ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Bigg Boss Kannada 13: ʻಬ್ರೋ' ಎಂದಿದ್ದಕ್ಕೆ ‘VIP ಗಗನ್’ ಎನ್ನಲು ಧನುಷ್‌ಗೆ ಆರ್ಡರ್‌ ಮಾಡಿದ ಗಗನ್‌! ರಿವೆಂಜ್‌ ತಗೊಂಡ್ರಾ ನಟ?

Bigg Boss Kannada 13:ಬಿಗ್ ಬಾಸ್ ಮನೆಯಲ್ಲಿ ನಡೆದುಕೊಳ್ಳುತ್ತಿರುವ ರೀತಿ ವೀಕ್ಷಕರ ಅಸಮಾಧಾನಕ್ಕೆ ಕಾರಣವಾಗಿದೆ. ಟಾಸ್ಕ್‌ಗೂ ಮುನ್ನ, ಉಸ್ತುವಾರಿ ಗಗನ್‌ ಅವರು ಧನುಷ್‌ಗೆ ಕೂತ್ಕೋಳ್ಳಿಕ್ಕೆ ಹೇಳುತ್ತಾರೆ. ಆಗ ಧನುಷ್‌ ಮತ್ತು ಗಗನ್‌ ನಡುವೆ ವಾದ ವಿವಾದಗಳೂ ಆಗುತ್ತವೆ. ನನಗೆ ಬ್ರೋ ಅನ್ನಬೇಡ, ನಿನ್ನ ವಯಸ್ಸೇನೋ, VIP ಗಗನ್‌ ಅನ್ನೂ ಸಾಕು ಎಂದು ಖಡಕ್‌ ಆಗಿಯೇ ಹೇಳಿದ್ದಾರೆ. ಈ ವರ್ತನೆಗೆ ನೆಟ್ಟಿಗರು ಕಿಡಿಕಾರಿದ್ದು, ವೀಕೆಂಡ್‌ನಲ್ಲಿ ಸುದೀಪ್ (sudeep) ಅವರು ಕ್ಲಾಸ್ ತಗೋಳೋದು ಖಚಿತ ಎನ್ನಲಾಗುತ್ತಿದೆ.

ʻಬ್ರೋ' ಎಂದಿದ್ದಕ್ಕೆ ‘VIP ಗಗನ್’ ಎನ್ನಲು ಧನುಷ್‌ಗೆ ಆರ್ಡರ್‌ ಮಾಡಿದ ಗಗನ್‌

ಬಿಗ್‌ ಬಾಸ್‌ ಕನ್ನಡ -

Yashaswi Devadiga
Yashaswi Devadiga Sep 10, 2026 9:33 AM

ಬಿಗ್‌ ಬಾಸ್‌ ಮನೆಯಲ್ಲಿ (Bigg boss Kannada 13) ಸ್ಪರ್ಧಿಗಳ ಮಧ್ಯೆ ಜಗಳ ತಾರಕ್ಕೇರಿದೆ. ಅದರಲ್ಲೂ ಖ್ಯಾತಿಯ ಗಗನ್ ಚಿನ್ನಪ್ಪ (Gagan Chinnappa) ಬಿಗ್ ಬಾಸ್ ಮನೆಯಲ್ಲಿ ನಡೆದುಕೊಳ್ಳುತ್ತಿರುವ ರೀತಿ ವೀಕ್ಷಕರ ಅಸಮಾಧಾನಕ್ಕೆ ಕಾರಣವಾಗಿದೆ. ಟಾಸ್ಕ್‌ಗೂ ಮುನ್ನ, ಉಸ್ತುವಾರಿ ಗಗನ್‌ ಅವರು ಧನುಷ್‌ಗೆ ಕೂತ್ಕೋಳ್ಳಿಕ್ಕೆ ಹೇಳುತ್ತಾರೆ. ಆಗ ಧನುಷ್‌ ಮತ್ತು ಗಗನ್‌ ನಡುವೆ ವಾದ ವಿವಾದಗಳೂ ಆಗುತ್ತವೆ. ನನಗೆ ಬ್ರೋ ಅನ್ನಬೇಡ, ನಿನ್ನ ವಯಸ್ಸೇನೋ, VIP ಗಗನ್‌ ಅನ್ನೂ ಸಾಕು ಎಂದು ಖಡಕ್‌ ಆಗಿಯೇ ಹೇಳಿದ್ದಾರೆ. ಈ ವರ್ತನೆಗೆ ನೆಟ್ಟಿಗರು ಕಿಡಿಕಾರಿದ್ದು, ವೀಕೆಂಡ್‌ನಲ್ಲಿ ಸುದೀಪ್ (sudeep) ಅವರು ಕ್ಲಾಸ್ ತಗೋಳೋದು ಖಚಿತ ಎನ್ನಲಾಗುತ್ತಿದೆ.

ತಂಡಕ್ಕೆ ಅಡ್ವಾಂಟೇಜ್‌

ನಿನ್ನೆ ಬಿಗ್‌ ಬಾಸ್‌ ಒಂದು ಟಾಸ್ಕ್‌ ನೀಡಿದ್ದರು. ಅದುವೇ ʻಮಾಡಿದುನ್ನೋ ಮಾರಾಯ’ ಟಾಸ್ಕ್‌ನಲ್ಲಿ ಫ್ಲೈಟ್‌ ಪ್ರಯಾಣಕರ ಗುಂಪು ಗೆದ್ದರೆ, ಸೋಲು ಕಂಡ ಬಿಗ್‌ ಬಾಸ್‌ ಮನೆಯ ಸದಸ್ಯರ ತಂಡದಲ್ಲಿದ್ದ ಓಂ ಪ್ರಕಾಶ್‌ ರಾವ್‌ ಅವರು ಫ್ಲೈಟ್‌ ಏರಿ ಪ್ರಯಾಣಿಕರ ತಂಡ ಸೇರಿದರು. ಹಾಗೇ ಮಾಡ್ರನ್‌ ಮಹಾಕವಿ ಮಂಜು ಅವರು ಬಿಗ್‌ ಬಾಸ್‌ ಸದಸ್ಯರ ತಂಡ ಸೇರಿ, ಮೊದಲ ಬಾರಿಗೆ ಬಿಗ್‌ ಮನೆಗೆ ಕಾಲಿಟ್ಟರು. ಎರಡನೇ ಟಾಸ್ಕ್‌ನಲ್ಲಿ ಮನೆಯ ಸದಸ್ಯರು ವಿನ್‌ ಆದ್ರು. ಆದರೆ ಅಲ್ಲಿ ಬಿಗ್‌ ಬಾಸ್‌ ಒಂದು ನಿಯಮ ಹೇಳಿದ್ದರು.

ಇದನ್ನೂ ಓದಿ: Mahesh Babu: ‘ಟಾಕ್ಸಿಕ್’ ಸಿನಿಮಾಗೆ 0.5 ರೇಟಿಂಗ್ ನೀಡಿದ ಮಹೇಶ್ ಬಾಬು ಪುತ್ರ!

ಗೆದ್ದ ತಂಡಕ್ಕೆ ಅಡ್ವಾಂಟೇಜ್‌ ಮತ್ತು ಸೋತ ತಂಡದ ಸದಸ್ಯರು ಓರ್ವರು ಖಾಯಂ ಆಗಿ ಬಿಗ್‌ ಬಾಸ್‌ ಮನೆ ಪ್ರವೇಶ ಮಾಡದಂತೆ ತಡೆಯಬೇಕಿತ್ತು. ಫ್ಲೈಟ್‌ ಪ್ರಯಾಣವನ್ನ ಯಾವತ್ತು ಮಾಡದಂತೆ ಓರ್ವರನ್ನ ಆಯ್ಕೆ ಮಾಡಬೇಕಿತ್ತು. ನಾಮಿನೇಶನ್‌ನಿಂದ ಪಾರಾಗಬಹುದು. ಯಾವ ತಂಡವೂ ಒಮ್ಮತ ನಿರ್ಧಾರ ಮಾಡದ ಕಾರಣ, ಗಗನ್‌ಗೆ ಈ ಅಧಿಕಾರ ಇಗ್‌ ಬಾಸ್‌ ನೀಡಿದರು.

ಧನುಷ್‌ ಮಾತ್ರ ಬಿಗ್‌ ಬಾಸ್‌ ಮನೆಗೆ ಪ್ರವೇಶ ಮಾಡುವಂತಿಲ್ಲ

ಜಗ್ಗ ಅವರಿಗೆ ಅಡ್ವಾಂಟೇಜ್‌ ನೀಡಿದರು. ಅದೇ ರೀತಿ ಪ್ರಯಾಣಿಕರ ತಂಡ ಇನ್ನುಮುಂದೆ ಟಾಸ್ಕ್‌ ಗೆದ್ದರೂ ಧನುಷ್‌ ಮಾತ್ರ ಬಿಗ್‌ ಬಾಸ್‌ ಮನೆಗೆ ಪ್ರವೇಶ ಮಾಡುವಂತಿಲ್ಲ ಎಂಬ ನಿರ್ಧಾರವನ್ನ ಘೋಷಿಸುತ್ತಾರೆ.



ಅದಕ್ಕೂ ಮುಂಚೆಯೇ ಧನುಷ್‌ ಹಾಗೂ ಗಗನ್‌ ನಡುವೆ ಗಲಾಟೆ ಆಗಿತ್ತು, ‘ನನಗೆ ಏಕೆ ಬ್ರೋ ಎಂದು ಕರೆದಿರಿ? ನನ್ನ ವಯಸ್ಸೆಷ್ಟು, ನಿಮ್ಮ ವಯಸ್ಸೆಷ್ಟು’ಎಂದು ಗಗನ್‌ ನೇರವಾಗಿ ಧನುಷ್‌ಗೆ ಕ್ಲಾಸ್‌ ತೆಗೆದುಕೊಂಡಿದ್ದರು. ಕೊನೆಗೆ ಇದರ ಪರಿಣಾಮ ಧುನಷ್‌ ಅವರನ್ನು ಟಾರ್ಗೆಟ್‌ ಮಾಡಿದ್ದಾರೆ ಗಗನ್‌.

ಇದನ್ನೂ ಓದಿ: Bigg Boss Kannada 13: ಶುರುವಾಯ್ತು ಹೈಡ್ರಾಮ; ಆಸಿಯಾ ಬಿರುಗಾಳಿ, ಸೌಂದರ್ಯ ಸುಂಟರಗಾಳಿ!

ಹೀಗಾಗಿ ಟಾಸ್ಕ್‌ ಗೆದ್ದರೂ ಧನುಷ್‌ ಮಾತ್ರ ಬಿಗ್‌ ಬಾಸ್‌ ಮನೆಗೆ ಪ್ರವೇಶ ಮಾಡುವಂತಿಲ್ಲ ಎಂಬ ನಿರ್ಧಾರವನ್ನ ಘೋಷಿಸುತ್ತಾರೆ. ಇದಕ್ಕೆ ಧನುಷ್‌ ಕೂಡ ಆಕ್ಷೇಪ ವ್ಯಕ್ತಪಡಿಸುತ್ತಾರೆ. ನನ್ನನ್ನು ಪರ್ಸನಲ್‌ ಆಗಿ ಗಗನ್‌ ಟಾರ್ಗೆಟ್‌ ಮಾಡಿದ್ದಾರೆ ಎಂದು ಧನುಷ್‌ ಹೇಳಿದ್ದಾರೆ.