ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಅತಿರೇಕದ ಮಂಜನ ಮೇಲೆ ಮುಗಿಬಿದ್ದ ಮನೆ ಮಂದಿ! ʻಬಿಗ್‌ ಬಾಸ್‌ʼ ಮನೆಯಲ್ಲಿ ಮಹಾಕವಿಗೆ ಉಳಿಗಾವಿಲ್ಲ, ಒಟ್ಟಾಗಿ ಸಮರ ಸಾರಿದ ಸ್ಪರ್ಧಿಗಳು!

Bigg Boss Kannada 13: ಮಹಾಕವಿ ಮಂಜನ ವಿರುದ್ಧ ಮನೆಯವರೆಲ್ಲರೂ ಒಟ್ಟಾಗಿ ತಿರುಗಿಬಿದ್ದಿದ್ದಾರೆ. ಮಿಡ್ ವೀಕ್ ಎಲಿಮಿನೇಷನ್ ಬಿಸಿಯ ನಡುವೆ ಸದಸ್ಯರು ಮಂಜನ ಅತಿರೇಕದ ವರ್ತನೆ ಮತ್ತು ಕ್ಯಾರೆಕ್ಟರ್ ಅಸಾಸಿನೇಷನ್ ಪ್ರವೃತ್ತಿಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಧನುಷ್, ಕಾವ್ಯಾ, ಕಿರಣ್ ನೇರ ದಾಳಿ ನಡೆಸಿದ ಬೆನ್ನಲ್ಲೇ ಮಂಜ ಕಣ್ಣೀರಿಟ್ಟಿದ್ದಾರೆ.

BBK 13: ಅತಿರೇಕದ ಮಂಜನ ವಿರುದ್ಧ ಸೆಡ್ಡು ಹೊಡೆದ ಬಿಗ್‌ ಬಾಸ್‌ ಸ್ಪರ್ಧಿಗಳು!

-

Avinash GR
Avinash GR Sep 21, 2026 3:11 PM

'ಬಿಗ್‌ ಬಾಸ್' ಮನೆಯಲ್ಲಿ ದಿನದಿಂದ ದಿನಕ್ಕೆ ಜಿದ್ದಾಜಿದ್ದಿ ರಂಗೇರುತ್ತಿದ್ದು, ಸ್ಪರ್ಧಿಗಳ ನಡುವಿನ ಸಮರ ತಾರಕಕ್ಕೇರಿದೆ. ಕಲರ್ಸ್ ಕನ್ನಡ ವಾಹಿನಿ ಬಿಡುಗಡೆ ಮಾಡಿರುವ ಹೊಸ ಪ್ರೋಮೋದಲ್ಲಿ, ಸ್ಪರ್ಧಿ ಮಂಜನ ಅತಿರೇಕದ ವರ್ತನೆಗೆ ಇಡೀ ಮನೆಯ ಸದಸ್ಯರೆಲ್ಲರೂ ಒಟ್ಟಾಗಿ ಮುಗಿಬಿದ್ದಿರುವುದು ತೀವ್ರ ಕುತೂಹಲ ಮೂಡಿಸಿದೆ. ಮಿಡ್ ವೀಕ್ ಎಲಿಮಿನೇಷನ್ ಬಿಸಿಯ ನಡುವೆ ಮಂಜುಗೆ ಈ ಬಾರಿ ಮನೆಯಿಂದ ಗೇಟ್‌ಪಾಸ್ ಸಿಗುವುದು ಬಹುತೇಕ ಖಚಿತ ಎಂಬ ಮಾತುಗಳು ಕೇಳಿಬರುತ್ತಿವೆ.

ಮಂಜನ ವಿರುದ್ಧ ವಾಗ್ದಾಳಿ

ಪ್ರೋಮೋ ಪ್ರಕಾರ, "ಮಿಡ್ ವೀಕ್ ಎಲಿಮಿನೇಷನ್ ತಮ್ಮನ್ನು ರಕ್ಷಿಸಿಕೊಳ್ಳಲು ಮನೆಯ ಸದಸ್ಯರ ಪೈಕಿ ಒಬ್ಬರನ್ನು ಹೊರಗಿಡಬೇಕಿದೆ" ಎಂದು ಬಿಗ್ ಬಾಸ್ ನೀಡಿದ ಆದೇಶ ಮನೆಯಲ್ಲಿ ಬಿರುಗಾಳಿ ಎಬ್ಬಿಸಿದೆ. ಈ ಹಂತದಲ್ಲಿ ಬಹುತೇಕ ಎಲ್ಲಾ ಸದಸ್ಯರು ಮಂಜು ಅವರ ಹೆಸರನ್ನೇ ಮುನ್ನೆಲೆಗೆ ತಂದಿದ್ದಾರೆ. ಗಗನ್‌, ವೈಷ್ಣವಿ, ಆಸಿಯಾ, ಕಿರಣ್‌ ಹಾಗೂ ತಾಂಡವ್‌ ಸೇರಿದಂತೆ ಬಹುತೇಕರು ಮಂಜನ ವಿರುದ್ಧವೇ ತಿರುಗಿಬಿದ್ದಿದ್ದು, ಒಟ್ಟಾಗಿ ವಾಗ್ದಾಳಿ ನಡೆಸಿದ್ದಾರೆ.

ನಿನ್ನನ್ನು ತುಳಿಯೋದ್ರಲ್ಲಿ ಯಾವ ತಪ್ಪು ಇಲ್ಲ

ಮಂಜು ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದ ಕಾವ್ಯಾ ಗೌಡ, "ಮಂಜನಿಗೆ ಗೊತ್ತಿರೋದು ಒಂದೇ, ಅದು ಕ್ಯಾರೆಕ್ಟರ್ ಅಸಾಸಿನೇಷನ್ ಮಾಡೋದು" ಎಂದು ಗುಡುಗಿದ್ದಾರೆ. ಮತ್ತೊಬ್ಬ ಸ್ಪರ್ಧಿ ಧನುಷ್ ಕೂಡ ಧ್ವನಿಗೂಡಿಸಿ, "ಮಂಜನಿಗೆ ಇಲ್ಲಿ ಗೇಮ್ ಆಡೋದಕ್ಕೆ ಯಾವುದೇ ಅರ್ಹತೆ ಇಲ್ಲ. ಈ ಮನೆಯಿಂದ ಹೊರಹೋಗಲು ಅರ್ಹತೆ ಇರುವ ಏಕೈಕ ವ್ಯಕ್ತಿಯೆಂದರೆ ಅದು ಮಂಜ ಮಾತ್ರ!" ಎಂದು ನೇರವಾಗಿಯೇ ಕಿಡಿಕಾರಿದ್ದಾರೆ. ಇನ್ನು ಕಿರಣ್ ಶಾಸ್ತ್ರಿ, "ಇನ್ನೊಬ್ಬರ ಬೇಡಿಕೆಗಳನ್ನು ತುಳಿಯೋಕೆ ಹೊರಟಿದ್ದೀಯಾ, ಇನ್ನೊಬ್ಬರ ವಿಚಾರಧಾರೆಗಳನ್ನು ತುಳಿಯೋಕೆ ಹೊರಟಿದ್ದೀಯಾ.. ಅಂದ್ಮೇಲೆ ನಿನ್ನನ್ನು ತುಳಿಯೋದ್ರಲ್ಲಿ ಯಾವ ತಪ್ಪೂ ಇಲ್ಲ ತಾನೇ" ಎಂದು ಮುಖಕ್ಕೆ ಹೊಡೆದಂತೆ ಮಾತಿನಲ್ಲೇ ತಿವಿದಿದ್ದಾರೆ.

ಸೌಂದರ್ಯಾಗೆ ಕ್ಷಮೆ ಕೇಳಿದ ಮಂಜ

ಮನೆ ಮಂದಿಯೆಲ್ಲಾ ಏಕಾಏಕಿ ತಮ್ಮ ವಿರುದ್ಧ ತಿರುಗಿಬೀಳುತ್ತಿದ್ದಂತೆ ತೀವ್ರ ಆಘಾತಕ್ಕೆ ಒಳಗಾದ ಮಂಜು, ಪಶ್ಚಾತ್ತಾಪದಿಂದ ಕಣ್ಣೀರಿಡುತ್ತಾ ಸೌಂದರ್ಯಾ ಶೆಟ್ಟಿ ಅವರ ಬಳಿ ತೆರಳಿದ್ದಾರೆ. "ಆಕ್ಚುವಲಿ ತುಂಬಾ ತಪ್ಪಾಗಿದೆ. ಇನ್ನೊಮ್ಮೆ ನಾನು ಆ ತರ ಮಾತಾಡಲ್ಲ. ಕ್ಷಮಿಸಿಬಿಡ್ರಿ, ಕ್ಷಮಿಸಿಬಿಡ್ರಿ, ಕ್ಷಮಿಸಿಬಿಡ್ರಿ..." ಎಂದು ಅವರನ್ನು ಅಪ್ಪಿಕೊಂಡು ಭಾವುಕರಾಗಿ ಕ್ಷಮೆಯಾಚಿಸಿದ್ದಾರೆ.

Bigg Boss Kannada 13: ‘ಬಿಗ್‌ ಬಾಸ್‌ ಸೀಸನ್‌ 13’ ಎಂಟ್ರಿಗೂ ಮುನ್ನ ನಟಿ ಆಸಿಯಾ ಫಿರ್ದೋಸ್ ಸೀರಿಯಲ್‌ ತಂಡದ ಕುರಿತು ಹೇಳಿದ್ದೇನು?

ಬಿಗ್ ಬಾಸ್ ಮನೆಗೆ ಕಾಲಿಟ್ಟ ಮೊದಲ ದಿನದಿಂದಲೂ ಒಂದಲ್ಲಾ ಒಂದು ವಿವಾದ, ಅತಿಯಾದ ಮಾತು ಹಾಗೂ ನೆಗೆಟಿವ್ ವರ್ತನೆಗಳಿಂದಲೇ ಸುದ್ದಿಯಾಗುತ್ತಿದ್ದ ಮಂಜುಗೆ ಈ ಹಿಂದೆ ಕಿಚ್ಚ ಸುದೀಪ್ ಕೂಡ ವಾರದ ಪಂಚಾಯಿತಿಯಲ್ಲಿ ಸರಿಯಾಗಿಯೇ ಕ್ಲಾಸ್ ತೆಗೆದುಕೊಂಡಿದ್ದರು. ಇದೀಗ ಮನೆ ಮಂದಿಯೆಲ್ಲಾ ಒಟ್ಟಾಗಿ ಮಂಜನ ವಿರುದ್ಧ ತೊಡೆತಟ್ಟಿದ್ದು, ಈ ಬಾರಿಯ ಮಿಡ್ ವೀಕ್ ಎಲಿಮಿನೇಷನ್‌ನಲ್ಲಿ ಮಂಜು ತಮ್ಮ ಜಾಗ ಉಳಿಸಿಕೊಳ್ಳುತ್ತಾರಾ ಅಥವಾ ಮನೆ ಬಿಟ್ಟು ಹೊರನಡೆಯುತ್ತಾರಾ ಎಂಬುದನ್ನು ಕಾದುನೋಡಬೇಕಿದೆ.