ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bigg Boss 12: ಗಿಲ್ಲಿ ನಟನಿಗೆ ಕಳಪೆ ಪಟ್ಟ ನೀಡಿದ ಸದಸ್ಯರು; ಅಬ್ಬಬ್ಬಾ! ಏನೇನ್‌ ಕಾರಣ ಕೊಟ್ಟಿದ್ದಾರೆ ನೋಡಿ!

Bigg Boss Kannada 12 Gilli Nata: ಈ ವಾರ ಗಿಲ್ಲಿ ನಟನಿಗೆ ಕಳಪೆ ಪಟ್ಟ ನೀಡಲಾಗಿದೆ. ಸದಸ್ಯರು ನೀಡಿದ ಕಾರಣಗಳು ಗಂಭೀರ ಸ್ವರೂಪದ್ದಾಗಿದ್ದು, ಗಿಲ್ಲಿಯ ಕಾಮಿಡಿ 'ಲಿಮಿಟ್ ಕ್ರಾಸ್' ಮಾಡಿದೆ ಎಂದಿದ್ದಾರೆ. ಅಶ್ವಿನಿ ಗೌಡ ಅವರು ಗಿಲ್ಲಿ ಮನೆಯವರೊಂದಿಗೆ ಬೆರೆಯುವುದಿಲ್ಲ, ಟಾಸ್ಕ್‌ಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲ ಎಂದು ನೇರ ಆರೋಪ ಮಾಡಿದರು.

BBK 12: ಗಿಲ್ಲಿ ನಟನಿಗೆ ಕಳಪೆ ಪಟ್ಟ ಸಿಕ್ಕಿದ್ದೇಕೆ? ಕೊಟ್ಟವರು ಯಾರು?

-

Avinash GR
Avinash GR Dec 5, 2025 11:56 PM

ಬಿಗ್‌ ಬಾಸ್‌ ಮನೆಯಲ್ಲಿ ಈ ವಾರ ಗಿಲ್ಲಿ ನಟ ಅವರಿಗೆ ಕಳಪೆ ನೀಡಲಾಗಿದೆ. ಹಿಂದೊಮ್ಮೆ ಗಿಲ್ಲಿ ನಟ ಕಳಪೆ ಪಟ್ಟ ಪಡೆದುಕೊಂಡಿದ್ದು. ಇದೀಗ ಮತ್ತೊಮ್ಮೆ ಕಳಪೆ ಪಟ್ಟ ಪಡೆದುಕೊಂಡು ಜೈಲಿಗೆ ಹೋಗಿದ್ದಾರೆ. ಅಷ್ಟಕ್ಕೂ ಇವರಿಗೆ ಕಳಪೆ ಪಟ್ಟ ಕೊಟ್ಟವರು ಯಾರು? ಅದಕ್ಕೆ ಅವರುಗಳು ನೀಡಿದ ಕಾರಣವೇನು? ಮುಂದೆ ಓದಿ

ಗಿಲ್ಲಿಗೆ ಯಾರೆಲ್ಲಾ ಕಳಪೆ ನೀಡಿದ್ರು?

ಅಶ್ವಿನಿ ಗೌಡ: ಗಿಲ್ಲಿಗೆ ಕಳಪೆ ಕೊಡ್ತಿನಿ ಮನೆಯವರ ಜೊತೆ ಬೆರೆಯುವುದು, ಟಾಸ್ಕ್‌ನಲ್ಲಿ ತೊಡಗಿಸಿಕೊಳ್ಳದೇ ಇರುವುದು, ಕೊಟ್ಟಂತಹ ಕೆಲಸಗಳನ್ನು ಮಾಡದೇ ಇರುವುದು. ನಾವು ಪದೇಪದೇ ಮಾಡು ಮಾಡು ಅಂತ ಹೇಳ್ತಾ ಇರಬೇಕು. ಬರೀ ಒಂದಷ್ಟು ಜನರ ಜೊತೆ ಮಾತ್ರ ಬೆರೆಯುತ್ತೀರಿ. ನಮ್ಮ ವಿಚಾರ ನಿಮ್ಮ ಪ್ರಚಾರ ಆಗಿಬಿಟ್ಟಿದೆ. ಅದನ್ನೆಲ್ಲಾ ಕಡಿಮೆ ಮಾಡಿಕೊಳ್ಳಿ. ಎಲ್ಲೂ ಕೂಡ ನಿಮ್ಮ ಭಾವನೆಗಳನ್ನು ನೀವು ಹಂಚಿಕೊಂಡಿದ್ದನ್ನು ನಾನು ನೋಡಿಲ್ಲ. ಬರೀ ಕಾಮಿಡಿ ಕಾಮಿಡಿ.. ಇನ್ನೊಬ್ಬರ ಕಾಲೆಳೆಯುವುದು ಬರೀ ಇಷ್ಟೇ.

ಅಭಿಷೇಕ್: ಗಿಲ್ಲಿ ತುಂಬಾ ಕಡಿಮೆ ಕೆಲಸ ಮಾಡಿದ್ದಾರೆ.. ಅವರಿಗೆ ನಾನು ಕಳಪೆ ನೀಡುತ್ತೇನೆ.

The Devil Movie: `ಡೆವಿಲ್‌' ಸಿನಿಮಾದಲ್ಲಿ ಗಿಲ್ಲಿ ನಟನ ಪರ್ಫಾರ್ಮೆನ್ಸ್ ಹೇಗಿದೆ? ನಟ ಚಂದು ಗೌಡ ಮನದಾಳದ ಮಾತು!

ಧ್ರುವಂತ್:‌ ನನ್ನ ಪ್ರೀತಿಯ, ಆತ್ಮೀಯ, ನೆಚ್ಚಿನ ಗಿಲ್ಲಿ ಅವರಿಗೆ ನಾನು ಕಳಪೆ ನೀಡುತ್ತೇನೆ. ಇನ್ನೊಬ್ಬರಿಗೆ ವ್ಯಂಗ್ಯ ಮಾಡೋದನ್ನು ಹಾಸ್ಯ ಎಂದು ತಪ್ಪು ತಿಳಿದುಕೊಂಡಿದ್ದಾರೆ. ಕೆಲಸದ ವಿಚಾರ ಬಂದ್ರೆ ಅವರಷ್ಟು ಕಳಪೆ ಕೆಲಸವನ್ನು ಈ ಮನೆಯಲ್ಲಿ ಯಾರೂ ಮಾಡೋದಿಲ್ಲ.

ರಘು: ಕಳಪೆಯನ್ನು ನಾನು ಗಿಲ್ಲಿಗೆ ನೀಡುತ್ತಿದ್ದೇನೆ. ಯಾಕೆಂದರೆ, ತುಂಬಾ ದಿವಸದಿಂದ ನೋಡ್ತಾ ಇದ್ದೇನೆ. ಕಾಮಿಡಿ ಮತ್ತು ಪರ್ಸನಲ್‌ ಸ್ಪೇಸ್‌ ಮಧ್ಯೆ ಒಂದು ಲೈನ್‌ ಇರುತ್ತದೆ. ಆ ಲೈನ್‌ ಅನ್ನು ಕ್ರಾಸ್‌ ಮಾಡಬಾರದು. ಕಾಮಿಡಿ ಮಾಡಲಿ, ಆದರೆ ಲಿಮಿಟ್‌ ಕ್ರಾಸ್‌ ಮಾಡಬಾರದು. ಈ ವಾರ ಅಂತೂ ತುಂಬಾ ಲಿಮಿಟ್‌ ಕ್ರಾಸ್‌ ಮಾಡಿದ. ನನಗೆ ತುಂಬಾ ಹರ್ಟ್‌ ಆಯ್ತು.

Bigg Boss Kannada 12: ಗಿಲ್ಲಿ ನಟಗೆ ಕಳಪೆ! ಎಚ್ಚರಿಕೆಯಿಂದಿರು ಅಂತ ವಾರ್ನ್‌ ಮಾಡಿದ್ದೇಕೆ ಚೈತ್ರಾ ಕುಂದಾಪುರ?

ಸೂರಜ್: ಗಿಲ್ಲಿಗೆ ಕಳಪೆ ಕೊಟ್ಟಿದ್ದು ಯಾಕೆ ಎಂದರೆ, ನನ್ನ ಮತ್ತು ಅವನ ಮಾತಿನ ಮಧ್ಯೆ ಒಂದಷ್ಟು ವಿಚಾರಗಳಿಗೆ ಹರ್ಟ್‌ ಆಯ್ತು. ಅದನ್ನು ಅವನಿಗೆ ಹೇಳಿದ್ದೆ. ಆ ಕಾರಣಕ್ಕೆ ಅವನು ಕಳಪೆ ನೀಡುತ್ತಿದ್ದೇನೆ.

ಮಾಳು: ಗಿಲ್ಲಿಗೆ ಕಳಪೆ ನೀಡಿದ್ದೇನೆ,

ರಾಶಿಕಾ: ಗಿಲ್ಲಿಗೆ ನಾನು ಯಾಕೆ ಕಳಪೆ ಕೊಡ್ತಾ ಇದ್ದೇನೆ ಎಂದರೆ, ಅವರು ಮಾಡುವ ಕಾಮಿಡಿಯಿಂದ ಅವರ ವ್ಯಕ್ತಿತ್ವವನ್ನು ಅವರೇ ಕೆಳಗೆ ಹಾಕ್ಕೋ ಬಾರದು. ಆದರೆ ಅದನ್ನು ಗಿಲ್ಲಿ ಮಾಡ್ತಾ ಇದ್ದಾನೆ ಅನ್ನಿಸ್ತು. ಎದುರಾಳಿ ವ್ಯಕ್ತಿಗೆ ಒಂದು ಗೌರವ ಇರುತ್ತದೆ. ಅದನ್ನು ಕೊಡಬೇಕು. ಕ್ಯಾಪ್ಟನ್ಸಿ ರೇಸ್‌ ಅಲ್ಲೂ ಗಿಲ್ಲಿಗೆ ಅದರ ಮಹತ್ವ ಗೊತ್ತಿಲ್ಲ.

ಚೈತ್ರಾ ಕುಂದಾಪುರ: ಗಿಲ್ಲಿ ನನಗೆ ವಯಸ್ಸಿನ ವಿಚಾರದಲ್ಲಿ ತಮಾಷೆ ಮಾಡಿದ್ದು ಇಷ್ಟವಾಗಲಿಲ್ಲ. ನನ್ನ ಫ್ಯಾಮಿಲಿ ಕೂಡ ನೋಡ್ತಾ ಇರತ್ತೆ. ಎಚ್ಚರಿಕೆಯಿಂದ ಇರಬೇಕು ಎಂದು ಹೇಳಿದ್ದೆ. ಆದರೂ ಗಾರ್ಡನ್‌ ಏರಿಯಾದಲ್ಲಿ ಅದನ್ನೇ ರಿಪೀಟ್‌ ಮಾಡಿದ. ಬರೀ ಮನೆ ಕೆಲಸವನ್ನು ಮಾಡೋಕೆ ಬಂದಿದ್ದೀವ ಅನ್ನೋದು ತಪ್ಪು.