BBK 12: ʻನಾನು ಇರಲ್ಲ, ನನ್ನನ್ನು ಆಚೆ ಕಳಿಸಿ ಬಿಗ್ ಬಾಸ್ʼ; ಏಕಾಏಕಿ ಅಶ್ವಿನಿ ಗೌಡ ಹೀಗೆ ಹೇಳಲು ಕಾರಣ ಏನು?
Bigg Boss Kannada 12 Ashwini Gowda: ಬಿಗ್ ಬಾಸ್ ಮನೆಯಲ್ಲಿ ಕ್ಯಾಪ್ಟನ್ ರಘು ಮತ್ತು ಅಶ್ವಿನಿ ಗೌಡ ನಡುವೆ ಮನೆ ಕೆಲಸದ ವಿಚಾರವಾಗಿ ದೊಡ್ಡ ಜಗಳ ನಡೆದಿದೆ. ಬ್ಯಾಕ್ ಪೇಯ್ನ್ ಕಾರಣಕ್ಕೆ 10 ನಿಮಿಷ ರೆಸ್ಟ್ ಕೇಳಿದ್ದ ಅಶ್ವಿನಿಗೆ, "ನೆಟ್ಟಗೆ ಕೆಲಸ ಮಾಡೋಕೆ ಆಗಲ್ಲ" ಎಂದು ರಘು ಹೇಳಿದ್ದಾರೆ. ಇದಕ್ಕೆ ಆಕ್ರೋಶಗೊಂಡ ಅಶ್ವಿನಿ, "ಯಾವನೋ ನೀನು ಲೇಯ್" ಎಂದು ರಘುಗೆ ತಿರುಗೇಟು ನೀಡಿದ್ದಾರೆ. ನಂತರ "ನನ್ನನ್ನು ಹೊರಗೆ ಕಳುಹಿಸಿ ಬಿಗ್ ಬಾಸ್" ಎಂದು ಮನೆ ಬಾಗಿಲನ್ನು ಬಡಿದಿದ್ದಾರೆ ಅಶ್ವಿನಿ ಗೌಡ.
-
ʻಬಿಗ್ ಬಾಸ್ʼ ಮನೆಯಲ್ಲಿ ಕೆಲ ವಾರಗಳ ಹಿಂದಷ್ಟೇ ಸ್ಪರ್ಧಿ ಚಂದ್ರಪ್ರಭ ಅವರು ಎಲಿಮಿನೇಷನ್‌ಗೂ ಮುಂಚೆಯೇ ಮೇನ್ ಡೋರ್ ಬಡಿದಿದ್ದರು. ಹೊರಗೆ ಕಳಿಸಿ ಎಂದು ಮನವಿ ಮಾಡಿಕೊಂಡಿದ್ದರು. ಆನಂತರ ಅವರು ಎಲಿಮಿನೇಟ್ ಆಗಿದ್ದು ಗೊತ್ತೇ ಇದೆ. ಇದೀಗ ಅಶ್ವಿನಿ ಗೌಡ ಅವರು ಕೂಡ ಅದೇ ಮಾತನ್ನು ರಿಪೀಟ್ ಮಾಡಿದ್ದಾರೆ. "ಬಿಗ್ ಬಾಸ್ ನನ್ನನ್ನು ಹೊರಗೆ ಕಳುಹಿಸಿ, ನಾನಿಲ್ಲಿ ಇರೋದಿಲ್ಲ" ಹೇಳಿದ್ದಾರೆ. ಅಂಥದ್ದೇನಾಯ್ತು? ಮುಂದೆ ಓದಿ.
ರಘು ಗೌಡ ಜೊತೆ ಅಶ್ವಿನಿ ಗೌಡ ಜಗಳ
ನವೆಂಬರ್ 19ರ ಸಂಚಿಕೆಯ ಹೊಸ ಪ್ರೋಮೋವನ್ನು ಕಲರ್ಸ್ ಕನ್ನಡ ವಾಹಿನಿಯವರು ರಿಲೀಸ್ ಮಾಡಿದ್ದಾರೆ. ಅದರಲ್ಲಿ ಅಶ್ವಿನಿ ಗೌಡ ಮತ್ತು ರಘು ನಡುವೆ ದೊಡ್ಡ ಜಗಳವೇ ನಡೆದಿದೆ. ರಘು ಈಗ ಬಿಗ್ ಬಾಸ್ ಮನೆಯ ಕ್ಯಾಪ್ಟನ್ ಆಗಿದ್ದಾರೆ. ಹಾಗಾಗಿ, ಮನೆ ಕೆಲಸ ಮಾಡುವ ಬಗ್ಗೆ ಚರ್ಚೆ ನಡೆದಿದೆ. ಆಗ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಗಲಾಟೆ ಆಗಿದೆ. ಇದರಿಂದ ರೋಸಿಹೋದ ಅಶ್ವಿನಿ ಗೌಡ, ಅಳುತ್ತಾ ಬಿಗ್ ಬಾಸ್ ಮನೆಯ ಬಾಗಿಲು ಬಡಿದಿದ್ದಾರೆ.
BBK 12: ಅಶ್ವಿನಿ ಗೌಡಾಗೆ ಶಾಕ್ ಮೇಲೆ ಶಾಕ್: ರಘು ಆಯ್ತು ಈಗ ರಿಷಾ ಗೌಡ ಸರದಿ
ಅಶ್ವಿನಿ & ರಘು ಮಧ್ಯೆ ನಡೆದ ಮಾತಿನ ಚಕಮಕಿ!
ರಘು: ಎಲ್ಲಪ್ಪ ಅಶ್ವಿನಿ ಅವರು..? ಅವರಿಗೆ ಕ್ಲೀನ್ ಮಾಡೋಕೆ ಹೇಳಿ.
ಅಶ್ವಿನಿ ಗೌಡ: 10 ನಿಮಿಷ ರೆಸ್ಟ್ ಬೇಕು, ನನಗೆ ಬ್ಯಾಕ್ ಪೇಯ್ನ್ ಆಗ್ತಿದೆ, ಮಾಡ್ತಿನಿ.
ರಘು: 10 ನಿಮಿಷದಲ್ಲಿ ಬ್ಯಾಕ್ ಪೇಯ್ನ್ ಕಮ್ಮಿ ಆಗಿಬಿಡುತ್ತಾ? ನೆಟ್ಟಗೆ ಕೆಲಸ ಮಾಡೋಕೆ ಆಗಲ್ಲ. ಮಾತು ಮಾತ್ರ ಆಡ್ತಾರೆ.
BBK 12: ಬಿಗ್ ಬಾಸ್ ಕಾಲೇಜ್ನಲ್ಲಿ ಅಶ್ವಿನಿ ಗೌಡ-ಜಾನ್ವಿಯಿಂದ ಪ್ರೀತಿಯ ವಿವರಣೆ
ಅಶ್ವಿನಿ: ಹೇಯ್.. ಮಾಡಲ್ಲ ಹೋಗ್ರಿ!
ರಘು: ಹೇಯ್, ಮಾಡ್ಕೋಬೇಡ ಹೋಗು.
ಅಶ್ವಿನಿ: ಹೋಗು ಗೀಗು ಅಂತ ಮಾತನಾಡೋ ಅಧಿಕಾರ ನಿಂಗಿಲ್ಲ. ಏಕವಚನದಲ್ಲಿ ಮಾತನಾಡಬೇಡ. ನೀನು ಯಾರು ಏಕವಚನದಲ್ಲಿ ಮಾನಾಡೋಕೆ?
ರಘು: ಕೈ ತೋರಿಸಿಬೇಡ.. ಕೈ ಇಳಿಸು. ಎಷ್ಟು ಅಂತ ಮರ್ಯಾದೆ ಕೊಡಲಿ? ಯಾಕ್ ಕೈ ತೋರಿಸ್ತಾ ಇದ್ದೀಯಾ ನೀನು? ಹೋಗೆ..
ಅಶ್ವಿನಿ: ಯಾವನೋ ನೀನು ಲೇಯ್... ಈಗಲೇ ಕಳುಹಿಸಿ ಆಚೆ ನನ್ನನ್ನು.. ಬಿಗ್ ಬಾಸ್ ಕಳುಹಿಸಿ.. ನಾನು ಇರಲ್ಲ.
ಅಶ್ವಿನಿ ಮತ್ತು ರಘು ನಡುವೆ ವಾಕ್ಸಮರ
- ಇದು ಅಶ್ವಿನಿ ಗೌಡ ಮತ್ತು ರಘು ಮಧ್ಯೆ ನಡೆದ ಮಾತಿನ ಚಕಮಕಿಯಾಗಿದೆ. "ನಾನು ಹೊರಗೆ ಹೋಗಬೇಕು" ಎಂದು ಹಠ ಮಾಡುತ್ತಿದ್ದ ಅಶ್ವಿನಿ ಗೌಡ ಅವರನ್ನು ಮನೆಯ ಸದಸ್ಯರು ಸಮಾಧಾನ ಮಾಡೋಕೆ ತುಂಬಾ ಪ್ರಯತ್ನಿಸಿದ್ದಾರೆ. ಮುಂದೇನಾಯ್ತು ಎಂಬುದು ಇಂದಿನ (ನ.19) ಸಂಚಿಕೆಯಲ್ಲಿ ಗೊತ್ತಾಗಲಿದೆ. ಅಂದಹಾಗೆ, ರಘು ಅವರು ಬಿಗ್ ಬಾಸ್ ಮನೆಗೆ ಕಾಲಿಟ್ಟ ಮೊದಲೇ ದಿನವೇ ಅಶ್ವಿನಿ ಗೌಡ ಅವರು ಜಗಳ ಮಾಡಿದ್ದರು. ಇದೀಗ ಮತ್ತೊಮ್ಮೆ ಇಬ್ಬರ ಮಧ್ಯೆ ಜೋರು ಜಗಳ ನಡೆದಿದೆ.