ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

BBK 12: ‌ʻಬಿಗ್‌ ಬಾಸ್ʼ ಮನೆಯಲ್ಲಿ ಈ ವಾರ 10 ಮಂದಿಗೆ ಢವಢವ; ನಾಮಿನೇಟ್‌ ಆದವರ ಫುಲ್‌ ಲಿಸ್ಟ್‌ ಇಲ್ಲಿದೆ!

Bigg Boss Kannada 12 Nomination: 'ಬಿಗ್‌ ಬಾಸ್‌' ಮನೆಯಲ್ಲಿ ಈ ವಾರ ಒಟ್ಟು 10 ಮಂದಿ ನಾಮಿನೇಟ್‌ ಆಗಿದ್ದು, ಎಲಿಮಿನೇಷನ್ ಹವಾ ಜೋರಾಗಿದೆ. "ಯೋಗ್ಯತೆ ಇಲ್ಲದವರು ಮನೆಯಲ್ಲಿ ಇರುವುದು ಅಪರಾಧ" ಎಂದು ಬಿಗ್‌ ಬಾಸ್‌ ನೀಡಿದ ಟಾಸ್ಕ್‌ನಲ್ಲಿ, 7 ಮಂದಿ ಮನೆಯ ಸದಸ್ಯರಿಂದ ನಾಮಿನೇಟ್‌ ಆಗಿದ್ದಾರೆ. ಜಾಹ್ನವಿ, ಅಶ್ವಿನಿ ಗೌಡ, ರಕ್ಷಿತಾ ಶೆಟ್ಟಿ ಅವರನ್ನು ನೇರವಾಗಿ ನಾಮಿನೇಟ್‌ ಮಾಡಲಾಗಿದೆ.

BBK 12: ಈ ವಾರ 10 ಮಂದಿಗೆ ಢವಢವ! ನಾಮಿನೇಟ್‌ ಆದವರು ಯಾರು?

-

Avinash GR
Avinash GR Nov 19, 2025 8:21 AM

ಬಿಗ್‌ ಬಾಸ್‌ ಮನೆಯಲ್ಲಿ ಈ ವಾರ ನಾಮಿನೇಷನ್‌ ಹವಾ ಜೋರಾಗಿದೆ. ಈ ಸಲ ಸುಮಾರು 10 ಮಂದಿ ನಾಮಿನೇಟ್‌ ಆಗಿದ್ದಾರೆ. ಅದರಲ್ಲಿ ಮನೆಯ ಸ್ಪರ್ಧಿಗಳಿಂದ 7 ಮಂದಿ ನಾಮಿನೇಟ್‌ ಆದರೆ ಮೂವರು ನೇರವಾಗಿ ನಾಮಿನೇಟ್‌ ಆಗಿದ್ದಾರೆ. ಇಷ್ಟು ಜನರಲ್ಲಿ ಈ ವಾರ ಯಾರು ಎಲಿಮಿನೇಟ್‌ ಆಗಬಹುದು ಎಂಬ ಚರ್ಚೆ ಶುರುವಾಗಿದೆ.

ಯೋಗ್ಯತೆ ಇಲ್ಲದೇ ಇರುವ ಸ್ಪರ್ಧಿಗಳು ಯಾರು?

ಈ ವಾರ ಹೊಸ ರೀತಿಯಲ್ಲಿ ನಾಮಿನೇಷನ್‌ ಮಾಡಲಾಗಿದೆ. ಬಿಗ್‌ ಬಾಸ್‌ ಮನೆಯಲಿ ಉತ್ತಮವಾಗಿ ಆಡಬೇಕು. ಈ ಬಗ್ಗೆ ಮಾತನಾಡಿದ ಬಿಗ್‌ ಬಾಸ್‌, "ಮನೆಯಲ್ಲಿ ಒಂದು ಅಪರಾಧ ನಡೆದಿದೆ. ಆ ಅಪರಾಧ ಮಾಡಿದ ದೋಷಿಯ ಹುಡುಕಾಟ ಈಗ ನಡೆಯಬೇಕಿದೆ. ಬಿಗ್‌ ಬಾಸ್‌ ಆಟದಲ್ಲಿ ಭಾಗವಹಿಸಲು ಹಂಬಲಿಸುವ ಸಹಸ್ರಾರು ಮಂದಿ ಪೈಕಿ ಅವಕಾಶ ಪಡೆದ ಕೆಲವರು ಆ ಅವಕಾಶವನ್ನು ಸರಿಯಾಗಿ ಉಪಯೋಗಿಸಿಕೊಳ್ಳದೇ ಇದ್ದರೆ, ಅಂಥವರು ಬಿಗ್‌ ಬಾಸ್‌ ಮನೆಯಲ್ಲಿ ಇರಲು ಯೋಗ್ಯರಲ್ಲ. ಯೋಗ್ಯತೆ ಇಲ್ಲದವರು ಬಿಗ್‌ ಬಾಸ್‌ ಮನೆಯಲ್ಲಿ ಇರಲು ಅಪರಾಧವೇ ಸರಿ. ಈಗ ಮನೆಯ ಪ್ರತಿಯೊಬ್ಬ ಸದಸ್ಯರು ತಮ್ಮ ವೈಯಕ್ತಿಕ ಅಭಿಪ್ರಾಯದ ಅನುಸಾರ, ಯೋಗ್ಯತೆ ಇಲ್ಲದಿರುವ ಆ ಇಬ್ಬರು ದೋಷಿಗಳನ್ನು ನಿರ್ಧಿರಿಸಿ, ಅವರ ಹೆಸರನ್ನು ನಾಮಿನೇಟ್‌ ಮಾಡಬೇಕು" ಎಂದು ಬಿಗ್‌ ಬಾಸ್‌ ಹೇಳಿದ್ದಾರೆ.

Bigg Boss 12: ಅದೊಂದು ವಿಚಾರಕ್ಕಾಗಿ ಜೈಲಿಗೆ ಹೋಗಿದ್ದ ʻಕಾಕ್ರೋಚ್‌ʼ ಸುಧಿ! ಈ ಪ್ರಕರಣ ಸುಖಾಂತ್ಯವಾಗಿದ್ದೇಗೆ?

ಸದಸ್ಯರಿಂದ ನಾಮಿನೇಟ್‌ ಆದವರು ಯಾರು?

ಈ ವಾರ ನಾಮಿನೇಟ್‌ ಆಗಲು ಅತೀ ಹೆಚ್ಚು ವೋಟ್‌ ಪಡೆದವರು ಅಭಿಷೇಕ್.‌ ನಂತರ ಮಾಳು ನಿಪನಾಳ್‌, ರಿಷಾ ಗೌಡ, ಧ್ರುವಂತ್‌, ರಾಶಿಕಾ ಶೆಟ್ಟಿ, ಸೂರಜ್‌ ಸಿಂಗ್‌, ಸ್ಪಂದನಾ ಸೋಮಣ್ಣ ಅವರು ನಾಮಿನೇಟ್‌ ಆಗಿದ್ದಾರೆ. ಇನ್ನು, ಬಿಗ್‌ ಬಾಸ್‌ ಮನೆಯಲ್ಲಿ ಮೈಕ್‌ ಧರಿಸದೇ ಮಾತನಾಡುವಂತಿಲ್ಲ. ಆದರೂ ಜಾಹ್ನವಿ ಹಾಗೂ ಅಶ್ವಿನಿ ಗೌಡ ಡ್ರೆಸಿಂಗ್ ರೂಮ್​​ಗೆ ತೆರಳಿ, ಮತ್ತೊಮ್ಮೆ ಮೈಕ್ ಇಲ್ಲದೇ ಮಾತನಾಡಿದ್ದು, ಅದಕ್ಕೆ ಬಿಗ್‌ ಬಾಸ್‌ ಅತ್ಯಂತ ಕಠಿಣ ಶಿಕ್ಷೆ ನೀಡಿದ್ದಾರೆ. ಅಶ್ವಿನಿ ಗೌಡ ಹಾಗೂ ಜಾಹ್ನವಿ ಅವರನ್ನು ಈ ವಾರ ನೇರವಾಗಿ ನಾಮಿನೇಟ್‌ ಮಾಡಲಾಗಿದೆ.

Bigg Boss 12: ʻಸುಮ್‌ ಸುಮ್ನೆ ಜಗಳ ಮಾಡೋಣ, ಮಾತು ಬಿಡೋಣʼ; ಜಾಹ್ನವಿ - ಅಶ್ವಿನಿ ಗೌಡಗೆ ಕಿಚ್ಚನ ಕ್ಲಾಸ್!‌

ರಕ್ಷಿತಾಗೆ ಶಾಕ್‌ ನೀಡಿದ ರಘು

7 ಮಂದಿ ಸದಸ್ಯರಿಂದ ನಾಮಿನೇಟ್‌ ಆದರೆ, ಇಬ್ಬರಿಗೆ ಬಿಗ್ಬಾಸ್‌ ನೇರವಾಗಿ ನಾಮಿನೇಟ್‌ ಮಾಡಿದ್ದರು. ಅಂತಿಮವಾಗಿ ಕ್ಯಾಪ್ಟನ್‌ ರಘು ಅವರು ರಕ್ಷಿತಾ ಶೆಟ್ಟಿ ಅವರನ್ನು ನೇರವಾಗಿ ನಾಮಿನೇಟ್ ಮಾಡಿದರು. ಹೌದು, ಕಳೆದ ವಾರ ರಘು ಅವರನ್ನು ರಕ್ಷಿತಾ ನಾಮಿನೇಟ್‌ ಮಾಡಿದ್ದರು. ಆ ಬೇಸರದಿಂದ ಈ ವಾರ ರಕ್ಷಿತಾ ಅವರನ್ನು ನೇರವಾಗಿ ನಾಮಿನೇಟ್‌ ಮಾಡಿದ್ದಾರೆ. ಒಟ್ಟು 10 ಮಂದಿಗೆ ಢವಢವ ಶುರುವಾಗಿದೆ.