Bigg Boss: 15 ಲಕ್ಷ ಸೂಟ್‌ಕೇಸ್ ಪಡೆದು ಹೊರಬಂದ ವೈಲ್ಡ್ ಕಾರ್ಡ್ ಸ್ಪರ್ಧಿ! ಬಿಗ್ ಬಾಸ್ ಇತಿಹಾಸದಲ್ಲೇ ಬಿಗ್ ಟ್ವಿಸ್ಟ್
Bigg Boss: ಬಿಗ್ ಬಾಸ್ ತೆಲುಗು (Bigg Boss Telugu) ಸೀಸನ್ 10 ಇಲ್ಲಿಯವರೆಗಿನ ಅತ್ಯಂತ ಆಘಾತಕಾರಿ ತಿರುವುಗಳಲ್ಲಿ ಒಂದಕ್ಕೆ ಸಾಕ್ಷಿಯಾಯಿತು, ವೈಲ್ಡ್ ಕಾರ್ಡ್ ಪ್ರವೇಶ ಪಡೆದ ಮಿಥಿಲೇಶ್ 15 ಲಕ್ಷ ರೂಪಾಯಿ ನಗದು ಸ್ವೀಕರಿಸುವ ಮೂಲಕ ಮನೆಯಿಂದ ಹೊರಬರಲು ಆಯ್ಕೆ ಮಾಡಿಕೊಂಡರು. ಈ ಹಣ ವಿನ್ನರ್ ಪ್ರೈಜ್ ಮನಿಯಿಂದ ಕಡಿತಗೊಳ್ಳಲಿದೆ. ಇತರೆ ಸ್ಪರ್ಧಿಗಳ ಸಮ್ಮತಿ ಪಡೆದು ಮಿಥಿಲೇಶ್ ಶೋಗೆ ಬೈ ಹೇಳಿದ್ದಾರೆ.
ಬಿಗ್ ಬಾಸ್ ತೆಲುಗು -
ಬಿಗ್ ಬಾಸ್ ತೆಲುಗು (Bigg Boss Telugu) ಸೀಸನ್ 10 ಇಲ್ಲಿಯವರೆಗಿನ ಅತ್ಯಂತ ಆಘಾತಕಾರಿ ತಿರುವುಗಳಲ್ಲಿ ಒಂದಕ್ಕೆ ಸಾಕ್ಷಿಯಾಯಿತು, ವೈಲ್ಡ್ ಕಾರ್ಡ್ (Wild card) ಪ್ರವೇಶ ಪಡೆದ ಮಿಥಿಲೇಶ್ 15 ಲಕ್ಷ ರೂಪಾಯಿ ನಗದು ಸ್ವೀಕರಿಸುವ ಮೂಲಕ ಮನೆಯಿಂದ ಹೊರಬರಲು ಆಯ್ಕೆ ಮಾಡಿಕೊಂಡರು. ಈ ಹಣ ವಿನ್ನರ್ ಪ್ರೈಜ್ (Winner Prize) ಮನಿಯಿಂದ ಕಡಿತಗೊಳ್ಳಲಿದೆ. ಇತರೆ ಸ್ಪರ್ಧಿಗಳ ಸಮ್ಮತಿ ಪಡೆದು ಮಿಥಿಲೇಶ್ ಶೋಗೆ ಬೈ ಹೇಳಿದ್ದಾರೆ.
ಅಗ್ನಿಪರೀಕ್ಷೆಯ ಮೂಲಕ ಮನ್ನಣೆ ಗಳಿಸಿದ ನಂತರ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ರಿಯಾಲಿಟಿ ಶೋಗೆ ಪ್ರವೇಶಿಸಿದ ಮಿಥಿಲೇಶ್, ಬರೋಬ್ಬರಿ 15 ಲಕ್ಷ ರೂಪಾಯಿ ನಗದು ತೆಗೆದುಕೊಂಡು ಶೋನಿಂದ ಹೊರನಡೆದಿದ್ದಾರೆ. ಬಿಗ್ ಬಾಸ್ ಇತಿಹಾಸದಲ್ಲೇ ಇಂತಹದೊಂದು ಘಟನೆ ನಡೆದಿರಲಿಲ್ಲ. ಈ ನಿರ್ಧಾರ ಪ್ರೇಕ್ಷಕರಿಗೆ ಹಾಗೂ ಸ್ಪರ್ಧಿಗಳಿಗೆ ಭಾರಿ ಅಚ್ಚರಿ ತಂದಿದೆ.
ಹಣದೊಂದಿಗೆ ಹೊರನಡೆಯುವ ಆಯ್ಕೆ
ಬಿಗ್ ಬಾಸ್ ಸ್ಪರ್ಧಿಗಳಿಗೆ 5 ಲಕ್ಷ ರೂಪಾಯಿ ನಗದು ಬಹುಮಾನ ನೀಡುವುದರೊಂದಿಗೆ ಈ ಸವಾಲು ಪ್ರಾರಂಭವಾಯಿತು. ನಂತರ ಈ ಮೊತ್ತವನ್ನು 10 ಲಕ್ಷ ರೂಪಾಯಿಗಳಿಗೆ ಮತ್ತು ನಂತರ 15 ಲಕ್ಷ ರೂಪಾಯಿಗಳಿಗೆ ಹೆಚ್ಚಿಸಲಾಯಿತು, ಮನೆಯ ಸದಸ್ಯರು ತಮ್ಮ ಪ್ರಯಾಣವನ್ನು ಮುಂದುವರಿಸುವ ಅಥವಾ ಹಣದೊಂದಿಗೆ ಹೊರನಡೆಯುವ ಆಯ್ಕೆಯನ್ನು ನೀಡಲಾಯಿತು.
ಮಿಥಿಲೇಶ್ ತಮಗೆ ಪ್ರೇಕ್ಷಕರ ಪ್ರೀತಿ ಗಳಿಸುವುದು ಮುಖ್ಯ ಎಂದು ಹೇಳಿದರು. ಆದರೆ ನಾಗಾರ್ಜುನ ಅವರು ಆಫರ್ ಮೊತ್ತವನ್ನು 10 ಲಕ್ಷಕ್ಕೆ ಏರಿಸಿದರು. ನಂತರ ಆ ಮೊತ್ತವನ್ನು 15 ಲಕ್ಷ ರೂಪಾಯಿಗೆ ಹೆಚ್ಚಿಸಲಾಯಿತು. ಈ ಬಾರಿ ಮಿಥಿಲೇಶ್ ತಮ್ಮ ನಿರ್ಧಾರ ಬದಲಾಯಿಸಿ ಹಣ ಪಡೆಯಲು ಒಪ್ಪಿಕೊಂಡರು. ಇದರಿಂದ ಮನೆಯ ಇತರ ಸದಸ್ಯರೆಲ್ಲರೂ ಶಾಕ್ ಆದರು. ಈ 15 ಲಕ್ಷ ರೂಪಾಯಿಗಳನ್ನು ವಿನ್ನರ್ ಪಡೆಯುವ ಬಹುಮಾನದ ಮೊತ್ತದಿಂದ ಕಳೆಯಲಾಗುವುದು ಎಂದು ನಾಗಾರ್ಜುನ ತಿಳಿಸಿದರು. ಹೀಗಾಗಿ ಮಿಥಿಲೇಶ್ ಅವರನ್ನು ತಡೆಯಲು ಸ್ಪರ್ಧಿಗಳಿಗೆ ಅವಕಾಶ ನೀಡಲಾಯಿತು. ಆದರೆ ಮಿಥಿಲೇಶ್ ತಮ್ಮ ನಿರ್ಧಾರಕ್ಕೆ ಬದ್ಧರಾಗಿದ್ದರು. ಕೊನೆಗೆ ಉಳಿದ ಸ್ಪರ್ಧಿಗಳನ್ನು ಒಪ್ಪಿಸುವಲ್ಲಿ ಅವರು ಯಶಸ್ವಿಯಾದರು. ಬಹುತೇಕ ಸ್ಪರ್ಧಿಗಳು ಅವರಿಗೆ ಬೆಂಬಲ ವ್ಯಕ್ತಪಡಿಸಿದರು.
#BiggBossTelugu10
— Madthoughts (@gsumasree) September 28, 2026
Mr Shivaji #mithilesh cheppina oka manipulator category meelanti vallade..means mee season lo meede..
fixed ga vastaru meelanti vallu . https://t.co/6g7xqoDqzD
ಈ ಬೆಳವಣಿಗೆ ನಂತರ ಉಳಿದ ಸ್ಪರ್ಧಿಗಳಲ್ಲಿ ಚರ್ಚಾಸ್ಪದ ವಿಷಯವಾಯಿತು, ಮಿಥಿಲೇಶ್ ಅವರಿಗೆ ಹಣವನ್ನು ತೆಗೆದುಕೊಳ್ಳಲು ಅವಕಾಶ ನೀಡಬೇಕಿತ್ತೇ ಎಂಬ ಬಗ್ಗೆ ಭಿನ್ನಾಭಿಪ್ರಾಯಗಳು ಹುಟ್ಟಿಕೊಂಡವು.
ಮಿಥಿಲೇಶ್ ಅವರ ಪ್ರಯಾಣ ಪ್ರಾರಂಭವಾಗುವ ಮೊದಲೇ ಕೊನೆಗೊಂಡಿದೆ. ಆದರೆ ಅವರ ನಿರ್ಧಾರವು ಬಿಗ್ ಬಾಸ್ ತೆಲುಗು 10 ಮನೆಯೊಳಗೆ ಈಗಾಗಲೇ ಹೊಸ ಉದ್ವಿಗ್ನತೆಯನ್ನು ಸೃಷ್ಟಿಸಿದೆ.
ಇದನ್ನೂ ಓದಿ: Bigg Boss Kannada 13: ಬಿಗ್ ಬಾಸ್ ಆಟ ಅವಿನಾಶ್‌ಗೆ ಅರ್ಥ ಆಗಿಲ್ಲ! ಪತ್ನಿ ಪ್ರಿಯಾ ಕಣ್ಣೀರು
ಮಿಥಿಲೇಶ್ ಹಣದೊಂದಿಗೆ ಹೊರನಡೆಯಲು ಅವಕಾಶ ಮಾಡಿಕೊಟ್ಟ ನಿರ್ಧಾರ ಮತ್ತು ಮತದಾನವು ತ್ರಿಗುನ್ ಮತ್ತು ಅಮನ್ ಸೇರಿದಂತೆ ಸ್ಪರ್ಧಿಗಳ ನಡುವೆ ಬಿಸಿಯಾದ ವಾಗ್ವಾದಕ್ಕೆ ಕಾರಣವಾಯಿತು ಎಂದು ವರದಿಯಾಗಿದೆ.
ವೈಲ್ಡ್ ಕಾರ್ಡ್ ಸ್ಪರ್ಧಿಯೊಬ್ಬರು ಇಷ್ಟು ದೊಡ್ಡ ಮೊತ್ತದೊಂದಿಗೆ ಹೊರಬಂದದ್ದು ತೆಲುಗು ಬಿಗ್ ಬಾಸ್ ಇತಿಹಾಸದಲ್ಲೇ ಹೊಸ ದಾಖಲೆಯಾಗಿದೆ.