ʻಬಿಗ್ ಬಾಸ್ʼ ಶೋನಲ್ಲಿ ಸಿಕ್ಕ 20 ಲಕ್ಷ ರೂ. ವೋಚರ್‌ನಿಂದ ಬಂಗಾರ ಖರೀಸಿದ ʻರನ್ನರ್ ಅಪ್ʼ ರಕ್ಷಿತಾ ಶೆಟ್ಟಿ; ಏನೇನ್ ತಗೊಂಡ್ರು ನೋಡಿ!
Rakshitha Shetty Gold Purchase: ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ರನ್ನರ್ ಅಪ್ ಆಗಿದ್ದ ರಕ್ಷಿತಾ ಅವರಿಗೆ ಶ್ರೀ ಸಾಯಿ ಗೋಲ್ಡ್ ಪ್ಯಾಲೇಸ್ ವತಿಯಿಂದ 20 ಲಕ್ಷ ರೂ. ಮೌಲ್ಯದ ಗಿಫ್ಟ್ ವೋಚರ್ ಸಿಕ್ಕಿತ್ತು. ಇದೀಗ ಅವರು ಅದನ್ನು ಬಳಕೆ ಮಾಡಿಕೊಂಡಿದ್ದಾರೆ.
-
ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ಗಿಲ್ಲಿ ನಟ ಅವರು ವಿನ್ನರ್ ಪಟ್ಟ ಪಡೆದುಕೊಂಡು, 50 ಲಕ್ಷ ನಗದು ಬಹುಮಾನವನ್ನು ತಮ್ಮದಾಗಿಸಿಕೊಂಡಿದ್ದರು. ನಂತರ ರನ್ನರ್ ಅಪ್ ಪಟ್ಟವನ್ನು ರಕ್ಷಿತಾ ಶೆಟ್ಟಿ ಅವರಿಗೆ ನೀಡಲಾಗಿತ್ತು. ರನ್ನರ್ ಅಪ್ ಆಗಿದ್ದಕ್ಕಾಗಿ ಅವರಿಗೆ ಶ್ರೀ ಸಾಯಿ ಗೋಲ್ಡ್ ಪ್ಯಾಲೇಸ್ ವತಿಯಿಂದ 20 ಲಕ್ಷ ರೂ. ಮೌಲ್ಯದ ವೋಚರ್ ಸಿಕ್ಕಿತ್ತು. ಅದನ್ನು ಬಳಸಿಕೊಂಡು ರಕ್ಷಿತಾ, 20 ಲಕ್ಷ ರೂ. ಮೌಲ್ಯದ ಚಿನ್ನವನ್ನು ಖರೀದಿ ಮಾಡಬಹುದಾಗಿತ್ತು. ಇದೀಗ ಅವರು ವೋಚರ್ ಬಳಸಿ, ಚಿನ್ನವನ್ನು ಖರೀದಿ ಮಾಡಿದ್ದಾರೆ.
ಏನು ಖರೀದಿ ಮಾಡಿದರು?
ಬಿಗ್ ಬಾಸ್ ಗ್ರ್ಯಾಂಡ್ ಫಿನಾಲೆ ವೇಳೆ ವೇದಿಕೆ ಮೇಲೆಯೇ ರಕ್ಷಿತಾ ಅವರಿಗೆ ಶ್ರೀ ಸಾಯಿ ಗೋಲ್ಡ್ ಪ್ಯಾಲೇಸ್ ಮಾಲೀಕರಾದ ಟಿ. ಎ. ಶರವಣ ಅವರು 20 ಲಕ್ಷ ರೂ. ಮೌಲ್ಯದ ಗಿಫ್ಟ್ ವೋಚರ್ ನೀಡಿದ್ದರು. ಇದಲ್ಲದೆ ಮತ್ತೊಬ್ಬ ಪ್ರಾಯೋಜಕರಿಂದ 5 ಲಕ್ಷ ರೂ. ನಗದು ಸಿಕ್ಕಿತ್ತು. ಇದೀಗ ಆ ಗಿಫ್ಟ್ ವೋಚರ್ ಬಳಸಿರುವ ರಕ್ಷಿತಾ, 20 ಲಕ್ಷ ರೂ. ಮೌಲ್ಯದ ಆಕರ್ಷಕ ಚಿನ್ನದ ಸರಗಳನ್ನು ಖರೀದಿಸಿದ್ದಾರೆ.
BBK 12: ಬಿಗ್ ಬಾಸ್ ಮನೆಯಲ್ಲಿ ರಕ್ಷಿತಾ-ರಾಶಿಕಾ ನಡುವೆ ಹೊತ್ತಿ ಉರಿದ ಬೆಂಕಿ
ಇತ್ತೀಚೆಗೆ ಬೆಂಗಳೂರಿನ ಕನಕಪುರ ರಸ್ತೆಯ ರಘುವನಹಳ್ಳಿಯಲ್ಲಿ ಟಿ.ಎ. ಶರವಣ ಅವರ ಒಡೆತನದ ಶ್ರೀ ಸಾಯಿ ಗೋಲ್ಡ್ ಪ್ಯಾಲೇಸ್‌ನ ನೂತನ ಮಳಿಗೆ ಉದ್ಘಾಟನೆಗೊಂಡಿತು. ಈ ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಗಮಿಸಿದ್ದ ರಕ್ಷಿತಾ ಶೆಟ್ಟಿ, ಅಲ್ಲೇ ತಮ್ಮ ಬಹುಮಾನದ ವೋಚರ್ ಬಳಸಿ ಚಿನ್ನ ಖರೀದಿಸಿದ್ದಾರೆ.
Rakshitha Shetty: ಇಂದಿಗೂ ಆ ನೋವು ಮನಸ್ಸಿನಲ್ಲಿ ಉಳಿದಿದೆ! ರಕ್ಷಿತಾ ಶೆಟ್ಟಿ ಪೋಸ್ಟ್
ರಕ್ಷಿತಾ ಹೇಳಿದ್ದೇನು?
ಈ ಕುರಿತ ವಿಡಿಯೋವನ್ನು ಸಾಯಿ ಗೋಲ್ಡ್ ಪ್ಯಾಲೇಸ್ ಸಂಸ್ಥೆಯು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು, ಬಂಗಾರ ಖರೀದಿ ಬಗ್ಗೆ ವಿಡಿಯೋದಲ್ಲಿ ಮಾತನಾಡಿರುವ ರಕ್ಷಿತಾ, "ಹಾಯ್ ಗಾಯ್ಸ್.. ನಾನು ರನ್ನರ್ ಅಪ್ ಆಗಿದ್ದಕ್ಕೆ ಸಿಕ್ಕ 20 ಲಕ್ಷ ರೂ. ಮೌಲ್ಯದ ವೋಚರ್ ಸಿಕ್ಕಿತ್ತು. ಅದನ್ನು ಇಂದು ನಾನು ಬಳಸಿದ್ದೇನೆ. ಸಾಯಿ ಗೋಲ್ಡ್ ಪ್ಯಾಲೇಸ್‌ಗೆ ಬಂದು ಚಿನ್ನದ ಸರಗಳನ್ನು ತೆಗೆದುಕೊಂಡಿದ್ದೇನೆ" ಎಂದು ಸಂತಸ ವ್ಯಕ್ತಪಡಿಸಿದ್ದಾರೆ.