ʻಟಿ20 ವಿಶ್ವಕಪ್ ಗೆಲ್ಲಿ, ಇಲ್ಲಾಂದ್ರೆ ಮನೆಗೆ ನಡೆಯಿರಿʼ: ಗೌತಮ್ ಗಂಭಿರ್‌ಗೆ ಬಿಸಿಸಿಐ ವಾರ್ನಿಂಗ್!
ದಕ್ಷಿಣ ಆಫ್ರಿಕಾ ವಿರುದ್ಧ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ ತಂಡ 0-2 ಅಂತರದಲ್ಲಿ ಕ್ಲೀನ್ ಸ್ವೀಪ್ ಆಘಾತ ಅನುಭವಿಸಿದ ಬಳಿಕ ಹೆಡ್ ಕೋಚ್ ಗೌತಮ್ ಗಂಭೀರ್ ಅವರ ಬಗ್ಗೆ ಬಿಸಿಸಿಐ ಅಸಮಾಧಾನವನ್ನು ಹೊಂದಿದೆ. ಹಾಗಾಗಿ ಅವರಿಗೆ ಮುಂದಿನ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಪ್ರಶಸ್ತಿ ಗೆಲ್ಲಬೇಕೆಂದು ಗಂಭೀರ್‌ಗೆ ಗುರಿಯನ್ನು ನೀಡಲಾಗಿದೆ. ಒಂದು ವೇಳೆ ಇಲ್ಲಿ ಸೋತರೆ ಅವರು ತಮ್ಮ ಹುದ್ದೆಯನ್ನು ಕಳೆದುಕೊಳ್ಳಬಹುದು.
ಗೌತಮ್ ಗಂಭೀರ್‌ಗೆ ಬಿಸಿಸಿಐ ವಾರ್ನಿಂಗ್. -
ನವದೆಹಲಿ: ದಕ್ಷಿಣ ಆಫ್ರಿಕಾ ವಿರುದ್ಧ ಎರಡನೇ ಟೆಸ್ಟ್ ಪಂದ್ಯ (IND vs SA) ನಡೆದಿದ್ದ ಕೋಲ್ಕತಾದ ಈಡನ್ ಗಾರ್ಡನ್ಸ್ ಕ್ರೀಡಾಂಗಣದ ಪಿಚ್ ಬಗ್ಗೆ ಭಾರತ ತಂಡದ ಹೆಡ್ ಕೋಚ್ ಗೌತಮ್ ಗಂಭೀರ್ (Gautam Gambhir) ನೀಡಿದ್ದ ಹೇಳಿಕೆ ಬಗ್ಗೆ ಭಾರತೀಯ ಕ್ರಿಕೆಟ್ ನಿಯಂತ್ರಣ (BCCI) ಅಸಮಾಧಾನವನ್ನು ಹೊಂದಿದೆ ಎಂದು ವರದಿಯಾಗಿದೆ. ಈ ಪಂದ್ಯದಲ್ಲಿ ಭಾರತ ತಂಡ 408 ರನ್‌ಗಳ ಭಾರಿ ಅಂತರದಲ್ಲಿ ಸೋತು ಮುಖಭಂಗ ಅನುಭವಿಸಿತ್ತು. ಆ ಮೂಲಕ ಟೀಮ್ ಇಂಡಿಯಾ 2-0 ಅಂತರದಲ್ಲಿ ಟೆಸ್ಟ್ ಸರಣಿಯಲ್ಲಿ ವೈಟ್‌ವಾಷ್ ಆಘಾತ ಅನುಭವಿಸಿತ್ತು. ಇದರೊಂದಿಗೆ ಭಾರತ ತಂಡ ಗಂಭೀರ್ ಮಾರ್ಗದರ್ಶನದಲ್ಲಿ ಕಳೆದ ಒಂದೂವರೆ ವರ್ಷದಲ್ಲಿ ಎರಡನೇ ಬಾರಿ ಕ್ಲೀನ್ ಸ್ವೀಪ್ ಸೋಲು ಅನುಭವಿಸಿದೆ. ಈ ಹಿನ್ನೆಲೆಯಲ್ಲಿ ಗೌತಮ್ ಗಂಭೀರ್ ಅವರ ಮೇಲೆ ಪ್ರಶ್ನೆಗಳು ಎದ್ದಿವೆ.
"ನಾನು ಎದುರು ನೋಡುತ್ತಿದ್ದ ಪಿಚ್ ಇದಾಗಿತ್ತು. ಇಲ್ಲಿನ ಪಿಚ್ ಕ್ಯುರೇಟರ್ ತುಂಬಾ ಸಹಾಯಕ ಹಾಗೂ ಬೆಂಬಲವಾಗಿದ್ದರು. ಈ ತರಹದ ಪಿಚ್ ನಮಗೆ ಬೇಕಿತ್ತು ಹಾಗೂ ಅದೇ ತರಹ ನಮಗೆ ಪಿಚ್ ಸಿಕ್ಕಿದೆ. ಅಂದ ಹಾಗೆ ನೀವು ಚೆನ್ನಾಗಿ ಆಡಿಲ್ಲವಾದರೆ, ಈ ರೀತಿಯ ಫಲಿತಾಂಶ ನಿಮಗೆ ಸಿಗುತ್ತದೆ," ಎಂದು ಕೋಲ್ಕತಾ ಟೆಸ್ಟ್ ಸೋಲಿನ ಬಳಿಕ ಹೆಡ್ ಕೋಚ್ ಗೌತಮ್ ಗಂಭೀರ್ ತಿಳಿಸಿದ್ದರು.
IND vs SA: ʻಭಾರತ ತಂಡದಲ್ಲಿ ಉತ್ತಮ ಬ್ಯಾಟರ್‌ಗಳಿದ್ದಾರೆ, ಚಿಂತಿಸುವ ಅಗತ್ಯವಿಲ್ಲʼ-ಎಬಿ ಡಿವಿಲಿಯರ್ಸ್!
"ಹೌದು, ಅದು ತುಂಬಾ ಅದ್ಭುತವಾದ ಪಿಚ್ ಅಲ್ಲದಿರಬಹುದು, ಅಲ್ಲಿ ನೀವು ದೊಡ್ಡ ಹೊಡೆತಗಳನ್ನು ಆಡಬಹುದು. ಆದರೆ ನೀವು ನಿಮ್ಮ ತಲೆಯನ್ನು ಕೆಳಗೆ ಹಾಕಲು ಸಿದ್ಧರಿದ್ದರೆ, ಖಂಡಿತವಾಗಿಯೂ ಅದು ನೀವು ರನ್ ಗಳಿಸಬಹುದಾದ ಪಿಚ್. ಈ ವಿಕೆಟ್‌ನಲ್ಲಿ ಯಾವುದೇ ಕಠಿಣತೆ ಇರಲಿಲ್ಲ. ಅದು ಆಡಲಾಗದ ಪಿಚ್ ಆಗಿರಲಿಲ್ಲ. ಅದು ನಿಮ್ಮ ತಂತ್ರವನ್ನು ನಿರ್ಣಯಿಸಬಹುದಾದ ವಿಕೆಟ್ ಆಗಿತ್ತು, ನಿಮ್ಮ ಮಾನಸಿಕ ದೃಢತೆಯನ್ನು ಪ್ರಶ್ನಿಸಬಹುದು ಮತ್ತು ಅದಕ್ಕಿಂತ ಮುಖ್ಯವಾದದ್ದು ನಿಮ್ಮ ಮನೋಧರ್ಮ. ಮುಖ್ಯ ವಿಷಯವೆಂದರೆ ನೀವು ಸರದಿಯಲ್ಲಿ ಹೇಗೆ ಆಡಬೇಕೆಂದು ತಿಳಿದುಕೊಳ್ಳಲು ಸಾಧ್ಯವಾಗುತ್ತದೆ. ಇದನ್ನೇ ನಾವು ಕೇಳಿಕೊಂಡದ್ದು ಮತ್ತು ಇದನ್ನೇ ನಾವು ಪಡೆದುಕೊಂಡದ್ದು,"ಎಂದು ಹೇಳಿದ್ದಾರೆ.
ಗುವಾಹಟಿ ಟೆಸ್ಟ್ ಪಂದ್ಯದಲ್ಲಿಯೂ ಭಾರತ ತಂಡದ ಸಂಗತಿಗಳು ಬದಲಾಗಿರಲಿಲ್ಲ. ಭಾರತದ ಬ್ಯಾಟ್ಸ್‌ಮನ್‌ಗಳು ಇಲ್ಲಿಯೂ ಕೂಡ ಕುಸಿದಿದ್ದರು. ಕೋಲ್ಕತಾ ಪಿಚ್ ರೀತಿ ಇಲ್ಲಿನ ವಿಕೆಟ್ ಅಷ್ಟೊಂದು ತಿರುಗುತ್ತಿರಲಿಲ್ಲ, ಆದರೆ ಇದು ಸಾಂಪ್ರದಾಯಿಕ ಪಿಚ್, ಅಂದರೆ ಆಟಗಾರರು ಆಡಿಕೊಂಡು ಬೆಳೆದಿರುವ ಪಿಚ್ ರೀತಿ ಇದಾಗಿದೆ. ಆದರೆ, ಅಗ್ರ ದರ್ಜೆಯಲ್ಲಿ ಬೌಲಿಂಗ್ ಗುಣಮಟ್ಟ ಇರುವ ಕಾರಣ, ನಿಮಗೆ ಇಲ್ಲಿನ ಪಿಚ್ ಬಗ್ಗೆ ಸುಳಿವು ಸಿಗುವುದಿಲ್ಲ.
IND vs SA: ಭಾರತ ತಂಡದ ಹೆಡ್ ಕೋಚ್ ಸ್ಥಾನದಿಂದ ಗೌತಮ್ ಗಂಭೀರ್‌ರನ್ನು ಕಿತ್ತಾಕಿ ಎಂದ ಮನೋಜ್ ತಿವಾರಿ!
ಗೌತಮ್ ಗಂಭೀರ್ ಅವರ ಮಾರ್ಗದರ್ಶನದಲ್ಲಿ ಭಾರತ ತಂಡ ವೈಟ್‌ಬಾಲ್ ಕ್ರಿಕೆಟ್‌ನಲ್ಲಿ ಯಶಸ್ವಿಯಾಗಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಮಾತ್ರ ಅವರು ಇನ್ನೂ ನಿರೀಕ್ಷೆಗೆ ತಕ್ಕಂತೆ ಫಲಿತಾಂಶ ಮೂಡಿ ಬಂದಿಲ್ಲ. ಹಾಗಾಗಿ ಮುಂದಿನ ವರ್ಷ 2026ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿ ಇದೆ. ಈ ಟೂರ್ನಿಯಲ್ಲಿ ಭಾರತ ತಂಡ ಪ್ರದರ್ಶನ ಉತ್ತಮವಾಗಿಲ್ಲ ಅಥವಾ ಪ್ರಶಸ್ತಿ ಗೆದ್ದಿಲ್ಲವಾದರೆ, ಗೌತಮ್ ಗಂಭೀರ್ ವಿರುದ್ಧ ಸಂಗತಿಗಳು ಕಾಣಿಸಬಹುದು. ಅಂದರೆ, ಅವರನ್ನು ಹೆಡ್ ಕೋಚ್ ಸ್ಥಾನದಿಂದ ಕೈ ಬಿಟ್ಟರೂ ಅಚ್ಚರಿ ಪಡುವುದಿಲ್ಲ.
ಗೌತಮ್ ಗಂಭೀರ್‌ಗೆ ಸಿತಾಂಶು ಕೊಟಕ್ ಬೆಂಬಲ
"ಕ್ಯುರೇಟರ್‌ಗಳು ಹೊಣೆ ಹೊರಬಾರದೆಂದು ಗೌತಮ್ ತನ್ನ ಮೇಲೆಯೇ ಆರೋಪ ಹೊರಿಸಿಕೊಂಡರು. ನಾವು ಭಾರತದಲ್ಲಿ ಆಡುವಾಗ - ಇತರ ದೇಶಗಳು ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಆಡುವಂತೆ - ನಾವು ಸ್ಪಿನ್ ಅನ್ನು ಅವಲಂಬಿಸಿದ್ದೇವೆ. ಸ್ಪಿನ್ ಸಹಾಯದೊಂದಿಗೆ ಪಂದ್ಯಗಳು ನಾಲ್ಕರಿಂದ ನಾಲ್ಕೂವರೆ ದಿನಗಳವರೆಗೆ ಇರುತ್ತದೆ ಎಂದು ನಾವು ಸಾಮಾನ್ಯವಾಗಿ ನಿರೀಕ್ಷಿಸುತ್ತೇವೆ. ವೇಗದ ಬೌಲರ್‌ಗಳು ಒಂದು ಮತ್ತು ಎರಡನೇ ದಿನದಂದು ಆಟದಲ್ಲಿ ಉಳಿಯುತ್ತಾರೆ," ಎಂದು ಸಹಾಯಕ ಕೋಚ್ ಸಿತಾಂಶು ಕೊಟಕ್ ತಿಳಿಸಿದ್ದಾರೆ.