Chandan Shetty: ಎರಡನೇ ಮದುವೆ ಬಗ್ಗೆ ಮನಬಿಚ್ಚಿ ಮಾತನಾಡಿದ ಚಂದನ್ ಶೆಟ್ಟಿ: ಏನು ಹೇಳಿದ್ರು?
Chandan Shetty Marriage: ಇದೀಗ ಮತ್ತೆ ಚಂದನ್ ಶೆಟ್ಟಿ ಎರಡನೇ ಮದುವೆ ವಿಚಾರ ಸುದ್ದಿಯಲ್ಲಿದೆ. ಸ್ವತಃ ಚಂದನ್ ಅವರೇ ಈ ವಿಚಾರವಾಗಿ ಮನಬಿಚ್ಚಿ ಮಾತನಾಡಿದ್ದಾರೆ. ಫಸ್ಟ್ ಆಪ್ ಆಲ್, ನಂಗೆ ಅವಳನ್ನ ಮದುವೆ ಆಗಬೇಕು ಅಂತ ಅನಿಸಬೇಕು, ಹಾಗೆ ಆ ಹುಡ್ಗಿ ಇರಬೇಕು ಎಂದು ಹೇಳಿದ್ದಾರೆ.

Chandan Shetty

ನಿವೇದಿತಾ ಗೌಡ ಅವರಿಂದ ದೂರವಾದ ಬಳಿಕ ಚಂದನ್ ಶೆಟ್ಟಿ (Chandan Shetty), ಸಲಗ ಸುಂದರಿ ಸಂಜನಾ ಆನಂದ್ ಅವರ ಜೊತೆ ಮದುವೆಯಾಗಲಿದ್ದಾರೆ ಎನ್ನುವ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿತ್ತು. ಸಂಜನಾ ಆನಂದ್ ಜೊತೆ ಚಂದನ್ ಶೆಟ್ಟಿ ಎರಡನೇ ಮದುವೆ ಆಗ್ತಾರೆ ಎಂದು ಹೇಳಲಾಗಿತ್ತು. ಸೋಷಿಯಲ್ ಮೀಡಿಯಾದಲ್ಲಿ ಈ ಕುರಿತು ಅನೇಕ ಪೋಸ್ಟ್ಗಳು ಹರಿದಾಡಿದವು. ಬಳಿಕ ಇತ್ತೀಚೆಗಷ್ಟೆ ಈ ಗಾಳಿ ಸುದ್ದಿಗಳಿಗೆ ಒಂದೇ ವೇದಿಕೆಯಲ್ಲಿ ನಿಂತು ಚಂದನ್ ಶೆಟ್ಟಿ ಮತ್ತು ಸಂಜನಾ ಆನಂದ್ ಸ್ಪಷ್ಟನೆ ಕೊಟ್ಟರು.
‘‘ನಾನು ಸಂಜನಾ ಮದುವೆ ಆಗುತ್ತೇವೆ ಅಂತ ಎಲ್ಲಾ ಕಡೆ ವೈರಲ್ ಆಗಿತ್ತು. ನನ್ನ ಸ್ನೇಹಿತರು ನನಗೆ ಕಾಲ್ ಮಾಡಿ ನೀನು ಮತ್ತು ಸಂಜನಾ ಮದುವೆ ಆಗುತ್ತಿದ್ದೀರಾ ಎಂದೆಲ್ಲಾ ಕೇಳಿದ್ದರು. ನನ್ನ ಮದುವೆ ಬಗ್ಗೆ ನನಗೆ ಗೊತ್ತಿಲ್ಲದೆ ಬೇರೆ ಎಲ್ಲರೂ ಮಾತನಾಡುತ್ತಿದ್ದರು. ನಮ್ಮ ನಡುವೆ ಆ ರೀತಿಯ ವಿಷ್ಯ ಏನು ಇಲ್ಲ’’ ಎಂದು ಚಂದನ್ ಶೆಟ್ಟಿ ಹೇಳಿದ್ದರು.
ಇದೀಗ ಮತ್ತೆ ಚಂದನ್ ಶೆಟ್ಟಿ ಎರಡನೇ ಮದುವೆ ವಿಚಾರ ಸುದ್ದಿಯಲ್ಲಿದೆ. ಸ್ವತಃ ಚಂದನ್ ಅವರೇ ಈ ವಿಚಾರವಾಗಿ ಮನಬಿಚ್ಚಿ ಮಾತನಾಡಿದ್ದಾರೆ. ‘‘ಫಸ್ಟ್ ಆಪ್ ಆಲ್, ನಂಗೆ ಅವಳನ್ನ ಮದುವೆ ಆಗಬೇಕು ಅಂತ ಅನಿಸಬೇಕು, ಹಾಗೆ ಆ ಹುಡ್ಗಿ ಇರಬೇಕು. ಬರುವಂತಹ ಹುಡುಗಿ ನನ್ನ ಅಷ್ಟು ಜಾಸ್ತಿ ಪ್ರೀತಿ ಮಾಡಬೇಕು.. ನಾನಂತೂ ನನ್ ಲೈಫಲ್ಲಿ ಬರೋ ಹುಡುಗಿನಾ ಪ್ರೀತಿ ಮಾಡ್ತೀನಿ, ಆದ್ರೆ ಅವಳು ನನಗಿಂತ ಜಾಸ್ತಿ ಪ್ರೀತಿ ಮಾಡಬೇಕು.. ಆ ರೀತಿಯಾಗಿರುವ ಹುಡುಗಿ ನಂಗೆ ಸಿಕ್ಕಿದರೆ ಖಂಡಿತವಾಗಿಯೂ ನಾನು ಆ ಬಗ್ಗೆ ಯೋಚ್ನೆ ಮಾಡುತ್ತೇನೆ, ಮದುವೆ ಆಗುತ್ತೇನೆ’’ ಎಂದು ಚಂದನ್ ಶೆಟ್ಟಿ ಹೇಳಿದ್ದಾರೆ.
ಯೂಟ್ಯೂಬ್ ಚಾನೆಲ್ವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಚಂದನ್ ಶೆಟ್ಟಿ ಈ ಎಲ್ಲ ವಿಚಾರವನ್ನು ಹಂಚಿಕೊಂಡಿದ್ದಾರೆ. ಆದರೆ, ಚಂದನ್ ಶೆಟ್ಟಿ ತಂದೆ ತಾಯಿಗೆ ಎರಡನೇ ಮದುವೆ ಆಗೋದು ಅಷ್ಟೊಂದು ಇಷ್ಟವಿಲ್ಲವಂತೆ. ‘‘ನನ್ನ ತಂದೆ ತಾಯಿ ಕೂಡ ಸದ್ಯಕ್ಕೆ ಎರಡನೇ ಮದುವೆ ಬೇಡ ಅಂತಾನೇ ಹೇಳುತ್ತಿದ್ದಾರೆ. ನನಗೆ ಯಾರೇ ಸಿಕ್ಕಿದರೂ ಕೂಡ ನಿಮ್ಮ ಜೀವನ ಈಗ ಚೆನ್ನಾಗಿದೆ. ದಯವಿಟ್ಟು ಈಗಲೇ ಇನ್ನೊಂದು ಮದುವೆ ಆಗಬೇಡಿ. ಆರಾಮಾಗಿರಿ ಅಂತಾನೇ ಸಲಹೆ ನೀಡುತ್ತಿದ್ದಾರೆ. ನೂರರಲ್ಲಿ ಒಂದು ಅಥವಾ ಎರಡು ಜನ ಒಂಟಿಯಾಗಿರಬೇಡಿ ಮದುವೆಯಾಗಿ ಎನ್ನಬಹುದು. ಉಳಿದ ತೊಂಬತ್ತೊಂಬತ್ತು ಜನ, ಆರಾಮಾಗಿದೆ ನಿಮ್ಮ ಜೀವನ ಹೀಗೆ ಇದ್ದು ಬಿಡಿ ಎಂದು ಹೇಳುತ್ತಿದ್ದಾರೆ’’ ಎಂಬುದು ಚಂದನ್ ಮಾತು.
Neha Gowda: ನೇಹಾ ಗೌಡ ತನ್ನ ಮಗಳಿಗೆ ಶಾರದ ಅಂತ ಹೆಸರಿಟ್ಟಿದ್ದೇಕೆ?: ಇಲ್ಲಿದೆ ಕಾರಣ