ಧನ್ವೀರ್ಗೆ ವಿಜಯಲಕ್ಷ್ಮೀ ಬಿಗ್ ಶಾಕ್, ನಟ ದರ್ಶನ್ ಇನ್ಸ್ಟಾಗ್ರಾಮ್ ಅಕೌಂಟ್ನಿಂದಲೇ ಬ್ಲಾಕ್! ʻಶೋಕ್ದಾರ್ʼ ರಿಯಾಕ್ಷನ್ ಏನು?
ನಟ ದರ್ಶನ್ ತೂಗುದೀಪ ನ್ಯಾಯಾಂಗ ಬಂಧನದಲ್ಲಿರುವಾಗಲೇ ಅವರ ಆಪ್ತ ವಲಯದಲ್ಲಿ ಭುಗಿಲೆದ್ದಿರುವ ಮುಸುಕಿನ ಗುದ್ದಾಟ ತೀವ್ರ ಸ್ವರೂಪ ಪಡೆದುಕೊಂಡಿದೆ. ದರ್ಶನ್ ಇನ್ಸ್ಟಾಗ್ರಾಮ್ ಖಾತೆಯಿಂದ ನಟ ಧನ್ವೀರ್ ಗೌಡರನ್ನು ಬ್ಲಾಕ್ ಮಾಡಲಾಗಿದೆ. "ಯಾವುದೇ ನೆಗೆಟಿವ್ ಪ್ರಚಾರವೂ ದರ್ಶನ್ ಸರ್ ಮೇಲಿನ ತಮ್ಮ ಗೌರವ ಪ್ರೀತಿಯನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ" ಎಂದು ಧನ್ವೀರ್ ತಿರುಗೇಟು ನೀಡಿದ್ದಾರೆ.
-
ನಟ ದರ್ಶನ್ ನ್ಯಾಯಾಂಗ ಬಂಧನದಲ್ಲಿದ್ದರೂ ಅವರ ಸುತ್ತಲಿನ ವಿವಾದಗಳು ಮಾತ್ರ ತಣ್ಣಗಾಗುತ್ತಿಲ್ಲ. ಇತ್ತೀಚೆಗಷ್ಟೇ ದರ್ಶನ್ ಪತ್ನಿ ವಿಜಯಲಕ್ಷ್ಮಿ ಹಾಗೂ ನಟ ಧನ್ವೀರ್ ಗೌಡ ನಡುವಿನ ವೈಮನಸ್ಸು ಪೊಲೀಸ್ ಠಾಣೆಯ ಮೆಟ್ಟಿಲೇರಿ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಇದರ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ಧನ್ವೀರ್ ಅವರು ದರ್ಶನ್ ಅವರ ಇನ್ಸ್ಟಾಗ್ರಾಮ್ ಖಾತೆಯನ್ನು ಅನ್ಫಾಲೋ ಮಾಡಿದ್ದಾರೆ ಎಂಬ ವದಂತಿ ವ್ಯಾಪಕವಾಗಿ ಹರಿದಾಡಿತ್ತು. ಆದರೆ ಈ ಕುರಿತು ಸ್ಪಷ್ಟನೆ ನೀಡಿರುವ ಧನ್ವೀರ್, "ನಾನು ಅನ್ಫಾಲೋ ಮಾಡಿಲ್ಲ, ಬದಲಿಗೆ ಅವರ ಅಕೌಂಟ್ನಿಂದಲೇ ನನ್ನನ್ನು ಬ್ಲಾಕ್ ಮಾಡಲಾಗಿದೆ" ಎಂದು ಸತ್ಯ ಬಿಚ್ಚಿಟ್ಟಿದ್ದಾರೆ.
ಧನ್ವೀರ್ ರಿಯಾಕ್ಷನ್ ಏನು?
ದರ್ಶನ್ ಅವರ ಅಧಿಕೃತ ಸೋಷಿಯಲ್ ಮೀಡಿಯಾ ಖಾತೆಗಳನ್ನು ಪ್ರಸ್ತುತ ಅವರ ಪತ್ನಿ ವಿಜಯಲಕ್ಷ್ಮಿ ಅವರೇ ನಿರ್ವಹಿಸುತ್ತಿರುವುದರಿಂದ, ಧನ್ವೀರ್ ಅವರನ್ನು ಬ್ಲಾಕ್ ಮಾಡಿದ್ದು ಅವರೇ ಇರಬಹುದು ಎಂಬ ಚರ್ಚೆ ಜೋರಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಧನ್ವೀರ್, ದರ್ಶನ್ ಜೊತೆಗಿರುವ ಹಳೆಯ ಫೋಟೋ ಹಂಚಿಕೊಂಡು, ಪೋಸ್ಟ್ ಹಾಕಿದ್ದಾರೆ.
Actor Darshan: ದರ್ಶನ್ ಖುದ್ದು ಹಾಜರಿ ಕೋರಿದ್ದ ಅರ್ಜಿ ವಜಾ; ವಿಡಿಯೊ ಕಾನ್ಫರೆನ್ಸ್ ಮೂಲಕ ಹಾಜರಿಗೆ ಸೂಚನೆ
"ಸೋಶಿಯಲ್ ಮೀಡಿಯಾದಲ್ಲಿ ದರ್ಶನ್ ಸರ್ ಅಕೌಂಟ್ನಿಂದ ಬ್ಲಾಕ್ ಮಾಡಬಹುದು, ನಾನೇ ಅನ್ಫಾಲೋ ಮಾಡಿದೆ ಎಂದು ಬಿಂಬಿಸಬಹುದು. ಜನರ ಮುಂದೆ ನನ್ನನ್ನು ಕೆಟ್ಟವನಾಗಿ ತೋರಿಸಲು ಎಷ್ಟೇ ನೆಗೆಟಿವ್ ಪಿಆರ್ ಮಾಡಿದರೂ, ನನ್ನ ಹೃದಯದಲ್ಲಿ ದರ್ಶನ್ ಸರ್ಗೆ ಇರುವ ಸ್ಥಾನಕ್ಕೆ ಬೀಗ ಹಾಕುವ ಶಕ್ತಿ ಯಾರಿಗೂ ಇಲ್ಲ. ನನ್ನ ಅಭಿಮಾನ ಯಾರದ್ದೋ ವಿರೋಧದಿಂದ ಹುಟ್ಟಿದ್ದಲ್ಲ, ಯಾರದ್ದೋ ವಿರೋಧದಿಂದ ಸಾಯುವುದೂ ಇಲ್ಲ. ಕಾಲವೇ ಬದಲಾದರೂ ನನ್ನ ನಿಲುವು ಒಂದೇ, ದರ್ಶನ್ ಸರ್! THEN. NOW. FOREVER" ಎಂದು ಪ್ರತಿಕ್ರಿಯಿಸಿದ್ದಾರೆ.
ತಾರಕ್ಕೇರಿರುವ ಆರೋಪ-ಪ್ರತ್ಯಾರೋಪ
ಅಂದಹಾಗೆ ಇಬ್ಬರ ನಡುವಿನ ಈ ಬಿರುಕಿಗೆ ಕೋಟ್ಯಂತರ ರೂಪಾಯಿಗಳ ಆರ್ಥಿಕ ವಹಿವಾಟೇ ಪ್ರಮುಖ ಕಾರಣ ಎನ್ನಲಾಗಿದೆ. ಧನ್ವೀರ್ ಅವರು ಸುಮಾರು 10 ಕೋಟಿ ರೂ. ಹಣ ಪಡೆದು ವಿಜಯಲಕ್ಷ್ಮಿ ಅವರಿಗೆ ವಾಪಸ್ ನೀಡಿಲ್ಲ ಎಂಬ ಆರೋಪ ಕೇಳಿಬಂದಿದೆ. ಮತ್ತೊಂದೆಡೆ ಧನ್ವೀರ್ ತಮಗೆ ಜೀವಬೆದರಿಕೆ ಹಾಕಿದ್ದಾರೆ ಎಂದು ವಿಜಯಲಕ್ಷ್ಮಿ ಅವರ ಮ್ಯಾನೇಜರ್ ನಾಗರಾಜ್ ಪೊಲೀಸರಿಗೆ ದೂರು ನೀಡಿದ್ದಾರೆ. ಇದಕ್ಕೆ ಪ್ರತಿಯಾಗಿ ಧನ್ವೀರ್ ಅವರ ತಂದೆ ಕೂಡ ದೂರು ದಾಖಲಿಸಿದ್ದು, ಪರಸ್ಪರ ಆರೋಪ-ಪ್ರತ್ಯಾರೋಪಗಳು ತಾರಕಕ್ಕೇರಿವೆ. ಇದರ ನಡುವೆ ನಡೆದಿರುವ ಈ 'ಬ್ಲಾಕ್ ಪಾಲಿಟಿಕ್ಸ್' ಮತ್ತಷ್ಟು ಸಂಚಲನ ಮೂಡಿಸಿದೆ.