ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Bigg Boss Kannada 12: ಇದೊಂದೇ ಕಾರಣಕ್ಕೆ ಗಿಲ್ಲಿ ಮುಂದೆಯೇ ಶಿಶಿರ್ ಶಾಸ್ತ್ರಿ ನೆನಪಿಸಿಕೊಂಡ ಕಾವ್ಯ!

Gilli Nata: ಬಿಗ್‌ ಬಾಸ್‌ ಫಿನಾಲೆ ಹತ್ತಿರವಾದಂತೆ ಸ್ಪರ್ಧಿಗಳು ಈಗಲೇ ಮನೆಯನ್ನ ಮಿಸ್‌ ಮಾಡಿಕೊಳ್ಳುತ್ತಿದ್ದಾರೆ. ಬಿಗ್ ಬಾಸ್ʼ ಅಂದ್ರೆ ಆಟ ಅಷ್ಟೇ ಅಲ್ಲ, ಜೀವನ ಪಾಠ ಕಲಿಸೋ ಶೋ ಅಂರ ರಘು, ಕಾವ್ಯ, ರಾಶಿಕಾ ಮಾತನಾಡಿಕೊಂಡಿದ್ದಾರೆ. ಈ ವೇಳೆ ಕಾವ್ಯ ಅವರು ಶಿಶಿರ್ ಮಾತನ್ನು ನೆನಪಿಸಿಕೊಂಡಿದ್ದಾರೆ. ಈ ವೇಳೆ ಗಿಲ್ಲಿ ನಟ ಹಾಗೂ ರಕ್ಷಿತಾ ಕೂಡ ಅಲ್ಲೇ ಇದ್ದರು.

ಇದೊಂದೇ ಕಾರಣಕ್ಕೆ ಗಿಲ್ಲಿ ಮುಂದೆಯೇ ಶಿಶಿರ್ ಶಾಸ್ತ್ರಿ ನೆನಪಿಸಿಕೊಂಡ ಕಾವ್ಯ!

ಬಿಗ್‌ ಬಾಸ್‌ ಕನ್ನಡ -

Yashaswi Devadiga
Yashaswi Devadiga Jan 9, 2026 7:17 PM

ಬಿಗ್‌ ಬಾಸ್‌ ಫಿನಾಲೆ (Bigg Boss Kannada Finale 12) ಹತ್ತಿರವಾದಂತೆ ಸ್ಪರ್ಧಿಗಳು ಈಗಲೇ ಮನೆಯನ್ನ ಮಿಸ್‌ ಮಾಡಿಕೊಳ್ಳುತ್ತಿದ್ದಾರೆ. ಬಿಗ್ ಬಾಸ್ʼ ಅಂದ್ರೆ ಆಟ ಅಷ್ಟೇ ಅಲ್ಲ, ಜೀವನ ಪಾಠ ಕಲಿಸೋ ಶೋ ಅಂರ ರಘು (Mutent Raghu), ಕಾವ್ಯ, ರಾಶಿಕಾ (Kavya Rashika) ಮಾತನಾಡಿಕೊಂಡಿದ್ದಾರೆ. ಈ ವೇಳೆ ಕಾವ್ಯ ಅವರು ಶಿಶಿರ್ ಮಾತನ್ನು ನೆನಪಿಸಿಕೊಂಡಿದ್ದಾರೆ. ಈ ವೇಳೆ ಗಿಲ್ಲಿ ನಟ (Gilli Nata) ಹಾಗೂ ರಕ್ಷಿತಾ ಕೂಡ ಅಲ್ಲೇ ಇದ್ದರು.

ಶಿಶಿರ್‌ ನೆನಪಿಸಿಕೊಂಡ ಕಾವ್ಯ

ಮೊದಲಿಗೆ ರಘು ಮಾತನಾಡಿ, ಬಿಗ್‌ ಬಾಸ್‌ ಮನೆಗೆ ಬಂದು ಎಲ್ಲದರ ವ್ಯಾಲ್ಯೂ ಗೊತ್ತಾಗಿ ಹೋಯ್ತು. ಏನೇನು ಮಿಸ್ಟೇಕ್‌ ಮಾಡಿದ್ದೆ ಅದೆಲ್ಲ ಗೊತ್ತಾಯ್ತು. ಇಲ್ಲಿಂದ ಹೋದ ಮೇಲೆ ತಪ್ಪುಗಳನ್ನು ಸರಿ ಮಾಡಿಕೊಂಡಿಲ್ಲ ಅಂದ್ರೆ ನಮ್ಮಷ್ಟು ಮುರ್ಖರು ಯಾರೂ ಇಲ್ಲ ಎಂದಿದ್ದಾರೆ.

ಇದನ್ನೂ ಓದಿ: Bigg Boss Kannada 12: ಧ್ರುವಂತ್ ತುಂಬಾ ಪಾಪ, ಕೆಟ್ಟ ಮನುಷ್ಯ ಅಲ್ಲ; ರಕ್ಷಿತಾ ಶೆಟ್ಟಿಗೆ ಮೂಡಿದೆ ಅನುಕಂಪ

ಇದೇ ವೇಳೆ ಕಾವ್ಯ ಅವರು ಶಿಶಿರ್‌ ಅವರನ್ನ ನೆನಪಿಸಿಕೊಂಡಿದ್ದಾರೆ. ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋ ಸೀಸನ್ 1 ರಿಂದ 12ನೇ ಸೀಸನ್‌ವರೆಗೆ 200 ಜನ ಸ್ಪರ್ಧಾಳುಗಳನ್ನು ಕಂಡಿದೆ. ಇನ್ನು ನಾನು ಈ ಸೀಸನ್‌ಗೆ ಬರುವ ಮುನ್ನ ಶಿಶಿರ್ ಅವರು ಒಂದು ಮಾತನ್ನು ಹೇಳುತ್ತಿದ್ದರು. ಅವರು ಹೇಳ್ತಾ ಇದ್ದರು ಇಲ್ಲಿಂದ ಹೋದ ಮೇಲೆ ಸಮಸ್ಯೆಗಳು ಏನೇ ಬಂದರೂ ಫೇಸ್‌ ಮಾಡ್ತೀವಿ ಅನ್ನೋದನ್ನ ಅವರು ಹೇಳಿದ್ದರು ಎಂದಿದ್ದಾರೆ.

ವಿಡಿಯೋಗಳನ್ನ ಮಾಡುವುದಕ್ಕೆ ಆರಂಭಿಸುವೆ

ರಘು ಮುಂದುವರಿದು ನನ್ನ ಜೀವನದಲ್ಲಿ ಎಷ್ಟೆಷ್ಟೋ ಸಮಸ್ಯೆಗಳು ಬಂದಿತ್ತು. ಏನೂ ಬ್ಯಾಕ್‌ಅಪ್‌ ಇರಲಿಲ್ಲ. ಆದರೆ ಇಲ್ಲಿ ಬಂದು ಇನ್ನಷ್ಟು ಸ್ಟ್ರಾಂಗ್‌ ಆದೆ. ನಾನು ಇನ್ನು ಮುಂದೆ ವಿಡಿಯೋಗಳನ್ನ ಮಾಡುವುದಕ್ಕೆ ಆರಂಭಿಸುತ್ತೇನೆ. ನನ್ನ ಜೀವನದ ಮತ್ತು ಬಿಗ್ ಬಾಸ್ ಮನೆಯೊಳಗೆ ಕಳೆದ ಕ್ಷಣಗಳನ್ನು ನಾನು ಜನರ ಮುಂದೆ ವಿಡಿಯೋಗಳ ಮೂಲಕ ಹಂಚಿಕೊಳ್ಳುತ್ತೇನೆ ಎಂದು ರಘು ಅವರು ಹೇಳಿದ್ದಾರೆ.

ರಕ್ಷಿತಾ ಮೇಲೆ ರಾಶಿಕಾ ಗರಂ

ಬಿಗ್‌ ಬಾಸ್‌ ಫಿನಾಲೆ ಹತ್ತಿರ ಬರುತ್ತಿದ್ದಂತೆ ಸ್ಪರ್ಧಿಗಳ ಮಧ್ಯೆ ಕಾಂಪಿಟೇಶನ್‌ ಹೆಚ್ಚಾಗುತ್ತಿದೆ. ಕಳಪೆ ಉತ್ತಮ ನೀಡುವ ಸಮಯದಲ್ಲಿ ರಾಶಿಕಾ ಹಾಗೂ ರಕ್ಷಿತಾ ನಡುವೆ ವಾದ ವಿವಾದಗಳು ಆಗಿವೆ. ಸಂಪ್ರದಾಯದಂತೆ ಒಬ್ಬೊಬ್ಬರು ಒಬ್ಬೊಬ್ಬರಿಗೆ ಕಳಪೆ ಕೊಟ್ಟಿದ್ದಾರೆ. ರಾಶಿಕಾ, ರಕ್ಷಿತಾ ಶೆಟ್ಟಿಗೆ ಕಳಪೆ ಕೊಟ್ಟಿದ್ದಾರೆ ಆದರೆ ಇದು ರಕ್ಷಿತಾ ಶೆಟ್ಟಿಗೆ ಸಖತ್‌ ಕೋಪ ಬರಿಸುವಂತೆ ಮಾಡಿದೆ. ರಕ್ಷಿತಾರ ಜಗಳ, ವಾದ ನೋಡಿ ಧ್ರುವಂತ್ ನಕ್ಕಿದ್ದಾರೆ.

ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋನಲ್ಲಿ ಗಿಲ್ಲಿ ನಟ ಅವರು ಸೋಫಾ ಮೇಲೆ ಕೂತಿದ್ದರು. ಆ ವೇಳೆ ಅಲ್ಲಿಯೇ ಇದ್ದ ಬೀನ್‌ ಬ್ಯಾಗ್‌ನ್ನು ರಕ್ಷಿತಾ ಶೆಟ್ಟಿ ಅವರು ತಗೊಂಡು, ದೂರ ಇಟ್ಟಿದ್ದಾರೆ. ಆಗ ಗಿಲ್ಲಿ ಕೂಡ ಪ್ರಶ್ನೆ ಮಾಡಿದ್ದರು. ಆ ಬಳಿಕ ಧನುಷ್‌ ಬಂದು ಮತ್ತೆ ಬಿನ್‌ ಬ್ಯಾಗ್‌ ತೆಗೆದುಕೊಂಡು ಮುಂದೆ ಬಂದು ಕುಳಿತ್ತಿದ್ದರು.

ಇದನ್ನೂ ಓದಿ: Bigg Boss Kannada12: ನಿಮ್ಮನ್ನು ಇಷ್ಟ ಪಡೋರಿಗೆ ವ್ಯಾಲ್ಯೂ ಕೊಡಿ ; ಗಿಲ್ಲಿಗೆ ಸ್ನೇಹಿತೆ ರಕ್ಷಿತಾ ಬುದ್ಧಿಮಾತು

ಇದೀಗ ಈ ಕಾರಣ ನೀಡಿ, ಬಿಗ್‌ ಬಾಸ್‌ ಮನೆಯಲ್ಲಿ ರಕ್ಷಿತಾ ಶೆಟ್ಟಿ ಅವರು ಕಳಪೆ ಎಂದು ರಾಶಿಕಾ ಶೆಟ್ಟಿ ಹೇಳಿದ್ದಾರೆ. ಗಿಲ್ಲಿ ನಟನ ಜೊತೆ ಮಾತನಾಡಬೇಕು, ಇಬ್ಬರೇ ಕೂರಬೇಕು, ಪ್ರೈವೆಸಿ ಬೇಕು ಎಂದು ರಾಶಿಕಾ ಶೆಟ್ಟಿ ಹೇಳಿದ್ದಾರೆ. ಕಾವ್ಯ, ಗಿಲ್ಲಿ ಜೊತೆಗಿರಲಿ, ರಘು-ರಾಶಿಕಾ ಪಕ್ಕದಲ್ಲಿ ಕೂತರೂ ರಕ್ಷಿತಾಗೆ ಇಷ್ಟ ಆಗೋದಿಲ್ಲ ಎಂದಿದ್ದಾರೆ.