BBK 12: ಸೈಲೆಂಟ್ ಆದ ಗಿಲ್ಲಿ ನಟ, ಮುಂದುವರಿದ ಅತಿಥಿಗಳ ರಂಪಾಟ; ಮಾತಿನ ಮಲ್ಲನ ಬಾಯಿಗೆ ಬೀಗ!
Bigg Boss Kannada 12 Gilli Nata: 'ಬಿಬಿ ಪ್ಯಾಲೇಸ್' ಟಾಸ್ಕ್‌ನಲ್ಲಿ ಅತಿಥಿಗಳಾಗಿ ಬಂದಿರುವ ಮಂಜು ಮತ್ತು ರಜತ್ ಅವರಿಂದ ಸತತ ಟಾರ್ಗೆಟ್ ಎದುರಿಸುತ್ತಿದ್ದ ಗಿಲ್ಲಿ ನಟ, ಇದೀಗ ಸಂಪೂರ್ಣವಾಗಿ ಸೈಲೆಂಟ್ ಆಗುತ್ತಿದ್ದಾರಾ ಎಂಬ ಅನುಮಾನ ಮೂಡಿದೆ.
-
ಬಿಗ್ ಬಾಸ್ ಮನೆಯೊಳಗೆ ಅತಿಥಿಯಾಗಿ ಕಾಲಿಟ್ಟಿರುವ ಹಳೆ ಸೀಸನ್‌ನ ಮಾಜಿ ಸ್ಪರ್ಧಿಗಳಾದ ಉಗ್ರಂ ಮಂಜು, ರಜತ್, ಮೋಕ್ಷಿತಾ ಪೈ, ತ್ರಿವಿಕ್ರಮ್ ಮತ್ತು ಚೈತ್ರಾ ಕುಂದಾಪುರ ಅವರು ಬಿಬಿ ಪ್ಯಾಲೇಸ್‌ನಲ್ಲಿ ತಮ್ಮ ದಬ್ಬಾಳಿಕೆಯನ್ನ ಮುಂದುವರಿಸಿದ್ದಾರೆ. ಅದರಲ್ಲೂ ಮಂಜು ಮತ್ತು ರಜತ್ ಅವರ ಕಣ್ಣು ಗಿಲ್ಲಿ ನಟನ ಮೇಲೆಯೇ ಇದೆ. ಹೇಗಾದರೂ ಮಾಡಿ, ಗಿಲ್ಲಿಯನ್ನು ಕಂಟ್ರೋಲ್‌ಗೆ ತೆಗೆದುಕೊಳ್ಳಬೇಕು ಎಂದು ಪ್ಲ್ಯಾನ್ ಮಾಡುತ್ತಿದ್ದಾರೆ. ಅಂದಹಾಗೆ, ಅದರಲ್ಲೀಗ ಅವರು ಸಫಲರಾದಂತೆ ಕಾಣಿಸುತ್ತಿದೆ.
ಸೈಲೆಂಟ್ ಆದ್ರಾ ಗಿಲ್ಲಿ?
ಹೌದು, ಗೆಸ್ಟ್‌ಗಳು ಮನೆಯೊಳಗೆ ಕಾಲಿಟ್ಟ ದಿನದಿಂದಲೂ ಅವರಿಗೆ ಸರಿಸಮಾನಾಗಿ ನಿಂತವರು ಗಿಲ್ಲಿ ನಟ. ರಜತ್ ಮತ್ತು ಮಂಜುಗೆ ಆಗಾಗ ಕೌಂಟರ್ ಕೊಡುತ್ತಾ ಆಟದ ಮಜಾವನ್ನು ಗಿಲ್ಲಿ ನಟ ಜಾಸ್ತಿ ಮಾಡಿದ್ದರು. ಸಹಜವಾಗಿಯೇ ಇದು ಮಂಜು ಮತ್ತು ರಜತ್‌ಗೆ ಕಿರಿ ಕಿರಿ ಉಂಟು ಮಾಡಿತ್ತು. ಗಿಲ್ಲಿಯನ್ನು ಕಟ್ಟಿಹಾಕಬೇಕು ಎಂದು ನಾನಾ ರೀತಿಯಲ್ಲಿ ಟಾರ್ಗೆಟ್ ಮಾಡುತ್ತಿದ್ದರು. ಇದೀಗ ಅವರು ಅದರಲ್ಲಿ ಸಕ್ಸಸ್ ಆಗಿರುವಂತೆ ಕಾಣುತ್ತಿದೆ.
ಹೊಸ ಪ್ರೋಮೋದಲ್ಲಿ ಗಿಲ್ಲಿಗೆ ಸಮಾಧಾನ!
ಕಲರ್ಸ್ ಕನ್ನಡ ವಾಹಿನಿಯು ರಿಲೀಸ್ ಮಾಡಿರುವ ಹೊಸ ಪ್ರೋಮೋದಲ್ಲಿ ಮನೆಯ ಸದಸ್ಯರು ಗಿಲ್ಲಿಗೆ ಸಮಾಧಾನ ಮಾಡುತ್ತಿದ್ದಾರೆ. ಕ್ಯಾಪ್ಟನ್ ಅಭಿಷೇಕ್, "ಗಿಲ್ಲಿ ನನಗೆ ಗೊತ್ತಿದೆ, ನಿಂಗೆ ಕಷ್ಟ ಆಗ್ತಿದೆ ಅಂತ. ಬಟ್ ಗೆಸ್ಟ್ ಅಂತ ಅವರನ್ನು ನೋಡಿಕೊಳ್ಳೋಣ. ಕ್ಯಾರೆಕ್ಟರ್‌ನಲ್ಲಿ ಇರು" ಎಂದು ಹೇಳಿದ್ದಾರೆ. ತಮ್ಮಲ್ಲೇ ಗೊಣಗಿಕೊಂಡಿರುವ ಗಿಲ್ಲಿ, "ನನ್ನ ನಾಲಿಗೆ ಕಂಟ್ರೋಲ್ ತಪ್ಪುತ್ತದೆ ಎಂದು ಸುಮ್ಮನೆ ಇದ್ದೀನಿ" ಅಂತ ಹೇಳಿಕೊಂಡಿದ್ದಾರೆ. ಕೂಲ್ ಆಗಿರುವಂತೆ ಅಶ್ವಿನಿ ಗೌಡ ಕೂಡ ಸಲಹೆ ನೀಡಿದ್ದಾರೆ. ಗಿಲ್ಲಿ ನಟ ಸೈಲೆಂಟ್ ಆಗಿ ಸುಮ್ಮನೆ ಕುಳಿತಿರುವುದು ಪ್ರೋಮೋದಲ್ಲಿ ಕಂಡಿದೆ.
BBK 12: ವೀಕ್ಷಕರು ನಿರೀಕ್ಷಿಸಿದಂತೆಯೇ ಆಯ್ತು; ಗಿಲ್ಲಿ ನಟನ ಮಾತಿಗೆ ʻಕಿಚ್ಚʼ ಸುದೀಪ್ ನಾನ್‌ಸ್ಟಾಪ್ ನಗು!
ಅಸಲಿಗೆ ಬಿಗ್ ಬಾಸ್ ಮನೆಯಲ್ಲಿ ನಗು ತಮಾಷೆ ಇರಬೇಕು ಎಂಬುದು ಗಿಲ್ಲಿ ಉದ್ದೇಶ. ಅದಕ್ಕಾಗಿ ಏನೇನೋ ಮಾಡಲು ಹೋಗುತ್ತಿದ್ದಾರೆ ಎಂಬುದು ಅವರ ಮಾತುಗಳಿಂದಲೇ ಗೊತ್ತಾಗಿದೆ. ತ್ರಿವಿಕ್ರಮ್ ಜೊತೆ ಮಾತನಾಡುತ್ತಾ, "ಏನೋ ತಮಾಷೆ ಮಾಡೋಕೆ ಹೋದೆ. ಅದು ಅಮಾವಾಸ್ಯೆ ಆಯ್ತು.. ಸತ್ಯವಾಗಲೂ ಫನ್ ಆಗಿ ತಗೊಂಡು ಹೋಗಬೇಕು ಅಂದುಕೊಂಡೆ. ಅದು ಹೇಗೋ ಆಯ್ತು" ಎಂದು ಹೇಳಿಕೊಂಡಿದ್ದಾರೆ.
ಇಲ್ಲಿದೆ ನೋಡಿ ಗಿಲ್ಲಿಯ ಹೊಸ ಪ್ರೋಮೋ
ಈ ನಡುವೆ ಗಿಲ್ಲಿಯನ್ನು ಸಕತ್ ಟಾರ್ಗೆಟ್ ಮಾಡಿರುವ ಮಂಜು ಮತ್ತು ರಜತ್, ಆರಂಭದಿಂದಲೂ ಅದನ್ನು ಮುಂದುವರಿಸಿದ್ದಾರೆ. ಗಿಲ್ಲಿಯನ್ನು ಕುಕ್ಕರುಗಾಲಿನಲ್ಲಿ ಕೂರಿಸಿ, ಬಾಯಿಗೆ ಆಲೂಗಡ್ಡೆ ತುರುಕಿದ್ದು, ಬೇಕೆಂದೇ ನೀರನ್ನು ಚೆಲ್ಲಿ, ಅದನ್ನು ಒರೆಸುವಂತೆ ಸೂಚಿಸಿದ್ದು ಕೂಡ ಈ ಚರ್ಚೆ ಆಗುತ್ತಿದೆ. ಸ್ಪರ್ಧಿಗಳ ಜೊತೆಗೆ ಈ ರೀತಿ ಅತಿಥಿಗಳು ವರ್ತಿಸುವುದು ಸರಿಯೇ ಎಂದೆಲ್ಲಾ ಸೋಶಿಯಲ್ ಮೀಡಿಯಾದಲ್ಲಿ ವೀಕ್ಷಕರು ಕೇಳುತ್ತಿದ್ದಾರೆ. ಇದು ಎಲ್ಲಿಗೆ ಹೋಗಿ ನಿಲ್ಲುತ್ತದೆ ಎಂಬುದನ್ನು ಕಾದುನೋಡಬೇಕು.