Bigg boss Kannada 13: ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಎಂಟ್ರಿ ಇವರೇ?
Bigg boss Kannada 13: ‘ಕ್ವಾಟ್ಲೆ ಕಿಚನ್’, ‘ಗಿಚ್ಚಿ ಗಿಲಿಗಿಲಿ’ ಮೂಲಕ ಕನ್ನಡಿಗರ ಮನೆ ಮಾತಾದ ಹಾಸ್ಯ ಕಲಾವಿದ ಪ್ರಶಾಂತ್ ಗೌಡ , ಕಳೆದ ಜುಲೈ ತಿಂಗಳಲ್ಲಿ ಪ್ರಶಾಂತ್ ಗೌಡ ದಾಂಪತ್ಯ ಜೀವನಕ್ಕೆ ಕಾಲಿರಿಸಿದರು. ತಾವು ಪ್ರೀತಿಸಿದ ಹುಡುಗಿ ಕೃತಿ ಗೌಡ ಅವರನ್ನೇ ಪ್ರಶಾಂತ್ ಗೌಡ ವಿವಾಹವಾದರು. ಕಾಮಿಡಿಯನ್ ಪ್ರಶಾಂತ್ ಗೌಡ ಅವರು ಬಿಗ್ ಬಾಸ್ ಕನ್ನಡ ಸೀಸನ್ 13ಕ್ಕೆ ವೈಲ್ಡ್‌ಕಾರ್ಡ್ ಎಂಟ್ರಿ ನೀಡಲಿದ್ದಾರೆ ಎಂಬ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಈ ಸುದ್ದಿ ನಿಜವೇ ಅಥವಾ ಕೇವಲ ಸಾಮಾಜಿಕ ಜಾಲತಾಣಗಳಲ್ಲಿನ ವದಂತಿಯೇ ಎಂಬುದು ಅಧಿಕೃತವಾಗಿ ಸ್ಪಷ್ಟವಾಗಬೇಕಿದೆ.
ಪ್ರಶಾಂತ್ ಗೌಡ -
‘ಕ್ವಾಟ್ಲೆ ಕಿಚನ್’, ‘ಗಿಚ್ಚಿ ಗಿಲಿಗಿಲಿ’ ಮೂಲಕ ಕನ್ನಡಿಗರ ಮನೆ ಮಾತಾದ ಹಾಸ್ಯ ಕಲಾವಿದ ಪ್ರಶಾಂತ್ ಗೌಡ (Prshanth Gowda). ಕಳೆದ ಜುಲೈ ತಿಂಗಳಲ್ಲಿ ಪ್ರಶಾಂತ್ ಗೌಡ ದಾಂಪತ್ಯ ಜೀವನಕ್ಕೆ ಕಾಲಿರಿಸಿದರು. ತಾವು ಪ್ರೀತಿಸಿದ ಹುಡುಗಿ ಕೃತಿ ಗೌಡ ಅವರನ್ನೇ ಪ್ರಶಾಂತ್ ಗೌಡ ವಿವಾಹವಾದರು. ಕಾಮಿಡಿಯನ್ ಪ್ರಶಾಂತ್ ಗೌಡ ಅವರು ಬಿಗ್ ಬಾಸ್ ಕನ್ನಡ ಸೀಸನ್ 13ಕ್ಕೆ (Bigg Boss kannada wild Card entry) ವೈಲ್ಡ್‌ಕಾರ್ಡ್ ಎಂಟ್ರಿ ನೀಡಲಿದ್ದಾರೆ ಎಂಬ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಈ ಸುದ್ದಿ ನಿಜವೇ ಅಥವಾ ಕೇವಲ ಸಾಮಾಜಿಕ ಜಾಲತಾಣಗಳಲ್ಲಿನ ವದಂತಿಯೇ ಎಂಬುದು ಅಧಿಕೃತವಾಗಿ ಸ್ಪಷ್ಟವಾಗಬೇಕಿದೆ.
ಹೊಸ ಸುದ್ದಿಯೊಂದು ವೈರಲ್
‘ಕ್ವಾಟ್ಲೆ ಕಿಚನ್’ ಮೊದಲ ಆವೃತ್ತಿಯಲ್ಲಿ ವಿನ್ನರ್ ಆದ ಪ್ರಶಾಂತ್ ಗೌಡ ಉದ್ಯಮಕ್ಕೆ ಕಾಲಿಟ್ಟಿದ್ದಾರೆ. ಐಷಾರಾಮಿ ಸಲೂನ್ ತೆರೆದಿದ್ದಾರೆ. ಅದಕ್ಕೆ ‘ಸೆಲೆಬ್ರೇಟ್ ಲೈಫ್’ ಎಂದು ಹೆಸರಿಟ್ಟಿದ್ದಾರೆ. ಇತ್ತೀಚೆಗಷ್ಟೇ ಈ ಸಲೂನ್‌ನ ಉದ್ಘಾಟನೆ ಕಾರ್ಯಕ್ರಮ ನಡೆದಿತ್ತು. ಇದೀಗ ಹೊಸ ಸುದ್ದಿಯೊಂದು ವೈರಲ್ ಆಗುತ್ತಿದೆ.
ಇದನ್ನೂ ಓದಿ: BBK13: ವೋಟಿಂಗ್ ಇಲ್ಲದೆ ಮಂಜು-ಕಿರಣ್ ಔಟ್? ಏನಿದು ಟ್ವಿಸ್ಟ್?
ಕಾಮಿಡಿ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಪ್ರಶಾಂತ್ ಗೌಡ ಎಂಟ್ರಿ ನೀಡಿದರೆ, ಕಾರ್ಯಕ್ರಮಕ್ಕೆ ಹಾಸ್ಯದ ಸ್ಪರ್ಶ ಸಿಗಬಹುದು ಎಂಬ ನಿರೀಕ್ಷೆ ಅಭಿಮಾನಿಗಳಲ್ಲಿದೆ. ತಮ್ಮ ವಿಭಿನ್ನ ಕಾಮಿಡಿ ಪಂಚ್‌ಗಳು, ಸಮಯಪ್ರಜ್ಞೆ ಹಾಗೂ ಹಾಸ್ಯಮಯ ಮಾತಿನ ಶೈಲಿಯಿಂದ ಪ್ರಶಾಂತ್ ಗೌಡ ಅವರು ಕಿರುತೆರೆ ಪ್ರೇಕ್ಷಕರಿಗೆ ಪರಿಚಿತರಾಗಿದ್ದಾರೆ. ಹೀಗಾಗಿ ಅವರು ಬಿಗ್ ಬಾಸ್ ಮನೆಗೆ ಕಾಲಿಟ್ಟರೆ, ಇತರ ಸ್ಪರ್ಧಿಗಳೊಂದಿಗೆ ಅವರ ಸಂಭಾಷಣೆಗಳು ಹಾಗೂ ಟಾಸ್ಕ್‌ಗಳಲ್ಲಿನ ಭಾಗವಹಿಸುವಿಕೆ ಹೇಗಿರಲಿದೆ ಎಂಬ ಕುತೂಹಲ ಮೂಡಿದೆ.
‘ಬಿಗ್ ಬಾಸ್ ಕನ್ನಡ ಸೀಸನ್ 13’ರಲ್ಲಿ ಈಗಾಗಲೇ ಹಲವು ಸ್ಪರ್ಧಿಗಳು ಭಾಗವಹಿಸಿದ್ದು, ಕಾರ್ಯಕ್ರಮವು ಹೊಸ ರೀತಿಯ ಕಾನ್ಸೆಪ್ಟ್‌ನೊಂದಿಗೆ ಸಾಗುತ್ತಿದೆ. ಇದೀಗ ಪ್ರಶಾಂತ್ ಗೌಡ ಅವರ ವೈಲ್ಡ್‌ಕಾರ್ಡ್ ಎಂಟ್ರಿ ಸುದ್ದಿ ವೈರಲ್ ಆಗಿರುವುದರಿಂದ ಅಭಿಮಾನಿಗಳ ಕುತೂಹಲ ಮತ್ತಷ್ಟು ಹೆಚ್ಚಾಗಿದೆ.
ಬಿಗ್ ಬಾಸ್ ಅಂದ್ರೆನೇ ಹಾಗೇ. ಟ್ವಿಸ್ಟ್ ಮೇಲೆ ಟ್ವಿಸ್ಟ್ ಕೊಡ್ತಾನೆ ಇರುತ್ತೆ. ಹೊಸ ಪ್ರೋಮೋ ಔಟ್ ಆಗಿದೆ. ಅದರಲ್ಲೂ ಮಂಜ , ಕಿರಣ್ ಮನೆಯೊಳಗೆ ಎಂಟ್ರಿ ಕೊಟ್ಟಂತಿದೆ. ಆದರೆ ಒಂದು ಶಾಕಿಂಗ್ ಅಪ್‌ಡೇಟ್ ಬಿಗ್ ಬಾಸ್ ಸ್ಪರ್ಧಿಗಳಿಗೆ ನೀಡಿದೆ. ಅದುವೇ EMERGENCY EXIT!
ಇದನ್ನೂ ಓದಿ: Bigg Boss Kannada 13: ಈ ವಾರ ಬಿಗ್ ಬಾಸ್ ಮನೆಯಲ್ಲಿ EMERGENCY EXIT! ಎಲ್ಲ ಸ್ಪರ್ಧಿಗಳು ನಾಮಿನೇಟ್
ಸ್ಪರ್ಧಿಗಳು ಮಲಗಿರುವಾಗ ಸೈರನ್ ಆಗಿದೆ. ಆಗ ಸುದೀಪ್ ಅವರು ಅನೌನ್ಸ್ ಮಾಡಿದ್ದಾರೆ. ಪ್ರತಿ ಸ್ಪರ್ಧಿಗಳನ್ನು ನಾವೇ ನಾಮಿನೇಟ್ ಮಾಡುತ್ತಿದ್ದೇವೆ. ಈ ವಾರ ಯಾವಾಗ ಏನು ಬೇಕಾದರೂ ಆಗುತ್ತೆ. EMERGENCY EXIT ರೆಡಿ ಆಗಿ ಎಂದಿದ್ದಾರೆ ಕಿಚ್ಚ.