ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Bigg Boss Kannada 13: ಧನುಷ್‌ ಮಾಸ್ಟರ್‌ ಸ್ಟ್ರೋಕ್:‌ ನಾಮಿನೇಟ್‌ ಆದವರು ಯಾರು?

Bigg Boss Kannada 13:ಬಿಗ್ ಬಾಸ್‌ ಕನ್ನಡ ಸೀಸನ್‌ 13‌ (Bigg Boss Kannada 13) ದಿನದಿಂದ ದಿನಕ್ಕೆ ಕುತೂಹಲಕಾರಿ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಫಿನಾಲೆಗೆ ಕೆಲವೇ ವಾರಗಳು ಬಾಕಿ ಇರುವ ಸಂದರ್ಭದಲ್ಲಿ ಸ್ಪರ್ಧಿಗಳ ನಡುವಿನ ಪೈಪೋಟಿ ಮತ್ತಷ್ಟು ತೀವ್ರಗೊಂಡಿದೆ. ಇದರ ನಡುವೆ ಜೋಕರ್ ಕಾರ್ಡ್ ಗೆದ್ದ ಧನುಷ್ (Dhanush), ತಮಗೆ ಸಿಕ್ಕ ವಿಶೇಷ ಅಧಿಕಾರವನ್ನು ಬಳಸಿಕೊಂಡು ಮನೆಯ ನಾಮಿನೇಷನ್ ಲೆಕ್ಕಾಚಾರವನ್ನೇ ಬದಲಿಸಿದ್ದಾರೆ.

ಧನುಷ್‌ ಮಾಸ್ಟರ್‌ ಸ್ಟ್ರೋಕ್:‌ ನಾಮಿನೇಟ್‌ ಆದವರು ಯಾರು?

ಬಿಗ್‌ ಬಾಸ್‌ ಕನ್ನಡ -

Yashaswi Devadiga
Yashaswi Devadiga Nov 25, 2026 8:30 AM

ಬಿಗ್ ಬಾಸ್‌ ಕನ್ನಡ ಸೀಸನ್‌ 13‌ (Bigg Boss Kannada 13) ದಿನದಿಂದ ದಿನಕ್ಕೆ ಕುತೂಹಲಕಾರಿ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಫಿನಾಲೆಗೆ ಕೆಲವೇ ವಾರಗಳು ಬಾಕಿ ಇರುವ ಸಂದರ್ಭದಲ್ಲಿ ಸ್ಪರ್ಧಿಗಳ ನಡುವಿನ ಪೈಪೋಟಿ ಮತ್ತಷ್ಟು ತೀವ್ರಗೊಂಡಿದೆ. ಇದರ ನಡುವೆ ಜೋಕರ್ ಕಾರ್ಡ್ ಗೆದ್ದ ಧನುಷ್ (Dhanush), ತಮಗೆ ಸಿಕ್ಕ ವಿಶೇಷ ಅಧಿಕಾರವನ್ನು ಬಳಸಿಕೊಂಡು ಮನೆಯ ನಾಮಿನೇಷನ್ ಲೆಕ್ಕಾಚಾರವನ್ನೇ ಬದಲಿಸಿದ್ದಾರೆ.

ಜೋಕರ್ ಕಾರ್ಡ್ ಟಾಸ್ಕ್‌ನಲ್ಲಿ ಅನಿರೀಕ್ಷಿತವಾಗಿ ಅವಕಾಶ ಗಿಟ್ಟಿಸಿಕೊಂಡಿದ್ದ ಧನುಷ್, ತಮ್ಮ ಚಾಣಾಕ್ಷ ಆಟದ ಮೂಲಕ ಗೆಲುವು ಸಾಧಿಸಿದ್ದರು. ಇದಕ್ಕೆ ಪ್ರತಿಯಾಗಿ ಬಿಗ್ ಬಾಸ್ ಅವರಿಗೆ ನಾಮಿನೇಷನ್ ಪ್ರಕ್ರಿಯೆಯಲ್ಲಿ ಮಹತ್ವದ ಅಧಿಕಾರ ನೀಡಿದ್ದರು. ತಮ್ಮ ಹೆಸರನ್ನು ಸೇರಿಸಿ ಒಟ್ಟು ಮೂವರು ಸ್ಪರ್ಧಿಗಳ ನಾಮಿನೇಷನ್ ಬದಲಿಸುವ ಅವಕಾಶ ಅವರಿಗೆ ಸಿಕ್ಕಿತ್ತು. ಈ ಅವಕಾಶವನ್ನು ಧನುಷ್ ಬಹಳ ಎಚ್ಚರಿಕೆಯಿಂದ ಬಳಸಿಕೊಂಡಿದ್ದಾರೆ.

ಇದನ್ನೂ ಓದಿ: Ramayana Movie : ಹಾಲಿವುಡ್ ದಿಗ್ಗಜರಿಗೆ ನೇರ ಪೈಪೋಟಿ; ಕ್ರಿಟಿಕ್ಸ್ ಚಾಯ್ಸ್ ಅವಾರ್ಡ್​ ರೇಸ್​​ನಲ್ಲಿ ‘ರಾಮಾಯಣ’

ಧನುಷ್ ನಿರ್ಧಾರದಿಂದ ಮೂವರಿಗೆ ನೇರ ನಾಮಿನೇಷನ್!

ಮೊದಲಿಗೆ ತಮ್ಮ ಹೆಸರನ್ನು ನಾಮಿನೇಷನ್ ಪಟ್ಟಿಯಿಂದ ತೆಗೆಸಿಕೊಂಡ ಧನುಷ್, ತಮ್ಮ ಸ್ಥಾನಕ್ಕೆ ಸೌಂದರ್ಯಾ ಶೆಟ್ಟಿ ಅವರನ್ನು ಆಯ್ಕೆ ಮಾಡಿದ್ದಾರೆ. ಎರಡನೇ ಹಂತದಲ್ಲಿ ನಾಮಿನೇಟ್ ಆಗಿದ್ದ ಪ್ರಶಾಂತ್ ಅವರನ್ನು ಸೇಫ್ ಮಾಡಿ, ಅವರ ಬದಲಿಗೆ ಆಸಿಯಾ ಅವರನ್ನು ನಾಮಿನೇಷನ್ ಪಟ್ಟಿಗೆ ಸೇರಿಸಿದ್ದಾರೆ.

ಇನ್ನು ಕೊನೆಯ ಬದಲಾವಣೆಯಲ್ಲಿ ತಾಂಡವ್ ರಾಮ್ ಅವರಿಗೆ ರಕ್ಷಣೆ ನೀಡುವ ಮೂಲಕ ಕಿರಣ್ ಶಾಸ್ತ್ರಿ ಅವರನ್ನು ನಾಮಿನೇಟ್ ಮಾಡಿದ್ದಾರೆ. ಈ ನಿರ್ಧಾರ ವಿಶೇಷ ಗಮನ ಸೆಳೆದಿದೆ. ಏಕೆಂದರೆ ಜೋಕರ್ ಕಾರ್ಡ್ ಟಾಸ್ಕ್‌ನಲ್ಲಿ ಕಿರಣ್ ಶಾಸ್ತ್ರಿ ತೋರಿದ ನಿರ್ಲಕ್ಷ್ಯವೇ ಧನುಷ್‌ಗೆ ಬದಲಿ ಸ್ಪರ್ಧಿಯಾಗಿ ಕಣಕ್ಕಿಳಿಯುವ ಅವಕಾಶ ಕಲ್ಪಿಸಿತ್ತು.

ಈ ವಾರದ ನಾಮಿನೇಷನ್ ಪಟ್ಟಿಯಲ್ಲಿ ಯಾರೆಲ್ಲ ಇದ್ದಾರೆ?

ಧನುಷ್ ಅವರ ಮೂರು ಬದಲಾವಣೆಗಳ ಬಳಿಕ ಈ ವಾರದ ಎಲಿಮಿನೇಷನ್ ನಾಮಿನೇಷನ್ ಪಟ್ಟಿ ಸಿದ್ಧವಾಗಿದೆ. ಈಗ ಐವರು ಸ್ಪರ್ಧಿಗಳು ಅಪಾಯದ ವಲಯದಲ್ಲಿದ್ದಾರೆ.

ಸೌಂದರ್ಯಾ ಶೆಟ್ಟಿ

ಆಸಿಯಾ

ಕಿರಣ್ ಶಾಸ್ತ್ರಿ

ಜಗದೀಶ್ (ಜಗ್ಗ ಮಮ್ಮಿ)

ಯಶಸ್ ಕೃಷ್ಣ

ಇವರಲ್ಲಿ ಯಶಸ್ ಕೃಷ್ಣ ಹಾಗೂ ಜಗ್ಗ ಮಮ್ಮಿ ಅವರು ಸೀಸನ್ ಅಂತ್ಯದವರೆಗೂ ನಾಮಿನೇಷನ್ ಎದುರಿಸುವ ಅನಿವಾರ್ಯತೆಯಲ್ಲಿದ್ದಾರೆ. ಹೀಗಾಗಿ ಈ ವಾರದ ಸ್ಪರ್ಧೆ ಯಾರಿಗೆ ಹೆಚ್ಚು ಸವಾಲಾಗಲಿದೆ ಎಂಬ ಕುತೂಹಲ ವೀಕ್ಷಕರಲ್ಲಿದೆ.

ಯಶಸ್‌ಗೆ ಬಿಗ್ ಬಾಸ್ ಕೊಟ್ಟಿದೆ ಮತ್ತೊಂದು ಸವಾಲು!

ನಾಮಿನೇಷನ್ ವಿಚಾರ ಒಂದೆಡೆಯಾದರೆ, ಯಶಸ್ ಕೃಷ್ಣ ಅವರಿಗೆ ಬಿಗ್ ಬಾಸ್ ಮತ್ತೊಂದು ವಿಶೇಷ ಜವಾಬ್ದಾರಿ ನೀಡಿದ್ದಾರೆ. ಅವರಿಗೆ 'ಗುಳ್ಳೆನರಿ' ಪಾತ್ರವನ್ನು ವಹಿಸಲಾಗಿದ್ದು, ಮನೆಯವರ ನಡುವೆ ಇದ್ದುಕೊಂಡೇ ಆಟದ ಲೆಕ್ಕಾಚಾರವನ್ನು ಬದಲಿಸುವ ರಹಸ್ಯ ಟಾಸ್ಕ್ ನೀಡಲಾಗಿದೆ.

ತಂಡದ ಸದಸ್ಯರ ವಿಶ್ವಾಸ ಗಳಿಸುತ್ತಲೇ ಅವರ ಆಟಕ್ಕೆ ಅಡ್ಡಿಪಡಿಸುವ ಈ ಗುಪ್ತ ಜವಾಬ್ದಾರಿಯನ್ನು ಯಶಸ್ ಹೇಗೆ ನಿಭಾಯಿಸುತ್ತಾರೆ ಎಂಬುದು ಈಗಿನ ಕುತೂಹಲ. ಈ ಟಾಸ್ಕ್‌ನಲ್ಲಿ ಯಶಸ್ವಿಯಾದರೆ ಅವರಿಗೆ ವಿಶೇಷ ಅಧಿಕಾರ ಸಿಗುವ ಸಾಧ್ಯತೆಯೂ ಇದೆ.

ಇದನ್ನೂ ಓದಿ: Bigg Boss Kannada 13: ಜೋಕರ್‌ ಕಾರ್ಡ್‌ ಗೆದ್ದು ಮನೆಮಂದಿಗೆ ಶಾಕ್‌ ಕೊಟ್ಟ ಧನುಷ್‌! ವೀಕ್ಷಕರಿಂದ ʻಟಾಸ್ಕ್‌ ಮಾಸ್ಟರ್‌ʼ ಪಟ್ಟ

ಸ್ನೇಹಕ್ಕಿಂತ ಆಟವೇ ಮುಖ್ಯವಾಗುತ್ತಾ?

ಆರಂಭದಿಂದಲೂ ಸೌಂದರ್ಯಾ ಶೆಟ್ಟಿ ಅವರೊಂದಿಗೆ ಆತ್ಮೀಯ ಸಂಬಂಧ ಹೊಂದಿರುವ ಯಶಸ್ ಕೃಷ್ಣ ಅವರಿಗೆ ಈಗ ಪರಿಸ್ಥಿತಿ ಬದಲಾಗಿದೆ. ಫಿನಾಲೆ ಹತ್ತಿರವಾಗುತ್ತಿದ್ದಂತೆ ಪ್ರತಿಯೊಬ್ಬ ಸ್ಪರ್ಧಿಯೂ ತಮ್ಮ ಸ್ಥಾನ ಉಳಿಸಿಕೊಳ್ಳಲು ಹೋರಾಡಬೇಕಿದೆ. ಸ್ನೇಹ ಮತ್ತು ಆಟದ ನಡುವಿನ ಆಯ್ಕೆಯೂ ಸ್ಪರ್ಧಿಗಳಿಗೆ ದೊಡ್ಡ ಸವಾಲಾಗಬಹುದು.