Bigg Boss Kannada 12: ಗಿಲ್ಲಿ- ಕಾವ್ಯ ದೋಸ್ತಿ ಕಟ್? ಕಾವು ಜೊತೆ ಇನ್ಮುಂದೆ ಮಾತನಾಡುವುದಿಲ್ವಂತೆ ಗಿಲ್ಲಿ!
ನಿನ್ನೆಯ ಎಪಿಸೋಡ್‌ನಲ್ಲಿ (Bigg Boss Kannada 12) ಅಶ್ವಿನಿ, ರಾಶಿಕಾ ಹಾಗೂ ರಿಷಾ ಅವರು ಗಿಲ್ಲಿ ನಟ ಹಾಗೂ ಕಾವ್ಯಾ ಶೈವ ಫ್ರೆಂಡ್ಶಿಪ್ ಬ್ರೇಕ್ ಮಾಡಬೇಕು ಎಂದು ಮಾತನಾಡಿಕೊಳ್ಳುತ್ತಿದ್ದರು. ಆದರೇ ಅವರ ಮಾತು ಈಗ ಸತ್ಯವಾದಂತಿದೆ. ಜಂಟಿಯಾಗಿ ಆಡಿದ ಈ ಜೋಡಿ (Kavya and Gilli) , ಮುಂಚೆ ಪರಿಚಯವಿದ್ದರೂ, ಬಿಗ್ ಬಾಸ್ ಬಂದ ನಂತರ ಮತ್ತಷ್ಟು ಅವರಿಬ್ಬರ ಸ್ನೇಹ ಗಟ್ಟಿಯಾಗಿತ್ತು. ಆದರೆ ಕಾವ್ಯ ಅವರಿಗೆ ಈ ಸ್ನೇಹ ಆಟದ (Game) ಮೇಲೆ ಪರಿಣಾಮ ಬೀರಿದೆ ಎಂದೆನಿಸಿದೆ.
ಕಾವ್ಯ-ಗಿಲ್ಲಿ ಬಿಗ್ ಬಾಸ್ ಕನ್ನಡ -
ಬಿಗ್ ಬಾಸ್ ಸೀಸನ್ 12ರ (Bigg Boss Kannada 1) ಅತ್ಯಂತ ಕ್ಯೂಟ್ ತರಲೆ ಜೋಡಿ ಅಂದರೆ ಅದುವೇ ಗಿಲ್ಲಿ (Gilli) ಹಾಗೂ ಕಾವ್ಯ (Kavya Shaiva). ಜಂಟಿಯಾಗಿ ಆಡಿದ ಈ ಜೋಡಿ , ಮುಂಚೆ ಪರಿಚಯವಿದ್ದರೂ, ಬಿಗ್ ಬಾಸ್ ಬಂದ ನಂತರ ಮತ್ತಷ್ಟು ಅವರಿಬ್ಬರ ಸ್ನೇಹ ಗಟ್ಟಿಯಾಗಿದೆ. ಕಾವು- ಗಿಲ್ಲಿ ಸ್ನೇಹಕ್ಕೆ (friendship) ವೀಕ್ಷಕರು ಫಿದಾ ಆಗಿದ್ದಾರೆ. ಆದರೆ ಕಾವ್ಯ ಅವರಿಗೆ ಈ ಸ್ನೇಹ ಆಟದ ಮೇಲೆ ಪರಿಣಾಮ ಬೀರಿದೆ ಎಂದೆನಿಸಿದೆ. ಹಾಗಾಗಿ ಗಿಲ್ಲಿ ಜೊತೆ ಕಾವ್ಯ (Kavya and Gilli) ಚರ್ಚಿಸಿದ್ದಾರೆ. ಗಿಲ್ಲಿ ಕೂಡ ಕಾವ್ಯ ಬಳಿ ಇನ್ನು ಮಾತನಾಡುವುದಿಲ್ಲ ಎಂದು ಹೇಳಿದ್ದಾರೆ.
ಅಶ್ವಿನಿ, ರಿಷಾ, ರಾಶಿಕಾ ಕನಸು ನನಸಾಗುತ್ತಾ?
ನಿನ್ನೆಯ ಎಪಿಸೋಡ್‌ನಲ್ಲಿ ಅಶ್ವಿನಿ, ರಾಶಿಕಾ ಹಾಗೂ ರಿಷಾ ಅವರು ಗಿಲ್ಲಿ ನಟ ಹಾಗೂ ಕಾವ್ಯಾ ಶೈವ ಫ್ರೆಂಡ್ಶಿಪ್ ಬ್ರೇಕ್ ಮಾಡಬೇಕು ಎಂದು ಮಾತನಾಡಿಕೊಳ್ಳುತ್ತಿದ್ದರು. ಬಿಗ್ ಬಾಸ್ ಮನೆಯಲ್ಲಿ ಕೆಲವು ಸಲ ಸ್ಪರ್ಧಿಗಳು ಚರ್ಚಿಸುವುದು ಸತ್ಯವಾಗುತ್ತಿರುತ್ತೆ. ಹಾಗಾಗಿ ನಿನ್ನೆಯ ಕೂಡ ಕಾವ್ಯ ಅವರು ಗಿಲ್ಲಿ ಬಳಿ ಕೊಂಚ ಸೀರೆಯೆಸ್ ಆಗಿಯೇ ಮಾತನಾಡಿರುವಂತಿದೆ.
ಇದನ್ನೂ ಓದಿ: Bigg Boss Kannada 12: ಧ್ರುವಂತ್ ಇಷ್ಟಪಟ್ಟ ಮಲ್ಲಮ್ಮ, ಚಂದ್ರಪ್ರಭ ಹೋಗಾಯ್ತು, ಉಳಿದವರು ಹುಷಾರ್ ಎಂದ ಗಿಲ್ಲಿ!
ಗಿಲ್ಲಿ ಬಳಿ ಕಾವ್ಯ ಚರ್ಚಿಸಿದ್ದೇನು?
ಕಾವ್ಯ ಮಾತನಾಡಿ, ʻರಿಷಾ ಒಮ್ಮೊಮ್ಮೆ ಕಾವ್ಯಳಿಂದ ಗಿಲ್ಲಿ ಅಂತಾಳೆ. ಇನ್ನೊಂದು ಸಲ, ಗಿಲ್ಲಿನೇ ಕಾವ್ಯಳನ್ನ ಸೆಮಿಫೈನಲ್‌ವರೆಗೆ ಕರೆದುಕೊಂಡು ಹೋಗ್ತಾ ಇದ್ದಾರೆ ಅಂತಾಳೆʼ ಅಂತ ಎಂದರು. ಅದಕ್ಕೆ ಗಿಲ್ಲಿ ಮಾತನಾಡಿ, ʻನಾನು ಕಾವು ಕಾವು ಅಂತ ಹೇಳಿ ಹೇಳಿ, ಒಂದು ದಿನ ಕಾವ್ಯಳನ್ನ ಮನೆಗೆ ಆಚೆ ಹಾಕ್ತೀನಿ ಅನ್ನೋ ಅರ್ಥದಲ್ಲಿ ರಿಷಾ ಹೇಳಿದ್ದುʼ ಎಂದು ಹೇಳಿದ್ದಾರೆ.
Kavya : Gilli, Kaavu Kaavu annod nilsu, nang affect agtide
— Manu (@yoitzmanu) November 11, 2025
Gilli : Naan maatadsalla bidu.
Are they serious?#Gilli #BBKSeason12 #BBK12 pic.twitter.com/XDDaAp57nm
ಅದಕ್ಕೆ ಕಾವ್ಯ ಉತ್ತರ ನೀಡಿ, ʻಕೆಲವೊಂದು ಸಲ ಎಲ್ಲದಕ್ಕೂ ಉತ್ತರ ನೀಡಬೇಕಾ ಅಂತ ಅನ್ನಿಸತ್ತೆ. ನಿಂಗೆ ತುಂಬಾ ಸಲ ನಾನು ರೇಗಿಸ್ತೀರ್ತಿನಿ. ಆದರೆ ಇನ್ನು ನೀನು ಇನ್ನು ನನ್ನನ್ನು ರೇಗಿಸಬೇಡ. ಕಾವು ಕಾವು ಅನ್ನಬೇಡ. ಅದು ನನಗೆ ಇಷ್ಟ ಆಗೋದಿಲ್ಲ. ಅದು ನನಗೆ ಎಫೆಕ್ಟ್ ಆಗಿದೆ. ನಾನು ಇದನ್ನು ಗಂಭೀರವಾಗಿ ಹೇಳುತ್ತಿದ್ದೇನೆ’ ಎಂದು ಕಾವ್ಯಾ ಅವರು ಗಿಲ್ಲಿಗೆ ಹೇಳಿದರು.
ಇನ್ಮುಂದೆ ಮಾತನಾಡುವುದೇ ಇಲ್ಲ
ಆದರೆ, ಗಿಲ್ಲಿ ಕಾವ್ಯ ಮಾತನ್ನು ಒಪ್ಪಲಿಲ್ಲ. ಗಿಲ್ಲಿ ಕೂಡ ‘ನಾನು ನಿನ್ನ ರೇಗಿಸಿಯೇ ರೇಗಿಸುತ್ತೇನೆ’ ಎಂದರು. ‘ಸರಿ ನಾನು ಇನ್ಮುಂದೆ ನಿನ್ನ ಬಳಿ ಮಾತನಾಡುವುದೇ ಇಲ್ಲ’ ಎಂದರು ಗಿಲ್ಲಿ. ಅದಕ್ಕೆ ಗಿಲ್ಲಿ ಅವರಿಗೆ ಕಾವ್ಯ ಅವರು, ʻಮಾತನಾಡಿಸದೇ ಇರೋದು ತುಂಬಾ ತಪ್ಪಾಗತ್ತೆʼ ಎಂದರು. ಅದಕ್ಕೆ ಗಿಲ್ಲಿ ಅವರು, ʻರೂಲ್ಸ್‌ಬುಕ್ ಅಲ್ಲಿ ಎಲ್ಲರ ಜೊತೆ ಮಾತನಾಡಿ ಅಂತ ಎಲ್ಲಿಯೂ ಹೇಳಿಲ್ಲʼ ಎಂದು ಹೇಳಿದ್ದಾರೆ.
ಇದನ್ನೂ ಓದಿ: Bigg Boss Kannada 12: ಮಾಳು ನೇರನುಡಿ ಮನೆಯವರಿಗೆ ಅರಗಿಸಿಕೊಳ್ಳೋಕೆ ಆಗ್ತಿಲ್ವಾ? ರಾಶಿಕಾ ಕಣ್ಣೀರು, ಅಶ್ವಿನಿ ಗರಂ
ಬಿಗ್ ಬಾಸ್ ಮನೆಯಲ್ಲಿ ಕೆಲವು ಸ್ಪರ್ಧಿಗಳು ಅನೇಕ ಬಾರಿ ಗಿಲ್ಲಿ ಹಾಗೂ ಕಾವ್ಯ ಅವರ ಬಗ್ಗೆ ನೆಗೆಟಿವ್ ಆಗಿ ಮಾತನಾಡಿಕೊಂಡಿದ್ದರು. ಆದರೆ, ಇವರ ಗೆಳೆತನ ಅದೆಷ್ಟು ಸ್ಟ್ರಾಂಗ್ ಆಗಿತ್ತು ಎಂದರೆ ಎಂತಹುದೇ ಪರಿಸ್ಥಿತಿ ಬಂದರೂ ಇವರು ಬೇರೆ ಆಗಿರಲಿಲ್ಲ. ಆದರೀಗ ಈ ಮಾತುಕತೆ ಕಂಡು ವೀಕ್ಷಕರು ಶಾಕ್ ಆಗಿದ್ದಾರೆ.