಲಾ ಮಾಡಿದ ಮೇಲೂ ಧನುಷ್ ಈ ರೀತಿ ಕಾಮೆಂಟ್ ಮಾಡುವುದು ಎಷ್ಟು ಸರಿ ಎಂಬ ಮಾತುಗಳು ಕೇಳಿಬಂದಿವೆ. ಅಲ್ಲದೆ, ಇದನ್ನು ಗಿಲ್ಲಿ ಎದುರು ಧನುಷ್ ಹೇಳಬೇಕಿತ್ತು. ಬೆನ್ನ ಹಿಂದೆ ಮಾತನಾಡುವುದು ಎಷ್ಟು ಸರಿ ಎಂದು ಪ್ರಶ್ನೆ ಮಾಡಿದ್ದಾರೆ ಆಡಿಯೆನ್ಸ್.