ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Bigg Boss Kannada 13: ಶೆಟ್ಟಿ Don ಸ್ವಯಂವರ : ನಗುವಿನ ಅಲೆ ಎಬ್ಬಿಸಿದ ಟಾಸ್ಕ್!

Bigg Boss Kannada 13: ಬಿಗ್‌ಬಾಸ್ ಮನೆಯಲ್ಲಿ (Bigg Boss Kannada 13) ಕಳೆದ ವಾರ ನೀಡಲಾಗಿದ್ದ ಟಾಸ್ಕ್ ಸ್ಪರ್ಧಿಗಳ ಜೊತೆಗೆ ಪ್ರೇಕ್ಷಕರಿಗೂ ಭರ್ಜರಿ ಮನರಂಜನೆ ನೀಡಿತ್ತು. ಸ್ಪರ್ಧಿಗಳು ತಮ್ಮ ಪ್ರದರ್ಶನದ ಮೂಲಕ ಗಮನ ಸೆಳೆದಿದ್ದರು. ಇದೀಗ ಈ ವಾರವೂ ಬಿಗ್‌ಬಾಸ್ ಮನೆಯ ಸದಸ್ಯರಿಗೆ ಮನರಂಜನಾತ್ಮಕ ಟಾಸ್ಕ್ ನೀಡಲಾಗಿದ್ದು, ಮನೆಯೊಳಗೆ ಮದುವೆಯ ಸಂಭ್ರಮ ಮನೆಮಾಡಿದೆ.

ಶೆಟ್ಟಿ Don ಸ್ವಯಂವರ : ನಗುವಿನ ಅಲೆ ಎಬ್ಬಿಸಿದ ಟಾಸ್ಕ್!

ಬಿಗ್‌ ಬಾಸ್‌ ಕನ್ನಡ -

Yashaswi Devadiga
Yashaswi Devadiga Oct 27, 2026 7:00 PM

ಬಿಗ್‌ಬಾಸ್ ಮನೆಯಲ್ಲಿ (Bigg Boss Kannada 13) ಕಳೆದ ವಾರ ನೀಡಲಾಗಿದ್ದ ಟಾಸ್ಕ್ ಸ್ಪರ್ಧಿಗಳ ಜೊತೆಗೆ ಪ್ರೇಕ್ಷಕರಿಗೂ ಭರ್ಜರಿ ಮನರಂಜನೆ ನೀಡಿತ್ತು. ಸ್ಪರ್ಧಿಗಳು ತಮ್ಮ ಪ್ರದರ್ಶನದ ಮೂಲಕ ಗಮನ ಸೆಳೆದಿದ್ದರು. ಇದೀಗ ಈ ವಾರವೂ ಬಿಗ್‌ಬಾಸ್ ಮನೆಯ ಸದಸ್ಯರಿಗೆ ಮನರಂಜನಾತ್ಮಕ ಟಾಸ್ಕ್ ನೀಡಲಾಗಿದ್ದು, ಮನೆಯೊಳಗೆ ಮದುವೆಯ ಸಂಭ್ರಮ ಮನೆಮಾಡಿದೆ.

ಹೌದು, ಈ ವಾರದ ವಿಶೇಷ ಟಾಸ್ಕ್‌ನಲ್ಲಿ ಸೌಂದರ್ಯಾ ಅವರ ವಿವಾಹವನ್ನು ಬಿಗ್‌ಬಾಸ್ ಮನೆಯಲ್ಲಿ ನಡೆಸಲಾಗುತ್ತಿದೆ. ಸೌಂದರ್ಯಾ ಅವರನ್ನು ಮದುವೆಯಾಗಲು ಇಬ್ಬರು ವರರು ಮುಂದೆ ಬಂದಿದ್ದು, ಅವರ ಕುಟುಂಬದ ಸದಸ್ಯರು ವಧುವಿನ ಮನವೊಲಿಸುವ ಪ್ರಯತ್ನ ಮಾಡುತ್ತಿದ್ದಾರೆ. ವರನ ಕಡೆಯವರು ಸೌಂದರ್ಯಾ ಅವರನ್ನು ಮದುವೆಗೆ ಒಪ್ಪಿಸಲು ನಾನಾ ರೀತಿಯ ಪ್ರಯತ್ನಗಳನ್ನು ಮಾಡುತ್ತಿರುವುದು ಟಾಸ್ಕ್‌ಗೆ ಮತ್ತಷ್ಟು ರಂಗು ತಂದಿದೆ.

ಇದನ್ನೂ ಓದಿ: Bigg Boss Kannada 13: ಶೆಟ್ಟಿ ಡಾನ್ ಕಲ್ಯಾಣವಂತೆ! ವರನ್ಯಾರು ಗೊತ್ತೇನು?

ಮದುವೆಯ ಶಾಸ್ತ್ರ, ಕುಟುಂಬದವರ ಮಾತುಕತೆ ಹಾಗೂ ಸ್ಪರ್ಧಿಗಳ ವಿಭಿನ್ನ ಪಾತ್ರಗಳು ಮನೆಯೊಳಗೆ ನಗುವಿನ ಅಲೆಯನ್ನೇ ಎಬ್ಬಿಸಿವೆ. ವರನ ಕಡೆಯವರು ಸೌಂದರ್ಯಾ ಅವರನ್ನು ಒಪ್ಪಿಸಲು ಮಾಡುವ ಪ್ರಯತ್ನಗಳು, ಅವರ ನಡುವಿನ ಸಂಭಾಷಣೆ ಮತ್ತು ತಮಾಷೆಯ ಸನ್ನಿವೇಶಗಳು ಪ್ರೇಕ್ಷಕರಿಗೆ ಮನರಂಜನೆ ನೀಡುವಂತಿವೆ. ವಧುವಿನ ಕಡೆಯಾಗಿ ತಾಂಡವ್ ಅವರು ಕಾಣಿಸಿಕೊಂಡಿದ್ದಾರೆ. ತಾಯಿಯಾಗಿ ಪ್ರಕಾಂತ್ ಕಾಣಿಸಿಕೊಂಡಿದ್ದಾರೆ. ವರವಾಗಿ ಗಗನ್ - ಯುವಕ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ: Bigg Boss Kannada 13: ಸಿಂಪತಿ ಕಾರ್ಡ್ ವರ್ಕೌಟ್‌ ಆಗ್ತಾ ಇಲ್ವಾ? ಕುಮಾರಿ ಅಣಕಿಸಿದ ಸೌಂದರ್ಯ!

ಒಟ್ಟಿನಲ್ಲಿ, ಬಿಗ್‌ಬಾಸ್ ಮನೆಯ ಈ ಮದುವೆ ಟಾಸ್ಕ್ ಸ್ಪರ್ಧಿಗಳಲ್ಲಿ ಹೊಸ ಉತ್ಸಾಹ ಮೂಡಿಸಿದ್ದು, ಮನೆಯ ವಾತಾವರಣವನ್ನು ಹಾಸ್ಯಮಯವಾಗಿಸಿದೆ. ಸೌಂದರ್ಯಾ ಕೊನೆಗೆ ಯಾರನ್ನು ಆಯ್ಕೆ ಮಾಡುತ್ತಾರೆ ಎಂಬ ಕುತೂಹಲದ ಜೊತೆಗೆ, ಈ ಟಾಸ್ಕ್‌ನಲ್ಲಿ ಇನ್ನೇನು ಮಜವಾದ ಘಟನೆಗಳು ನಡೆಯಲಿವೆ ಎಂಬುದನ್ನು ಕಾದು ನೋಡಬೇಕಿದೆ.