Bigg Boss 12 Finale: ʻಕಿಚ್ಚʼ ಸುದೀಪ್‌ರನ್ನು ಕರವೇ ನಾರಾಯಣ ಗೌಡ ಮೀಟ್ ಮಾಡಿದ್ದೇಕೆ? ವೈರಲ್ ಆಗ್ತಿರುವ ಫೋಟೋಗಳ ಹಿಂದಿದೆ ಬೇರೆಯದೇ ಕಾರಣ!
Bigg Boss Kannada 12 Ashwini Gowda: ಬಿಗ್ ಬಾಸ್ ಫಿನಾಲೆ ಹತ್ತಿರವಾಗುತ್ತಿರುವ ಬೆನ್ನಲ್ಲೇ ಕಿಚ್ಚ ಸುದೀಪ್‌ರನ್ನು ಕರವೇ ಅಧ್ಯಕ್ಷ ನಾರಾಯಣ ಗೌಡ ಭೇಟಿ ಮಾಡಿರುವುದು ಭಾರಿ ಚರ್ಚೆಗೆ ಕಾರಣವಾಗಿದೆ. ಬಿಗ್ ಬಾಸ್ ಸ್ಪರ್ಧಿ ಅಶ್ವಿನಿ ಗೌಡ ಕರವೇಯಲ್ಲಿ ಗುರುತಿಸಿಕೊಂಡಿರುವುದರಿಂದ, ಅವರ ಪರ ಪ್ರಚಾರಕ್ಕೆ ಈ ಭೇಟಿ ನಡೆದಿದೆ ಎಂಬ ವದಂತಿ ಹಬ್ಬಿತ್ತು. ಆದರೆ ಅಸಲಿ ವಿಚಾರವೇ ಬೇರೆ!
-
ಬಿಗ್ ಬಾಸ್ ಕನ್ನಡ 12ರ ಫಿನಾಲೆಗೆ (BBK 12) ಇನ್ನು ನಾಲ್ಕೇ ದಿನಗಳು ಬಾಕಿವೆ ಉಳಿದಿವೆ. ಎಲ್ಲೆಡೆ ಬಿಗ್ ಬಾಸ್ ಹವಾ ಜೋರಾಗಿದೆ. ಯಾರು ಗೆಲ್ಲಬಹುದು ಎಂಬ ನಿರೀಕ್ಷೆ ಚರ್ಚೆ ನಡೆಯುತ್ತಿದೆ. ಈ ಮಧ್ಯೆ ಶೋ ನಿರೂಪಕ ಕಿಚ್ಚ ಸುದೀಪ್ ಅವರನ್ನ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ನಾರಾಯಣಗೌಡ ಅವರು ಭೇಟಿ ಮಾಡಿದ್ದಾರೆ. ಈ ಕುರಿತ ಸಾಕಷ್ಟು ವದಂತಿಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ.
ಕೇಳಿಬಂದ ವದಂತಿ ಏನು?
ಅಶ್ವಿನಿ ಗೌಡ (Ashwini Gowda) ಅವರು ಕರ್ನಾಟಕ ರಕ್ಷಣಾ ವೇದಿಕೆಯಲ್ಲಿ ಸಕ್ರಿಯವಾಗಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಇದೀಗ ಫಿನಾಲೆ ಹೊತ್ತಿನಲ್ಲಿ ಸುದೀಪ್ ಅವರನ್ನು ಕರವೇ ನಾರಾಯಣಗೌಡ ಭೇಟಿ ಮಾಡಿರುವುದು, ಅಶ್ವಿನಿ ಪರ ಬ್ಯಾಟಿಂಗ್ ಮಾಡುವುದಕ್ಕೆ ಎಂಬ ವದಂತಿ ಸೋಶಿಯಲ್ ಮೀಡಿಯಾದಲ್ಲಿ ಹಬ್ಬಿತ್ತು. ಅಷ್ಟಕ್ಕೂ ಹಾಗೆಲ್ಲಾ ನಡೆಯುವುದಕ್ಕೂ ಸಾಧ್ಯವಿಲ್ಲ. ಆದರೂ ಸೋಶಿಯಲ್ ಮೀಡಿಯಾದಲ್ಲಿ ಕೆಲವರು ಅದಕ್ಕೆ ಹೊಸ ರೂಪ ನೀಡಿ, ಸುಳ್ಳನ್ನು ಹಬ್ಬಿಸಿದ್ದರು. ಆದರೆ ಅಸಲಿಗೆ ನಾರಾಯಣ ಗೌಡ ಅವರು ಸುದೀಪ್ ಅವರನ್ನು ಮೀಟ್ ಮಾಡಿದ್ದಕ್ಕೆ ಬೇರೆಯದೇ ಕಾರಣ ಇದೆ.
Bigg Boss Kannada 12: ʻನಿನ್ನಮ್ಮಂಗೆʼ ಹೇಳು ಅನ್ನೋ ರೇಂಜಿಗೆ ಗಲಾಟೆ! ಅಶ್ವಿನಿ ಗೌಡ-ಕಾವ್ಯ ನಡುವೆ ವಾರ್
ಮದುವೆಗೆ ಆಹ್ವಾನಿಸಲು ಹೋಗಿದ್ದ ನಾರಾಯಣ ಗೌಡ
ಹೌದು, ನಾರಾಯಣ ಗೌಡ ಅವರ ಪುತ್ರನ ಮದುವೆ ನಿಗದಿಯಾಗಿದೆ. ಆ ಹಿನ್ನೆಲೆಯಲ್ಲಿ ಮಗನ ಮದುವೆಗೆ ಆಹ್ವಾನಿಸಲು ಸುದೀಪ್ ಅವರ ಮನೆಗೆ ಹೋಗಿದ್ದರು. ಆ ವೇಳೆ ಕ್ಲಿಕ್ಕಿಸಿದ ಫೋಟೋಗಳೇ ವೈರಲ್ ಆಗಿರುವುದು. ಆದರೆ ಈ ಫೋಟೋಗಳನ್ನೇ ಇಟ್ಟುಕೊಂಡು ವದಂತಿ ಹಬ್ಬಿಸಿರುವುದು ಬೇಸರದ ವಿಚಾರ. ಈ ಬಗ್ಗೆ ಕರವೇ ಕಾರ್ಯಕರ್ತರು ಬೇಸರ ವ್ಯಕ್ತಪಡಿಸಿದ್ದಾರೆ.
BBK 12: ಬಿಗ್ ಬಾಸ್ ಕಾಲೇಜ್ನಲ್ಲಿ ಅಶ್ವಿನಿ ಗೌಡ-ಜಾನ್ವಿಯಿಂದ ಪ್ರೀತಿಯ ವಿವರಣೆ
ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಕರವೇ ಕಾರ್ಯಕರ್ತರು, "ನಾರಾಯಣ ಗೌಡ ಅವರು ಪುತ್ರನ ವಿವಾಹದ ಪತ್ರಿಕೆಯನ್ನು ಕಳೆದ ಒಂದು ತಿಂಗಳಿನಿಂದಲೇ ನೀಡುತ್ತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಅನೇಕ ಸಚಿವರು ಹಾಗೂ ಕಲಾವಿದರಿಗೆ ನಾರಾಯಣ ಗೌಡ ಅವರು ಆಹ್ವಾನ ಪತ್ರಿಕೆಗಳನ್ನು ನೀಡುತ್ತಿದ್ದಾರೆ. ಅದೇ ಸುದೀಪ್ ಅವರಿಗೂ ಮದುವೆ ಆಹ್ವಾನ ಪತ್ರಿಕೆ ನೀಡಿ, ಮದುವೆ ಆಹ್ವಾನಿಸಿದ್ದಾರೆ. ಕೆಲವು ಟ್ರೋಲ್ ಪೇಜ್ಗಳು ಇದನ್ನೇ ವದಂತಿ ಹಬ್ಬಿಸಿವೆ" ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಬಿಗ್ ಬಾಸ್ ಕನ್ನಡ ಸೀಸನ್ 12ಕ್ಕೆ ಜ.17 ಮತ್ತು 18ರಂದು ಫಿನಾಲೆ ನಡೆಯಲಿದೆ. ಈಗಾಗಲೇ ಎಲ್ಲ ಸ್ಪರ್ಧಿಗಳ ಪರವಾಗಿ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಪ್ರಚಾರ ಮಾಡಲಾಗುತ್ತಿದೆ. ಸದ್ಯ ಗೆಲ್ಲುವ ಸ್ಪರ್ಧಿಗಳಲ್ಲಿ ಗಿಲ್ಲಿ ನಟ ಅವರ ಹೆಸರು ಮುಂಚೂಣಿಯಲ್ಲಿದೆ.