Bigg Boss Kannada 13: Hijack ಮಾಡಿದ ಗಾನವಿ; ಯಶಸ್ ಹಾಗೂ ಕಿರಣ್ ಮರಳಿ ಫ್ಲೈಟ್‌ಗೆ!
Bigg Boss Kannada 13: ಭಾನುವಾರದ ಎಪಿಸೋಡಿನಲ್ಲಿ ಸುದೀಪ್ (Sudeep) ಅವರು ಮೂವರು ಹೊಸ ಸ್ಪರ್ಧಿಗಳನ್ನು ಪ್ರೇಕ್ಷಕರಿಗೆ ಪರಿಚಯಿಸಿದ್ದಾರೆ. ಘಾಟಿ ಹುಡುಗಿ ಗಾನವಿ (Ghati Ganavi), ಕಮಿಡಿಯನ್ ಪ್ರಶಾಂತ್ ಮತ್ತು ಉದ್ಯಮಿ, ಮಾಜಿ ನಟಿ ಸೋನಿಕಾ ಅವರುಗಳನ್ನು ಸುದೀಪ್ ಅವರು ಪ್ರೇಕ್ಷಕರಿಗೆ ಪರಿಚಯಿಸಿದ್ದು, ಈ ಮೂವರೂ ವೈಲ್ಡ್ ಕಾರ್ಡ್ (Wild Card) ಮೂಲಕ ಮನೆ ಪ್ರವೇಶಿಸುತ್ತಿದ್ದಾರೆ. ಗಾನವಿ ಆಗಲೇ ಆಟ ಶುರು ಮಾಡಿದ್ದಾರೆ.
ಬಿಗ್ ಬಾಸ್ ಕನ್ನಡ -
ಭಾನುವಾರದ ಎಪಿಸೋಡಿನಲ್ಲಿ ಸುದೀಪ್ (Sudeep) ಅವರು ಮೂವರು ಹೊಸ ಸ್ಪರ್ಧಿಗಳನ್ನು ಪ್ರೇಕ್ಷಕರಿಗೆ ಪರಿಚಯಿಸಿದ್ದಾರೆ. ಘಾಟಿ ಹುಡುಗಿ ಗಾನವಿ (Ghati Ganavi), ಕಮಿಡಿಯನ್ ಪ್ರಶಾಂತ್ ಮತ್ತು ಉದ್ಯಮಿ, ಮಾಜಿ ನಟಿ ಸೋನಿಕಾ ಅವರುಗಳನ್ನು ಸುದೀಪ್ ಅವರು ಪ್ರೇಕ್ಷಕರಿಗೆ ಪರಿಚಯಿಸಿದ್ದು, ಈ ಮೂವರೂ ವೈಲ್ಡ್ ಕಾರ್ಡ್ (Wild Card) ಮೂಲಕ ಮನೆ ಪ್ರವೇಶಿಸುತ್ತಿದ್ದಾರೆ. ಗಾನವಿ ಆಗಲೇ ಆಟ ಶುರು ಮಾಡಿದ್ದಾರೆ.
ಯಶಸ್ & ಕಿರಣ್ ಮರಳಿ Flightಗೆ ಹೋಗುವಂತಾಗಿದೆ. ಬಿಗ್ ಬಾಸ್ 13 ರಲ್ಲಿ ಜರ್ನಿಯನ್ನ ಹೈಜಾಕ್ ಮಾಡಲು ಗಾನವಿ ಬಂದಿದ್ದಾರೆ ಎಂದು ಬಿಗ್ ಬಾಸ್ ಅನೌನ್ಸ್ ಮಾಡಿದರು. ಯಶಸ್, ಕಿರಣ್ ಸ್ಥಾನವನ್ನು ಹೈಜಾಕ್ ಮಾಡಿದರು. ಯಶಸ್ ತುಂಬಾ ಓವರ್ ಡ್ರಾಮಾಟಿಕ್. ಇನ್ನು ಕಿರಣ್ ಅವರು ಅಕ್ಕ ಅಕ್ಕ ಅಂತ ಭಿಕ್ಷೆ ಬೆಡ್ತೀರಾ. ನಿಮ್ಮನ್ನ ನೋಡಿದ್ರೆ ಇರಿಟೇಶನ್ ಆಗತ್ತೆ. ಏನೂ ಮಾಡದೇ ದೇವಿ ಹೂ ಕೊಡು ಅಂತ ಮಲಗ್ತೀರಾ ಎಂದು ಹೇಳಿದ್ದಾರೆ. ಹೀಗಾಗಿ ಯಶಸ್ ಹಾಗೂ ಕಿರಣ್ ತಮ್ಮ ಸ್ಥಾನವನ್ನು ಕಳೆದುಕೊಂಡು ಫ್ಲೈಟ್‌ಗೆ ತೆರಳಿದ್ದಾರೆ.
ಇದನ್ನೂ ಓದಿ: Bigg Boss Kannada 13: ಈ ವಾರ ಈ ಇಬ್ಬರು ಎಲಿಮಿನೇಟ್; ಎಂಟ್ರಿ ಕೊಡೋ ಆ ಮೂವರು ಯಾರು?
ಈ ಮೊದಲು ‘ಹಳ್ಳಿ ಪವರ್’ ರಿಯಾಲಿಟಿ ಶೋನಲ್ಲಿ ಕಾಣಿಸಿಕೊಂಡಿದ್ದ ಗಾನವಿ, ಕಂಟೆಂಟ್ ಕ್ರಿಯೇಟರ್ ಸಹ ಹೌದು. ಈ ಹಿಂದಿನ ರಿಯಾಲಿಟಿ ಶೋನಲ್ಲಿ ತಮ್ಮ ನೇರ ಮಾತು ಹಾಗೂ ದಿಟ್ಟ ವ್ಯಕ್ತಿತ್ವದಿಂದ ಪ್ರೇಕ್ಷಕರ ಮನ ಗೆದ್ದಿದ್ದರು. ‘ಹಳ್ಳಿ ಪವರ್’ ಶೋನಲ್ಲಿ ಮೊದಲ ರನ್ನರ್ ಅಪ್ ಆಗಿ ಸೌಂಡ್ ಮಾಡಿದ್ದರು ಗಾನವಿ.
ಇದನ್ನೂ ಓದಿ: Bigg Boss kannada 13: ಬಿಗ್ ಬಾಸ್‌ಗೆ ಘಾಟಿ ಗಾನವಿ? ಆ ಮೂವರು arrivals ಯಾರು?
ಹಾಲಿ ಸ್ಪರ್ಧಿಗಳಿಗೆ ಸಾಲು ಸಾಲು ಸವಾಲುಗಳನ್ನು ಎಸೆದಿರುವ ಈ ವೈಲ್ಡ್ ಕಾರ್ಡ್ ಸ್ಪರ್ಧಿಯ ಆಗಮನದಿಂದಾಗಿ, ಬಿಗ್ ಬಾಸ್ ಮನೆಯೊಳಗಿನ ಆಟ ಹಾಗೂ ವಾತಾವರಣ ಸಂಪೂರ್ಣವಾಗಿ ಬದಲಾಗುವುದು ಖಚಿತವಾಗಿದೆ.