ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Suraj Chavan: ಬಾಲ್ಯದ ಗೆಳತಿ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ಬಿಗ್‌ ಬಾಸ್‌ ವಿನ್ನರ್‌!

Bigg Boss Marathi 5 winner: ಬಿಗ್‌ಬಾಸ್ ಮರಾಠಿ ಸೀಸನ್ 5ರ ವಿನ್ನರ್‌ ಆಗಿದ್ದ ಸೂರಜ್ ನವೆಂಬರ್ 29 ರಂದು ವಿವಾಹವಾದರು. ಸೂರಜ್ ಚವಾಣ್ ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ತಮ್ಮ ವಿವಾಹ ಸಂಭ್ರಮದ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಫ್ಯಾನ್ಸ್‌ ವಿಶ್‌ ಮಾಡಿದ್ದಾರೆ. ಟಿಕ್‌ಟಾಕ್ ತಾರೆ ಸೂರಜ್ ಚವಾಣ್ ಬಿಗ್ ಬಾಸ್ ಮರಾಠಿ ಸೀಸನ್ 5 ರಲ್ಲಿ ಭಾಗವಹಿಸಿ ಮಹಾರಾಷ್ಟ್ರದಲ್ಲಿ ತಮ್ಮ ಸರಳತೆಯಿಂದ ಪ್ರೇಕ್ಷಕರ ಹೃದಯ ಗೆಲ್ಲಲು ಯಶಸ್ವಿಯಾಗಿದ್ದರು.

ಬಾಲ್ಯದ ಗೆಳತಿ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ಬಿಗ್‌ ಬಾಸ್‌ ವಿನ್ನರ್‌!

ಬಿಗ್‌ಬಾಸ್ ಮರಾಠಿ ಸೀಸನ್ 5ರ ವಿನ್ನರ್‌ -

Yashaswi Devadiga
Yashaswi Devadiga Dec 3, 2025 10:08 AM

ಬಿಗ್‌ಬಾಸ್ ಮರಾಠಿ ಸೀಸನ್ 5ರ (Bigg Boss Marathi 5) ವಿನ್ನರ್‌ ಆಗಿದ್ದ ಸೂರಜ್ (Suraj Chavan) ನವೆಂಬರ್ 29 ರಂದು ವಿವಾಹವಾದರು. ಬಾಲ್ಯದ ಗೆಳತಿ ಸಂಜನಾ ಗೋಫಾನೆ ಅವರನ್ನು ಪ್ರೀತಿಸಿ ಮದುವೆ ಆಗಿದ್ದಾರೆ. ಸೂರಜ್ ಅವರ ವಿವಾಹದ ಹಲವು ಫೋಟೋಗಳು ಮತ್ತು ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗಿವೆ. ಸೂರಜ್ ಚವಾಣ್ ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ತಮ್ಮ ವಿವಾಹ ಸಂಭ್ರಮದ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಫ್ಯಾನ್ಸ್‌ ವಿಶ್‌ ಮಾಡಿದ್ದಾರೆ.

ಟ್ರೆಡಿಶನಲ್‌ ಲುಕ್‌ನಲ್ಲಿ ಜೋಡಿ

ಒಂದು ಪೋಸ್ಟ್‌ನಲ್ಲಿ ಸಖತ್‌ ಟ್ರೆಡಿಶನಲ್‌ ಆಗಿ ಜೋಡಿ ಕಂಡರೆ, ಇನ್ನೊಂದು ಪೋಸ್ಟ್‌ನಲ್ಲಿ ಕ್ಲಾಸಿ ಮಾಡರ್ನ್ ಲುಕ್‌ನಿಂದ ಫ್ಯಾನ್ಸ್‌ ಗಮನ ಸೆಳೆದಿದ್ದಾರೆ. ಬಿಗ್‌ ಬಾಸ್‌ ಮನೆಯಲ್ಲಿ ಸೂರಜ್ ಅವರ ಸಹ-ಸ್ಪರ್ಧಿ ಆಗಿದ್ದ ಅಂಕಿತಾ ಪ್ರಭು ವಾಲಾವಲ್ಕರ್ ನವ ಜೋಡಿಗೆ ಶುಭ ಹಾರೈಸಿದರು.

ಇದನ್ನೂ ಓದಿ: Bigg Boss Kannada 12: ಗಿಲ್ಲಿ, ಕಾವ್ಯ ಸೇರಿ ಈ ವಾರ 9 ಮಂದಿ ನಾಮಿನೇಟ್! ಸೇಫ್‌ ಆದ ಅಶ್ವಿನಿ ಗೌಡ

"ಪ್ರಿಯ ಸೂರಜ್ ಮತ್ತು ಸಂಜನಾ, ಇಂದು ನೀವಿಬ್ಬರೂ ಹೊಸ ಜೀವನದಲ್ಲಿ ಕೈಜೋಡಿಸಿ ಹೆಜ್ಜೆ ಹಾಕುತ್ತಿದ್ದೀರಿ. ಈ ಹಾದಿ ಕೆಲವೊಮ್ಮೆ ಪ್ರಕಾಶಮಾನವಾಗಿರುತ್ತದೆ, ಕೆಲವೊಮ್ಮೆ ಕತ್ತಲೆಯಾಗಿರುತ್ತದೆ, ಕೆಲವೊಮ್ಮೆ ನೆರಳಿನಿಂದ ಕೂಡಿರುತ್ತದೆ, ಆದರೆ ಪರಸ್ಪರ ಪ್ರೀತಿ ಮತ್ತು ಬೆಂಬಲದಿಂದ, ಪ್ರತಿಯೊಂದು ಕಷ್ಟವನ್ನು ಸುಲಭವಾಗಿ ನಿವಾರಿಸಬಹುದು. ಜೀವನವು ಎಷ್ಟೇ ಬದಲಾವಣೆಗಳನ್ನು ತಂದರೂ, ಪರಸ್ಪರ ಗೌರವ, ವಾತ್ಸಲ್ಯ ಮತ್ತು ಅನ್ಯೋನ್ಯತೆಯನ್ನು ಕಾಪಾಡಿಕೊಳ್ಳಿ. ಸಣ್ಣ ಕ್ಷಣಗಳಲ್ಲಿ ಸಂತೋಷವನ್ನು ಕಂಡುಕೊಳ್ಳಿ, ಪರಸ್ಪರರ ನಗುವಿನಲ್ಲಿ ಜಗತ್ತನ್ನು ಜಯಿಸಿ, ಮತ್ತು ನಂಬಿಕೆ ಎಂದಿಗೂ ಕಡಿಮೆಯಾಗಲು ಬಿಡಬೇಡಿ. ನೀವು ಸಂತೋಷವಾಗಿರಿ ಎಂದು ಬರೆದುಕೊಂಡಿದ್ದಾರೆ.

ಸರಳತೆಯಿಂದ ಪ್ರೇಕ್ಷಕರ ಹೃದಯ ಗೆದಿದ್ದ ಸೂರಜ್‌

ಟಿಕ್‌ಟಾಕ್ ತಾರೆ ಸೂರಜ್ ಚವಾಣ್ ಬಿಗ್ ಬಾಸ್ ಮರಾಠಿ ಸೀಸನ್ 5 ರಲ್ಲಿ ಭಾಗವಹಿಸಿ ಮಹಾರಾಷ್ಟ್ರದಲ್ಲಿ ತಮ್ಮ ಸರಳತೆಯಿಂದ ಪ್ರೇಕ್ಷಕರ ಹೃದಯ ಗೆಲ್ಲಲು ಯಶಸ್ವಿಯಾಗಿದ್ದರು. ಸೂರಜ್ ಹುಟ್ಟಿದ್ದು ಪುಣೆ ಜಿಲ್ಲೆಯ ಬಾರಾಮತಿ ತಾಲೂಕಿನ ಮೋಡ್ವೆ ಗ್ರಾಮದಲ್ಲಿ. ಅವರ ಮನೆಯ ಸ್ಥಿತಿ ತುಂಬಾ ಕಳಪೆಯಾಗಿತ್ತು.

ಸೂರಜ್ ನ ಬಾಲ್ಯ ಸಾಮಾನ್ಯ ಮಕ್ಕಳಂತಿರಲಿಲ್ಲ. ಚಿಕ್ಕವನಿರುವಾಗಲೇ ತಂದೆ ತೀರಿಕೊಂಡರು. ಆ ಬಳಿಕ ತಾಯಿಯೂ ಅನಾರೋಗ್ಯದಿಂದ ಪ್ರಾಣ ಕಳೆದುಕೊಂಡಿದ್ದಾರೆ. ಸೂರಜ್‌ಗೆ ಐವರು ಅಣ್ಣ ತಂಗಿಯರಿದ್ದಾರೆ. ಅವರನ್ನೆಲ್ಲ ನೋಡಿಕೊಂಡು, ದುಡಿದು ಕೂಲಿ ಮಾಡುತ್ತಾ ಜೀವನದ ಬಂಡಿ ಓಡಿಸುತ್ತಿದ್ದ. ಹೀಗಾಗಿಯೇ ಅವರಿಗೆ ಸಾಮಾಜಿಕ ಜಾಲತಾಣಗಳು ಸಾಕಷ್ಟು ಖ್ಯಾತಿ ತಂದುಕೊಟ್ಟಿವೆ. ಆರಂಭದಲ್ಲಿ, ಸೂರಜ್ ಅವರ ವೀಡಿಯೊಗಳು ಟಿಕ್‌ಟಾಕ್ ಮತ್ತು ನಂತರ ಇನ್‌ಸ್ಟಾಗ್ರಾಮ್‌ನಂತಹ ಮಾಧ್ಯಮಗಳಲ್ಲಿ ವೈರಲ್ ಆಗಲು ಪ್ರಾರಂಭಿಸಿದವು.

ಇದನ್ನೂ ಓದಿ: Bigg Boss Kannada 12: ಅಶ್ವಿನಿ ವಿಚಾರವಾಗಿ ರಘು ಕಾಲೆಳೆದ ಗಿಲ್ಲಿ! ಕಾಮಿಡಿ ಕ್ಲಿಪ್‌ ಸಖತ್‌ ವೈರಲ್‌

ಸೂರಜ್ ಚವಾಣ್ ಇತ್ತೀಚೆಗೆ 'ಜಪುಕ್ ಜುಪುಕ್' ಚಿತ್ರದಲ್ಲಿ ಕಾಣಿಸಿಕೊಂಡರು. ಇದು ಮರಾಠಿ ಚಲನಚಿತ್ರವಾಗಿದ್ದು, ಇದರಲ್ಲಿ ಜುಯಿ ಭಾಗವತ್ ಮತ್ತು ಇಂದ್ರನೀಲ್ ಕಾಮತ್ ಕೂಡ ನಟಿಸಿದ್ದಾರೆ. ಕೇದಾರ್ ಶಿಂಧೆ ನಿರ್ದೇಶಿಸಿದ ಈ ಚಿತ್ರವು ಏಪ್ರಿಲ್ 25, 2025 ರಂದು ಬಿಡುಗಡೆಯಾಯಿತು