Lakshmi Nivasa Serial: ಜಯಂತ್ ಸೀಕ್ರೆಟ್ ಬಯಲು ಮಾಡ್ತಾರಾ ಅಜ್ಜಿ? ಅತ್ತ ಜಾಹ್ನವಿ ಮೇಲೆ ವಿಶ್ವನ ಅಮ್ಮಂಗೂ ಬಂತು ಡೌಟು !
Lakshmi Nivasa: ಜಾಹ್ನವಿ ಸದ್ಯ ವಿಶ್ವನ ಮನೆಯಲ್ಲಿ ಇದ್ದಾಳೆ. ವಿಶ್ವ ಆಕೆಯನ್ನು ಎಲ್ಲಾ ರೀತಿಯಿಂದಲೂ ರಕ್ಷಣೆ ಮಾಡುತ್ತಿದ್ದಾರೆ. ಆಕೆಯನ್ನು ಕಣ್ಣಲ್ಲಿ ಕಣ್ಣು ಇಟ್ಟು ನೋಡಿಕೊಳ್ತಿದ್ದಾನೆ. ಒಂದು ಕಡೆ ತನು ಕೂಡ ವಿಶ್ವನ ಅಮ್ಮನಿಗೆ ಜಾಹ್ನವಿ ವಿಚಾರವಾಗಿ ತಲೆಗೆ ಹುಳ ಬಿಟ್ಟಿದ್ದಾಳೆ. ಇನ್ನೊಂದು ಕಡೆ ಮಲಗಿರುವ ಅಜ್ಜಿ ಮುಂದೆ ಜಯಂತ್ ಗುಟ್ಟನ್ನ ರಟ್ಟು ಮಾಡಿದ್ದಾನೆ. ಜಾಹ್ನವಿಯ ಹಿತ ಬಯಸಿ ಮೌನವಾಗಿರೋ ಅಜ್ಜಿ, ಜಯಂತ್ ಗುಟ್ಟು ಬಯಲುಮಾಡ್ತಾರಾ? ಎನ್ನೋದೇ ವೀಕ್ಷಕರಲ್ಲಿ ಇರೋ ಕುತೂಹಲ.
'ಲಕ್ಷ್ಮೀ ನಿವಾಸ' ಸೀರಿಯಲ್ -
ಜೀ ಕನ್ನಡ ವಾಹಿನಿಯಲ್ಲಿ (Zee Kannada Serial) ಪ್ರಸಾರ ಕಾಣುತ್ತಿರುವ ಲಕ್ಷ್ಮೀ ನಿವಾಸ (Lakshmi Nivasa) ಕುತೂಹಲ ಘಟ್ಟ ತಲುಪಿದೆ. ಗೂಬೆ ಎನ್ನುವ ಫ್ರೆಂಡ್‌ನಿಂದ ಜಾಹ್ನವಿ ಸೇಫ್ ಆಗ್ತಿರೋ ವಿಚಾರ ಜಯಂತ್‌ಗೆ ಗೊತ್ತಾಗಿದೆ. ಜಾಹ್ನವಿ ಸದ್ಯ ವಿಶ್ವನ (Vishva) ಮನೆಯಲ್ಲಿ ಇದ್ದಾಳೆ. ವಿಶ್ವ ಆಕೆಯನ್ನು ಎಲ್ಲಾ ರೀತಿಯಿಂದಲೂ ರಕ್ಷಣೆ ಮಾಡುತ್ತಿದ್ದಾರೆ. ಆಕೆಯನ್ನು ಕಣ್ಣಲ್ಲಿ ಕಣ್ಣು ಇಟ್ಟು ನೋಡಿಕೊಳ್ತಿದ್ದಾನೆ. ಒಂದು ಕಡೆ ತನು ಕೂಡ ವಿಶ್ವನ ಅಮ್ಮನಿಗೆ ಜಾಹ್ನವಿ ವಿಚಾರವಾಗಿ ತಲೆಗೆ ಹುಳ ಬಿಟ್ಟಿದ್ದಾಳೆ. ಇನ್ನೊಂದು ಕಡೆ ಮಲಗಿರುವ ಅಜ್ಜಿ ಮುಂದೆ ಜಯಂತ್ (Jayanth) ಗುಟ್ಟನ್ನ ರಟ್ಟು ಮಾಡಿದ್ದಾನೆ. ಜಾಹ್ನವಿಯ ಹಿತ ಬಯಸಿ ಮೌನವಾಗಿರೋ ಅಜ್ಜಿ, ಜಯಂತ್ ಗುಟ್ಟು ಬಯಲುಮಾಡ್ತಾರಾ? ಎನ್ನೋದೇ ವೀಕ್ಷಕರಲ್ಲಿ ಇರೋ ಕುತೂಹಲ.
ಚಿನ್ನುಮರಿ ಹುಡುಕೋದೇ ಜಯಂತ್‌ಗೆ ಕೆಲಸ
ಚಿನ್ನುಮರಿ ಹುಡುಕೋದೇ ಜಯಂತ್‌ಗೆ ಕೆಲಸ. ಜಾಹ್ನವಿ ಸತ್ತಿಲ್ಲ ಬದುಕಿದ್ದಾಳೆ ಅನ್ನೋದು ಜಯಂತ್‌ಗೆ ಗೊತ್ತಾಗಿದೆ. . ಕೈಗೆ ಸಿಕ್ಕ ಪತ್ನಿ ವಿಶ್ವನ ಕಾರಣದಿಂದ ಪದೇ ಪದೇ ತಪ್ಪಿಸಿಕೊಳ್ಳುತ್ತಿರುವುದು ಜಯಂತ್‌ಗೆ ಗೊತ್ತಾಗಿದೆ.
ಇದನ್ನೂ ಓದಿ: Amruthadhare Serial: ಗೌತಮ್ - ಭೂಮಿ ಒಂದು ಮಾಡೋಕೆ ಮಿಂಚು - ಆಕಾಶ್ ಒಂದಾದ್ರು! ಇನ್ನು ಬರೀ ಒಲವ ಅಮೃತಧಾರೆ
ಚಿನ್ನುಮರಿಯನ್ನ ಕಂಡುಹಿಡಿದೇ ತೀರುತ್ತೇನೆ ಎನ್ನುವ ಪಣ ತೊಟ್ಟಿದ್ದಾನೆ.ಜಯಂತ್ ಕಣ್ಣುಗಳಿಂದ ವಿಶ್ವ ಜಾಹ್ನವಿಯನ್ನು ಹಲವಾರು ಬಾರಿ ಬಚಾವ್ ಮಾಡಿದ್ದಾನೆ. ಆದರೆ ಇದಾಗಲೇ ವಿಶ್ವನ ಭಾವಿ ಪತ್ನಿ ತನುಗೆ ಜಾಹ್ನವಿ ಮತ್ತು ವಿಶ್ವನ ಮೇಲೆ ಡೌಟ್ ಬಂದಿದೆ. ಜಯಂತ್ ಈಗ ಎಲ್ಲ ಸತ್ಯವನ್ನ ಮಲಗಿರುವ ಅಜ್ಜಿ ಮುಂದೆ ಹೇಳಿದ್ದಾನೆ.
ಜೀ ಕನ್ನಡ ವಾಹಿನಿ ಪ್ರೋಮೋ
ಚಿನ್ನುಮರಿ ಬದುಕಿರೋದು ಸತ್ಯ
ಚಿನ್ನುಮರಿ ಬದುಕಿರೋದು ಸತ್ಯ. ಅಮ್ಮನ ಕನಸಲ್ಲಿ ಬಂದಿದಲ್ಲ ನಿಜವಾಗಿಯೂ ಚಿನ್ನುಮರಿ ಬದುಕಿದ್ದಾರೆ. ಸ್ವರ್ಗದಲ್ಲಿ ಇದ್ದಾಳೆ ಅಂತ ಅಂದುಕೊಂಡಿದ್ದಾರೆ. ಒಂದಲ್ಲ ಒಂದು ದಿನ ಅವರ ಮುಂದೆ ಕರೆದುಕೊಂಡು ಬಂದು ನಿಲ್ಲಿಸುತ್ತೇನೆ. ಚಿನ್ನುಮರಿಯನ್ನ ಪಡೆದುಕೊಳ್ಳುತ್ತೇನೆ. ನಿಮ್ಮಲ್ಲಿಯೇ ಆಶೀರ್ವಾದ ಪಡೆದುಕೊಳ್ಳುತ್ತೇನೆ ಎಂದಿದ್ದಾನೆ ಜಯಂತ್.
ಇದನ್ನೂ ಓದಿ: Bigg Boss Kannada 12: ನನ್ನಲ್ಲಿ ಬುದ್ಧಿವಂತಿಕೆ ಇಲ್ಲ! ಚೈತ್ರಾ ಎದುರು ಕ್ಷಮೆ ಕೇಳಿದ ಅಶ್ವಿನಿ ಗೌಡ
ಅತ್ತ ತನು, ಅತ್ತೆ ಮುಂದೆ ಜಾಹ್ನವಿ ಕುರಿತಾಗಿ ಮಾತನಾಡಿದ್ದಾಳೆ. ಏನೋ ಒಂದು ಉದ್ದೇಶ ಇಟ್ಟುಕೊಂಡು ಜಾಹ್ನವಿ ಇಲ್ಲಿ ಇದ್ದಾಳೆ ಎಂದಿದ್ದಾಳೆ . ವಿಶ್ವನ ಅಮ್ಮ ಕೂಡ ಸಂಬಳ ಇಲ್ಲದೇ ಜಾಹ್ನವಿ ಮನೆಯಲ್ಲಿ ಕೆಲಸ ಮಾಡುವುದು ಹೇಗೆ ಸಾಧ್ಯ, ಅವಳ ಹಿನ್ನೆಲೆ ಏನೋ ಇರಬೇಕಲ್ವಾ? ಎಂದು ಹೇಳಿದ್ದಾರೆ. ಮನೆಯವರ ಬಗ್ಗೆ ಹೇಳದೇ ಇರುವುದು ಕೂಡ ಈಗ ಅನುಮಾನಕ್ಕೆ ಕಾರಣವಾಗಿದೆ. ಇನ್ನು ಜಾಹ್ನವಿ ಕಥೆ ಏನು? ಎಂಬುದೇ ವೀಕ್ಷಕರಲ್ಲಿ ಇರೋ ಕುತೂಹಲ.