Bigg Boss Kannada 12: ನಾಮಿನೇಷ್ನಿಂದ ಸೇಫ್ ಆಗಲು ರಾಶಿಕಾ ಪರದಾಟ; ರಕ್ಷಿತಾ ಜೊತೆ ಕಿತ್ತಾಟಕ್ಕೆ ನಿಂತ ಟೀಂ
ಈ ವಾರ ಮಾಳು ಅವರೇ ನಾಮಿನೇಷನ್ (Bigg Boss Kannada Nomination) ಬಗ್ಗೆ ನಿರ್ಧಾರ ತೆಗೆದುಕೊಳ್ಳಬೇಕಿತ್ತು. ಒಬ್ಬೊಬ್ಬರಿಗೆ ಒಂದೊಂದು ಕಾರಣ ನೀಡಿ ಮಾಳು (Malu Bigg Boss) ನಿಪನಾಳ ಅವರು 6 ಜನರನ್ನು ನಾಮಿನೇಟ್ ಮಾಡಬೇಕಿತ್ತು. ಹೀಗಾಗಿ ಅಶ್ವಿನಿ ಗೌಡ, ಜಾಹ್ನವಿ, ಕಾಕ್ರೋಚ್ ಸುಧಿ, ರಾಶಿಕಾ ಶೆಟ್ಟಿ, ರಕ್ಷಿತಾ ಶೆಟ್ಟಿ, ಧ್ರುವಂತ್ (Dhruvanth) ಅವರನ್ನು ಮಾಳು ನಿಪನಾಳ ಅವರು ನಾಮಿನೇಟ್ ಮಾಡಿದರು. ಆದರೆ ಒಬ್ಬರನ್ನು ನಾಮಿನೇಷನ್‌ನಿಂದ ಸೇಫ್ ಮಾಡಬೇಕು ಎಂಬುದು ಬಿಗ್ ಬಾಸ್ ನಿಯಮವಾಗಿತ್ತು. ಈ ವೇಳೆ ರಾಶಿಕಾ (Rashika) ಹಾಗೂ ರಕ್ಷಿತಾ (Rakshitha) ನಡುವೆ ಮಾತಿನ ಚಕಮಕಿ ನಡೆದಿದೆ.
ಬಿಗ್ ಬಾಸ್ ಕನ್ನಡ -
ಬಿಗ್ ಬಾಸ್ ಮನೆಯಲ್ಲಿ (Bigg Boss Kannada 12) ನಾಮಿನೇಷನ್ (Nomination) ಕಾವು ಜೋರಾಗಿದೆ. ಈ ವಾರ ಕ್ಯಾಪ್ಟನ್ ಮಾಳು (Malu nipanal) ಅವರಿಗೆ ಸ್ಪರ್ಧಿಗಳನ್ನು ನಾಮಿನೇಟ್ ಮಾಡುವ ಅಧಿಕಾರ ಕೊಟ್ಟಿದ್ದಾರೆ. ಹೀಗಾಗಿ ಅಶ್ವಿನಿ ಗೌಡ, ಜಾಹ್ನವಿ, ಕಾಕ್ರೋಚ್ ಸುಧಿ, ರಾಶಿಕಾ ಶೆಟ್ಟಿ, ರಕ್ಷಿತಾ ಶೆಟ್ಟಿ, ಧ್ರುವಂತ್ ಅವರನ್ನು ಮಾಳು ನಿಪನಾಳ ಅವರು ನಾಮಿನೇಟ್ ಮಾಡಿದರು. ಬಿಗ್ ಬಾಸ್ ಮನೆಯ ಮೂಲ ನಿಯಮ ಉಲ್ಲಂಘನೆ ಮಾಡಿದ್ದರಿಂದ ರಿಷಾ (Risha) ಅವರನ್ನು ಕಿಚ್ಚ ಸುದೀಪ್ ಅವರು ನೇರವಾಗಿ ನಾಮಿನೇಟ್ ಮಾಡಿದ್ದಾರೆ. ಆದರೆ ಇಲ್ಲೊಂದು ಟ್ವಿಸ್ಟ್ (Twist) ಇದೆ.
ಏನಿದು ಟಾಸ್ಕ್?
ನಿನ್ನೆಯ ಟಾಸ್ಕ್‌ನಲ್ಲಿ ಬಿಗ್ ಬಾಸ್ ಎರಡು ಗುಂಪುಗಳನ್ನಾಗಿ ಮಾಡಿದ್ದರು. ನಾಮಿನೇಟ್ ಆಗಿರುವ ಸ್ಪರ್ಧಿಗಳು, ಅಲ್ಲದೇ ಇರುವ ಸ್ಪರ್ಧಿಗಳ ಗುಂಪು. ಆದರೆ ಟಾಸ್ಕ್ ಮೂಲಕ ನಾಮಿನೇಟ್ ಆಗಿರುವವರು ಸೇಫ್ ಆಗಬಹುದು. ನಾಮಿನೇಟ್ ಆಗದೇ ಇರೋರು ನಾಮಿನೇಟ್ ಆಗಬಹುದು. ಅಶ್ವಿನಿ ಗೌಡ ಟೀಂ ನಿನ್ನೆಯ ಟಾಸ್ಕ್‌ನಲ್ಲಿ ಗೆದ್ದಿದೆ. ಹೀಗಾಗಿ ಆ ಗುಂಪಿನಲ್ಲಿ ಒಬ್ಬರನ್ನು ನಾಮಿನೇಷನ್‌ನಿಂದ ಸೇಫ್ ಮಾಡಬೇಕು. ಈ ವೇಳೆ ರಾಶಿಕಾ ಹಾಗೂ ರಕ್ಷಿತಾ ನಡುವೆ ಮಾತಿನ ಚಕಮಕಿ ನಡೆದಿದೆ.
ಇದನ್ನೂ ಓದಿ: Bigg Boss Kannada 12: ಧ್ರುವಂತ್ ಇಷ್ಟಪಟ್ಟ ಮಲ್ಲಮ್ಮ, ಚಂದ್ರಪ್ರಭ ಹೋಗಾಯ್ತು, ಉಳಿದವರು ಹುಷಾರ್ ಎಂದ ಗಿಲ್ಲಿ!
ರಕ್ಷಿತಾ ಗರಂ
ಅಶ್ವಿನಿ ತಂಡದಲ್ಲಿ ಬಹುತೇಕರು ರಾಶಿಕಾ ಅವರನ್ನು ಸೇಫ್ ಮಾಡಲು ವೋಟ್ ಹಾಕಿದ್ದಾರೆ. ಆದರೆ ರಕ್ಷಿತಾ ಅವರು ಸುಧಿ ಅವರ ಹೆಸರನ್ನು ತೆಗೆದುಕೊಂಡರು. ಇದು ರಾಶಿಕಾ ಅವರಿಗೆ ಕೋಪ ಬರಿಸುವಂತೆ ಮಾಡಿದೆ. ರಾಶಿಕಾ ಈ ವೇಳೆ ಪ್ರತಿ ವಾರ ನಾನು ನಾಮಿನೇಟ್ ಆಗಿದ್ದೇನೆ ಎಂದರು. ಅದಕ್ಕೆ ಒಪ್ಪದ ರಕ್ಷಿತಾ, ನಾವು ಕೂಡ ನಾಮಿನೇಷನ್ ಫೇಸ್ ಮಾಡಿದ್ದೇವೆ ಎಂದಿದ್ದಾರೆ. ರಾಶಿಕಾ ಕೂಡ ಇಡೀ ತಂಡವೇ ಒಂದು ನಿರ್ಧಾರ ತೆಗೆದುಕೊಂಡಿರುವಾಗ, ರಕ್ಷಿತಾ ನಿರ್ಧಾರವನ್ನು ನಾನು ಒಪ್ಪುವುದಿಲ್ಲ ಎಂದರು. ರಾಶಿಕಾ ಸಿಟ್ಟಿನಿಂದ ಕೂಗಾಡಿದ್ದಾರೆ.
ನಾಮಿನೇಷನ್ ಪ್ರಕ್ರಿಯೆ ಹೇಗಿತ್ತು?
ಈ ವಾರ ಮಾಳು ಅವರೇ ನಿರ್ಧಾರ ತೆಗೆದುಕೊಳ್ಳಬೇಕಿತ್ತು. ಒಬ್ಬೊಬ್ಬರಿಗೆ ಒಂದೊಂದು ಕಾರಣ ನೀಡಿ ಮಾಳು ನಿಪನಾಳ ಅವರು 6 ಜನರನ್ನು ನಾಮಿನೇಟ್ ಮಾಡಬೇಕಿತ್ತು. ಧ್ರುವಂತ್ ಅವರನ್ನು ಸಗಣಿಗೆ ಹೋಲಿಸಿದರೆ, ರಾಶಿಕಾ ಅವರನ್ನ ಕಸಕ್ಕೆ ಹೋಲಿಸಿದರು.ಕಾಕ್ರೋಜ್ ಸುಧಿ ಅವರನ್ನು ಕೆಸರಿಗೆ ಹೋಲಿಸಿದರೆ, ಅಶ್ವಿನಿ ಗೌಡ ಮೇಲೆ ಕಪ್ಪು ನೀರು ಎರೆಚಲಾಯಿತು. ರಕ್ಷಿತಾ ಶೆಟ್ಟಿ ಮೇಲೆ ತಣ್ಣೀರು ಸುರಿಯಲಾಯಿತು. ಜಾಹ್ನವಿಗೆ ಚಿಣಿಮಿಣಿ ಎನ್ನಲಾಯಿತು.
ಮಾಳು ಕೊಟ್ಟ ಕಾರಣವೇನು?
ಬಿಗ್ ಬಾಸ್ ಮನೆಯ ಹೆಣ್ಮಕ್ಕಳ ಬಗ್ಗೆ ಧ್ರುವಂತ್ ಮಾತನಾಡಿದ್ದ ಸರಿಯಲ್ಲ ಎಂಬ ಕಾರಣವನ್ನು ನೀಡಿ ಮಾಳು ನಾಮಿನೇಟ್ ಮಾಡಿದರು. ಕಾಕ್ರೋಜ್ ಸುಧಿ ಅವರಿಗೆ ಮಾಡಿದ ತಪ್ಪನ್ನು ಒಪ್ಪಿಕೊಳ್ಳಲ್ಲ. ಡೈಲಾಗ್ ಇಟ್ಟುಕೊಂಡು ಜನರ ಮನವೊಲಿಸಲು ಪ್ರಯತ್ನಿಸುತ್ತಾರೆ ಎಂದರು. ಇನ್ನು ರಕ್ಷಿತಾ ಬಗ್ಗೆ ಯಾವಾಗಲೂ ಮಲಗಿಕೊಂಡು ಇರುತ್ತಾಳೆ ಎಂದರು.
ಇದನ್ನೂ ಓದಿ: Bigg Boss Kannada 12: ಗಿಲ್ಲಿ- ಕಾವ್ಯ ದೋಸ್ತಿ ಕಟ್? ಕಾವು ಜೊತೆ ಇನ್ಮುಂದೆ ಮಾತನಾಡುವುದಿಲ್ವಂತೆ ಗಿಲ್ಲಿ!
ಅಶ್ವಿನಿ ಅವರಿಗೆ ಕಲ್ಮಶ ಜಾಸ್ತಿ. ಒಬ್ಬರನ್ನೂ ಸರಿಯಾದ ರೀತಿ ನೋಡಲ್ಲ ಎಂದರು. ಯಾರ ಜೊತೆಗೂ ಅವರು ಬೆರೆಯಲ್ಲ. ನನ್ನ ಜೊತೆ ಮಾತನಾಡಿಲ್ಲ ಎಂದು ರಾಶಿಕಾ ಕುರಿತು ಕಾರಣ ನೀಡಿದರು. ಇನ್ನು ಜಾಹ್ನವಿ ಸದಾ ಕ್ಯಾಮೆರಾ ಮುಂದೆ ಇರ್ತಾರೆ. ತಮ್ಮ ಬಗ್ಗೆಯೇ ಎಲ್ಲರೂ ಗಮನ ನೀಡಬೇಕು ಎಂದಿರುತ್ತಾರೆ ಎಂಬ ಕಾರಣವನ್ನು ನೀಡಿದರು.