Bigg Boss Kannada 13: ಬಿಗ್ ಬಾಸ್ ಆಟ ಅವಿನಾಶ್‌ಗೆ ಅರ್ಥ ಆಗಿಲ್ಲ! ಪತ್ನಿ ಪ್ರಿಯಾ ಕಣ್ಣೀರು
Bigg Boss Kannada 13: ಬಿಗ್ ಬಾಸ್ ಮನೆಯಿಂದ ಅವಿನಾಶ್ ಹಾಗೂ ವೈಷ್ಣವಿ ಔಟ್ ಆಗಿದ್ದಾರೆ. ಅದರಲ್ಲೂ ಅವಿನಾಶ್ ಅವರು ಸಖತ್ ಹೈಲೈಟ್ ಆಗಿದ್ದರು. ಪತ್ನಿ ಕೂಡ ಭಾವುಕರಾದರು. ನಟಿ ಪ್ರಿಯಾ ಶಟಮರ್ಷಣ (Priya) ಅವರು ಪತಿಗೆ ಬಿಗ್ ಬಾಸ್ ಆಟ ಅರ್ಥವಾಗಿಲ್ಲ ಸರ್ ಎಂದು ನೇರವಾಗಿ ಹೇಳಿಕೆ ನೀಡಿದರು.
ಬಿಗ್ ಬಾಸ್ ಕನ್ನಡ -
ಬಿಗ್ ಬಾಸ್ ಮನೆಯಿಂದ (Bigg Boss Kannada 13) ಅವಿನಾಶ್ ಹಾಗೂ ವೈಷ್ಣವಿ (Avinash Vaishnavi) ಔಟ್ ಆಗಿದ್ದಾರೆ. ಅದರಲ್ಲೂ ಅವಿನಾಶ್ ಅವರು ಸಖತ್ ಹೈಲೈಟ್ ಆಗಿದ್ದರು. ಪತ್ನಿ ಕೂಡ ಭಾವುಕರಾದರು. ನಟಿ ಪ್ರಿಯಾ ಶಟಮರ್ಷಣ (Priya) ಅವರು ಪತಿಗೆ ಬಿಗ್ ಬಾಸ್ ಆಟ ಅರ್ಥವಾಗಿಲ್ಲ ಸರ್ ಎಂದು ನೇರವಾಗಿ ಹೇಳಿಕೆ ನೀಡಿದರು.
ಸೋಲಲು ನಾನೇ ಕಾರಣ
ಹಿರಿಯ ನಿರ್ದೇಶಕ ದಿವಂಗತ ಗುರುಪ್ರಸಾದ್ ಅವರ ಪರಮ ಶಿಷ್ಯ ಅವಿನಾಶ್ ಶಟಮರ್ಷಣ. ಬಿಗ್ ಬಾಸ್‌ನಲ್ಲಿ ಸೋಲಲು ನಾನೇ ಕಾರಣ ಎಂದು ಅವಿನಾಶ್ ವೇದಿಕೆಯಲ್ಲಿ ಒಪ್ಪಿಕೊಂಡರು. ಅವಿನಾಶ್ ನೀವು ಬಿಗ್ ಬಾಸ್ ಶೋಗೆ ಅಲ್ಲಾರ್ರೀ ಎಂದು VT ನೋಡಿದ ಬಳಿಕ ಕಿಚ್ಚ ಸುದೀಪ್ ಕೂಡ ಹೇಳಿದರು. ಈ ಶೋ ಬಗ್ಗೆ ಗೊತ್ತಿಲ್ಲದವರು ಹೇಳ್ತಾರಲ್ಲ ಇದೊಂದು ಸ್ಕ್ರೀಪ್ಟೆಡ್ ಶೋ ಅಂತ, ಅವರಿಗೆ ನಿಜಕ್ಕೂ ಹೇಳೋದಿಕ್ಕೆ ಇಷ್ಟ ಪಡುತ್ತೇನೆ. ಇದು ಸ್ಕ್ರೀಪ್ಟೆಡ್ ಶೋ ಅಲ್ವೇ ಅಲ್ಲ ಎಂದು ಅವಿನಾಶ್ ಹೇಳಿದ್ರು.
ಇದನ್ನೂ ಓದಿ: Bigg Boss Kannada 13: Hijack ಮಾಡಿದ ಗಾನವಿ; ಯಶಸ್ ಹಾಗೂ ಕಿರಣ್ ಮರಳಿ ಫ್ಲೈಟ್‌ಗೆ!
ಆಟ ಅವಿನಾಶ್‌ಗೆ ಅರ್ಥ ಆಗಿಲ್ಲ
VT ನೋಡಿದ ಬಳಿಕ ಪತ್ನಿ ಭಾವುಕರಾಗಿದ್ದರು. ಬಿಗ್ ಬಾಸ್ ಆಟ ಅವಿನಾಶ್‌ಗೆ ಅರ್ಥ ಆಗಿಲ್ಲ. ಶಿಶುನಾಳ ಶರೀಫರ ಪ್ರಸಿದ್ಧ ತತ್ವಪದ "ತರವಲ್ಲ ತಗಿ ನಿನ್ನ ತಂಬೂರಿ" ಹಾಡಿನ ಸಾಲುಗಳನ್ನ ಕಣೀರಿಡುತ್ತಲೇ ಹೇಳುತ್ತಾರೆ. 3 ಲಕ್ಷದ 50 ಸಾವಿರ ರೂಪಾಯಿ ಬಹುಮಾನ ಹಣ ಅವಿನಾಶ್ ಅವರಿಗೆ ಲಭಿಸಿದೆ.
ಮಿಡ್ ವೀಕ್‌ನಲ್ಲಿ ಎಲಿಮಿನೇಟ್ ಆಗಿದ್ದ ತಾಂಡವ್ ರಾಮ್ ಅವರನ್ನ ಬಿಗ್ ಬಾಸ್ ಮನೆಗೆ ಮರಳಿ ಕಳುಹಿಸಲಾಯ್ತು.ವೈಷ್ಣವಿ ಕೌಂಡಿನ್ಯ ಅವರಿಗೆ 3ಲಕ್ಷದ 50ಸಾವಿರ ಬಹುಮಾನ ಲಭಿಸಿದೆ.
ಇನ್ನು ವೈಷ್ಣವಿ ಕೂಡ ನನಗೆ ಯಾರನ್ನು ಮ್ಯಾನುಪ್ಲೇಟ್ ಮಾಡಲು ಬರುವುದಿಲ್ಲ ಸರ್. ಮೊದಲ ವಾರದ ತಪ್ಪುಗಳನ್ನ ತಿದ್ದಿಕೊಂಡು ಈ ವಾರ ನನ್ನ ಬಗ್ಗೆ ನಾನು ಸ್ಟ್ಯಾಂಡ್ ತಗೋಳ್ಳಿಕ್ಕೆ ಶುರು ಮಾಡಿದ್ದೆ, ಅಷ್ಟರಲ್ಲಿ ನಿಮ್ಮ ಮುಂದೆ ನಿಂತೆ ಎಂದು ಹೇಳಿದ್ದಾರೆ. ಮುಂದಿನ ದಿನಗಳಲ್ಲಿ ಮತ್ತೆ ಸೀರಿಯಲ್‌ನಲ್ಲಿ ಅಭಿನಯಿಸುವೆ ಎಂದು ಹೇಳಿಕೊಂಡಿದ್ದಾರೆ.