Brahmagantu Serial: 'ಬ್ರಹ್ಮಗಂಟು' ಧಾರವಾಹಿ ಅಂತ್ಯ; ದಿಲೀಪ್ ರಾಜ್ ಪತ್ನಿ ಭಾವುಕ ಪೋಸ್ಟ್
Brahmagantu Serial: ಜೂನ್ 17, 2024ರಲ್ಲಿ ‘ಬ್ರಹ್ಮಗಂಟು’ ಧಾರಾವಾಹಿ ತನ್ನ ಮೊದಲ ಸಂಚಿಕೆ ಆರಂಭ ಮಾಡಿತು. ಇದು ಜೀ ಕನ್ನಡ ವಾಹಿನಿಯ ಹೆಮ್ಮೆಯ ಧಾರಾವಾಹಿ. ಈ ಹಿಂದೆ ಇದೇ ಟೈಟಲ್‌ನಲ್ಲಿ ನಟಿ ಗೀತಾ ಭಾರತಿ ಭಟ್ ಅವರನ್ನ ಪರಿಚಯಿಸಿತ್ತು ವಾಹಿನಿ. ಆಗ ಖ್ಯಾತ ನಿರ್ಮಾಪಕಿ ಶ್ರುತಿ ನಾಯ್ಡು ಅವರು ಈ ಧಾರಾವಾಹಿಗೆ ಬಂಡವಾಳ ಹೂಡಿದ್ದರು. 'ಬಾಡಿ ಶೇಮಿಂಗ್'ನಂತಹ ಗಂಭೀರ ಕಥೆಯನ್ನ ಸೊಗಸಾಗಿ ಹೆಣೆಯಲಾಗಿತ್ತು.
ಬ್ರಹ್ಮಗಂಟು ಧಾರಾವಾಹಿ -
ನಟ, ನಿರ್ಮಾಪಕ ದಿಲೀಪ್ ರಾಜ್ (Dileep Raj) ಅವರು ಈ 'ಬ್ರಹ್ಮಗಂಟು' (brahmagantu serial) ಧಾರಾವಾಹಿಗೆ ಬಂಡವಾಳ ಹೂಡಿದ್ದರು. 'ಪಾರು' ಧಾರಾವಾಹಿ ನಂತರ ಈ ಧಾರಾವಾಹಿ ದಿಲೀಪ್ ಅವರ ಕನಸಿನ ಕೂಸಾಗಿತ್ತು. 'ಬ್ರಹ್ಮಗಂಟು' ಧಾರಾವಾಹಿ ಇದೀಗ ಮುಕ್ತಾಯದ ಹಂತಕ್ಕೆ ಬಂದು ತಲುಪಿದೆ. ಕಿರುತೆರೆ ವೀಕ್ಷಕರ ನೆಚ್ಚಿನ ಧಾರಾವಾಹಿಯಾಗಿದ್ದ 'ಬ್ರಹ್ಮಗಂಟು' ತನ್ನ ಸುದೀರ್ಘ ಪಯಣಕ್ಕೆ ಅಂತ್ಯ ಹಾಡಿದೆ. ಧಾರಾವಾಹಿಯ ನಿರ್ಮಾಪಕಿ ಶ್ರೀವಿದ್ಯಾ ರಾಜ್ (Shree Vidhya raj) ಅವರು ಸೋಷಿಯಲ್ ಮೀಡಿಯಾದಲ್ಲಿ ಅತ್ಯಂತ ಭಾವುಕ ಪೋಸ್ಟ್ ಒಂದನ್ನು ಹಂಚಿಕೊಳ್ಳುವ ಮೂಲಕ 'ಬ್ರಹ್ಮಗಂಟು' ತಂಡಕ್ಕೆ ವಿದಾಯ ಹೇಳಿದ್ದಾರೆ.
ಅತ್ಯಂತ ಸುಂದರವಾದ ವಸ್ತುಗಳು ಮತ್ತು ಅತ್ಯುತ್ತಮ ಜನರು ನಮ್ಮನ್ನು ಬೇಗನೆ ಬಿಟ್ಟು ಹೋಗುತ್ತಾರೆಂದು ನನಗೆ ಅರಿವಾಯಿತು.
ಒಬ್ಬ ಅದ್ಭುತ ವ್ಯಕ್ತಿಯನ್ನು ಕಳೆದುಕೊಂಡ ನಂತರ, ಅವರು ಪೂರ್ಣ ಹೃದಯದಿಂದ ನಂಬಿದ್ದ ಅದ್ಭುತ ಕಾರ್ಯಕ್ರಮಕ್ಕೆ ವಿದಾಯ ಹೇಳುವ ಸಮಯ ಬಂದಿದೆ. ಬ್ರಹ್ಮಗಂಟು ಕೇವಲ ಮತ್ತೊಂದು ಧಾರಾವಾಹಿಯಾಗಿರಲಿಲ್ಲ - ಅದು ಅವರ ಕನಸಾಗಿತ್ತು, ಅದರ ಸಮಯದಲ್ಲಿ ಒಂದು ಮೈಲಿಗಲ್ಲಾಗಿ ಮಾರ್ಪಟ್ಟಿತು. ನೀವೆಲ್ಲರೂ ಸಾಧಿಸಿದ್ದರ ಬಗ್ಗೆ ಅವರು ನಂಬಲಾಗದಷ್ಟು ಹೆಮ್ಮೆಪಡುತ್ತಿದ್ದರು ಎಂದು ನನಗೆ ತಿಳಿದಿದೆ.
ಇದನ್ನೂ ಓದಿ: Mahesh Babu: ಟೀಕೆಗೆ ಗುರಿಯಾದ ಮಹೇಶ್ ಬಾಬು; ಅಣ್ಣನ ಮಗನ ಸಿನಿಮಾಗೆ ಬೆಂಬಲ ನೀಡದ ಸ್ಟಾರ್!
ಪಾರು ಜೊತೆ ಹೋಲಿಸುತ್ತಿದ್ದರು
ಇಡೀ ಬ್ರಹ್ಮಗಂಟು ತಂಡಕ್ಕೆ - ನೀವು ಉತ್ಸಾಹ ಮತ್ತು ಅದ್ಭುತ ಆತ್ಮಗಳಿಂದ ತುಂಬಿದ್ದೀರಿ. ದಿಲೀಪ್ ಮತ್ತು ನಾನು ನಿಮ್ಮೊಂದಿಗೆ ಕೆಲಸ ಮಾಡುವ ಪ್ರತಿ ಕ್ಷಣವನ್ನು ನಿಜವಾಗಿಯೂ ಆನಂದಿಸಿದೆವು. ದಿಲೀಪ್ ಅವರು ಈ ತಂಡವನ್ನು ಪಾರು ಜೊತೆ ಹೋಲಿಸುತ್ತಿದ್ದರು,
ನೆನಪುಗಳು, ನಗು, ಕಠಿಣ ಪರಿಶ್ರಮ ಮತ್ತು ಪ್ರೀತಿಗೆ ಧನ್ಯವಾದಗಳು ಈ ಪ್ರಯಾಣದ ಭಾಗವಾಗಿದ್ದಕ್ಕಾಗಿ ನಾನು ಕೃತಜ್ಞನಾಗಿದ್ದೇನೆ. ಜೀವನವು ನನಗೆ ಮತ್ತೊಂದು ಅವಕಾಶವನ್ನು ನೀಡಿದರೆ, ನಾನು ಎರಡನೇ ಆಲೋಚನೆಯಿಲ್ಲದೆ ಈ ತಂಡದೊಂದಿಗೆ ಮತ್ತೆ ಕೆಲಸ ಮಾಡಲು ಆಯ್ಕೆ ಮಾಡುತ್ತೇನೆ.
ದಿಲೀಪ್ ಮತ್ತು ನಾನು ಯಾವಾಗಲೂ ನಿಮ್ಮೆಲ್ಲರನ್ನೂ ಪ್ರೀತಿಸುತ್ತೇವೆ. ಧನ್ಯವಾದಗಳು ಎಂದು ಪೋಸ್ಟ್ ಹಂಚಿಕೊಂಡಿದ್ದಾರೆ. ಧ್ರುತಿ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ದಿಲೀಪ್ ರಾಜ್ ಹಾಗೂ ಶ್ರೀವಿದ್ಯಾ ಅವರು 'ಬ್ರಹ್ಮಗಂಟು' ಧಾರಾವಾಹಿಯನ್ನು ನಿರ್ಮಿಸಿದ್ದರು. ತಿಲಕ್ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿದ್ದ ಈ ಧಾರಾವಾಹಿಯಲ್ಲಿ ದಿಯಾ ಪಾಲಕ್ಕಲ್, ಭುವನ್ ಸತ್ಯ, ಪ್ರೀತಿ ಶ್ರೀನಿವಾಸ್, ಕಾವ್ಯ ರಮೇಶ್ ಹಾಗೂ ಶಿವಾಜಿ ರಾವ್ ಜಾಧವ್ ಸೇರಿದಂತೆ ಪ್ರಖ್ಯಾತ ಕಲಾವಿದರ ಬಳಗವೇ ಅಭಿನಯಿಸಿತ್ತು.
ಜೂನ್ 17, 2024ರಲ್ಲಿ ‘ಬ್ರಹ್ಮಗಂಟು’ ಧಾರಾವಾಹಿ ತನ್ನ ಮೊದಲ ಸಂಚಿಕೆ ಆರಂಭ ಮಾಡಿತು. ಇದು ಜೀ ಕನ್ನಡ ವಾಹಿನಿಯ ಹೆಮ್ಮೆಯ ಧಾರಾವಾಹಿ. ಈ ಹಿಂದೆ ಇದೇ ಟೈಟಲ್‌ನಲ್ಲಿ ನಟಿ ಗೀತಾ ಭಾರತಿ ಭಟ್ ಅವರನ್ನ ಪರಿಚಯಿಸಿತ್ತು ವಾಹಿನಿ. ಆಗ ಖ್ಯಾತ ನಿರ್ಮಾಪಕಿ ಶ್ರುತಿ ನಾಯ್ಡು ಅವರು ಈ ಧಾರಾವಾಹಿಗೆ ಬಂಡವಾಳ ಹೂಡಿದ್ದರು. 'ಬಾಡಿ ಶೇಮಿಂಗ್'ನಂತಹ ಗಂಭೀರ ಕಥೆಯನ್ನ ಸೊಗಸಾಗಿ ಹೆಣೆಯಲಾಗಿತ್ತು.
ಇದನ್ನೂ ಓದಿ: Amruthdhaare Serial: ಭೂಮಿಕಾಗೆ ಕ್ಯಾನ್ಸರ್; ಸಿಹಿ ತಿಂದು ಸಂಭ್ರಮಿಸಿದ ಶಕುಂತಲಾ, ಜೈದೇವ್!
ಈ ಕಥೆ ಮುಕ್ತಾಯವಾಗಿ ವರ್ಷಗಳ ನಂತರ ಬಂದಿದ್ದು ಅದೇ ಟೈಟಲ್ ಜೊತೆಗೆ ಹೊಸ ಕಥೆ. ಈ ಕಥೆಯಲ್ಲಿ ಹೆಣ್ಮಗಳ 'ಮೈ-ಬಣ್ಣ'ದ ವಿಚಾರವಾಗಿ ಅನುಭವಿಸುವ ಚುಚ್ಚು ಮಾತುಗಳ ಸೂಕ್ಷ್ಮ ವಿಚಾರವನ್ನ ಬಿತ್ತರಿಸಲಾಗಿತ್ತು,