Daali Wedding: ವಿವಾಹ ಭೋಜನವಿದು...: ಡಾಲಿ ಧನಂಜಯ್ ಮದುವೆ ಆರತಕ್ಷತೆಯ ಊಟದ ಮೆನುವಿನಲ್ಲಿ ಏನೇನಿದೆ?
ಡಾಲಿ ಧನಂಜಯ್ ಅವರು ವೈದ್ಯೆ ಧನ್ಯತಾ ಅವರೊಂದಿಗೆ ಹಸಮಣೆ ಏರಲು ಸಜ್ಜಾಗಿದ್ದಾರೆ. ಇವರ ಆರತಕ್ಷತೆ ಮೈಸೂರಿನಲ್ಲಿ ಅದ್ದೂರಿಯಾಗಿ ನಡೆಯುತ್ತಿದೆ. ನಟನ ಆರತಕ್ಷತೆಗೆ ಹಲವು ವಿಐಪಿಗಳು ಮತ್ತು ನಟನ ಅಭಿಮಾನಿಗಳು ಆಗಮಿಸುತ್ತಿದ್ದಾರೆ. ಎಲ್ಲರಿಗೂ ಭರ್ಜರಿ ಊಟದ ವ್ಯವಸ್ಥೆಯನ್ನು ಮಾಡಲಾಗಿದೆ. ಈ ಮದುವೆಯ ಊಟದ ಮೆನುವಿನಲ್ಲಿ ಏನೇನೆಲ್ಲ ಇದೆ?

ಸಾಂದರ್ಭಿಕ ಚಿತ್ರ

ಮೈಸೂರು: ಸ್ಯಾಂಡಲ್‌ವುಡ್‌ನ (Sandalwood) ಖ್ಯಾತ ನಟ ಡಾಲಿ ಧನಂಜಯ್ (Dhananjay) ಅವರು ವೈದ್ಯೆ ಧನ್ಯತಾ(Dhanyatha) ಅವರ ಕೈ ಹಿಡಿಯುತ್ತಿದ್ದಾರೆ. ಇವರಿಬ್ಬರ ಆರತಕ್ಷತೆ ಮೈಸೂರಿನಲ್ಲಿ (Mysore) ಅದ್ಧೂರಿಯಾಗಿ ನಡೆಯುತ್ತಿದೆ. ಡಾಲಿ ಧನಂಜಯ್ ಅವರ ಕುಟುಂಬಸ್ಥರು, ಗೆಳೆಯರು, ಅಭಿಮಾನಿಗಳು, ರಾಜಕಾರಣಿಗಳು, ಸಿನಿಮಾ ಸೆಲೆಬ್ರಿಟಿಗಳು ಸಮಾರಂಭದಲ್ಲಿ ಭಾಗಿ ಆಗಿದ್ದಾರೆ. ಧನಂಜಯ್ ಮದುವೆಯ ಉಸ್ತುವಾರಿ ವಹಿಸಿರುವ ವೆಡ್ಡಿಂಗ್ ಪ್ಲ್ಯಾನರ್ (Wedding Planner) ಹೇಳುವ ಪ್ರಕಾರ, ಡಾಲಿ ಅವರು ತನ್ನ ಮದುವೆಯಲ್ಲಿ ಊಟಕ್ಕೆ ಮೊದಲ ಆದ್ಯತೆ ನೀಡಿದ್ದಾರೆ. ತನ್ನ ಅಭಿಮಾನಿಗಳಿಗೆ ಒಳ್ಳೆಯ ಮದುವೆ ಊಟ ಹಾಕಿಸಬೇಕು ಎಂಬ ಆಸೆ ಡಾಲಿ ಧನಂಜಯ್ ಅವರದ್ದಾಗಿದ್ದು, ಇದಕ್ಕಾಗಿ ಸ್ಪೆಷಲ್ ಮೆನು ಸಿದ್ಧಪಡಿಸಿದ್ದಾರೆ. ಹಾಗಾದರೆ ಈ ಮದುವೆ ಊಟದಲ್ಲಿ ಏನೇನು ಸ್ಪೆಷಲ್ ಇದೆ ಎಂಬ ಕುತೂಹಲ ನಿಮಗೂ ಇದೆಯೆ? ಹಾಗಾದರೆ ನಿಮ್ಮ ಕುತೂಹಲವನ್ನು ನಾವು ತಣಿಸ್ತೇವೆ ನೋಡಿ.
ಡಾಲಿ ಧನಂಜಯ್ ಅವರ ಆರತಕ್ಷತೆಗೆ ಸುಮಾರು 30 ಸಾವಿರ ಜನಕ್ಕೆ ಊಟಕ್ಕೆ ವ್ಯವಸ್ಥೆ ಮಾಡಲಾಗಿದೆ. ಮೂರು ಕೌಂಟರ್ಗಳಲ್ಲಿ ಪ್ರಯತ್ಯೇಕ ಊಟದ ವ್ಯವಸ್ಥೆಯನ್ನು ಮಾಡಲಾಗಿದೆ. ಇನ್ನು ಊರಿನವರಿಗೆ ಎಲೆ ಊಟದ ವ್ಯವಸ್ಥೆಯನ್ನು ಮಾಡಲಾಗಿದೆ. ಆದರೆ ಮದುವೆಗೆ ಬಂದ ಎಲ್ಲರಿಗೂ ಒಂದೇ ಥೆರನಾದ ಊಟದ ವ್ಯವಸ್ಥೆ ಇರಲಿದ್ದು, ಡಾಲಿಯ ನೆಚ್ಚಿನ ಒಬ್ಬಟ್ಟಿನ ಊಟ ಮೆನುವಿನಲ್ಲಿ ಸ್ಪೆಷಲ್ ಸ್ಥಾನವನ್ನು ಪಡೆದುಕೊಂಡಿದೆ.
ಇದನ್ನೂ ಓದಿ: Daali Wedding: ಡಾಲಿ ಧನಂಜಯ್ ಅದ್ಧೂರಿ ಆರತಕ್ಷತೆ; ಗಣ್ಯರ ಆಗಮನ
ಧನಂಜಯ್ರ ಅವರ ಆರತಕ್ಷತೆ ಕಾರ್ಯಕ್ರಮದ ಊಟದ ಮೆನುವಿನಲ್ಲಿ ಒಬ್ಬಟ್ಟು, ಮಸಾಲೆ ದೋಸೆ, ಚಟ್ನಿ, ರೋಟಿ, ಅದಕ್ಕೆ ರುಚಿಯಾದ ಗ್ರೇವಿ, ಮೆಣಸಿನಕಾಯಿ ಬಜ್ಜಿ, ಬೆಂಡೇಕಾಯಿ ಫ್ರೈ, ರುಮಾಲ್ ರೋಟಿ, ವೆಜ್ ಬಿರಿಯಾನಿ ಮತ್ತು ಅದಕ್ಕೆ ರಾಯ್ತಾ, ಅನ್ನ, ತಿಳಿಸಾರು ಮತ್ತು ಮೊಸರು ಇದೆ.
ಸುಮಾರು ಮೂರು ಎಕರೆಯಲ್ಲಿ ಊಟದ ಹಾಲ್ ನಿರ್ಮಿಸಲಾಗಿದ್ದು, ಅದರಲ್ಲಿ ನಾಲ್ಕು ಕೌಂಟರ್ಗಳ ನಿರ್ಮಿಸಲಾಗಿದೆ. ವೃದ್ಧರಿಗೆ ಮತ್ತು ಡಾಲಿಯ ಊರಿನವರಿಗೆ ಸ್ಪೆಷಲ್ ಆಗಿ ಬಾಳೆ ಎಲೆ ಊಟದ ವ್ಯವಸ್ಥೆಯನ್ನು ಮಾಡಲಾಗಿದೆ. ಮಹಿಳೆಯರಿಗೆಂದೇ ಪ್ರತ್ಯೇಕ ಊಟದ ಕೌಂಟರ್ ಮಾಡಲಾಗಿದೆ. ಒಂದೇ ಬಾರಿಗೆ ಸುಮಾರು ನಾಲ್ಕು ಸಾವಿರ ಜನ ಊಟ ಮಾಡುವಂತೆ ಎಲ್ಲ ವ್ಯವಸ್ಥೆಗಳನ್ನು ಸ್ಪೆಷಲ್ ಆಗಿ ಮಾಡಲಾಗಿದೆ.
ಇನ್ನು ಈ ಭರ್ಜರಿ ಮದುವೆ ಊಟದ ತಯಾರಿಯಲ್ಲಿ ಈಗಾಗಲೇ ಸುಮಾರು 500 ಜನ ಅಡುಗೆಯವರು ಮತ್ತು ಬಡಿಸುವವರು ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಹೆಂಗಸರ ಕೌಂಟರ್ನಲ್ಲಿ ಹೆಣ್ಣು ಮಕ್ಕಳೇ ಊಟ ಬಡಿಸಲಿರುವುದು ವಿಶೇಷ. ಸ್ವಚ್ಛತೆಗೆಂದೇ ಪ್ರತ್ಯೇಕ ಟೀಮ್ ಸಜ್ಜಾಗಿ ನಿಂತಿದೆ. 500 ಮಂದಿಗೆ ಬಾಳೆ ಎಲೆ ಊಟದ ವ್ಯವಸ್ಥೆಯನ್ನು ಮಾಡಲಾಗಿದೆ. ಅಭಿಮಾನಿಗಳಿಗೆ ಅಡಿಕೆ ತಟ್ಟೆಯಲ್ಲಿ ಬಫೆ ಸಿಸ್ಟಂನಲ್ಲಿ ಊಟ ಬಡಿಸುವ ವ್ಯವಸ್ಥೆ ಮಾಡಲಾಗಿದೆ.