ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Bigg Boss Kannada 12: ಪ್ರೀತಿಯಿಂದ ಗಿಲ್ಲಿಗೆ ಕಿಚ್ಚ ಕೊಟ್ಟ ಉಡುಗೊರೆ ಏನು? ನಟನಿಗೆ ಸಿಕ್ಕ ಬಹುಮಾನದ ಮೊತ್ತವೆಷ್ಟು?

Gilli Nata: ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ಗಿಲ್ಲಿ ನಟ ವಿಜಯ ಸಾಧಿಸಿದ್ದಾರೆ. 23 ಸ್ಪರ್ಧಿಗಳನ್ನು ಹಿಂದಿಕ್ಕಿ, ಕೋಟಿ ಮತಗಳನ್ನು ಪಡೆದು ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಕೊನೆಗೂ ಗಿಲ್ಲಿಗೆ ಗೆಲುವು ಸಿಕ್ಕಿದೆ. ಅವರು ಬರೋಬ್ಬರಿ 40 ಕೋಟಿಗೂ ಅಧಿಕ ಮತ ಪಡೆದಿದ್ದಾರೆ ಎಂದು ವರದಿಯಾಗಿದೆ. ಇನ್ನು ಕಿಚ್ಚ ಸುದೀಪ್‌ ಕೂಡ ಗಿಲ್ಲಿ ಅವರಿಗೆ ದೊಡ್ಡ ಉಡುಗೊರೆ ನೀಡಿದ್ದಾರೆ. ಅಷ್ಟೇ ಅಲ್ಲ ಗೆದ್ದವರಿಗೆ ಸಿಕ್ಕ ಬಹುಮಾನ ಮಾಹಿತಿ ಇಲ್ಲಿದೆ.

ಗಿಲ್ಲಿಗೆ ಕಿಚ್ಚ ಕೊಟ್ಟ ಉಡುಗೊರೆ ಏನು? ನಟನಿಗೆ ಸಿಕ್ಕ ಬಹುಮಾನದ ಮೊತ್ತ?

ಬಿಗ್‌ ಬಾಸ್‌ ಕನ್ನಡ -

Yashaswi Devadiga
Yashaswi Devadiga Jan 19, 2026 12:07 AM

ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ಗಿಲ್ಲಿ ನಟ (Gilli Nata Winner) ವಿಜಯ ಸಾಧಿಸಿದ್ದಾರೆ. 23 ಸ್ಪರ್ಧಿಗಳನ್ನು ಹಿಂದಿಕ್ಕಿ, ಕೋಟಿ ಮತಗಳನ್ನು ಪಡೆದು ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಕೊನೆಗೂ ಗಿಲ್ಲಿಗೆ ಗೆಲುವು ಸಿಕ್ಕಿದೆ. ಅವರು ಬರೋಬ್ಬರಿ 40 ಕೋಟಿಗೂ ಅಧಿಕ ಮತ ಪಡೆದಿದ್ದಾರೆ ಎಂದು ವರದಿಯಾಗಿದೆ. ಇನ್ನು ಕಿಚ್ಚ ಸುದೀಪ್‌ (Sudeep) ಕೂಡ ಗಿಲ್ಲಿ ಅವರಿಗೆ ದೊಡ್ಡ ಉಡುಗೊರೆ ನೀಡಿದ್ದಾರೆ. ಅಷ್ಟೇ ಅಲ್ಲ ಗೆದ್ದವರಿಗೆ ಸಿಕ್ಕ ಬಹುಮಾನ (Prize) ಮಾಹಿತಿ ಇಲ್ಲಿದೆ.

ಕಿಚ್ಚ ಸುದೀಪ್‌ ಘೋಷಣೆ

ವಿನ್ನರ್‌ ಆದ ಗಿಲ್ಲಿ ಅವರಿಗೆ ಕಿಚ್ಚ ಸುದೀಪ್‌ ಅವರು 10 ಲಕ್ಷ ರೂ ನೀಡುವುದಾಗಿ ಅನೌನ್ಸ್‌ ಮಾಡಿದರು. ಪ್ರತಿ ಸೀಸನ್ ನಂತೆಯೇ ಈ ಬಾರಿಯೂ ಬಿಗ್‌ಬಾಸ್ ವಿನ್ನರ್ ಗಿಲ್ಲಿಗೆ ಟ್ರೋಫಿ ಜೊತೆಗೆ 350 ಲಕ್ಷ ಹಾಗೂ ಮಾರುತಿ ಸುಜುಕಿ ಎಸ್‌ಯುವಿ ವಿಕ್ಟೋರಿಯಸ್ ಕಾರನ್ನು ಬಹುಮಾನದ ರೂಪದಲ್ಲಿ ನೀಡಲಾಗಿದೆ. ವಿಶೇಷ ಎಂದರೆ ಕಿಚ್ಚ ಸುದೀಪ್ ಅವರು ವೈಯಕ್ತಿಕವಾಗಿ ಪ್ರೀತಿಯಿಂದ 10 ಲಕ್ಷ ಕೊಡುತ್ತಿದ್ದೇನೆ ಎಂದು ವೇದಿಕೆ ಮೇಲೆ ಘೋಷಿಸಿದ್ದಾರೆ.

ಇದನ್ನೂ ಓದಿ: Bigg Boss Kannada 12: Bigg Boss 12 Finale: ಕುಚಿಕು ದೋಸ್ತಿಗಳೇ ವಿನ್ನರ್‌, ರನ್ನರ್‌! ಗೆದ್ದ ಗಿಲ್ಲಿ ಪಕ್ಕಾ ನಿಂತ ಪಟಾಕಿ ರಕ್ಷಿತಾ

ದಾಖಲೆಯ ವೋಟು

ಕಳೆದ ಆವೃತ್ತಿಯಲ್ಲಿ ಹನುಮಂತ ವಿನ್ನರ್ ಆಗಿದ್ದು ಅವರು 5 ಕೋಟಿಗೂ ಹೆಚ್ಚು ಮತಗಳನ್ನು ಪಡೆದಿದ್ದರು. ಆದರೆ ಈ ಬಾರಿ ಯಾರೂ ಮುಟ್ಟಲಾಗದಂತ ದಾಖಲೆಯ ವೋಟುಗಳು ವಿನ್ನರ್ ಗೆ ಸಿಕ್ಕಿದೆ. ಅದುವೇ ಗಿಲ್ಲಿ ಎಂಬುದು ಅಂತೂ ಸಾಬೀತಾಗಿದೆ.



‘ಬಿಗ್ ಬಾಸ್’ ಮನೆಯೊಳಗೆ ಜಂಟಿ ಆಗಿ ಕಾಲಿಟ್ಟವರು ಗಿಲ್ಲಿ ನಟ. ತಮ್ಮ ಪೇರ್‌ ಆಗಿದ್ದ ಕಾವ್ಯ ಅವರನ್ನ ಈವರೆಗೂ ಗಿಲ್ಲಿ ನಟ ಎಲ್ಲೂ, ಎಂದೂ ಬಿಟ್ಟುಕೊಟ್ಟಿಲ್ಲ. ಬಿಗ್‌ ಬಾಸ್‌ ಸ್ಪರ್ಧಿಯಾಗಿದ್ದುಕೊಂಡು ಅತೀ ಕಡಿಮೆ ಸಮಯದಲ್ಲಿ ಇನ್ಟಾಗ್ರಾಮ್‌ನಲ್ಲಿ 1M ಫಾಲೋವರ್ಸ್‌ ಪಡೆದ ಮೊದಲ ಸ್ಪರ್ಧಿಯಾಗಿ ಗಿಲ್ಲಿ ದಾಖಲೆ ಬರೆದರು.

ಇದನ್ನೂ ಓದಿ: Bigg Boss Kannada 12 Finale: ಬಿಗ್‌ಬಾಸ್‌ ಹೌಸ್‌ ಬಳಿ ಮುಗಿಲು ಮುಟ್ಟಿದ ಗಿಲ್ಲಿ ಅಭಿಮಾನಿಗಳ ಸಂಭ್ರಮ; ಪಟಾಕಿ ಸಿಡಿಸಿ, ಸಿಹಿ ಹಂಚಿಕೆ

ಟ್ಯಾಟೂನಿಂದ ಹಿಡಿದುಕೊಂಡು, ಪ್ರತಿ ಗಲ್ಲಿಯಲ್ಲಿ ಗಿಲ್ಲಿ ಬ್ಯಾನರ್‌ ಹಾಕಿ ಸ್ವತಃ ಅಭಿಮಾನಿಗಳೇ ಪ್ರಚಾರ ಮಾಡಿದ್ದರು. ಈ ಮೊದಲು ಅಶ್ವಿನಿ ಹಾಗೂ ಜಾನ್ವಿಗೆ ಬಳಕೆ ಮಾಡಿದ್ದ ‘ದೊಡ್ಡವ್ವ..’ ಡೈಲಾಗ್ ಹಾಡು ಸಖತ್‌ ಫೇಮಸ್‌ ಕೂಡ ಆಯ್ತು. ಸಾಂಗ್‌ ಆಗಿಯೂ ಪರಿವರ್ತನೆ ಆಗಿ ರೀಲ್ಸ್‌ ಮಾಡಲು ಶುರು ಮಾಡಿದ್ದರು ಅಭಿಮಾನಿಗಳು.